ಗುಲಾಮಗಿರಿ ವಿರುದ್ಧ ವಿಶ್ವಸಂಸ್ಥೆ ಠರಾವು; ಅಮೆರಿಕ ವಿರೋಧ

Date:

ಗುಲಾಮಗಿರಿಯು ಮಾನವೀಯತೆಯ ಮೇಲೆ ನಡೆದ ಘೋರ ಕೃತ್ಯ ಎಂಬ ವಿಶ್ವಸಂಸ್ಥೆಯ ನಿರ್ಣಯವನ್ನು ಅಮೆರಿಕ, ಇಸ್ರೇಲ್‌ ಅರ್ಜೆಂಟೈನಾ ದೇಶಗಳು ವಿರೋಧಿಸಿವೆ.

- Advertisement -

ಐರೋಪ್ಯ ರಾಷ್ಟ್ರಗಳ ಪ್ಲಾಂಟೇಶನ್‌ಗಳಲ್ಲಿ ಕೆಲಸ ಮಾಡಲು ಆಫ್ರಿಕನ್‌ ಜನಾಂಗದವರನ್ನು ಅವರಿದ್ದ ಜಾಗಗಳಿಗೆ ನುಗ್ಗಿ ಎಳೆದೊಯ್ದು ಬಂಧಿಸಿ ಅಮೆರಿಕದ ಹಡಗುಗಳಲ್ಲಿ ಕುರಿಮಂದೆಯಂತೆ ಸಾಗಿಸಲಾಗುತ್ತಿತ್ತು. ಯುರೋಪ್‌ ಮತ್ತು ಅಮೆರಿಕದ ರಾಷ್ಟ್ರಗಳಿಗೆ ಗುಂಪು ಗುಂಪಾಗಿ ಮಾರಾಟ ಮಾಡಿ ಶ್ರೀಮಂತ ಪ್ಲಾಂಟರ್ಸ್‌ಗಳಿಂದ ಹಣ ಪಡೆದು ಖಜಾನೆ ತುಂಬಿಸಿಕೊಳ್ಳುತ್ತಿದ್ದವು ಈ ದಯಾಹೀನ ರಾಷ್ಟ್ರಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

15 ರಿಂದ 19 ನೇ ಶತಮಾನದಲ್ಲಿ ನಡೆದ ಗುಲಾಮರ ವ್ಯಾಪಾರವನ್ನು ಮನುಕುಲದಲ್ಲಿನ ಘೋರ ಅಪರಾಧ ಎಂಬ ಘಾನ ಕೋರಿಕೆ ಮೇರೆಯ ವಿಶ್ವ ಸಂಸ್ಥೆಯ ಠರಾವನ್ನು ಯೂರೋಪ್‌ ಮತ್ತು ಅಮೆರಿಕದ ವಿರೋಧದ ನಡುವೆಯೂ ಹೊರಡಿಸಲಾಗಿತ್ತು.

2025 ರಲ್ಲಿ ಗುಲಾಮಗರಿಗೆ ಒಳಗಾದ 55 ದೇಶಗಳು ಒಟ್ಟುಗೂಡಿ ಆ ದೇಶಗಳ ಕಲ್ಯಾಣಕ್ಕಾಗಿ ಪರಿಹಾರ ಹಾಗೂ ಕ್ಷಮೆಯ ಪಟ್ಟು ಹಿಡಿದ ಆಫ್ರಿಕನ್‌ ಯೂನಿಯನ್‌ ಮುಖಾಂತರ ಠರಾವಿನ ನಿರ್ಧಾರ ಕೈಗೊಂಡವು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯವಾಗಿ ನಡೆದ ಮತಾಭಿಪ್ರಾಯದಲ್ಲಿ 123 ದೇಶಗಳು ನಿರ್ಣಯವನ್ನು ಒಪ್ಪಿದರೆ. 52 ದೇಶಗಳು ಮತ ನಿರ್ಣಯದಿಂದ ದೂರ ಉಳಿದಿದ್ದು ಯುಎಸ್‌ ಮತ್ತು ಮತ್ತು ಇಸ್ರೇಲ್‌ ಅರ್ಜೆಂಟೈನಾ ಈ ಮೂರು ರಾಷ್ಟ್ರಗಳು ಠರಾವನ್ನು ತಿರಸ್ಕರಿಸಿವೆ.

15 ರಿಂದ 19 ನೇ ಶತಮಾನದ ಒಳಗೆ ಸುಮಾರು 12 ಮಿಲಿಯನ್‌ ಆಫ್ರಿಕರನ್ನು ಗುಲಾಮಗಿರಿಗೆ ಸಾಗಿಸಲಾಯಿತು. ಇಂದಿಗೂ ಆಫ್ರಿಕನ್ನರು ವರ್ಣ ಆಧಾರಿತ ತಾರತಮ್ಯಕ್ಕೆ ಒಳಗಾಗಿದ್ದಾರೆ, ಆದರಿಂದ ಠರಾವು ಹೊರಡಿಸಬೇಕು ಎಂದು ವಿಶ್ವಸಂಸ್ಥೆಯ ಮುಂದೆ ತನ್ನ ವಾದವನ್ನು ಘಾನ ಪ್ರಸ್ತಾಪಿಸಿತು.

ಘಾನ ಅಧ್ಯಕ್ಷ ದ್ರಮನಿ ಮಹಾಮ ಈ ನಿರ್ಣಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಈ ಠರಾವು ಹಳೆಯ ಗಾಯಗಳ ಮಾಯುವಿಕೆಗೆ, ನ್ಯಾಯದ ಪುನರ್ಸ್ಥಾಪನೆಗೆ ರಹದಾರಿ ಎಂದಿದ್ದರು.

ಪ್ರಸ್ತುತ ನಿರ್ಣಯದ ಅಂಗೀಕಾರ ಮರೆತ ಅಧ್ಯಾಯಗಳ ಪುನರ್ಮನನ ಮಾಡಲು ಸಹಾಯವಾಗಲಿದೆ. ಇತಿಹಾಸದ ಪುಟದಲ್ಲಿ ಈ ಠರಾವು ದಾಖಲಾಗಲಿ, ಘನತೆಯನ್ನು ಕಸಿದ ಗುಲಾಮಗಿರಿಯಿಂದ ನರಳಿದ ಕೋಟ್ಯಾಂತರ ಜನರ ಸ್ಮರಣೆಯಲ್ಲಿ ನಾವು ಸರಿಯಾದ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದೇವೆ ಎಂದರು.

ಘಾನಾದ ವಿದೇಶಾಂಗ ಸಚಿವ ಸಾಮ್ಯುಯೆಲ್‌ ಅಬ್ಲಕ್ವ ಮಾತನಾಡಿ, “ಗುಲಾಮರ ಸಾಗಾಣೆಯ ವಿರುದ್ಧದ ಠರಾವು ಜನಾಂಗದ ಏಳಿಗೆಗೆ ಬೇಕಾದ ಪರಿಹಾರ ಕ್ರಮಗಳನ್ನು ಕಟ್ಟಿಕೊಡುವ ದಾರಿಗೆ ನಾಂದಿ ಹಾಡಿದೆ” ಎಂದಿದ್ದಾರೆ.

ತಿರಸ್ಕಾರದಿಂದ ಇತಿಹಾಸವನ್ನು ಅಳಿಸಿ ಹಾಕಲಾಗದು, ವಿಳಂಬಿಸಿದ ಮಾತ್ರಕ್ಕೆ ಸತ್ಯ ದುರ್ಬಲಗೊಳ್ಳದು, ಅಪರಾಧಗಳು ಮುಚ್ಚಿಹೋಗುವುದಿಲ್ಲ, ನ್ಯಾಯವು ಕಾಲದ ಜೊತೆಗೆ ರಾಜಿಯಾಗದು ಎಂದು ಅಬ್ಲಕ್ವ ಹೇಳಿದ್ದಾರೆ.

ಐತಿಹಾಸಿಕ ಅನ್ಯಾಯವನ್ನು ಖಂಡಿಸುವ ಸಲುವಾಗಿ ತೀಕ್ಷ್ಣ ಕ್ರಮವನ್ನು ತೆಗೆದುಕೊಳ್ಳಲು ಹೆಚ್ಚು ರಾಷ್ಟ್ರಗಳ ಸಹಮತ ಬೇಕಿದೆ ಎಂದು ವಿಶ್ವಸಂಸ್ಥೆಯ‌ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೊರಿಸ್‌ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಸೂಚಿಸಿದರು.

ಠರಾವಿನಲ್ಲಿ ಉಲ್ಲೇಖಿಸಿದ ಗುಲಾಮಗಿರಿಯ ಪರಿಹಾರದಲ್ಲಿ ಗುಲಾಮಗಿರಿಗೆ ಒಳಪಟ್ಟ  ದೇಶಗಳಿಗೆ ಆರ್ಥಿಕ ಭದ್ರತೆ ಒದಗಿಸುವುದು, ಕ್ಷಮಾಪಣೆ ಕೋರುವುದು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳಿಗೆ ಆಸ್ಪದ ಕೊಡುವುದಿಲ್ಲ ಎಂಬ ಒಪ್ಪಂದವನ್ನು ಗುಲಾಮ ವ್ಯಾಪಾರ ಅನುಸರಿಸಿದ ರಾಷ್ಟ್ರಗಳು ಅಂಗೀಕರಿಸಬೇಕು ಎಂದು ಸೂಚಿಸಲಾಗಿತ್ತು.

ಹಲವು ಪಾಷ್ಚ್ಯಾತ್ಯ ದೇಶಗಳು ಈ ನೀತಿಯನ್ನು ವಿರೋಧಿಸಿದ್ದು ಘಟಿಸಿ ಹೋಗಿರುವ ಗುಲಾಮಗಿರಿ ಪದ್ದತಿಯನ್ನು ತಾವು ಸಮರ್ಥಿಸಿಕೊಳ್ಳುವುದಿಲ್ಲ, ಆದರೆ ಅಂದೆಂದೋ ನಡೆದ ಅನ್ಯಾಯಕ್ಕೆ ಈಗ ದಂಡ ತೆರುವುದು ಅಸಮಂಜಸ ಎಂಬ ತರ್ಕ ಮುಂದಿಟ್ಟವು.

black codes gettyimages 640482869

ನೆದರ್ಲೆಂಡ್‌ ಹೊರತುಪಡಿಸಿ ಇನ್ಯಾವ ದೇಶಗಳು ಈ ಮನುಷ್ಯ ವಿರೋಧಿ ಘಟನೆಗೆ ಇಲ್ಲಿಯ ತನಕ ಕ್ಷಮೆ ಕೇಳಿಲ್ಲ. ಹಾಗೆ ನೋಡಿದರೆ ಇಡೀ ಮಾನವ ಸಂಕುಲವೇ ಈ ಹೃದಯವಿಹೀನ ಕೃತ್ಯದ ಹೊಣೆಹೊತ್ತು ಕ್ಷಮೆ ಯಾಚಿಸಬೇಕು. ಘನತೆಯ ಬದುಕನ್ನು ಕಿತ್ತುಕೊಂಡು ಆಫ್ರಿಕಾದ ಜನರನ್ನು ಹೀನಾಯವಾಗಿ ಬಳಸಿಕೊಂಡ ದೇಶಗಳು ಈಗ ಅತ್ಯಂತ ನಾಗರೀಕ, ಪ್ರಗತಿಪರ ರಾಷ್ಟ್ರಗಳು ಎಂದು ಗುರುತಿಸಿಕೊಂಡಿವೆ. ಅಸಹಾಯಕರ ಬೆವರು, ರಕ್ತದ ಮೊತ್ತ ಇಂದಿನ ಆ ದೇಶಗಳ ಸಿರಿವಂತಿಕೆಯ ಮೂಲ. ಅಮೆರಿಕ ಇಂದಿಗೂ ಅಸಹಾಯಕ ಪುಟ್ಟ ದೇಶಗಳ ಮೇಲೆ ತನ್ನ ದಬ್ಬಾಳಿಕೆ ನಡೆಸುತ್ತಲೇ ಇದೆ. ತನ್ನ ಇಂದಿನ ಹುಚ್ಚುತನಗಳಿಗೆ ಪಶ್ಚಾತ್ತಾಪ ಪಡದ ಸ್ವಾರ್ಥ ದೇಶ ದಶಕಗಳ ಹಿಂದಿನ ಕೃತ್ಯಕ್ಕೆ ಕ್ಷಮೆ ಕೇಳಬೇಕು ಪರಿಹಾರ ಒದಗಿಸಬೇಕು ಎಂದರೆ ಕೇಳುತ್ತದೆಯೇ?

ಅಮೆರಿಕ ಅಧ್ಯಕ್ಷ ಟ್ರಂಪ್‌ ಅಮರಿಕ ವಿರೋಧಿ ಸಿದ್ಧಾಂತದ ಹೆಸರಿನಲ್ಲಿ ಮಾಡುತ್ತಿರುವ ಪ್ರಮಾದಗಳನ್ನು ಮಹಾಮ ಟೀಕಿಸಿದ್ದಾರೆ. ಅಮೆರಿಕ ಗುಲಾಮಗಿರಿ ಪದ್ದತಿಯನ್ನು ನಿಷೇಧಿಸಿ ಶತಮಾನವೇ ಆಗಿಹೋದರು ಈಗಲೂ ಅಮೆರಿಕದಲ್ಲಿ ಕಪ್ಪು ಜನಾಂಗದವರ ಮೇಲೆ ದಬ್ಬಾಳಿಕೆಗಳು ನಡೆಯುತ್ತವೆ, ರೇಸೀಸಂ ಜೀವಂತವಾಗಿರುವ ಅಮೆರಿಕದ ಇತಿಹಾಸದಲ್ಲಿ ಘಟಿಸಿ ಮರೆಯಾದ ತಪ್ಪಿಗೆ ಈಗ ಕ್ಷಮೆ ಅಥವಾ ಪರಿಹಾರ ಕೇಳುವುದು ಅಸಂಬದ್ಧ ಎಂದು ವಾದಿಸಿದೆ. ಅಂದಿನ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಗುಲಾಮರ ವ್ಯಾಪಾರಕ್ಕೆ ಕಾನೂನು ಸಮ್ಮತವಿತ್ತು. ಆದರಿಂದ ಪರಿಹಾರ ಅಥವಾ ಇನ್ಯಾವ ಠರಾವಿಗೂ ತನ್ನ ಒಪ್ಪಿಗೆ ಇಲ್ಲ ಎಂದು ಘೋಷಿಸುತ್ತದೆ.

ಆಫ್ರಿಕಾದ ದೇಶಗಳು ತಮ್ಮ ನಾಡಿನಿಂದ ಕದ್ದೊಯ್ದ ಅಮೂಲ್ಯ ಕಲಾಕುಸುರಿಗಳನ್ನು, ಬೆಲೆಬಾಳುವ ವಸ್ತುಗಳನ್ನು ಮರಳಿಸುವಂತೆ ಮಾತ್ರ ಕೇಳಿಕೊಂಡಿಲ್ಲ ಪೀಳಿಗೆಗಳಿಂದ ನಡೆದು ಬಂದ ಹಿಂಸೆ, ದೌರ್ಜನ್ಯಕ್ಕೆ, ಕಳೆದ ತಮ್ಮ ಜನಾಂಗದ ಘನತೆಗೆ ಮರುಹುಟ್ಟು ಕೊಡಿ ಎಂದು ಕೇಳುತ್ತಿದೆ. ಸುಮಾರು 350 ವರುಷಗಳ ನಿರಂತರ ಶೋಷಣೆಗೆ ಒಳಗಾದ ದೇಶಗಳು ಈಗಲೂ ಪ್ರಬಲ ರಾಷ್ಟ್ರಗಳ ಹಿಡಿತಕ್ಕೆ ನಲುಗಿ ಹೋಗಿವೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...