ಇಂದು RSS ಅಕೌಂಟೆಬಿಲಿಟಿ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ನಾವು ಹೇಗೆ ನೋಡಬೇಕೆಂದರೆ, ಸಂವಿಧಾನ ಇರುವುದು ಕೇವಲ ಅಕ್ಷರಗಳಲ್ಲಿ (Letters) ಮಾತ್ರ ಅಲ್ಲ. ಅದಕ್ಕೊಂದು ಆತ್ಮ (Spirit) ಇದೆ. ಆ ಸ್ಪಿರಿಟ್‌ಗೆ ತಲೆಬಾಗುವ ಪ್ರತಿಯೊಬ್ಬರೂ ನೆಲದ ಕಾನೂನಿಗೆ ಬದ್ಧರಾಗಿ, ಅಕೌಂಟೆಬಲ್ ಆಗಿ ವ್ಯವಹರಿಸುವುದು ದೇಶಪ್ರೇಮದ ಮೂಲಭೂತ ವ್ಯಾಖ್ಯಾನ ಆಗಬೇಕು.
ಇಂಟರ್ನೆಟ್ ಆರ್ಕೈವ್ಸ್‌ನಲ್ಲಿ RSS ಸಂವಿಧಾನದ ಪ್ರತಿ ಸಿಕ್ಕಿತು. ಇದೇ ಅವರ ಲೇಟೆಸ್ಟೋ ಅಥವಾ ಇದರ ಬಳಿಕ ತಿದ್ದುಪಡಿಗಳಾಗಿವೆಯೋ ಗೊತ್ತಿಲ್ಲ. ಆಗಿದ್ದರೆ, ಅದು ಸಾರ್ವಜನಿಕವಾಗಿ ಲಭ್ಯ ಇಲ್ಲ. ಈ ಸಂವಿಧಾನದ ಆರ್ಟಿಕಲ್ 1ರ ಪ್ರಕಾರ, RSS ಒಂದು ಸಂಸ್ಥೆ(Organisation). ಅದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದರಿಂದ, ಸಹಜವಾಗಿಯೇ ಒಂದು NGO.
ಹಾಗಾಗಿ “ಅದು ವ್ಯಕ್ತಿಗಳ ಸಮೂಹ; ಆ ಸಮೂಹಕ್ಕೆ ನೋಂದಣಿ ಅಗತ್ಯವಿಲ್ಲ” ಎಂಬ ವಾದಕ್ಕೆ ಹುರುಳಿಲ್ಲ. ಆ ರೀತಿಯ ವಿತಂಡವಾದ ಮಾಡಹೊರಟರೆ, ನಾಳೆ ಯಾವುದೇ “ಆನಿ ಕಂಪನಿ” ತಮ್ಮದೂ ವ್ಯಕ್ತಿಗಳ ಸಮೂಹವೇ, ತಾವು ಸರ್ಕಾರದ ಬೆನಿಫಿಟ್ಸ್ ಇನ್ನು ಪಡೆಯುವುದಿಲ್ಲ, ಹಾಗಾಗಿ ಅಕೌಂಟೆಬಲ್ ಆಗಬೇಕಾಗಿಲ್ಲ ಎಂದು ಹೊರಡಬಹುದು!
RSS ಸಂವಿಧಾನದ ಆರ್ಟಿಕಲ್ 22(d) ಪ್ರಕಾರ ಅವರ “ನಿಧಿಗಳ” ನಿರ್ವಹಣೆಯ ಆಡಿಟ್ ಕಡ್ಡಾಯ. ಭಾರತದಲ್ಲಿ ಆಡಿಟ್ ವ್ಯವಸ್ಥೆ ಕಾನೂನುಬದ್ಧ ಮತ್ತು ಅದು ಭಾರತದ ಸಂವಿಧಾನದ ಯಾವುದೋ ಒಂದು ಚೌಕಟ್ಟಿನೊಳಗೇ ವ್ಯವಹರಿಸಬೇಕಾಗುತ್ತದೆಯೇ ಹೊರತು, ಒಟ್ಟಾರೆ ಲೆಕ್ಕಪತ್ರ ನಿರ್ವಹಿಸಿದರೆ ಅದು “ಆಡಿಟ್” ಅನ್ನಿಸಿಕೊಳ್ಳುವುದಿಲ್ಲ.
ಇದನ್ನು ಓದಿದ್ದೀರಾ?: ‘ಹಿಂದು ಧರ್ಮಕ್ಕೂ ಆರ್‌ಎಸ್‌ಎಸ್ ನೋಂದಣಿಗೂ ಎತ್ತಣಿಂದೆತ್ತ ಸಂಬಂಧ?’ ಭಾಗವತ್ ಬೂಟಾಟಿಕೆ ಬಯಲು!
ಅಕಸ್ಮಾತ್, ಇದು ಯಾವುದೂ ಅನ್ವಯ ಆಗುವುದಿಲ್ಲ ಎಂದಿಟ್ಟುಕೊಳ್ಳಿ. ಅಥವಾ ಸಕ್ಷಮ ಪ್ರಾಧಿಕಾರದಲ್ಲಿ ಅಥವಾ ನ್ಯಾಯಾಲಯಗಳಲ್ಲಿ ಈ ಬಗ್ಗೆ ದಾವೆ ಹೂಡಿ, RSSಗೆ ನೋಂದಣಿ ಅಗತ್ಯ ಇಲ್ಲ ಎಂದು ಅಲ್ಲಿನ ತೀರ್ಮಾನ/ತೀರ್ಪು ಹೇಳಿದೆ ಎಂದಿಟ್ಟುಕೊಳ್ಳಿ. ಈಗ ಡೇಟಾ ಪ್ರೈವೆಸಿ ಕಾಯಿದೆ ಬಂದಿದೆ(DPDP ACT). ಅದರ ಪ್ರಕಾರ, ದೇಶದ ಪ್ರಜೆಗಳ ಡೇಟಾಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಯಾವುದೇ ಸಂಸ್ಥೆಯು ಸರ್ಕಾರಕ್ಕೆ, ವ್ಯವಸ್ಥೆಗೆ ಅಕೌಂಟೆಬಲ್ ಆಗಿರಬೇಕಾಗುತ್ತದೆ(ಅವರ ಆರ್ಟಿಕಲ್ 7ರ ಪ್ರಕಾರ ಅವರು ಸ್ವಯಂಸೇವಕರ ರಿಜಿಸ್ಟರ್ ಹೊಂದಿದ್ದಾರೆ, ಬಾಲ ಸ್ವಯಂಸೇವಕರೂ ಆ ಸಂಘಟನೆಯಲ್ಲಿ ಇದ್ದಾರೆ). ಅದನ್ನು ಪರಿಶೀಲಿಸುವ ಅಧಿಕಾರ ಸರ್ಕಾರಿ ವ್ಯವಸ್ಥೆಗೆ ಇದೆ.
ನನಗೆ ಒಟ್ಟಿನಲ್ಲಿ, ಇಂದು RSS ಅಕೌಂಟೆಬಿಲಿಟಿ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ನಾವು ಹೇಗೆ ನೋಡಬೇಕೆಂದರೆ, ಸಂವಿಧಾನ ಇರುವುದು ಕೇವಲ ಅಕ್ಷರಗಳಲ್ಲಿ (Letters) ಮಾತ್ರ ಅಲ್ಲ. ಅದಕ್ಕೊಂದು ಆತ್ಮ (Spirit) ಇದೆ. ಆ ಸ್ಪಿರಿಟ್‌ಗೆ ತಲೆಭಾಗುವ ಪ್ರತಿಯೊಬ್ಬರೂ ನೆಲದ ಕಾನೂನಿಗೆ ಬದ್ಧರಾಗಿ, ಅಕೌಂಟೆಬಲ್ ಆಗಿ ವ್ಯವಹರಿಸುವುದು ದೇಶಪ್ರೇಮದ ಮೂಲಭೂತ ವ್ಯಾಖ್ಯಾನ ಆಗಬೇಕು. ಸಂವಿಧಾನದಲ್ಲಿ “ಇಂತಹದೊಂದು ಅಂಶ” ಇಲ್ಲ ಎಂಬ ಕಾರಣಕ್ಕೆ, ಸಾರ್ವಜನಿಕ ಸಂಸ್ಥೆಯೊಂದು ತಾನು ಅಕೌಂಟೆಬಲ್ ಆಗಬೇಕಾಗಿಲ್ಲ ಎಂದು ವಾದ ಹೂಡುವುದು ಸಹಜ ನ್ಯಾಯ ಅನ್ನಿಸುವುದಿಲ್ಲ.
RSS ಸಂವಿಧಾನದ ಪೂರ್ಣ ದಾಖಲೆ ಈ ಲಿಂಕಿನಲ್ಲಿ ಲಭ್ಯ: https://dn790003.ca.archive.org/…/The%20Constitution…

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).



