ನಕಲಿ ಸುದ್ದಿ ಹಾವಳಿ: ಇರಾನ್ ಅಣ್ವಸ್ತ್ರ ಕುರಿತ ಸುಳ್ಳು ಸುದ್ದಿಯಿಂದ ಅಮೆರಿಕ, ಇಸ್ರೇಲ್‌ನಲ್ಲಿ ಸಂಚಲನ

Date:

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಹೆಸರಿನಲ್ಲಿ ಭಾರತೀಯ ‘ಎಕ್ಸ್’ (ಟ್ವಿಟರ್) ಖಾತೆಯೊಂದು ಹರಿಬಿಟ್ಟ ನಕಲಿ ಹೇಳಿಕೆಯೊಂದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಆಧಾರರಹಿತ ಸುಳ್ಳು ಸುದ್ದಿಯು ಇಸ್ರೇಲ್ ಮಾಧ್ಯಮಗಳು, ಅಮೆರಿಕದ ಪ್ರಭಾವಿ ರಾಜಕಾರಣಿಗಳು ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಧಿಕೃತ ಭಾಷಣದವರೆಗೂ ತಲುಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

- Advertisement -

​ಆಗಸ್ಟ್ 5ರಂದು ಭಾರತದ ಅನಾಮಧೇಯ ‘ಎಕ್ಸ್’ ಖಾತೆಯೊಂದು ಈ ಸುಳ್ಳು ಸುದ್ದಿಯನ್ನು ಮೊದಲು ಪ್ರಕಟಿಸಿತ್ತು. “ಅಮೆರಿಕ ಮತ್ತು ಇಸ್ರೇಲ್ ಬಳಿ ಅಣ್ವಸ್ತ್ರಗಳಿರುವವರೆಗೆ ಇರಾನ್ ತನ್ನ ಅಣ್ವಸ್ತ್ರ ಅಭಿವೃದ್ಧಿ ಮಹತ್ವಾಕಾಂಕ್ಷೆಯನ್ನು ಕೈಬಿಡುವುದಿಲ್ಲ” ಎಂದು ಇರಾನ್ ಸೇನಾ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಹ್ಮದ್ ವಾಹಿದಿ ಹೇಳಿದ್ದಾರೆಂದು ಅದರಲ್ಲಿ ಸುಳ್ಳು ಉಲ್ಲೇಖ ಮಾಡಲಾಗಿತ್ತು. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ರಚಿಸಿದ ಅಣಬೆ ಆಕಾರದ ಮೋಡದ ಚಿತ್ರದೊಂದಿಗೆ ಈ ಪೋಸ್ಟ್ ಹಾಕಲಾಗಿದ್ದು, ಅದರಲ್ಲಿ ಹಲವು ಇಂಗ್ಲಿಷ್ ಕಾಗುಣಿತ ದೋಷಗಳೂ ಇದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

​ನಂತರ ಈ ಪೋಸ್ಟ್ ಅನ್ನು ‘ಮೊಸಾದ್ ಕಮೆಂಟರಿ’ ಎಂಬ ಇಸ್ರೇಲ್‌ನ ಜನಪ್ರಿಯ ಎಕ್ಸ್ ಖಾತೆ ಹಂಚಿಕೊಂಡಿತು. ಅಲ್ಲಿಂದ ಇಸ್ರೇಲ್‌ನ ‘ಚಾನೆಲ್ 14’ ಮಾಧ್ಯಮವು ಇದನ್ನು ಇರಾನ್‌ನ ಅಧಿಕೃತ ಹೇಳಿಕೆ ಎಂಬಂತೆ ಬಿತ್ತರಿಸಿತು. ಇದಾದ ಕೆಲವೇ ಗಂಟೆಗಳಲ್ಲಿ, ಈ ಸುಳ್ಳು ಮಾಹಿತಿಯು ಪ್ರಧಾನಿ ನೆತನ್ಯಾಹು ಅವರ ಪುತ್ರ ಯೇರ್ ನೆತನ್ಯಾಹು ಅವರ ಗಮನಕ್ಕೆ ಬಂದು, ಅಂತಿಮವಾಗಿ ಜರೂಸಲೇಂನಲ್ಲಿ ಪ್ರಧಾನಿ ನೆತನ್ಯಾಹು ಮಾಡಿದ ಭಾಷಣದಲ್ಲೂ ಉಲ್ಲೇಖವಾಯಿತು.

​ಈ ನಕಲಿ ಸುದ್ದಿಯು ಕೇವಲ ಇಸ್ರೇಲ್‌ಗೆ ಸೀಮಿತವಾಗದೆ ಅಮೆರಿಕದ ರಾಜಕೀಯ ವಲಯವನ್ನೂ ಪ್ರವೇಶಿಸಿತು. ಅಮೆರಿಕದ ಜನಪ್ರತಿನಿಧಿಗಳಾದ ಮೈಕ್ ವಾಲ್ಟ್ಜ್, ಸೆನೆಟರ್ ರಿಕ್ ಸ್ಕಾಟ್ ಮುಂತಾದವರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಅಲ್ಲದೆ, ಫಾಕ್ಸ್ ನ್ಯೂಸ್ ವಾಹಿನಿಯ ನಿರೂಪಕ ಬಿಲ್ ಹೆಮ್ಮರ್ ಅವರು ಸಂದರ್ಶನವೊಂದರಲ್ಲಿ ಈ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ಸತ್ಯಾಸತ್ಯತೆ ಅರಿತ ನಂತರ ಫಾಕ್ಸ್ ನ್ಯೂಸ್ ಇದೊಂದು ‘ಅಧಿಕೃತವಲ್ಲದ ಮತ್ತು ತಪ್ಪಾದ ಮಾಹಿತಿ’ ಎಂದು ಸ್ಪಷ್ಟನೆ ನೀಡಿ ಸರಿಪಡಿಸಿಕೊಂಡಿತು.

​ಈ ಘಟನೆಯು ‘ನ್ಯಾರೇಟಿವ್ ಲಾಂಡರಿಂಗ್’ (ಸುಳ್ಳು ಕಥನವನ್ನು ಸತ್ಯವೆಂದು ಬಿಂಬಿಸುವ ಪ್ರಕ್ರಿಯೆ) ಜ್ವಲಂತ ಉದಾಹರಣೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಸುಳ್ಳು ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಿಂದ ಶುರುವಾಗಿ, ಟಿವಿ ವಾಹಿನಿಗಳು ಹಾಗೂ ರಾಷ್ಟ್ರಮಟ್ಟದ ರಾಜಕೀಯ ನಾಯಕರ ಭಾಷಣಗಳವರೆಗೆ ಹೇಗೆ ನಿಧಾನವಾಗಿ ವಿಶ್ವಾಸಾರ್ಹತೆ ಪಡೆದುಕೊಳ್ಳುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

​ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯ್, ಇದೊಂದು ‘ಸುಳ್ಳಿನ ಸರಮಾಲೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಹೆಣೆದ ಸಂಚು ಎಂದು ಆರೋಪಿಸಿದ್ದಾರೆ. ಯುದ್ಧದಂತಹ ಉದ್ವಿಗ್ನ ಪರಿಸ್ಥಿತಿ ಇರುವಾಗ ಸಾಮಾಜಿಕ ಜಾಲತಾಣಗಳ ವೈರಲ್ ಸುದ್ದಿಗಳನ್ನು ಕುರುಡಾಗಿ ನಂಬುವುದರ ಅಪಾಯವನ್ನು ಈ ಘಟನೆ ಇಡೀ ಜಗತ್ತಿಗೆ ಎಚ್ಚರಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆ: ಬಸ್ ಕಂಡಕ್ಟರ್ ಆಗಿ ಟಿಕೆಟ್ ನೀಡಿದ ಸಿಎಂ ವಿಜಯ್

ತಮಿಳುನಾಡು ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯನ್ನು...