ಇರಾನ್-ಅಮೆರಿಕ ಸಂಘರ್ಷ: ಕತಾರ್ ಮಧ್ಯಸ್ಥಿಕೆ ವಿಫಲ, 7 ಕಠಿಣ ಶರತ್ತುಗಳನ್ನು ಪುನರುಚ್ಚರಿಸಿದ ಟೆಹ್ರಾನ್‌

Date:

ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇರಾನ್ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗಿವೆ. ಖತಾರ್ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆ ನಡೆಯಬಹುದು ಎಂಬ ಆರಂಭಿಕ ನಿರೀಕ್ಷೆಗಳು ಸಂಪೂರ್ಣವಾಗಿ ಹುಸಿಯಾಗಿದ್ದು, ಮಾತುಕತೆ ಪುನರಾರಂಭಗೊಳ್ಳಬೇಕಾದರೆ ಅಮೆರಿಕ ತನ್ನ 7 ಕಠಿಣ ಶರತ್ತುಗಳನ್ನು ಈಡೇರಿಸಬೇಕು ಎಂದು ಇರಾನ್ ಸ್ಪಷ್ಟ ಗಡುವು ನೀಡಿದೆ. ಶರತ್ತುಗಳು ಈಡೇರುವವರೆಗೆ ಜಾಗತಿಕ ತೈಲ ಸಾಗಣೆಯ ಜೀವನಾಡಿಯಾದ ಹಾರ್ಮುಜ್ ಜಲಸಂಧಿಯನ್ನು ಯಾವುದೇ ಕಾರಣಕ್ಕೂ ತೆರೆಯುವುದಿಲ್ಲ ಎಂದೂ ಎಚ್ಚರಿಕೆ ನೀಡಿದೆ.

- Advertisement -

ಇರಾನ್‌ನ ಉನ್ನತ ರಾಷ್ಟ್ರೀಯ ಭದ್ರತಾ ಮಂಡಳಿಯ (SNSC) ಕಾರ್ಯದರ್ಶಿ, ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರ ಆಪ್ತ ಪ್ರತಿನಿಧಿಯಾಗಿರುವ ಮೊಹ್ಸೆನ್ ರೆಜಾಯಿ ಅವರು ಅಮೆರಿಕದ ರಾಜತಾಂತ್ರಿಕ ನಡೆಗಳನ್ನು ತೀವ್ರವಗಿ ಟೀಕಿಸಿದ್ದಾರೆ. ಕತಾರ್‌ನಲ್ಲಿ ಅಮೆರಿಕದ ಉಪರಾಷ್ಟ್ರಪತಿ ಜೆ.ಡಿ ವ್ಯಾನ್ಸ್ ಅವರೊಂದಿಗೆ ತಾವು ಸಭೆ ನಡೆಸಲಿದ್ದೇವೆ ಮತ್ತು ಮಾತುಕತೆ ಮುಂದುವರಿಯಲಿದೆ ಎಂಬ ಅಮೆರಿಕದ ಹೇಳಿಕೆಗಳೆಲ್ಲವೂ ಹಸಿ ಸುಳ್ಳು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯನ್ನು ನಿಯಂತ್ರಿಸಲು, ತನ್ನ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅಮೆರಿಕ ಇಂತಹ ಸುಳ್ಳು ಪ್ರಚಾರ ನಡೆಸುತ್ತಿದೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಯುವನಿಧಿ ಫಲಾನುಭವಿಗಳ ಸಂಖ್ಯೆ ಹೆಚ್ಚಳ:...

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ 10,280ಕ್ಕೆ ಏರಿಕೆಯಾಗಿರುವುದು ಕೇವಲ ಒಂದು ಸರ್ಕಾರಿ ಯೋಜನೆಯ ಫಲಾಫಲದ ಅಂಕಿ-ಅಂಶವಲ್ಲ. ಜಿಲ್ಲೆಯಲ್ಲಿನ ಉದ್ಯೋಗಾವಕಾಶಗಳು, ಯುವಜನರ ಸದೃಢ ಭವಿಷ್ಯ, ಸ್ಥಳೀಯ ಆರ್ಥಿಕ...

ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!

1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳು. ಅಲ್ಲಿಂದ ಪಕ್ಷವನ್ನು ರಾಷ್ಟ್ರೀಯ ಅಧಿಕಾರದ ಕೇಂದ್ರಕ್ಕೆ ತರುವಲ್ಲಿ ಅಡ್ವಾಣಿ ಅವರ ಪಾತ್ರ ದೊಡ್ಡದು. ರಥಯಾತ್ರೆ, ರಾಮಮಂದಿರ ಚಳವಳಿ ಮತ್ತು ಹಿಂದುತ್ವದ ರಾಜಕಾರಣದ...

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಶಾಂತಿ ಮಾತುಕತೆಗೆ ಇರಾನ್ ಸರ್ಕಾರ ಏಳು ಪ್ರಮುಖ ಶರತ್ತುಗಳನ್ನು ಮುಂದಿಟ್ಟಿದೆ;

1. ಲೆಬನಾನ್ ಸೇರಿದಂತೆ ‘ಪ್ರತಿರೋಧದ ಅಕ್ಷ’ದ (Axis of Resistance) ಮೇಲಿನ ಎಲ್ಲ ರಂಗಗಳ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು.
2. ಅಮೆರಿಕದ ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.
3. ಅಮೆರಿಕದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಕೋಟ್ಯಂತರ ರೂಪಾಯಿಗಳ ಆಸ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು.
4. ಟ್ರಂಪ್ ಮತ್ತು ಪೆಜೆಶ್ಕಿಯನ್ ನಡುವೆ ನಡೆದಿದ್ದ ಮತ್ತು ವಿಫಲಗೊಂಡ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದದ (MoU) ಬಳಿಕ ಇರಾನ್ ಮೇಲೆ ಹೇರಲಾಗಿರುವ ಎಲ್ಲ ರೀತಿಯ ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧಗಳನ್ನು ರದ್ದುಗೊಳಿಸಬೇಕು.
5. ಇರಾನ್ ಸುತ್ತಮುತ್ತಲಿನ ಪಶ್ಚಿಮ ಏಷ್ಯಾ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಎಲ್ಲ ಸೇನಾ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.
6. ಇರಾನ್‌ನ ಎಲ್ಲ ತೈಲ ಮಾರಾಟವನ್ನು ಯಾವುದೇ ನಿರ್ಬಂಧಗಳಿಲ್ಲದೆ ಮುಕ್ತವಾಗಿ ನಡೆಸಲು ವಿನಾಯಿತಿ ನೀಡಬೇಕು.
7. ಇರಾನ್ ಮತ್ತು ಒಮಾನ್ ನಡುವೆ ಈಗಾಗಲೇ ಒಪ್ಪಂದವಾಗಿರುವ ಸಮುದ್ರ ಕಾರಿಡಾರ್ ಅನ್ನು ಅಧಿಕೃತವಾಗಿ ಗುರುತಿಸಬೇಕು.

ಮತ್ತೊಂದೆಡೆ, ಫ್ರಾನ್ಸ್‌ನಲ್ಲಿ ನಡೆದ ಜಿ-7 ವಿದೇಶಾಂಗ ಸಚಿವರ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಟ್ರಂಪ್ ಆಡಳಿತದ ಕಾರ್ಯತಂತ್ರವನ್ನು ವಿವರಿಸಿದ್ದಾರೆ. ಸದ್ಯದ ಮಟ್ಟಿಗೆ ಇರಾನ್ ಮೇಲೆ ನೇರ ಸೇನಾ ದಾಳಿ ನಡೆಸುವ ಉದ್ದೇಶವಿಲ್ಲ. ಆದರೂ, ಯಾವುದೇ ಹೊಸ ಒಪ್ಪಂದಕ್ಕೂ ಅಮೆರಿಕ ಸಿದ್ಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ನೌಕಾ ದಿಗ್ಬಂಧನ ಮತ್ತು ಕಠಿಣ ಆರ್ಥಿಕ ನಿರ್ಬಂಧಗಳ ಮೂಲಕ ಇರಾನ್ ಅನ್ನು ಆರ್ಥಿಕವಾಗಿ ಉಸಿರುಗಟ್ಟಿಸುವ ತಂತ್ರಕ್ಕೆ ಅಮೆರಿಕ ಮೊರೆಹೋಗಿದೆ. ಆದರೆ, ಈ ಆರ್ಥಿಕ ದಿಗ್ಬಂಧನಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದಿರುವ ಇರಾನ್ ನಾಯಕತ್ವ, ಇನ್ನು ಮುಂದೆ ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ ಎಂಬ ಅಮೆರಿಕದ ದ್ವಂದ್ವ ನಿಲುವನ್ನು ಸಹಿಸುವುದಿಲ್ಲ ಎಂದು ಘೋಷಿಸಿದೆ.

ಈ ಲೇಖನ ಓದಿದ್ದೀರಾ?: ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ ಬಿಕ್ಕಟ್ಟಿಗೆ ಸಿಗಲಿದೆಯೇ ಶಾಶ್ವತ ಮುಕ್ತಿ?

ಈ ನಡುವೆ, ರಷ್ಯಾ ಮತ್ತು ಚೀನಾ ರಾಷ್ಟ್ರಗಳ ಸಲಹೆಯ ಮೇರೆಗೆ ಇರಾನ್ ಅಮೆರಿಕದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ವಾರ ಚೀನಾದ ಶೆನ್ಜೆನ್‌ನಲ್ಲಿ ನಡೆಯಲಿರುವ ಎಪೆಕ್ (APEC) ಶೃಂಗಸಭೆಯ ಸಮಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ತ್ರಿಪಕ್ಷೀಯ ಸಭೆ ನಡೆಯುವ ಸಾಧ್ಯತೆಯಿದೆ. ಈ ಸಭೆಯಲ್ಲಿ ರಾಜತಾಂತ್ರಿಕ ಮಾರ್ಗಕ್ಕೆ ಮರಳುವಂತೆ ಟ್ರಂಪ್ ಮೇಲೆ ಒತ್ತಡ ಹೇರಲು ರಷ್ಯಾ ಮತ್ತು ಚೀನಾ ಮುಂದಾಗಿವೆ. ಇದೇ ವೇಳೆ, ಇರಾನ್ ತನ್ನ ‘ಚೀನಾ ಪರ ನೀತಿ’ಯನ್ನು ತೀವ್ರಗೊಳಿಸಿದ್ದು, ಚೀನಾದ ವಿಶೇಷ ರಾಯಭಾರಿ ಝೈ ಜುನ್ ಅವರು ಟೆಹ್ರಾನ್‌ಗೆ ಭೇಟಿ ನೀಡಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ತನ್ನ ಮೂರು ವಿಮಾನವಾಹಕ ಯುದ್ಧ ನೌಕೆಗಳನ್ನು ನಿಯೋಜಿಸುತ್ತಿದ್ದರೂ, ಇರಾನ್ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಅಮೆರಿಕದ ಆರ್ಥಿಕ ದಿಗ್ಬಂಧನಕ್ಕೆ ಯಾವುದೇ ದೇಶ ಸಹಕರಿಸಿದರೆ ಅದನ್ನು ನೇರ ಯುದ್ಧದ ಕೃತ್ಯವೆಂದೇ ಪರಿಗಣಿಸಲಾಗುವುದು ಎಂದು ಇರಾನ್‌ನ ಉನ್ನತ ಸಲಹೆಗಾರ ಮೊಹಮ್ಮದ್ ಮೊಖ್ಬೆರ್ ಎಚ್ಚರಿಸಿದ್ದಾರೆ. ಅಲ್ಲದೆ, ಅಮೆರಿಕ ಯಾವುದೇ ರೀತಿಯ ಮಿಲಿಟರಿ ಆಕ್ರಮಣಕ್ಕೆ ಮುಂದಾದರೆ, ಕೇವಲ ಹತ್ತಿರದ ಅಮೆರಿಕದ ಸೇನಾ ನೆಲೆಗಳಷ್ಟೇ ಅಲ್ಲದೆ, ದೂರದ ವಿದೇಶಗಳಲ್ಲಿರುವ ಅಮೆರಿಕದ ಎಲ್ಲ ನೆಲೆಗಳು, ದ್ವೀಪಗಳು ಹಾಗೂ ಅಮೆರಿಕದ ಯುದ್ಧ ವಿಮಾನಗಳಿಗೆ ಆಶ್ರಯ ನೀಡುವ ರಾಷ್ಟ್ರಗಳ ಮೇಲೂ ಕ್ಷಿಪಣಿ ದಾಳಿ ನಡೆಸಲಾಗುವುದು ಎಂದು ಮೊಹ್ಸೆನ್ ರೆಜಾಯಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಡರ್-19 ಏಷ್ಯಾಕಪ್ ಫೈನಲ್: ಪ್ರಶಸ್ತಿಗಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್‌ ಮುಖಾಮುಖಿ

ಕ್ರಿಕೆಟ್ ಜಗತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ...

ವೀರಾಮಣಿ ಪೋಕ್ಸೊ ಪ್ರಕರಣ: ಆರೋಪಿಗಳ ಸ್ಥಾನದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಸೇರಿ 7 ಪೊಲೀಸರು!

ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ ಮತ್ತು ಆತನ ಸಹಚರರ ವಿರುದ್ಧ ದಾಖಲಾಗಿರುವ...

ಬೀದರ್‌ | ವಚನಗಳ ಅಧ್ಯಯನದಿಂದ ಸಂಸಾರಿಕ ಬದುಕು ಆನಂದಮಯ: ಬಸವಲಿಂಗ ಪಟ್ಟದ್ದೇವರು

ಸಂಸಾರಿಕ ಜೀವನ ಆನಂದಮಯವಾಗಬೇಕಾದರೆ ಸತ್ಸಂಗದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವಚನಗಳ ತತ್ವಗಳನ್ನು ಬದುಕಿನಲ್ಲಿ...

ಬೆಲೆ ಏರಿಕೆಯ ಬರೆ, ಮಿತಿ ಮೀರಿದ ಹಣದುಬ್ಬರ: ಮುಂಗಾರು ಕೈಕೊಟ್ಟ ಬೆನ್ನಲ್ಲೇ ಗ್ರಾಹಕರಿಗೆ ಆರ್ಥಿಕ ಸಂಕಷ್ಟ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 6.09ಕ್ಕೆ ತಲುಪಿದ್ದು, ಎರಡು...