ಸನಾದ ತೈಲ ಘಟಕದ ಮೇಲೆ ಸೌದಿ ನೇತೃತ್ವದ ಮೈತ್ರಿಕೂಟದ ದಾಳಿ: ಬೆನ್ನಲ್ಲೇ ಅರಾಮ್ಕೊ ತೈಲ ಕಂಪನಿಯ ಮೇಲೆ ಹೌತಿಗಳ ಪ್ರತಿದಾಳಿ

Date:

ರಿಯಾದ್‌ /ಸನಾ : ಸೌದಿ ಅರೇಬಿಯಾದ ನಗರ ಧಹ್ರಾನ್‌ನಲ್ಲಿರುವ ಸೌದಿ ಅರಾಮ್ಕೊಗೆ ಸೇರಿದ ಆಡಳಿತಾತ್ಮಕ ಕಟ್ಟಡವನ್ನು ಗುರಿಯಾಗಿಸಿಕೊಂಡು ಯೆಮನ್‌ನ ಹೂತಿಗಳು ದಾಳಿ ನಡೆಸಿದ್ದಾರೆ  ಎಂದು ಇಂಧನ ಸಚಿವಾಲಯದ ಅಧಿಕಾರಿಯೊಬ್ಬರು ಸೌದಿ SPA ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದು ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿಯ ಪ್ರಧಾನ ಕಚೇರಿಯಾಗಿದೆ.

- Advertisement -

ಮಂಗಳವಾರ ನಡೆದ ದಾಳಿಯಿಂದ ಉಂಟಾದ ಬೆಂಕಿ ನಂದಿಸಲು  ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಯಾವುದೇ ಗಾಯಗಳು ಅಥವಾ ಸಾವುಗಳು ವರದಿಯಾಗಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪತ್ರಕರ್ತರ ಮೇಲೆ ಪೊಲೀಸರು ಕನಿಕರವಿಲ್ಲದೆ ಮೃಗಗಳಂತೆ ಎರಗಿಬೀಳುತ್ತಿದ್ದಾರೆ. ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ...

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ. ಶಿಕ್ಷಣದ ನಿಜವಾದ ಉದ್ದೇಶ ಮಗುವಿನ ಜ್ಞಾನ, ಚಿಂತನಾ ಶಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಪ್ರಜ್ಞೆ...

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

 ಮೇಲಿನ ಈ ದಾಳಿಗೂ ಮುನ್ನ, ತೈಲ ಘಟಕಗಳ ಸಮೀಪವಿರುವ ಎಲ್ಲ ಉದ್ಯೋಗಿಗಳು ಮತ್ತು ನಾಗರಿಕರು ಸ್ಥಳಾಂತರಗೊಳ್ಳುವಂತೆ ಯೆಮನ್‌ನ ಹೂತಿಗಳು ಎಚ್ಚರಿಕೆ ನೀಡಿದ್ದರು. ಮಂಗಳವಾರದಂದು ಈ ತಾಣಗಳನ್ನು ಕಾನೂನುಬದ್ಧ ಗುರಿಯಾಗಿಸಿದ್ದೇವೆ  ಎಂದು ಅವರು ಹೇಳಿದ್ದರು.

ಇದಕ್ಕೂ ಮೊದಲು , ಸೌದಿ ನೇತೃತ್ವದ ಮೈತ್ರಿಕೂಟವು ಹೂತಿಗಳ ನಿಯಂತ್ರಣದಲ್ಲಿರುವ ರಾಜಧಾನಿ ಸನಾದಲ್ಲಿನ ಯೆಮನ್ ಆಯಿಲ್ ಕಂಪನಿಯ ಅಲ್-ಸಬಾಹ್ ಕೇಂದ್ರ ನಿಲ್ದಾಣದಿಂದ ನಾಗರಿಕರು ಸ್ಥಳಾಂತರಗೊಳ್ಳುವಂತೆ ಆದೇಶಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಹೂತಿ ವಕ್ತಾರ ಯಾಹ್ಯಾ ಸಾರೀ ,ಸನಾದ ಮೇಲೆ ಯಾವುದೇ ದಾಳಿ ನಡೆದರೂ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮೇಲೆ ಕಠಿಣ ಮತ್ತು ನೋವುಂಟುಮಾಡುವ ಪ್ರತೀಕಾರದ ದಾಳಿ ನಡೆಸಲಾಗುವುದು ಎಂದು ಹೇಳಿದ್ದರು.

ಅದರ ಬೆನ್ನಲ್ಲೇ , ಹೂತಿಗಳು ಈ ದಾಳಿ ನಡೆಸಿದ್ದಾರೆ.

ರಿಯಾದ್‌ನತ್ತ ಹೂತಿಗಳು ಉಡಾಯಿಸಿದ ಕ್ಷಿಪಣಿಗಳನ್ನು ಸೌದಿ ಅರೇಬಿಯಾ ತಡೆಹಿಡಿದಿದೆ ಎಂದು SPA ಸುದ್ದಿ ಸಂಸ್ಥೆ ವರದಿ ಮಾಡಿದೆ. ತಡೆಹಿಡಿಯಲಾದ ಎರಡು ಕ್ಷಿಪಣಿಗಳ ಅವಶೇಷಗಳಿಂದ ನಾಲ್ವರು ಗಾಯಗೊಂಡಿದ್ದು, 15 ಮನೆಗಳಿಗೆ ಹಾನಿಯಾಗಿದೆ ಎಂದು ನಾಗರಿಕ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಸನಾದ ತೈಲ ಘಟಕದ ಮೇಲೆ ದಾಳಿ

ಸೌದಿ ನೇತೃತ್ವದ ಮೈತ್ರಿಕೂಟದ ಸ್ಥಳಾಂತರ ಆದೇಶದ ಕೆಲವೇ ಸಮಯದ ಬಳಿಕ ಸನಾದಲ್ಲಿ ಸ್ಫೋಟಗಳ ಸದ್ದು ಕೇಳಿಸಿತು ಎಂದು ಅಲ್ ಜಝೀರಾದ ಸ್ಥಳೀಯ ವರದಿಗಾರ ವರದಿಗಾರ ಯೂಸೆಫ್ ಮೌರಿ ತಿಳಿಸಿದ್ದಾರೆ.

“ಸೌದಿ ಅರೇಬಿಯಾ ಇಲ್ಲಿ ರಾಜಧಾನಿ ಸನಾದಲ್ಲಿರುವ ಯೆಮನ್ ಆಯಿಲ್‌ನ ಅಲ್-ಸಬಾಹ್ ಕೇಂದ್ರ ನಿಲ್ದಾಣವನ್ನು ಗುರಿಯಾಗಿಸಿಕೊಂಡಾಗ ಸ್ಫೋಟದ ಸದ್ದು ಕೇಳಿಸಿತು” ಎಂದು ಅವರು ಹೇಳಿದ್ದಾರೆ.

ಹೂತಿಗಳಿಗೆ ಸಂಬಂಧಿಸಿದ ಮಾಧ್ಯಮಗಳು ಕೂಡಾ ಈ ದಾಳಿಯನ್ನು ಸ್ಪಷ್ಟಪಡಿಸಿದ್ದು, ಸೌದಿ ಬೆಂಬಲಿತ ಪಡೆಗಳು ರಾಜಧಾನಿಯ ಅಲ್-ಸಬಾಹ್ ಪ್ರದೇಶದಲ್ಲಿರುವ ತೈಲ ಘಟಕದ ಮೇಲೆ ವೈಮಾನಿಕ ದಾಳಿ ನಡೆಸಿವೆ ಎಂದು ವರದಿ ಮಾಡಿವೆ.

ಆದರೆ , ಹೂತಿ ಅಧಿಕಾರಿಗಳು ದಾಳಿಯನ್ನು ಮೊದಲೇ ನಿರೀಕ್ಷಿಸಿತ್ತು ಎಂಬಂತೆ  ಕಂಡುಬಂದಿದೆ ಎಂದು ಅಲ್‌ ಜಝೀರಾ ತನ್ನ ವರದಿಯಲ್ಲಿ ತಿಳಿಸಿದೆ.

 ತೈಲ ಕಂಪನಿಯು ತನ್ನ ಸಂಗ್ರಹ ಘಟಕಗಳು ಖಾಲಿಯಾಗಿವೆ ಎಂದು ತಿಳಿಸಿದ್ದು, ಸೌದಿ ದಾಳಿಯಿಂದ ತೈಲ ಸಂಗ್ರಹ ಅಥವಾ ನಿವಾಸಿಗಳಿಗೆ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿರುವುದಿಲ್ಲ ಎಂದು ಹೇಳಿದೆ.

ಆದರೂ, ತೈಲದ ಕೊರತೆ ಉಂಟಾಗಬಹುದು ಎಂಬ ಆತಂಕದಿಂದ ನಗರದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಕಾರುಗಳ ಸಾಲುಗಳು ಕಂಡುಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಲ್‌ ಜಝೀರಾ ಪ್ರಕಾರ, ಸೌದಿ ಅರೇಬಿಯಾ ರಾಸ್ ಇಸಾ ಬಂದರಿನಲ್ಲಿರುವ ಯೆಮನ್‌ನ ತೈಲ ಸಂಗ್ರಹ ಟ್ಯಾಂಕ್‌ಗಳನ್ನು ಗುರಿಯಾಗಿಸಿಕೊಂಡು ಮತ್ತೆರಡು ವೈಮಾನಿಕ ದಾಳಿಗಳನ್ನು ನಡೆಸಿದೆ. ಅಲ್ಲದೆ, ಹೂತಿಗಳ ನಿಯಂತ್ರಣದಲ್ಲಿರುವ ಹುದೈದಾ ಪ್ರಾಂತ್ಯದ ತೈಲ ನಿಲ್ದಾಣದ ಮೇಲೂ ದಾಳಿ ನಡೆಸಿದೆ.

“ಹೂತಿಗಳು ತಮ್ಮ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಶಸ್ತ್ರಾಗಾರಕ್ಕಾಗಿ ಈ ಘಟಕ ಹಾಗೂ ಅದರ ಭೂಗತ ಇಂಧನ ಸಂಗ್ರಹ ಘಟಕಗಳನ್ನು ಬಳಸುತ್ತಿದ್ದಾರೆ”  ಎಂದು ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಆರೋಪಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿದಿನ 1.33 ಲಕ್ಷ ನೋಟಿಸ್‌ಗಳ ವಿಲೇವಾರಿ: ದೆಹಲಿಯಲ್ಲಿ SIR ಪ್ರಕ್ರಿಯೆ ಚುರುಕು

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 12ರವರೆಗಿನ ಸುಮಾರು 12 ದಿನಗಳ ಅವಧಿಯಲ್ಲಿ ದೆಹಲಿಯ...

ಬಸವಕಲ್ಯಾಣ | ಸಹಬಾಳ್ವೆಯಿಂದ ಉತ್ತಮ ಸಮಾಜ ನಿರ್ಮಾಣ : ಬಾಬುರಾವ್ ಮೂಡುಬಿ

ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದ ಬದುಕಿದಾಗ...

ದಿನಸಿ ಬೆಲೆ ಏರಿಕೆ ಬರೆ; ಗ್ರಾಮೀಣ ಕುಟುಂಬಗಳ ಬಜೆಟ್‌ಗೆ ಕತ್ತರಿ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆಯ...

ಬೀದರ್‌ | ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಲಿ ಕರೆ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ...