ಕ್ವಿಡ್ ಪ್ರೊ ಕೊ | ಪ್ರಕರಣ ಮುಚ್ಚಲು ಅಮೆರಿಕ ಸರ್ಕಾರದೊಂದಿಗೆ ‘ಡೀಲ್’ ಆಗಿದೆಯೇ; ಅದಾನಿಗೆ ಯುಎಸ್ ಕೋರ್ಟ್ ಪ್ರಶ್ನೆ

Date:

ದೇಶದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸಹವರ್ತಿಗಳ ಮೇಲಿದ್ದ ಲಂಚ ಹಾಗೂ ವಂಚನೆ ಪ್ರಕರಣವನ್ನು ಕೈಬಿಡುವ ಅಮೆರಿಕ ಸರ್ಕಾರದ ನಿರ್ಧಾರಕ್ಕೆ ಅಲ್ಲಿನ ಫೆಡರಲ್ ನ್ಯಾಯಾಲಯವೊಂದು ಹೊಸ ಟ್ವಿಸ್ಟ್ ನೀಡಿದೆ. ಪ್ರಕರಣ ಮುಚ್ಚಲು ಅಮೆರಿಕ ಸರ್ಕಾರದೊಂದಿಗೆ ‘ಕ್ವಿಡ್ ಪ್ರೊ ಕೊ’ ಅಂದರೆ ‘ಡೀಲ್’ ಆಗಿದೆಯೇ ಎಂದು ಅಮೆರಿಕ ಕೋರ್ಟ್ ಗೌತಮ್ ಅದಾನಿಯನ್ನು ಪ್ರಶ್ನಿಸಿದೆ.

- Advertisement -

ಅದಾನಿ ಮೇಲಿನ ಕ್ರಿಮಿನಲ್ ಆರೋಪಗಳನ್ನು ರದ್ದುಗೊಳಿಸುವಂತೆ ಯುಎಸ್ ನ್ಯಾಯಾಂಗ ಇಲಾಖೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ಬ್ರೂಕ್ಲಿನ್ ನ್ಯಾಯಾಲಯದ ಹಿರಿಯ ಜಿಲ್ಲಾ ನ್ಯಾಯಾಧೀಶರಾದ ನಿಕೋಲಸ್ ಗರೌಫಿಸ್, ಈ ಪ್ರಕರಣವನ್ನು ಕೈಬಿಡಲು ಯಾವುದೇ ರೀತಿಯ ‘ಕ್ವಿಡ್ ಪ್ರೊ ಕೊ’ (ಒಂದರ ಬದಲಿಗೆ ಮತ್ತೊಂದು ಪ್ರತಿಯಾಗಿ ನೀಡುವುದು ಅಥವಾ ರಹಸ್ಯ ಒಪ್ಪಂದ) ನಡೆದಿದೆಯೇ ಎಂಬುದನ್ನು ಪ್ರಮಾಣಪತ್ರದ ಮೂಲಕ ಸ್ಪಷ್ಟಪಡಿಸುವಂತೆ ಗೌತಮ್ ಅದಾನಿ ಅವರಿಗೆ ಆದೇಶಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಇದನ್ನೂ ಓದಿ: ಅದಾನಿ ಮೇಲಿನ ಆರೋಪ ಕೈಬಿಟ್ಟ ನಿರ್ಧಾರಕ್ಕೆ ಅಮೆರಿಕದಲ್ಲಿನ ಹೂಡಿಕೆ ಕಾರಣವಲ್ಲ: ನ್ಯಾಯಾಂಗ ಇಲಾಖೆ

ಏನಿದು ‘ಕ್ವಿಡ್ ಪ್ರೊ ಕೊ’ ಪ್ರಕರಣ?

ಕಳೆದ 2024ರ ನವೆಂಬರ್‌ನಲ್ಲಿ ಜೋ ಬೈಡನ್ ಆಡಳಿತಾವಧಿಯಲ್ಲಿ, ಭಾರತದಲ್ಲಿ ಸೌರಶಕ್ತಿ ಗುತ್ತಿಗೆ ಪಡೆಯಲು ಸುಮಾರು 250 ಮಿಲಿಯನ್ ಡಾಲರ್ ಲಂಚ ನೀಡಿದ ಆರೋಪದ ಮೇಲೆ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಹಲವರ ವಿರುದ್ಧ ಅಮೆರಿಕದಲ್ಲಿ ವೀಸಾ ವಂಚನೆ ಮತ್ತು ಸೆಕ್ಯೂರಿಟೀಸ್ ವಂಚನೆ ಪ್ರಕರಣ ದಾಖಲಿಸಲಾಗಿತ್ತು.

ಆದರೆ, ಪ್ರಸ್ತುತ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಜುಲೈ ಆರಂಭದಲ್ಲಿ ನ್ಯಾಯಾಲಯಕ್ಕೆ 10 ಪುಟಗಳ ಅರ್ಜಿ ನೀಡಿ, “ಈ ಪ್ರಕರಣವು ಕಾನೂನುಬದ್ಧವಾಗಿ ದೋಷಪೂರಿತವಾಗಿದೆ ಮತ್ತು ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಬಹುದು” ಎಂದು ಹೇಳಿ ಪ್ರಕರಣವನ್ನು ಸಂಪೂರ್ಣವಾಗಿ ಕೈಬಿಡಲು ಕೋರಿತ್ತು.

ಆದರೆ, ನ್ಯಾಯಾಧೀಶ ಗರೌಫಿಸ್ ಅವರು ಈ ಅರ್ಜಿಯನ್ನು ತಕ್ಷಣವೇ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಅದಾನಿ ಅವರ ಕಾನೂನು ತಂಡವು ಈ ಹಿಂದೆ ಅಮೆರಿಕದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಕುರಿತು ಯುಎಸ್ ಅಧಿಕಾರಿಗಳೊಂದಿಗೆ ಚರ್ಚಿಸಿತ್ತು ಎಂಬ ವರದಿಗಳ ಬೆನ್ನಲ್ಲೇ ನ್ಯಾಯಾಲಯವು ಈ ಕಠಿಣ ನಿಲುವು ತಳೆದಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ‘ವಿದೇಶಿ ಲಂಚ ಕಾನೂನು’ ರದ್ದು; ಗೌತಮ್ ಅದಾನಿ ಪಾರು?

ಹಾಗಾಗಿ ಪ್ರಕರಣ ರದ್ದುಗೊಳಿಸುವ ಸರ್ಕಾರದ ಮನವಿಯನ್ನು ಪುರಸ್ಕರಿಸುವ ಮುನ್ನ, ಗೌತಮ್ ಅದಾನಿ ಅವರು ಜುಲೈ 15ರೊಳಗೆ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೋರ್ಟ್ ತಿಳಿಸಿದೆ. ಹಾಗೆಯೇ “ಈ ಇಂಡಿಕ್ಟ್‌ಮೆಂಟ್ (ದೋಷಾರೋಪಣೆ) ಕೈಬಿಡುವುದರ ಹಿಂದೆ ಯಾರಿಗಾದರೂ ಏನನ್ನಾದರೂ ಭರವಸೆ ನೀಡಲಾಗಿದೆಯೇ, ಆಫರ್ ಮಾಡಲಾಗಿದೆಯೇ ಅಥವಾ ಯಾವುದೇ ರೀತಿಯ ವಿನಿಮಯ ಒಪ್ಪಂದ ನಡೆದಿದೆಯೇ?” ಎಂಬುದನ್ನು ಅದಾನಿ ಅವರು ಸ್ಪಷ್ಟಪಡಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಈ ನಡುವೆ ಯುಎಸ್ ನ್ಯಾಯಾಂಗ ಇಲಾಖೆಯ ಪ್ರಿನ್ಸಿಪಲ್ ಅಸೋಸಿಯೇಟ್ ಡೆಪ್ಯುಟಿ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕ್ಕಾಟರ್, “ಪ್ರಕರಣ ಕೈಬಿಡುವ ನಿರ್ಧಾರವು ಅದಾನಿ ಅಮೆರಿಕದಲ್ಲಿ ಹೂಡಿಕೆ ಮಾಡುವ ಭರವಸೆ ನೀಡಿರುವುದರ ಕಾರಣ ಕೈಗೊಂಡಿರುವುದಲ್ಲ. ಭಾರತದಲ್ಲಿ ತನಿಖಾ ಸಂಸ್ಥೆಗಳು ಈಗಾಗಲೇ ಕ್ಲೀನ್ ಚೀಟ್ ನೀಡಿವೆ. ಅಮೆರಿಕದ ಹೂಡಿಕೆದಾರರಿಗೆ ಯಾವುದೇ ನಷ್ಟವಾಗಿಲ್ಲ” ಎಂದು ಸಮರ್ಥಿಸಿಕೊಂಡಿದೆ.

ಆದರೆ ನ್ಯಾಯಾಲಯ ಮಾತ್ರ ಯಾವುದೇ ಅಘೋಷಿತ ಅಥವಾ ರಹಸ್ಯ ಒಪ್ಪಂದ ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ವತಃ ಅದಾನಿ ಅವರೇ ಉತ್ತರ ನೀಡಬೇಕು ಎಂದು ಹೇಳಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...