ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ: ಕಾಬೂಲ್, ಕಂದಹಾರ್ ಮೇಲೆ ದಾಳಿ

Date:

ಅಫ್ಘಾನಿಸ್ತಾನದ ತಾಲಿಬಾನ್ ನಡೆಸಿದೆ ಎನ್ನಲಾದ ಗಡಿ ದಾಳಿಗಳಿಗೆ ಪ್ರತಿಯಾಗಿ ಪಾಕಿಸ್ತಾನ ಕಾಬೂಲ್, ಕಂದಹಾರ್ ಮೇಲೆ ಪ್ರತೀಕಾರದ ದಾಳಿ ನಡೆಸಿದ್ದು ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಘೋಷಿಸಿದೆ. ಹಾಗೆಯೇ ದಾಳಿಯಲ್ಲಿ 130ಕ್ಕೂ ಹೆಚ್ಚು ತಾಲಿಬಾನಿಗಳನ್ನು ಕೊಂದಿದೆ ಎಂದು ಹೇಳಿದೆ.

- Advertisement -

ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಕಾರ್ಯಾಚರಣೆ ನಡೆಯುತ್ತಿದೆ. ಸಶಸ್ತ್ರ ಪಡೆಗಳು ಪ್ರಸ್ತುತ ಅಫ್ಘಾನ್ ತಾಲಿಬಾನ್‌ನ ಆಕ್ರಮಣಕ್ಕೆ ಬಲವಾದ ಪ್ರತಿಕ್ರಿಯೆ ನೀಡುತ್ತಿವೆ ಎಂದು ಹೇಳಿದರು. ಹಾಗೆಯೇ ತಾಲಿಬಾನ್ ಸರ್ಕಾರದ ಮೇಲೆ “ಮುಕ್ತ ಯುದ್ಧ” ಘೋಷಿಸಿದರು. “ನಮ್ಮ ತಾಳ್ಮೆ ಮಿತಿಯನ್ನು ದಾಟಿದೆ. ಈಗ ಅದು ನಮ್ಮ ಮತ್ತು ನಿಮ್ಮ ನಡುವಿನ ಮುಕ್ತ ಯುದ್ಧ” ಎಂದು ಆಸಿಫ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? 48 ಗಂಟೆಗಳ ಕದನ ವಿರಾಮಕ್ಕೆ ಪಾಕಿಸ್ತಾನ, ಅಪ್ಘಾನಿಸ್ತಾನ ಅಸ್ತು

ಇನ್ನು ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಕನಿಷ್ಠ 133 ಅಫ್ಘಾನ್ ತಾಲಿಬಾನಿಗಳು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಬೂಲ್, ಪಕ್ತಿಯಾ ಮತ್ತು ಕಂದಹಾರ್‌ನಲ್ಲಿರುವ ಅಫ್ಘಾನ್ ತಾಲಿಬಾನ್ ರಕ್ಷಣಾ ಸ್ಥಳಗಳನ್ನು ಗುರಿಯಾಗಿಸಲಾಯಿತು. ಹೆಚ್ಚಿನ ಸಾವುನೋವುಗಳು ಸಂಭವಿಸುವ ಸಾಧ್ಯತೆಯಿದೆ. ಅಫ್ಘಾನ್ ತಾಲಿಬಾನ್ ಆಡಳಿತದ ಕನಿಷ್ಠ 27 ಪೋಸ್ಟ್‌ಗಳು ನಾಶವಾಗಿದೆ. ಒಂಬತ್ತು ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದರು.

ಎರಡು ಕಾರ್ಪ್ಸ್ ಪ್ರಧಾನ ಕಚೇರಿಗಳು, ಮೂರು ಬ್ರಿಗೇಡ್ ಪ್ರಧಾನ ಕಚೇರಿಗಳು, ಎರಡು ಮದ್ದುಗುಂಡು ಡಿಪೋಗಳು, ಒಂದು ಲಾಜಿಸ್ಟಿಕ್ಸ್ ಬೇಸ್, ಮೂರು ಬೆಟಾಲಿಯನ್ ಪ್ರಧಾನ ಕಚೇರಿಗಳು, ಎರಡು ಸೆಕ್ಟರ್ ಪ್ರಧಾನ ಕಚೇರಿಗಳು ಮತ್ತು 80 ಕ್ಕೂ ಹೆಚ್ಚು ಟ್ಯಾಂಕ್‌ಗಳು, ಫಿರಂಗಿ ಬಂದೂಕುಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳನ್ನು ನಾಶಪಡಿಸಲಾಗಿದೆ ಎಂದೂ ತಿಳಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ರಷ್ಯಾದಿಂದ ತೈಲ ಖರೀದಿಸಿದ ಅಮೆರಿಕ -ಜಾಗತಿಕ ಸೋಜಿಗ

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ,...

ಲಡಾಖ್ ಭಾರತದ ಅವಿಭಾಜ್ಯ ಅಂಗ, ಚೀನಾ ನಿರಾಕರಿಸಿದರೂ‌ ಇದೇ ಸತ್ಯ; ಡ್ರ್ಯಾಗನ್‌ಗೆ ಭಾರತ ತಿರುಗೇಟು!

ಲಡಾಖ್ ಕೇಂದ್ರಾಡಳಿತ ಪ್ರದೇಶದ 28 ಪ್ರಮುಖ ಹಾಗೂ ಕಾರ್ಯತಂತ್ರದ (Strategic) ಸ್ಥಳಗಳಿಗೆ...