ಲಿಂಗತ್ವ ಅಲ್ಪಸಂಖ್ಯಾತ ಗೇಬ್ರಿಯಲ್ ಅಟ್ಟಲ್ ಫ್ರಾನ್ಸ್‌ನ ನೂತನ ಪ್ರಧಾನಿ

Date:

ಪ್ರಾನ್ಸ್‌ನ ನೂತನ ಪ್ರಧಾನಿಯಾಗಿ 34 ವರ್ಷದ ಗೇಬ್ರಿಯಲ್‌ ಅಟ್ಟಲ್ ಇಂದು ನೇಮಕವಾಗಿದ್ದಾರೆ. ಅಧ್ಯಕ್ಷ ಇಮ್ಯಾನುವಲ್ ಮಾಕ್ರೋನ್ ಗೇಬ್ರಿಯಲ್‌ ಅವರನ್ನು ನೇಮಿಸಿದ್ದು, ಫ್ರಾನ್ಸ್‌ನ ಅತೀ ಕಿರಿಯ ಹಾಗೂ ಬಹಿರಂಗವಾಗಿ ಹೇಳಿಕೊಂಡ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಪ್ರಧಾನಿ ಎಂಬ ಹೆಗ್ಗಳಿಕೆ ಗೇಬ್ರಿಯಲ್ ಅವರದು.

- Advertisement -

62 ವರ್ಷ ವಯಸ್ಸಿನ ಪ್ರಧಾನಿ ಎಲಿಜಬೆತ್ ಬೋರ್ನ್ ರಾಜೀನಾಮೆ ಬಳಿಕ, ಗೇಬ್ರಿಯಲ್ ಅಟ್ಟಲ್ ಅವರನ್ನು  ಘೋಷಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗೇಬ್ರಿಯಲ್‌ ಅಟ್ಟಲ್ ಅವರು ಇಮ್ಯಾನುವಲ್ ಮಾಕ್ರೋನ್ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದರು. 1984ರಲ್ಲಿ ಲಾರೆಂಟ್ ಫೇಬಿಯಸ್ ಫ್ರಾನ್ಸ್‌ನ ಪ್ರಧಾನಿಯಾಗಿದ್ದಾಗ ಅವರಿಗೆ 37 ವರ್ಷ ವಯಸ್ಸಾಗಿತ್ತು. ಗೇಬ್ರಿಯಲ್‌ ಅವರು ಲಾರೆಂಟ್ ದಾಖಲೆ ಸರಿಗಟ್ಟಿ ಅತೀ ಕಿರಿಯ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ನೂತನ ಪ್ರಧಾನಿಯ ನೇಮಕ ಸರ್ಕಾರಕ್ಕೆ ಹೆಚ್ಚು ಅನುಕೂಲ ತಂದುಕೊಡದಿದ್ದರೂ ಇಮ್ಯಾನುವಲ್ ಮಾಕ್ರೋನ್ ಅವರು ಕಳೆದ ವರ್ಷ ಜಾರಿಗೊಳಿಸಿದ ಅಷ್ಟೇನು ಜನಪ್ರಿಯವಲ್ಲದ ಪಿಂಚಣಿ ವ್ಯವಸ್ಥೆ, ವಲಸಿಗರ ಸುಧಾರಣೆಗಳು ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷ ‘ಎಲ್‌ಆರ್‌ಇಎಂ’ಗೆ ಅನುಕೂಲಕರ ವಾತಾವರಣ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್‌ ರಾಜಕಾರಣ

ಸಮೀಕ್ಷಾ ವರದಿಗಳ ಪ್ರಕಾರ ಪ್ರಸ್ತುತ ವಿರೋಧ ಪಕ್ಷದ ನಾಯಕಿಯಾಗಿರುವ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್ ಮುಂದೆ ಜೂನ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಶೇಕಡಾವಾರು 8 ರಿಂದ 10 ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ದೇಶದ ಜನಾಭಿಪ್ರಾಯ ಸಮೀಕ್ಷೆಯಲ್ಲಿ ನೂತನ ಪ್ರಧಾನಿ ಗೇಬ್ರಿಯಲ್‌ ಅಟ್ಟಲ್ ಫ್ರಾನ್ಸ್‌ನ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಇವರು ಮಾಡಿದ ಕೆಲಸ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು.

ಫ್ರಾನ್ಸ್‌ನ ಶಿಕ್ಷಣ ಸಚಿವರಾಗಿದ್ದ ವೇಳೆ ಗೇಬ್ರಿಯಲ್ ಅಟಲ್ ಅವರು ಮುಸ್ಲಿಂ ಮಹಿಳೆಯರು ಮತ್ತು ಯುವತಿಯರು ಧರಿಸುತ್ತಿದ್ದ ಅಬಯಾ ಉಡುಪನ್ನು ಫ್ರೆಂಚ್ ಸರ್ಕಾರಿ ಶಾಲೆಗಳಲ್ಲಿ ಧರಿಸುವಂತಿಲ್ಲ ಎಂದು ವಿವಾದಾತ್ಮಕ ಆದೇಶ ಹೊರಡಿಸಿದ್ದರು. ಇದರಿಂದಲೂ ಕೂಡ ವಿಶ್ವದಾದ್ಯಂತ ಸುದ್ದಿಯಾಗಿದ್ದರು.

ನೂತನ ಪ್ರಧಾನಿಯ ಆಯ್ಕೆಯಿಂದ ದೇಶದ ಆಡಳಿತ ಸುಧಾರಣೆಯಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...

‘8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೇ ನೊಬೆಲ್ ಕೊಡಿ’: ಟ್ರಂಪ್ ಮತ್ತೆ ಪಟ್ಟು

ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಸಾಲಿನ ಪ್ರತಿಷ್ಠಿತ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು...

ಗಾಜಾ ನರಮೇಧ : ಪ್ಯಾಲೆಸ್ತೀನಿಯನ್ ಪಟ್ಟಣಗಳ ನಾಶವನ್ನು ತೋರಿಸುವ ಉಪಗ್ರಹಚಿತ್ರಗಳು

ಜೆರುಸಲೇಮ್: ಕಳೆದ ವರ್ಷ ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ...

ಅಮೆಜಾನ್‌ನಲ್ಲಿ ಮತ್ತೆ ಉದ್ಯೋಗ ಕಡಿತ ; ಭಾರತದ ಉದ್ಯೋಗಿಗಳಿಗೂ ತಟ್ಟಿದ ಪರಿಣಾಮ

ದೆಹಲಿ/ವಾಷಿಂಗ್ಟನ್‌ ಡಿಸಿ : ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತೊಮ್ಮೆ ಉದ್ಯೋಗ ಕಡಿತದ...