ಟೆಸ್ಟ್ | ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಆಂಗ್ಲನ್ನರು: 2ನೇ ದಿನ ಟೀಮ್ ಇಂಡಿಯಾ ಮೇಲುಗೈ

Date:

ವಿಶಾಖಪಟ್ಟಣದ ಡಾ. ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕ ಹಾಗೂ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಎರಡನೇ ದಿನ ಮೇಲುಗೈ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರ ಆಕರ್ಷಕ ದ್ವಿಶತಕ(209 ರನ್) ನೆರವಿನಿಂದ 396 ರನ್‌ ಗಳಿಸಿ ಟೀಮ್ ಇಂಡಿಯಾ ಆಲೌಟಾಗಿತ್ತು. ಆ ಬಳಿಕ ಕ್ರೀಸ್‌ಗಿಳಿದ ಇಂಗ್ಲೆಂಡ್ ಬ್ಯಾಟಿಂಗ್ ಪಡೆಯು, ಜಸ್ಪ್ರೀತ್ ಬುಮ್ರಾ ಹಾಗೂ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮಾರಕ ದಾಳಿಗೆ ರನ್ ಗಳಿಸಲು ಪರದಾಡಿದರು. 253 ರನ್ ಗಳಿಸುವಷ್ಟರಲ್ಲಿ ಪ್ರವಾಸಿಗರು ಆಲೌಟ್ ಆದರು.

ಇಂಗ್ಲೆಂಡ್ 253ಕ್ಕೆ ಆಲೌಟ್ ಆದ್ದರಿಂದ ಟೀಮ್ ಇಂಡಿಯಾ 143 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ದಿನದಾಟದ ಮುಕ್ತಾಯದ ವೇಳೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 28 ರನ್ ದಾಖಲಿಸಿತು. ಆ ಮೂಲಕ ಒಟ್ಟು 171 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. 13 ರನ್‌ಗಳಿಸಿರುವ ನಾಯಕ ರೋಹಿತ್ ಶರ್ಮಾ ಹಾಗೂ 15 ರನ್ ಗಳಿಸಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬುಮ್ರಾ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಸ್ಟೋಕ್ಸ್ ಪಡೆ
ಮೊದಲ ಇನ್ನಿಂಗ್ಸ್‌ ಆರಂಭಿಸಿದ್ದ ಪ್ರವಾಸಿಗರು ಉತ್ತಮ ಮೊತ್ತ ಕಲೆ ಹಾಕುವ ಯೋಜನೆ ಹಾಕಿಕೊಂಡಿದ್ದರು. ಅದರ ಪ್ರಕಾರವೇ ಉತ್ತಮ ಆರಂಭ ಕೂಡ ನೀಡಿದ್ದರು. ಆದರೆ ಇದಕ್ಕೆ ಮೊದಲು ಕಡಿವಾಣ ಹಾಕಿದ್ದು ಟೀಮ್ ಇಂಡಿಯಾದ ಎಡಗೈ ಸ್ಪಿನ್ ಮಾಂತ್ರಿಕ ಕುಲ್‌ದೀಪ್ ಯಾದವ್.

ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ 59 ರನ್‌ಗಳ ಉತ್ತಮ ಜೊತೆಯಾಟ ನೀಡುತ್ತಾ ಮುಂದುವರಿಯುತ್ತಿದ್ದಾಗ ಬೆನ್ ಡಕೆಟ್(21 ರನ್) ಅವರನ್ನು ಔಟ್ ಮಾಡುವ ಕುಲ್‌ದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಆ ಬಳಿಕ ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್‌ಗೆ ಅರ್ಧಶತಕ ದಾಖಲಿಸಿ ಮುಂದುವರಿಯುತ್ತಿದ್ದ ಜಾಕ್ ಕ್ರಾಲಿ(76 ರನ್) ಬಲಿಯಾದರು. ಬಳಿಕ ಓಲಿ ಪೋಪ್(23 ರನ್) ಬುಮ್ರಾ ಮಾರಕ ಯಾರ್ಕರ್‌ಗೆ ಬಲಿಯಾದರು. ಜೋ ರೂಟ್(5 ರನ್) ಮತ್ತೆ ವಿಫಲರಾದರೆ, ಅರ್ಧ ಶತಕದತ್ತ ಮುಂದುವರಿಯುತ್ತಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (47) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು.

ಈ ವೇಳೆ ಬೆನ್ ಸ್ಟೋಕ್ಸ್‌ ನೀಡಿದ ಪ್ರತಿಕ್ರಿಯೆಯೇ ಬುಮ್ರಾ ಬೌಲಿಂಗ್ ಅನ್ನು ಹೊಗಳಿದಂತಿತ್ತು. ತನ್ನ ಬ್ಯಾಟನ್ನು ಕೆಳಕ್ಕೆ ಹಾಕಿ, ಯಾವ ರೀತಿಯ ಬೌಲಿಂಗ್ ಇದು ಎಂದು ಪ್ರಶ್ನಿಸಿದರು.

ಇದನ್ನು ಓದಿದ್ದೀರಾ? ಬುಮ್ರಾ ಅದ್ಭುತ ಯಾರ್ಕರ್‌ಗೆ ಓಲಿ ಪೋಪ್ ಕ್ಲೀನ್‌ಬೌಲ್ಡ್: ‘ಪ್ರಶಸ್ತಿಗೆ ಅರ್ಹವಾದ ಎಸೆತ’ ಎಂದ ನೆಟ್ಟಿಗರು!

ಆ ಬಳಿಕ ಜಾನಿ ಬೈರ್‌ಸ್ಟೋವ್ (25 ರನ್), ಬೆನ್ ಫೋಕ್ಸ್ (6 ರನ್), ರೆಹಾನ್ ಅಹ್ಮದ್ 6 ರನ್, ಟಾಮ್ ಹಾರ್ಟ್‌ಲೀ 21, ಜೇಮ್ಸ್‌ ಆಂಡರ್‌ಸನ್ 6 ಗಳಿಸಿ ಔಟಾದರು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಗೈದಿರುವ ಶೋಯೇಬ್ ಬಶೀರ್ 8 ರನ್ ಗಳಿಸಿ, ಔಟಾಗದೆ ಉಳಿದರು.

ಬುಮ್ರಾಗೆ 5 ವಿಕೆಟ್ ಗೊಂಚಲಿನ ಜೊತೆಗೆ 150 ವಿಕೆಟ್‌ ಸಾಧನೆ
ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 45 ರನ್‌ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 10ನೇ ಬಾರಿಗೆ ಐದು ವಿಕೆಟ್‌ ಗೊಂಚಲು ಪಡೆದುಕೊಂಡ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 150 ವಿಕೆಟ್‌ ಪಡೆದ ಸಾಧನೆ ಮಾಡಿದ ಮೈಲಿಗಲ್ಲನ್ನು ತಲುಪಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಪರ ಬೌಲಿಂಗ್‌ನಲ್ಲಿ ಬುಮ್ರಾ 45 ರನ್‌ ನೀಡಿ ಆರು ವಿಕೆಟ್ ಪಡೆದರೆ, ಕುಲ್‌ದೀಪ್ ಯಾದವ್ 71 ರನ್ ನೀಡಿ ಮೂರು ವಿಕೆಟ್ ಪಡೆದಿದ್ದಾರೆ. ಅಕ್ಸರ್ ಪಟೇಲ್ ಒಂದು ವಿಕೆಟ್ ತನ್ನದಾಗಿಸಿಕೊಂಡರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ಪಂದ್ಯಗಳ ವೇಳಾಪಟ್ಟಿ ಪ್ರಕಟ: ಚೆನ್ನೈ-ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ

ಹಲವು ವಿವಾದಗಳ ನಡುವೆಯೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹಬ್ಬ ಎಂದೇ ಪರಿಗಣಿತವಾಗಿರುವ...

ಹಿಮ್ಮಡಿ ಶಸ್ತ್ರಚಿಕಿತ್ಸೆ: ಐಪಿಎಲ್ ಟೂರ್ನಿಯಿಂದ ಶಮಿ ಹೊರಗೆ

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಂ...

ಯಶಸ್ವಿ ಜೈಸ್ವಾಲ್ ಎರಡು ದ್ವಿಶಕ ಸಾಧನೆ: ಐಸಿಸಿ ಟಾಪ್ 20 ಟೆಸ್ಟ್ ಶ್ರೇಯಾಂಕದಲ್ಲಿ ಜೈಸ್ವಾಲ್‌ಗೆ ಸ್ಥಾನ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್ ಸರಣಿಯಲ್ಲಿ ಸತತ ಎರಡು ದ್ವಿಶತಕ...

ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು: ಟ್ವೀಟ್ ಮೂಲಕ ಖುಷಿ ಹಂಚಿಕೊಂಡ ಸ್ಟಾರ್ ಆಟಗಾರ

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಟೀಮ್...