ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ: ಸಿಎಂ ಡಿಕೆ ಶಿವಕುಮಾರ್‌ಗೆ ವಿಶ್ವದ 61 ಕನ್ನಡ ಸಂಘಟನೆಗಳಿಂದ ಅಭಿನಂದನೆ!

Date:

ಕಳೆದ ಡಿಸೆಂಬರ್ 2025 ರಲ್ಲಿ ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ 30 ದೇಶಗಳ 43 ಅನಿವಾಸಿ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ಸಿಎಂ, ಡಿಸಿಎಂರನ್ನು ಭೇಟಿ ಮಾಡಿ ಇಟ್ಟ ಬೇಡಿಕೆಯನ್ನು ಈಡೇರಿಸಿ, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಣೆ ಮಾಡಿರುವ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ವಿಶ್ವದಾದ್ಯಂತದ 60ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಒಕ್ಕೊರಲಿನಿಂದ ಅಭಿನಂದಿಸಿವೆ.

- Advertisement -

ಜೂನ್ 15ರಂದು ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಾಸೊ ನೇತೃತ್ವದಲ್ಲಿ ನಡೆದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ ವಿವಿಧ ದೇಶಗಳ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಯಕರು, ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುಕಾಲದ ಬೇಡಿಕೆಯಾಗಿದ್ದ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಕುರಿತ ಘೋಷಣೆ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

“ಸಚಿವಾಲಯ ರಚಿಸುವ ಘೋಷಣೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಮಾಡಿದ ನಂತರ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದೆ. ಅವರ ಸಕಾರಾತ್ಮಕ ಸ್ಪಂದನೆ ಹಾಗೂ ನಡೆ ಸಂತಸ ಮೂಡಿಸಿದೆ, ಈ ಸಚಿವಾಲಯವು ಶೀಘ್ರದಲ್ಲೇ ಸ್ಥಾಪನೆಯಾಗಿ, ಅನಿವಾಸಿ ಕನ್ನಡಿಗರು ಸರ್ಕಾರದೊಂದಿಗೆ ಕೈಜೋಡಿಸಿ ಉದ್ಯಮ, ಹೂಡಿಕೆ ಹಾಗೂ ಅನಿವಾಸಿ ಕನ್ನಡಿಗರ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಬೆಂಬಲ ನೀಡಲು ಇದು ಹೊಸ ವೇದಿಕೆಯಾಗಲಿ’ ಎಂದು ರೊನಾಲ್ಡ್ ಕೊಲಾಸೊ ಶುಭ ಹಾರೈಸಿದರು.

ಸಭೆಯಲ್ಲಿ ಗಲ್ಫ್ ರಾಷ್ಟ್ರಗಳು, ಅಮೆರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ಕೆನಡಾ, ಆಫ್ರಿಕಾ ರಾಷ್ಟ್ರಗಳ ಅನಿವಾಸಿ ಕನ್ನಡಿಗರ ಸಂಘಟನೆಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿ, ಮಾತನಾಡಿ, “ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಮುದಾಯವು ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ವಿದೇಶಿ ಹಣಕಾಸು ವರ್ಗಾವಣೆ (ರೆಮಿಟೆನ್ಸ್), ಹೂಡಿಕೆ, ಉದ್ಯಮಶೀಲತೆ, ತಂತ್ರಜ್ಞಾನ ವರ್ಗಾವಣೆ ಮೂಲಕ ಅವರು ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ, ಮಾತ್ರವಲ್ಲದೆ ಸಮಾಜಸೇವೆ, ದಾನ, ಪರೋಪಕಾರಿ ಚಟುವಟಿಕೆಯಲ್ಲಿಯೂ ಸದಾ ಮುಂದಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.

WhatsApp Image 2026 06 17 at 3.33.49 PM

ಸಭೆಯಲ್ಲಿ ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಪ್ರಸಕ್ತ ಆಗುಹೋಗುಗಳು ಹಾಗೂ ಭವಿಷ್ಯದ ಬೆಳವಣಿಗೆಳ ಕುರಿತು ಉತ್ತಮ ಚರ್ಚೆ ನಡೆಯಿತು, ಅನಿವಾಸಿ ಕನ್ನಡಿಗರ ಅಭಿವೃದ್ಧಿಗಾಗಿ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿಗಳು ಕೈಜೋಡಿಸಿ ಒಂದೇ ವೇದಿಕೆಯಲ್ಲಿ ಯೋಜನೆಯೊಂದನ್ನು ಸರ್ಕಾರದ ಸಹಕಾರದೊಂದಿಗೆ ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: RSS ಸಂವಿಧಾನ ಏನು ಹೇಳುತ್ತದೆ? ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಏನು ಹೇಳುತ್ತಾರೆ?

ಅನಿವಾಸಿಗಳಿಗೆ ನೂತನ ಸಚಿವಾಲಯ ಸ್ಥಾಪಿಸುವಾಗ ವಿಶ್ವದಾದ್ಯಂತವಿರುವ ಅನಿವಾಸಿ ಕನ್ನಡಿಗರ ಜೊತೆ ನಿರಂತರ ಸಂಪರ್ಕ ಹೊಂದಿರುವ, ಅನಿವಾಸಿಗಳ ನಾಡಿ ಮಿಡಿತ ಅರಿತಿರುವ, ಸದಾ ಸ್ಪಂದಿಸುವ, ಅಂತಾರಾಷ್ಟ್ರೀಯ ಕಾನೂನು ಹಾಗೂ ಸಮಸ್ಯೆ ನಿರ್ವಹಣೆಯ ಮಾಹಿತಿ ಹಾಗೂ ಅನುಭವವಿರುವ, ಅಮೇರಿಕಾದಲ್ಲಿ ಇಂಡಿಯನ್ ಕಾನ್ಸುಲೇಟ್ ನಲ್ಲಿ 13 ವರ್ಷಗಳ ಸೇವೆ ಸಲ್ಲಿಸಿರುವ ದೀರ್ಘ ಅನುಭವವಿರುವ, ಕೋವಿಡ್ ಸಂದರ್ಭದಲ್ಲಿ, ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ, ಇರಾನ್ ಅಮೇರಿಕ ಯುದ್ಧ ಸಂದರ್ಭದಲ್ಲಿ ಸಿಲುಕಿದ್ದ ಸಾವಿರಾರು ಅನಿವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಲ್ಲಿ ಮಹತ್ತರ ಜವಾಬ್ದಾರಿ ವಹಿಸಿದ್ದ, ಕೆಎನ್ಆರ್‌ಐ ಅಧ್ಯಕ್ಷರಾಗಿ ಅನುಭವ ಹೊಂದಿರುವ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಅವರನ್ನು ಸಚಿವರಾಗಿ ನೇಮಕ ಮಾಡಬೇಕು ಎಂದು ಎಲ್ಲಾ ಕನ್ನಡಪರ ಸಂಘಟನೆಗಳು ಸರ್ವ ಸಮ್ಮತದಿಂದ ಮನವಿ ಸಲ್ಲಿಸಿದ್ದಾರೆ.

ಸಭೆಯಲ್ಲಿ ಝಕಾರಿಯಾ ಜೋಕಟ್ಟೆ, ಪ್ರವೀಣ್ ಶೆಟ್ಟಿ, ಹಿದಾಯತ್ ಅಡ್ಡೂರ್, ಅಜಿತ್ ಭಾಸ್ಕರ್ ನ್ಯೂಯಾರ್ಕ್, ಶಶಿಧರ್ ನಾಗರಾಜಪ್ಪ, ಚಂದ್ರಶೇಖರ್ ಪ್ಯಾರಿಸ್, ರವಿ ಶೆಟ್ಟಿ ಕತಾರ್, ಪ್ರಕೃತಿ ಆಸ್ಟ್ರೇಲಿಯಾ, ಜಯಪ್ರಕಾಶ್ ನೆದರ್ಲೆಂಡ್, ಸಚಿನ್ ಪಾರ್ಥ ಪೋಲೆಂಡ್, ಮಂಜುನಾಥ ಇಟೆಲಿ, ಪ್ರಭಾಕರ್ ಬಸವರಾಜ, ಅಭಿನವ್ ಹಂಗೇರಿ, ಹೇಮೇಗೌಡ ಇಟೆಲಿ, ಹನೀಫ್ ಯುಕೆ, ಪರಶಿವ ಮೂರ್ತಿ ಜರ್ಮನಿ, ಶ್ರೀನಿವಾಸ್ ನಿಗ್ಗೇರಿಯಾ, ರಾಜ್ ಕುಮಾರ್ ಬಹ್ರೈನ್, ಅಜಿತ್ ಬಂಗೇರ, ಅಫ್ರೋಜ್ ಅಸಾದಿ, ದಯಾ ಕಿರೋಡಿಯನ್, ಸತೀಶ್ ಬಜಾಲ್, ಸರ್ವೋತ್ತಮ ಶೆಟ್ಟಿ, ಗಣೇಶ್ ರೈ, ಅಶ್ರಫ್ ಖಾನ್, ಅರುಣ್ ಕುಮಾರ್, ಮಹಮ್ಮದ್ ಅಲಿ ಉಚ್ಚಿಲ್, ಕಮರುದ್ದೀನ್ ಗೂಡಿನಬಳಿ, ಶೇಕ್ ಮುಝಫರ್, ಅಬ್ದುಲ್ಲಾ ಮೋನು ಕತಾರ್, ಭಾರ್ಗವ ಶರ್ಮಾ, ಸಿಧ್ಧಲಿಂಗೇಶ್, ಕೆ.ಎಚ್ ರಫೀಕ್, ಡಾ. ರಶ್ಮಿ ನಂದಕಿಶೋರ್, ಎಂ.ಇ ಮೂಳೂರು, ಮುಸ್ತಾಕ್ ಕದ್ರಿ, ಯತೀಶ್ ಗೌಡ, ಸಲೀಂ ಮೂಡುಬಿದಿರೆ, ಶಕೀಲ್ ಜಿದ್ದಾ, ಸತೀಶ್ ಬಜಾಲ್, ಲತೀಫ್ ಮುಲ್ಕಿ, ಸಮದ್ ಬಿರಾಲಿ, ಅನ್ವರ್ ಹುಸೇನ್, ವಿಶ್ವನಾಥ್ ಶೆಟ್ಟಿ, ಸುಗಂಧರಾಜ್ ಬೇಕಲ್, ನಾಗರಾಜ್ ರಾವ್, ದೀಪಕ್ ಸೋಮಶೇಖರ್, ಸಂದೇಶ್, ಫಾರೂಕ್ ಅಂಗರಗುಂಡಿ, ಫಿರೋಜ್ ಕಲ್ಲಡ್ಕ, ನವಾಜ್ ಕೋಟೆಕಾರ್, ಆಸಿಫ್ ಕನ್ನಂಗಾರ್, ನಜೀರ್ ವಾಮಂಜೂರು, ಇಕ್ರಂ ಮೂಳೂರು, ರಿಫಾಯಿ, ಅಯಾಜ್ ಸೌದಿ, ಹಕೀಂ ತುರ್ಕಲಿಕೆ, ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಡತನದ ಸವಾಲಿನಿಂದ ಗವರ್ನರ್ ಪೀಠದವರೆಗೆ: ಅಮೆರಿಕದಲ್ಲಿ ಮೂರು ಬಾರಿ ಇತಿಹಾಸ ಸೃಷ್ಟಿಸಿದ ಡೆಬ್ ಹಾಲಂಡ್

ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ವಂಚಿತ ಜನಾಂಗದ ಮಹಿಳೆಯೊಬ್ಬರು ಅತ್ಯುನ್ನತ ಸ್ಥಾನಕ್ಕೇರುವುದು ಸಾಮಾನ್ಯ...

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದ ಮೂಲಕ ಆಕ್ರೋಶ ಹೊರಹಾಕಿ: ಕಾಂಗ್ರೆಸ್ ಕರೆ

ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ, ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಸಾಮಾನ್ಯ...

ಮೋದಿ ಸರ್ಕಾರದಿಂದ ‘ಮತ ಕಳ್ಳತನ’ದ ನಂತರ ‘ಹಕ್ಕುಗಳ ಕಳ್ಳತನ’ ಶುರು: ರಾಹುಲ್ ಗಾಂಧಿ ಆಕ್ರೋಶ

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್...