ದೇಶೀಯ ಕ್ಷಿಪಣಿ ಬಳಸಿ ಸೌದಿಯ ಎಫ್-15 ಯುದ್ಧವಿಮಾನ ಹೊಡೆದುರುಳಿಸಿದ ಹೌತಿ ಪಡೆ

Date:

ಯೆಮೆನ್‌ನ ಮಾರಿಬ್ ಪ್ರಾಂತ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸೌದಿ ಅರೇಬಿಯಾದ ‘ಎಫ್-15’ (F-15) ಯುದ್ಧವಿಮಾನವನ್ನು ದೇಶೀಯವಾಗಿ ತಯಾರಿಸಿದ ಕ್ಷಿಪಣಿ ಬಳಸಿ ಹೊಡೆದುರುಳಿಸಿರುವುದಾಗಿ ಇರಾನ್ ಬೆಂಬಲಿತ ಹೌತಿ ಪಡೆಗಳು ತಿಳಿಸಿವೆ. ಇದರೊಂದಿಗೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಸುತ್ತಿನ ಸಂಘರ್ಷ ತೀವ್ರಗೊಂಡಿದೆ.

- Advertisement -

​ಸೌದಿ ಅರೇಬಿಯಾವು ಯೆಮೆನ್‌ನಾದ್ಯಂತ ನೂರಾರು ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದು, ಇದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೌತಿಗಳ ಸೇನಾ ವಿಭಾಗ ‘ಯೆಮೆನ್ ಸಶಸ್ತ್ರ ಪಡೆ’ಯ ವಕ್ತಾರರು ‘ಎಕ್ಸ್’ (X) ಖಾತೆಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯುದ್ಧವಿಮಾನವನ್ನು ಹೊಡೆದುರುಳಿಸಿದ ಹಾಗೂ ವಿಮಾನದ ಅವಶೇಷಗಳು ಮರಳುಗಾಡಿನಲ್ಲಿ ಬಿದ್ದಿರುವ ವಿಡಿಯೊವನ್ನು ಹೌತಿಗಳು ಬಿಡುಗಡೆ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

​ ಬಿಡುಗಡೆಯಾಗಿರುವ ವಿಡಿಯೊದಲ್ಲಿ, ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನದತ್ತ ಕ್ಷಿಪಣಿಯೊಂದು ನುಗ್ಗಿ ಅಪ್ಪಳಿಸುವ ದೃಶ್ಯವಿದೆ. ಬಳಿಕ ಬೆಂಕಿಯ ಕೆನ್ನಾಲಿಗೆಯೊಂದಿಗೆ ವಿಮಾನದ ಬಿಡಿಭಾಗಗಳು ಕೆಳಗೆ ಬೀಳುವುದನ್ನು ಕಾಣಬಹುದು. ಮರಳುಗಾಡಿನಲ್ಲಿ ಬಿದ್ದಿರುವ ವಿಮಾನದ ಅವಶೇಷಗಳ ಮಧ್ಯೆ ಸೌದಿ ಅರೇಬಿಯಾದ ಧ್ವಜ ಹಾಗೂ ಅರೇಬಿಕ್ ಬರಹಗಳಿರುವ ವಿಮಾನದ ಬಾಲದ ಭಾಗ ಸ್ಪಷ್ಟವಾಗಿ ಗೋಚರಿಸಿದೆ. ಅವಶೇಷಗಳನ್ನು ಪರಿಶೀಲಿಸುತ್ತಿರುವ ಶಸ್ತ್ರಸಜ್ಜಿತ ಹೌತಿ ಹೋರಾಟಗಾರರು, “ಸೌದ್‌ ಮನೆತನಕ್ಕೆ ಇದೇ ಗತಿ” ಎಂದು ಘೋಷಣೆ ಕೂಗುತ್ತಿರುವುದು ವಿಡಿಯೊದಲ್ಲಿದೆ.

ಕಳೆದ ಒಂದು ವಾರದಲ್ಲಿ ಖಾಮಿಸ್ ಮುಶೈತ್ ಮತ್ತು ತೈಫ್ ವಾಯುನೆಲೆಗಳಿಂದ ಎಫ್-15 ಹಾಗೂ ಟೈಫೂನ್ ವಿಮಾನಗಳ ಮೂಲಕ ಯೆಮೆನ್‌ನ ತೈಜ್, ಲಾಹ್ಜ್, ಅಲ್-ಜವ್ಫ್, ಹಜ್ಜಾ, ಮಾರಿಬ್, ಸಾದಾ ಮತ್ತು ಅಲ್-ಬೈದಾ ಪ್ರಾಂತ್ಯಗಳ ಮೇಲೆ ಸೌದಿ ಅರೇಬಿಯಾ 450ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ದಾಳಿಗಳಲ್ಲಿ ನಾಗರಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೌತಿಗಳು ಆರೋಪಿಸಿದ್ದಾರೆ.

​ಯುದ್ಧವಿಮಾನ ಪತನಗೊಂಡ ಬಳಿಕ ಅದರ ಅವಶೇಷಗಳನ್ನು ಹುಡುಕಿಕೊಂಡು ಮಾರಿಬ್‌ಗೆ ಬಂದ ಸೌದಿಯ ಎಫ್-15 ಮತ್ತು ಟೈಫೂನ್ ವಿಮಾನಗಳತ್ತಲೂ ದೇಶೀಯ ಕ್ಷಿಪಣಿಗಳಿಂದ ದಾಳಿ ನಡೆಸಿ, ಅವುಗಳನ್ನು ಹಿಂದಕ್ಕೆ ಓಡಿಸಲಾಗಿದೆ. ಅಲ್ಲದೆ, ಕೆಲವು ಗಂಟೆಗಳ ಬಳಿಕ ಮಾರಿಬ್ ಮೇಲೆ ಹಾರಾಡುತ್ತಿದ್ದ ಸೌದಿಯ ‘ವಿಂಗ್ ಲೂಂಗ್ 2’ (Wing Loong 2) ಶಸ್ತ್ರಸಜ್ಜಿತ ಬೇಹುಗಾರಿಕಾ ಡ್ರೋನ್ ಅನ್ನೂ ಹೊಡೆದುರುಳಿಸಲಾಗಿದೆ ಎಂದು ಹೌತಿ ಪಡೆಗಳು ಹೇಳಿಕೊಂಡಿವೆ.

ಕಳೆದ ವಾರದಿಂದ ಸೌದಿ ಅರೇಬಿಯಾದತ್ತ ಹೌತಿಗಳು ನಿರಂತರವಾಗಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದಾರೆ. ಮಂಗಳವಾರ ಇಸ್ಲಾಂ ಧರ್ಮದ ಪವಿತ್ರ ನಗರ ಮೆಕ್ಕಾದ ದಕ್ಷಿಣ ಭಾಗಕ್ಕೆ ನುಗ್ಗಲು ಯತ್ನಿಸಿದ ಹೌತಿಗಳ ಡ್ರೋನ್ ಅನ್ನು ಸೌದಿ ವಾಯುಪಡೆ ಹೊಡೆದುರುಳಿಸಿದೆ. ‘ಮೆಕ್ಕಾ ನಮ್ಮ ಪಾಲಿನ ಕೆಂಪುಗೆರೆ (Red line), ಇದನ್ನು ದಾಟಿದರೆ ಸಹಿಸುವುದಿಲ್ಲ’ ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ. ಆದರೆ, ಮೆಕ್ಕಾವನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ, ಸೌದಿ ಅರೇಬಿಯಾ ಅಪಪ್ರಚಾರ ಮಾಡುತ್ತಿದೆ ಎಂದು ಹೌತಿಗಳು ತಳ್ಳಿಹಾಕಿದ್ದಾರೆ.

ಈಗಾಗಲೇ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ತಿಕ್ಕಾಟದಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದೀಗ ಸೌದಿ ಮತ್ತು ಹೌತಿಗಳ ನಡುವಿನ ಸಂಘರ್ಷ ತೀವ್ರಗೊಂಡಿರುವುದು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ. ಸೌದಿಯ ‘ಪೂರ್ವ-ಪಶ್ಚಿಮ ಪೈಪ್‌ಲೈನ್’ ಸ್ಥಗಿತಗೊಂಡರೆ ಜಾಗತಿಕ ತೈಲ ಪೂರೈಕೆಯಲ್ಲಿ ಶೇ 4ರಷ್ಟು ಕಡಿತವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿಯಿಂದ ‘ಆದಿವಾಸಿ ಸ್ಕೂಲ್ ಠೀಕ್ ಕರೋ’ ಅಭಿಯಾನ: ಸೆ.17ರಿಂದ ಶಾಲೆಗಳ ಪರಿಶೀಲನೆ

ದೇಶದ ಅರಣ್ಯ ಮತ್ತು ಮೂಲನಿವಾಸಿ ಪ್ರದೇಶಗಳ ಶಾಲೆಗಳಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಮತ್ತು...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ...

ಸೌದಿ ಅರಾಮ್ಕೋ ತೈಲ ಘಟಕ, ವಾಯುನೆಲೆ ಮೇಲೆ ಕ್ಷಿಪಣಿ ದಾಳಿ: ಹೌತಿಗಳ ಪ್ರತಿಪಾದನೆ

ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಥೆ ಸೌದಿ ಅರಾಮ್ಕೋ (Saudi Aramco)...

ಛತ್ತೀಸ್‌ಗಢ | 29 ಜನರ ಹತ್ಯೆಗೆ ಕಾರಣವಾದ 2013ರ ದಾಳಿ; 13 ವರ್ಷಗಳ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆ!

ದೇಶವನ್ನೇ ಬೆಚ್ಚಿಬೀಳಿಸಿದ್ದ ಛತ್ತೀಸ್‌ಗಢದ 2013ರ ಝೀರಂ ಕಣಿವೆ ನಕ್ಸಲ್‌ ದಾಳಿ ಪ್ರಕರಣಕ್ಕೆ...