ಅಮೆರಿಕ NCTC ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ; ಟ್ರಂಪ್ ಆಪ್ತ ಹುದ್ದೆ ತೊರೆದದ್ದು ಯಾಕೆ?

Date:

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ನಿರ್ದೇಶಕರಾಗಿದ್ದ ಜೋ ಕೆಂಟ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಅವರು, ಇರಾನ್ ಜೊತೆಗೆ ಯುದ್ಧ ನಡೆಸುವ ಅಮೆರಿಕ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

- Advertisement -

ಪ್ರಮುಖ ಗುಪ್ತಚರ ಸಂಸ್ಥೆಯ ಮುಖ್ಯಸ್ಥರೊಬ್ಬರು ಸರ್ಕಾರದ ಯುದ್ಧ ನೀತಿಯನ್ನೇ ಪ್ರಶ್ನಿಸಿ ಅಧಿಕಾರದಿಂದ ಕೆಳಗಿಳಿದಿರುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ಟ್ರಂಪ್ ಸರ್ಕಾರಕ್ಕೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ತೀವ್ರ ಮುಖಭಂಗ ಉಂಟುಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

ತಮ್ಮ ರಾಜೀನಾಮೆ ಪತ್ರವನ್ನು ‘ಎಕ್ಸ್‌’ನಲ್ಲಿ ಕೆಂಟ್‌ ಹಂಚಿಕೊಂಡಿದ್ದಾರೆ. “ಇರಾನ್‌ ಜೊತೆಗಿನ ಈ ಯುದ್ಧವು ನೈತಿಕವಾಗಿ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ತಪ್ಪು ನಿರ್ಧಾರವಾಗಿದೆ. ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ರೀತಿಯ ತಕ್ಷಣದ ಅಪಾಯ ಅಥವಾ ಬೆದರಿಕೆ ಇರಲಿಲ್ಲ. ಆದರೂ, ಕೇವಲ ಇಸ್ರೇಲ್‌ನ ಒತ್ತಡಕ್ಕೆ ಮಣಿದು ಅಧ್ಯಕ್ಷ ಟ್ರಂಪ್ ಈ ಯುದ್ಧವನ್ನು ಪ್ರಾರಂಭಿಸಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಈ ಸಂಘರ್ಷವನ್ನು ಬೆಂಬಲಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಜೋ ಕೆಂಟ್ ಅವರ ಈ ನಿರ್ಧಾರದ ಹಿಂದೆ ಅವರ ಸುದೀರ್ಘ ಸೇನಾ ಅನುಭವ ಮತ್ತು ವೈಯಕ್ತಿಕ ಜೀವನದ ನೋವಿನ ಕಥೆಯೂ ಇದೆ ಎಂದು ಹೇಳಲಾಗಿದೆ. ಸುಮಾರು 20 ವರ್ಷಗಳ ಕಾಲ ಅಮೆರಿಕ ಸೇನೆಯ ವಿಶೇಷ ಪಡೆಯಾದ ‘ಗ್ರೀನ್ ಬೆರೆಟ್’ನಲ್ಲಿ ಸೇವೆ ಸಲ್ಲಿಸಿದ್ದ ಕೆಂಟ್, ಇರಾಕ್, ಯೆಮನ್ ಹಾಗೂ ಉತ್ತರ ಆಫ್ರಿಕಾ ಸೇರಿದಂತೆ ಒಟ್ಟು 11 ಯುದ್ಧಭೂಮಿಗಳಲ್ಲಿ ಕಾರ್ಯಾಚರಣೆ ನಡೆಸಿದ ಅನುಭವ ಹೊಂದಿದ್ದಾರೆ. ಚೀಫ್ ವಾರಂಟ್ ಆಫೀಸರ್‌ಆಗಿ ಅಮೆರಿಕ ಸೇನೆಯಿಂದ ನಿವೃತ್ತರಾದ ಅವರು. ಬಳಿಕ ಕೇಂದ್ರ ಗುಪ್ತಚರ ಸಂಸ್ಥೆಯಲ್ಲಿ (CIA) ಪ್ಯಾರಾಮಿಲಿಟರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

2019ರಲ್ಲಿ ಸಿರಿಯಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಅವರ ಪತ್ನಿ ಶಾನನ್ ಕೆಂಟ್ ಅವರು ಮೃತಪಟ್ಟಿದ್ದು ಜೋ ಕೆಂಟ್ ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿತ್ತು. ಈ ವೈಯಕ್ತಿಕ ದುರಂತವು ವಿದೇಶಿ ನೆಲದಲ್ಲಿ ಅಮೆರಿಕ ನಡೆಸುವ ಅನಗತ್ಯ ಯುದ್ಧಗಳ ಬಗ್ಗೆ ಕೆಂಟ್ ಅವರ ನಿಲುವನ್ನು ಮತ್ತಷ್ಟು ಪ್ರಭಾವಿಸಿದೆ. ಅಮೆರಿಕ ತನ್ನ ಸೈನಿಕರ ಪ್ರಾಣವನ್ನು ಪರಕೀಯರ ಹಿತಾಸಕ್ತಿಗಾಗಿ ಪಣಕ್ಕಿಡಬಾರದು ಎಂಬ ಸ್ಪಷ್ಟ ನಿಲುವು ಅವರದ್ದಾಗಿದೆ.

ಈ ಲೇಖನ ಓದಿದ್ದೀರಾ?: LPG ಹೊತ್ತು ಭಾರತಕ್ಕೆ ಬಂದ ‘ಶಿವಾಲಿಕ್’ ಹಡಗು; ತಣಿಯುವುದೇ ಕೊರತೆ-ಆತಂಕ?

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿ ಮತ್ತು ಪ್ರತಿದಾಳಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್‌ ಆರಂಭಿಸಿದ ಸರಣಿ ದಾಳಿಗಳು ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸಿವೆ. ಯುದ್ಧ ಆರಂಭಿಸಿದ ಅಮೆರಿಕ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಇದೇ ಸಮಯದಲ್ಲಿ, ಕೆಂಟ್ ಅವರ ರಾಜೀನಾಮೆಯು ಟ್ರಂಪ್ ಅವರ ವಿದೇಶಾಂಗ ನೀತಿಯ ಮೇಲಿನ ಗಂಭೀರ ಪ್ರಶ್ನೆಯಾಗಿ ಹೊರಹೊಮ್ಮಿದೆ.

ರಾಜಕೀಯವಾಗಿ ಜೋ ಕೆಂಟ್ ಅವರನ್ನು ಕಟ್ಟರ್ ಬಲಪಂಥೀಯ ಮತ್ತು ಟ್ರಂಪ್ ಅವರ ‘MAGA’ (ಅಮೆರಿಕವನ್ನು ಮತ್ತೆ ಮಹಾನ್ ರಾಷ್ಟ್ರವನ್ನಾಗಿ ಮಾಡುವುದು) ಆಂದೋಲನದ ಪ್ರಬಲ ಬೆಂಬಲಿಗ ಎಂದು ಗುರುತಿಸಲಾಗಿದೆ. 2022 ಮತ್ತು 2024ರ ಅಮೆರಿಕ ಚುನಾವಣೆಗಳಲ್ಲಿ ವಾಷಿಂಗ್ಟನ್‌ನಿಂದ ಸ್ಪರ್ಧಿಸಿ ಸೋತಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ನೆರವೇರಿಸಿದ ಸಚಿವ ಈಶ್ವರ ಖಂಡ್ರೆ

79ನೇ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ...

ಪೆಟ್ರೋಲ್ ಹಾಕಿಸುವ ಮುನ್ನ ಎಚ್ಚರ: ಶೇ 85ಕ್ಕೂ ಹೆಚ್ಚು ಬಂಕ್‌ಗಳಲ್ಲಿ ಇಂಧನ ಕಡಿತ; ರಾಜ್ಯ ಸರ್ಕಾರದ ತಪಾಸಣೆಯಲ್ಲಿ ಬಟಾಬಯಲು

ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಇಂಧನ ವಿತರಿಸುವ ಶೇ 85ಕ್ಕೂ...

ಬ್ರಿಕ್ಸ್‌ ಗೈರುಹಾಜರಿಗೆ ಬಾಂಗ್ಲಾದ ಅದಾನಿ ವಿದ್ಯುತ್‌ ಸ್ಥಾವರ ಸ್ಥಗಿತ; ಬಿಎನ್‌ಪಿ ಗಂಭೀರ ಆರೋಪ

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶದ ಪ್ರಧಾನಿ ತಾರಿಖ್...