12 ದಿನಗಳ ಹಿಂದೆ ಸಹಾಯಕ್ಕಾಗಿ ಕರೆ ಮಾಡಿದ್ದ ಬಾಲಕಿ ಶವವಾಗಿ ಪತ್ತೆ

Date:

12 ದಿನಗಳ ಹಿಂದೆ ‘ನನಗೆ ತುಂಬಾ ಭಯವಾಗಿದೆ, ದಯವಿಟ್ಟು ಬನ್ನಿ’ ಎಂದು ಕರೆ ಮಾಡಿದ್ದ ಆರು ವರ್ಷದ ಬಾಲಕಿ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಜನವರಿ 29ರಂದು ಆಕೆಯ ಕುಟುಂಬ ತೆರಳುತ್ತಿದ್ದ ಕಾರಿಗೆ ಪ್ಯಾಲೆಸ್ತೀನ್‌ನ ಗಾಜಾದಲ್ಲಿ ಹಂತಕರು ಬೆಂಕಿ ಹಚ್ಚಿದ್ದರು. ಆ ಸಮಯದಲ್ಲಿ ರಕ್ಷಣಾ ಸಿಬ್ಬಂದಿಗಳಿಗೆ ಆಕೆ ಕರೆ ಮಾಡಿ, ಸಹಾಯ ಕೋರಿದ್ದಳು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಆಕೆಯ ರಕ್ಷಣೆಗಾಗಿ ಸಹಾಯ ಸಂಸ್ಥೆ ಆ್ಯಂಬುಲೆನ್ಸ್‌ ಕಳಿಸಿತ್ತು. ಅದರೆ, ಆ್ಯಂಬುಲೆನ್ಸ್‌ ಮತ್ತು ಸಹಾಯ ಸಂಸ್ಥೆ ನಡುವೆ ಸಂಪರ್ಕ ಕಡಿತವಾಗಿತ್ತು. ಸಹಾಯಕ್ಕೆ ತೆರಳಿದ್ದ ಸಿಬ್ಬಂದಿಗಳು ಮತ್ತು ಬಾಲಕಿ ಹಿಂದ್‌ ರಜಬ್ ನಾಪತ್ತೆಯಾಗಿದ್ದರು.

ಶನಿವಾರ ಬೆಳಗ್ಗೆ ಗಾಜಾ ನಗರದ ಟೆಲ್ ಅಲ್-ಹವಾ ಪ್ರದೇಶದಲ್ಲಿ ಕಾರಿನೊಳಗೆ ಬಾಲಕಿ ಮೃತದೇಹ ಪತ್ತೆಯಾಗಿದೆ ಎಂದು ಆಕೆಯ ಕುಟುಂಬ ತಿಳಿಸಿದೆ. ಬಾಲಕಿಯನ್ನು ಹುಡುಕಲು ಆ್ಯಂಬುಲೆನ್ಸ್‌ನಲ್ಲಿ ಹೋದ ಇಬ್ಬರು ರಕ್ಷಕರು ಇಸ್ರೇಲಿ ಗುಂಡಿಗೆ ಬಲಿಯಾಗಿದ್ದಾರೆ ಎಂದೂ ವರದಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಸ್ರೇಲಿ ಪಡೆಗಳು ದಾಳಿ ಮುಂದುವರೆಸಿದ್ದರಿಂದ ಗಾಜಾ ನಗರದಿಂದ ತಪ್ಪಿಸಿಕೊಳ್ಳಲು ಬಾಲಕಿಯ ಕುಟುಂಬ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ, ಅವರ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಕಾರಿನಿಂದ ತಪ್ಪಿಸಿಕೊಂಡ ಆಕೆ, ತನ್ನ ಸಂಬಂಧಿಗಳು ಸಾವನ್ನಪ್ಪಿದ್ದರಿಂದ ಭಯಗೊಂಡು ರಕ್ಷಣೆಗಾಗಿ ಕರೆ ಮಾಡಿದ್ದಳು.

“ಹಿಂದ್ ಮತ್ತು ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ” ಎಂದು ಬಾಲಕಿಯ ಅಜ್ಜ ಬಹಾ ಹಮದಾ ತಿಳಿಸಿದ್ದಾರೆ. ಆಕೆ ಕಾರಿನಿಂದ ತಪ್ಪಿಸಿಕೊಂಡ ಬಳಿಕ, ಆಕೆಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.

ಶನಿವಾರ ಇಸ್ರೇಲಿಗಳು ತಮ್ಮ ದಾಳಿಯನ್ನು ನಿಲ್ಲಿಸಿದ್ದು, ಹಲವಾರು ಕುಟುಂಬಗಳು ತಮ್ಮವರಿಗಾಗಿ ಹುಡುಕಾಟ ನಡಸಿದ್ದಾರೆ. ಈ ವೇಳೆ, ಬಾಲಕಿ ಮೃತದೇಹ ಪತ್ತೆಯಾಗಿದೆ.

ಅಕ್ಟೋಬರ್ 7ರಂದು ಆರಂಭವಾದ ಇಸ್ರೇಲ್-ಹಮಾಸ್‌ ಸಂಘರ್ಷ ಇನ್ನೂ ಮುಂದುವರೆದಿದೆ. ಇದೂವರೆಗೆ, ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ 1,160 ಮಂದಿಯನ್ನು ಕೊಂದಿದೆ. ಗಾಜಾ ಮೇಲೆ ಭಾರೀ ಮಿಲಿಟರಿಯೊಂದಿಗೆ ದಾಳಿ ಮಾಡಿರುವ ಇಸ್ರೇಲ್‌, ಸುಮಾರು 27,000ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿದೆ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೆಸ್ಲಾ ಕಾರಣ; ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್!

ಟೆಸ್ಲಾ ಸಿಇಒ, ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್...

ಇಸ್ರೇಲ್‌ ಜೊತೆ ಗೂಗಲ್ ಒಪ್ಪಂದ ವಿರೋಧಿಸಿ ಪ್ರತಿಭಟನೆ; ಗೂಗಲ್‌ ಉದ್ಯೋಗಿಗಳ ಬಂಧನ

ಇಸ್ರೇಲ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆಯ ನಡೆ...

ದುಬೈ ಪ್ರವಾಹ| ಭಾರೀ ಮಳೆ, ಬಿರುಗಾಳಿಯಿಂದ ಸಂಚಾರ ಅಸ್ತವ್ಯಸ್ತ; 28 ಭಾರತದ ವಿಮಾನಗಳು ರದ್ದು

ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ಕಾಣಿಸಿಕೊಂಡಿದ್ದು...

ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ...