ಭಾರತ-ಮಾಲ್ಡಿವ್ಸ್ ಬಿಕ್ಕಟ್ಟು; ಮೀನುಗಾರಿಕಾ ಹಡಗುಗಳಿಗೆ ಅಕ್ರಮ ಪ್ರವೇಶದ ಹೊಸ ರಾಜತಾಂತ್ರಿಕ ಸಮಸ್ಯೆ

Date:

ಕಳೆದ ನವೆಂಬರ್‌ನಲ್ಲಿ ಮಾಲ್ಡಿವ್ಸ್‌ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಭಾರತದ ಜೊತೆಗಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದೀಗ ಭಾರತ-ಮಾಲ್ಡಿವ್ಸ್ ಸಂಬಂಧದಲ್ಲಿ ಹೊಸ ಸಮಸ್ಯೆ ಎದುರಾಗಿದೆ

ಮಾಲ್ಡಿವ್ಸ್ ಮತ್ತು ಭಾರತದ ನಡುವೆ ಮತ್ತೆ ಹೊಸ ರಾಜತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ತನ್ನ ಮೂರು ಮೀನುಗಾರಿಕಾ ಹಡಗುಗಳಿಗೆ ಭಾರತದ ಕರಾವಳಿ ಗಸ್ತುಪಡೆಯ ಸಿಬ್ಬಂದಿ ಪ್ರವೇಶಿಸಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಮಾಲ್ಡಿವ್ಸ್ ಭಾರತವನ್ನು ಪ್ರಶ್ನಿಸಿದೆ. 

ತನ್ನ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಲ್ಡಿವ್ಸ್ ಮೀನುಗಾರಿಕಾ ಹಡಗುಗಳಿಗೆ ಕರಾವಳಿ ಗಸ್ತುಪಡೆಗಳ ಸಿಬ್ಬಂದಿ ಭೇಟಿಯ ಉದ್ದೇಶದ ಬಗ್ಗೆ ಸಮಾಧಾನಕರ ಸ್ಪಷ್ಟನೆ ನೀಡುವಂತೆ ಮಾಲ್ಡಿವ್ಸ್ ಅಧಿಕೃತವಾಗಿ ಕೇಳಿಕೊಂಡಿದೆ. ಭಾರತ ಸರ್ಕಾರ ಈ ಆಪಾದನೆಗೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. 

ಜನವರಿ 31ರಂದು ಭಾರತೀಯ ನೌಕಾಸೇನೆ ಮಾಲ್ಡಿವ್ಸ್‌ನ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಲ್ಡಿವ್ಸ್ ಮೀನುಗಾರಿಕಾ ದೋಣಿಗಳನ್ನು ತಡೆದಿದೆ ಎಂದು ಶುಕ್ರವಾರ ಮಾಲ್ಡಿವ್ಸ್ ರಕ್ಷಣಾ ಸಚಿವಾಲಯ ತಿಳಿಸಿತ್ತು. ಭಾರತೀಯ ಸಿಬ್ಬಂದಿಗಳು ಅಧಿಕೃತವಾಗಿ ಮಾಲ್ಡಿವ್ಸ್‌ ಅಧಿಕಾರಿಗಳೊಂದಿಗೆ ಸಂಪರ್ಕಿಸದೆ ಮೀನುಗಾರಿಕಾ ಹಡಗುಗಳಿಗೆ ಪ್ರವೇಶಿಸಿರುವುದು ಅಂತಾರಾಷ್ಟ್ರೀಯ ಸಾಗರ ನಿಯಮಗಳು ಮತ್ತು ನಿಯಂತ್ರಣಗಳ ಉಲ್ಲಂಘನೆ ಎಂದು ಮಾಲ್ಡಿವ್ಸ್ ಹೇಳಿದೆ. ಜೊತೆಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಭಾರತವನ್ನು ಪ್ರಕರಣದ ಬಗ್ಗೆ ಪ್ರಶ್ನಿಸಲಾಗಿದೆ ಎಂದು ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜತಾಂತ್ರಿಕ ಬಿಕ್ಕಟ್ಟು

2023 ನವೆಂಬರ್‌ನಲ್ಲಿ ಮಾಲ್ಡಿವ್ಸ್‌ನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರ ಸ್ವೀಕರಿಸಿದಂದಿನಿಂದ ಭಾರತ ಮತ್ತು ಮಾಲ್ಡಿವ್ಸ್ ನಡುವಿನ ಸ್ಥಿರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು, ಮಾತ್ರವಲ್ಲದೆ ಮಾಲ್ಡಿವ್ಸ್ ಮೇಲೆ ಭಾರತದ ಪ್ರಭಾವ ಕಡಿಮೆಯಾಗಿದೆ. ಮುಯಿಝು ಅಧಿಕಾರಕ್ಕೆ ಬಂದ ನಂತರ ಮಾಲ್ಡಿವ್ಸ್ ಚೀನಾ ಕಡೆಗೆ ವಾಲಿದೆ.

ಅಧಿಕಾರಕ್ಕೇರಿದ ಕೆಲವೇ ತಿಂಗಳಲ್ಲಿ ಮಾಲ್ಡಿವ್ಸ್‌ನಿಂದ ಭಾರತೀಯ ಸೇನಾ ಸಿಬ್ಬಂದಿಗಳನ್ನು ಮರಳಿ ಕರೆಸಿಕೊಳ್ಳುವಂತೆ ಅಧಿಕೃತವಾಗಿ ಭಾರತವನ್ನು ಕೋರಿ ಮಾರ್ಚ್ ತಿಂಗಳ ಗಡುವನ್ನು ನೀಡಿದ್ದರು. ಚೀನಾಗೆ ಭೇಟಿ ನೀಡಿ ಮರಳಿದ ನಂತರ ಅವರು ಈ ಕೋರಿಕೆ ಇಟ್ಟಿದ್ದರು. ಈ ಕುರಿತು ಎರಡೂ ದೇಶಗಳ ನಡುವಿನ ಮಾತುಕತೆಯ ನಂತರ ಭಾರತ ಮಾರ್ಚ್‌ನಿಂದ ಮೇ ನಡುವೆ ಸಿಬ್ಬಂದಿಗಳನ್ನು ಮರಳಿ ಕರೆಸಿಕೊಳ್ಳುವುದಾಗಿ ತಿಳಿಸಿದೆ. ಆದರೆ, ತನ್ನ ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಡಾರ್ರ್ನಿಯರ್ ವಿಮಾನವನ್ನು ಮಾಲ್ಡಿವ್ಸ್‌ನಲ್ಲಿ ಕಾರ್ಯನಿರ್ವಹಿಸಲು ಅನುಮತಿಪಡೆದಿದೆ. ಭಾರತದ ನಾಗರಿಕ ವಾಯುಯಾನ ಸಿಬ್ಬಂದಿ ಮತ್ತು ಮಾಲ್ಡಿವ್ಸ್‌ ರಕ್ಷಣಾ ಸಿಬ್ಬಂದಿ ಇವುಗಳ ಜವಾಬ್ದಾರಿವಹಿಸಲಿದ್ದಾರೆ.

ಮಾಲ್ಡಿವ್ಸ್‌ ಬಹಿಷ್ಕಾರದ ಕರೆ

ಚೀನಾ ಮತ್ತು ಭಾರತ ಎರಡೂ ದೇಶಗಳು ಮಾಲ್ಡಿವ್ಸ್ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿವೆ ಮತ್ತು ಮಾಲ್ಡಿವ್ಸ್‌ಗೆ ಸಾಲಗಳನ್ನು ನೀಡಿವೆ.

ಆದರೆ, ಇತ್ತೀಚೆಗೆ ಮಾಲ್ಡಿವ್ಸ್ ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಟೀಕೆ ಮಾಡಿರುವುದಕ್ಕೆ ಪ್ರತಿಯಾಗಿ ಭಾರತದಲ್ಲೂ ಬಿಜೆಪಿ ಪರ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮಾಲ್ಡಿವ್ಸ್‌ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಈ ಸಂಬಂಧ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿತ್ತು.

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ತಮ್ಮ ಬೆಂಬಲಿಗರನ್ನು ಕೇಳಿಕೊಂಡಿದ್ದರು. ಈ ಭೇಟಿಯ ನಂತರ ಮಾಲ್ಡಿವ್ಸ್ ಮತ್ತು ಭಾರತದ ನಡುವೆ ಪ್ರವಾಸೋದ್ಯಮದ ಆದ್ಯತೆಗಳಿಗೆ ಸಂಬಂಧಿಸಿ ಸಂಘರ್ಷ ಏರ್ಪಟ್ಟಿತ್ತು. ಸಂಘರ್ಷದ ಫಲವಾಗಿ ಮಾಲ್ಡಿವ್ಸ್ ಸಂಸದರು ಸಾಮಾಜಿಕ ಜಾಲತಾಣದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿದ್ದರು.

ಬದಲಾದ ವಿದೇಶಾಂಗ ನೀತಿ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಬಿಜೆಪಿ ಪರ ವಾದಿಸುವವರು ಪ್ರಧಾನಿ ಮೋದಿ ದೃಢ ಭಾರತ ಕಟ್ಟುವ ಬಗ್ಗೆ ಕೊಂಡಾಡುತ್ತಿದ್ದಾರೆ. ಆದರೆ, ವಾಸ್ತವ ಸ್ಥಿತಿ ಇದಕ್ಕೆ ವಿರುದ್ಧವಾಗಿದೆ.

ಆದರೆ ಅನೇಕ ವರ್ಷಗಳಿಂದ ತಟಸ್ಥವಾಗಿದ್ದ ಚೀನಾ ಜೊತೆಗಿನ ಸಂಬಂಧ ಹದಗೆಟ್ಟಿದೆ. ಬದಲಾಗಿ ಪಾಕಿಸ್ತಾನ ಮತ್ತು ಚೀನಾ ಸ್ನೇಹ ದೃಢವಾಗಿದೆ. ನೇಪಾಳ, ಮ್ಯಾನ್ಮಾರ್ ಅಥವಾ ಮಾಲ್ಡಿವ್ಸ್‌ನಂತಹ ಸಣ್ಣ ದೇಶಗಳ ಜೊತೆಗಿನ ಸಂಬಂಧದಲ್ಲೂ ಹುಳುಕು ಕಾಣಿಸಿಕೊಂಡಿದೆ.

ಕೆನಡಾದಂತಹ ಆಪ್ತಸಂಬಂಧವಿದ್ದ ದೇಶದ ಜೊತೆಗಿನ ವ್ಯವಹಾರದಲ್ಲೂ ಬಿಕ್ಕಟ್ಟು ಆವರಿಸಿದೆ. ಮಾತ್ರವಲ್ಲ, ಭಾರತ ತನ್ನ ನೆಲದಲ್ಲಿ ಗುಪ್ತಚರ ಚಟುವಟಿಕೆ ನಡೆಸಿ, ಸಂಸದೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ರಷ್ಯಾದ ಜೊತೆಗಿನ ದಶಕಗಳಷ್ಟು ಹಳೆಯ ಸ್ನೇಹ ಬಿಗಡಾಯಿಸುತ್ತಿದ್ದು, ರಷ್ಯಾ ಮತ್ತು ಚೀನಾ ಆಪ್ತವಾಗುತ್ತಿವೆ. ಅಮೆರಿಕದ ಜೊತೆಗೆ ಸ್ನೇಹಮಯ ವಾತಾವರಣವಿದ್ದರೂ, ಸಂಬಂಧ ದೃಢವಾಗಿಲ್ಲ ಮತ್ತು ವಿಶ್ವಾಸ ಕಂಡುಬರುತ್ತಿಲ್ಲ. 

ಏಷ್ಯಾ ರಾಜಕೀಯದಲ್ಲಿ ನಾಯಕನ ರೀತಿಯಲ್ಲಿ ವ್ಯವಹರಿಸುತ್ತಿದ್ದ ಭಾರತ ಇದೀಗ ಆ ಸ್ಥಾನವನ್ನು ಚೀನಾಗೆ ಬಿಟ್ಟುಕೊಡುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್‌ ಕಸ್ಟಡಿಯಲ್ಲೇ ನಡೆದಿವೆ 275 ಅತ್ಯಾಚಾರ ಪ್ರಕರಣಗಳು: ಎನ್‌ಸಿಆರ್‌ಬಿ ಡೇಟಾ

2017 ರಿಂದ 2022ರವರೆಗೆ 275 'ಪೊಲೀಸ್‌ ಕಸ್ಟಡಿಯಲ್ಲಿ ಅತ್ಯಾಚಾರ' ಪ್ರಕರಣಗಳು ದಾಖಲಾಗಿವೆ...

ಗುಜರಾತ್ | ಭಾರತದ ಅತಿ ಉದ್ದದ ಸೇತುವೆ ‘ಸುದರ್ಶನ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್‌ನ ದ್ವಾರಕಾ ಜಿಲ್ಲೆಯ ಬೇಟ್ ದ್ವಾರಕಾ ದ್ವೀಪದಿಂದ ಓಖಾ ಪ್ರದೇಶಕ್ಕೆ ಸಂಪರ್ಕಿಸುವ,...

ಲೋಕಸಭಾ ಚುನಾವಣೆ | ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವರದಿ

ಮುಂದಿನ ತಿಂಗಳು ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ...

ಆಂಧ್ರ ಪ್ರದೇಶ | ಟಿಡಿಪಿ-ಜನಸೇನಾ ಮೈತ್ರಿ: 24 ಕ್ಷೇತ್ರ ಪವನ್‌ ಕಲ್ಯಾಣ್‌ಗೆ ಬಿಟ್ಟುಕೊಟ್ಟ ಚಂದ್ರಬಾಬು ನಾಯ್ಡು

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ...