ಬೀದರ್‌ | ವಚನಗಳ ಅಧ್ಯಯನದಿಂದ ಸಂಸಾರಿಕ ಬದುಕು ಆನಂದಮಯ: ಬಸವಲಿಂಗ ಪಟ್ಟದ್ದೇವರು

Date:

ಸಂಸಾರಿಕ ಜೀವನ ಆನಂದಮಯವಾಗಬೇಕಾದರೆ ಸತ್ಸಂಗದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವಚನಗಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಾವು ಎಲ್ಲಿಯೇ ಇದ್ದರೂ ಬಸವತತ್ವಗಳನ್ನು ಪಾಲಿಸಬೇಕು. ವಚನಗಳ ಅಧ್ಯಯನದಿಂದ ಮನಸ್ಸಿನಲ್ಲಿ ಪ್ರಸನ್ನತೆ ಮೂಡುತ್ತದೆ. ಶರಣರ ಸಂಗದಲ್ಲಿದ್ದು, ಇತರರ ದುಃಖವನ್ನು ಅರಿತು ಅವರ ಕಣ್ಣೀರು ಒರೆಸುವ ಕಾರ್ಯ ಮಾಡಬೇಕು ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

- Advertisement -

ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ಜಯಂತಿ ಉತ್ಸವ ಹಾಗೂ 191ನೇ ಅನುಭವ ಮಂಟಪದ ಮಾಸಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಧನ್ನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಚಿನ್ಮಯ ಜ್ಞಾನಿ ಚನ್ನಬಸವಣ್ಣನವರ ವಚನಗಳು ಮನುಷ್ಯನ ಬದುಕಿನ ಸಂಕಷ್ಟಗಳಿಗೆ ಪರಿಹಾರ ತೋರಿಸುತ್ತವೆ. ಬಸವಣ್ಣನವರು ಕೇವಲ ಲಿಂಗಾಯತ ಧರ್ಮಕ್ಕೆ ಸೀಮಿತವಾಗದೆ, ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ವಿಭೂತಿ ಪುರುಷರಾಗಿದ್ದರು. ಸಕಲ ಜೀವಿಗಳ ಕಲ್ಯಾಣವನ್ನು ಬಯಸುವ ತತ್ವವನ್ನು ಸಾರಿದ್ದರು. ಸುಮಾರು 27 ವರ್ಷಗಳ ಕಾಲ ಅನುಭವ ಮಂಟಪದ ಮಹಾಮನೆಯಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು” ಎಂದು ಹೇಳಿದರು.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬಸವರಾಜ ಬುಳ್ಳಾ ಸನ್ಮಾನ ಸ್ವೀಕರಿಸಿ ಮಾತನಾಡಿ, “ಅನುಭವ ಮಂಟಪದಲ್ಲಿ 770 ಅಮರಗಣಗಳು ಚಿಂತನೆ ನಡೆಸುತ್ತಿದ್ದರು. ಲಿಂಗಾಯತ ಧರ್ಮದ ತತ್ವ, ಸಿದ್ಧಾಂತ ಹಾಗೂ ಕಾಯಿದೆ-ಕಾನೂನುಗಳ ಸಂರಕ್ಷಣೆಯಲ್ಲಿ ಚನ್ನಬಸವಣ್ಣನವರ ಪಾತ್ರ ಮಹತ್ವದ್ದಾಗಿದೆ. ಬಸವಧರ್ಮವು ಸತ್ಯದ ತಳಹದಿಯ ಮೇಲೆ ವಚನ ಸಂವಿಧಾನವನ್ನು ಕಟ್ಟಿಕೊಂಡಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಸರ್ಕಾರ ಶೀಘ್ರ ನೀಡಬೇಕು” ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿ ಬಾಬು ವಾಲಿ ಮಾತನಾಡಿ, “ವಚನ ವಿಶ್ವವಿದ್ಯಾಲಯವನ್ನು ಸರ್ಕಾರ ಶೀಘ್ರ ಮಂಜೂರು ಮಾಡಬೇಕು. ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಡೆಯುತ್ತಿರುವುದು ಸಂತಸದ ಸಂಗತಿ. ಇದೇ ತಿಂಗಳ 28 ಮತ್ತು 29ರಂದು ನಡೆಯಲಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.

ಹಿರೇಮಠ ಸಂಸ್ಥಾನದ ಪೀಠಾಧೀಶರಾದ ಪೂಜ್ಯ ಗುರುಬಸವ ಪಟ್ಟದೇವರು 2026ನೇ ಸಾಲಿನ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಕರಪತ್ರ ಬಿಡುಗಡೆ ಮಾಡಿದರು. ಬೀದರ್‌ನ ಉದ್ಯಮಿ ಜಯರಾಜ ಖಂಡ್ರೆ ಬಸವಧರ್ಮದ ಕುರಿತು ಮಾತನಾಡಿದರು.

WhatsApp Image 2026 10 10 at 7.46.08 PM 43

ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕಿ ಸುವರ್ಣ ಚಿಮ್ಮಕೋಡೆ ಗೌರವ ಉಪಸ್ಥಿತಿ ವಹಿಸಿದ್ದರು. ಸಿದ್ದಯ್ಯ ಕವಡಿಮಠ ವೇದಿಕೆಯಲ್ಲಿದ್ದರು. ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ಭವಾನಿ ನಾಗೇಶ್ ವಚನ ಚಿಂತನೆ ಮಂಡಿಸಿದರು. ದಾಸೋಹಿಗಳಾದ ಸಂಜೀವಕುಮಾರ, ರಾಕೇಶ್ ಹಾಗೂ ಭವಾನಿ ಮಡಿವಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಗ್ರಾಮ ಯಂಗಳೆ, ಸಂಗ್ರಾಮಪ್ಪ ಬಿರಾದಾರ, ಶರಣಪ್ಪ ಖೇಡ್, ಗುರಾನಾಥ ಬಿರಾದಾರ, ತೀರ್ಥಮ್ಮ ರೆಡ್ಡಿ, ಸಂಕೇತ ಬ್ಯಾಲಹಳ್ಳಿ ಸೇರಿದಂತೆ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ವಿದ್ಯಾರ್ಥಿಗಳು, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶರಣ-ಶರಣೆಯರು ಭಾಗವಹಿಸಿದ್ದರು.‌

ಚನ್ನಬಸಪ್ಪ ನೌಬದೆ ಹಾಗೂ ಶ್ರೀನಿವಾಸ ಪಾಪಡೆ ವಚನ ಗಾಯನ ನಡೆಸಿಕೊಟ್ಟರು. ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಗುರುಬಸವ ಪ್ರಾರ್ಥನೆ ನೆರವೇರಿತು. ರಾಧಿಕಾ ಪರಮೇಶ್ವರ ಸ್ವಾಗತಿಸಿದರು. ಲಕ್ಷ್ಮೀಬಾಯಿ ಬಿರಾದಾರ ನಿರೂಪಿಸಿದರು. ಖುಷಿ ವಂದಿಸಿದರು.

ಇದನ್ನೂ ಓದಿ : ಬೀದರ್‌ | ಸಾಹಿತ್ಯ ಲೋಕದ ಅರಿವು ವಿಸ್ತರಿಸಿದ ವಿದ್ವಾಂಸ ಕೆವಿಎನ್ : ಶಿವಾಜಿ ಮೇತ್ರೆ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ನಲ್ಲಿ ಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್ ಮಾತ್ರ ಸಮರ್ಥ: ಸಚಿನ್ ಪೈಲಟ್

ಪಂಜಾಬ್‌ನಲ್ಲಿ ಸ್ಥಿರ ಸರ್ಕಾರವನ್ನು ರಚಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು...

ಧರ್ಮಸ್ಥಳ | ನೇತ್ರಾವತಿ ಸ್ನಾನ ಘಟ್ಟದ ತೀರದಲ್ಲಿ ತಲೆ ಬುರುಡೆ ಪತ್ತೆ !

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವನ ತಲೆಬುರುಡೆ ಪತ್ತೆಯಾಗಿದ್ದು...

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ತಾಂತ್ರಿಕ ಸಮಿತಿಗೆ ವಿನಯಕುಮಾರ್ ಮಾಳಗೆ ನಾಮನಿರ್ದೇಶನ

ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳ ಗಡಿ ವೈಜ್ಞಾನಿಕ ಪುನರ್‌ಪರಿಶೀಲನೆ ಮತ್ತು ಪುನರ್‌ನಿರ್ಧಾರ...