ಭಾರತದ ಮೇಲೆ ಅಮೆರಿಕ ಸುಂಕಾಸ್ತ್ರ; ಆಪ್ತಮಿತ್ರನಿಗೆ 26% ಸುಂಕ ವಿಧಿಸಿದ ಟ್ರಂಪ್‌

Date:

ತಮ್ಮ ಆಪ್ತ ಸ್ನೇಹಿತ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಅಧ್ಯಕ್ಷರಾದ ಬಳಿಕ ಅಮೆರಿಕಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ‘ಮಗ, ಮಿಗ, ಮೆಗ’ ಎಂದೆಲ್ಲ ಭಾಷಣ ಮಾಡಿದ್ದರು. ಸದ್ಯ, ಅಮೆರಿಕವನ್ನು ಮತ್ತೆ ‘ಮೇಕ್‌ ಅಮೆರಿಕ ಗ್ರೇಟ್‌ ಅಗೈನ್’ (MAGA) ಮಾಡುತ್ತೇವೆ ಎನ್ನುತ್ತಿರುವ ಟ್ರಂಪ್, ತಮ್ಮ ಮಿತ್ರ ರಾಷ್ಟ್ರಗಳ ಮೇಲೆ ಸುಂಕದ ಪ್ರಹಾರ ನಡೆಸಿದ್ದಾರೆ. ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ‘ಪ್ರತಿ ಸುಂಕ’ ವಿಧಿಸಿದ್ದಾರೆ. ಇದೀಗ, ಅವರ ಬಹುನಿರೀಕ್ಷಿತ ‘ಸುಂಕ ನೀತಿ’ಯನ್ನು ಘೋಷಿಸಿದ್ದಾರೆ.

- Advertisement -

ಬುಧವಾರ, ಸುಂಕ ನೀತಿಯನ್ನು ಘೋಷಿಸಿರುವ ಟ್ರಂಪ್, ಭಾರತದ ಉತ್ಪನ್ನಗಳ ಮೇಲೆ 26% ಆಮದು ಸುಂಕ ವಿಧಿಸಿರುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ತಮ್ಮ ಸ್ನೇಹಿತ ಎಂದು ಹೇಳುತ್ತಲೇ,  ಭಾರತದ ಮೇಲೆ ಹೆಚ್ಚು ಸುಂಕದ ಅಸ್ತ್ರ ಪ್ರಯೋಗಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಶ್ವೇತಭವನದ ರೋಸ್‌ ಗಾರ್ಡನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಟ್ರಂಪ್, ಸುಂಕದ ಪಟ್ಟಿಯನ್ನು ಪ್ರದರ್ಶಿಸಿದ್ದಾರೆ. “2025ರ ಏಪ್ರಿಲ್ 2ನ್ನು ಅಮೆರಿಕದ ಕೈಗಾರಿಕೆಗಳು ಮರುಹುಟ್ಟು ಪಡೆದ ದಿನ ಆಗಲಿದೆ. ಇದು ವಿಮೋಚನಾ ದಿನ, ಬಹುನರೀಕ್ಷಿತ ಕ್ಷಣ. ಅಮೆರಿಕವನ್ನು ಮತ್ತೆ ಸಮೃದ್ಧ ರಾಷ್ಟ್ರವನ್ನಾಗಿ ಮಾಡುವುದನ್ನು ಪ್ರಾರಂಭಿಸಿದ ದಿನ. ಭಾರತ ಮತ್ತು ಚೀನಾ ನಮಗೆ ಹೆಚ್ಚು ಸುಂಕ ವಿಧಿಸುತ್ತಿವೆ. ಆದರೂ, ಅವರಿಗೆ ನಾವು ಅವರು ವಿಧಿಸುವ ಸುಂಕದ ಅರ್ಧದಷ್ಟು ಸುಂಕ ವಿಧಿಸಿ, ದಯೆ ತೋರುತ್ತಿದ್ದೇವೆ” ಎಂದು ಹೇಳಿದ್ದಾರೆ.

“ಭಾರತ, ಚೀನಾ, ಬ್ರಿಟನ್, ಯೂರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳು ಅಮೆರಿಕಗೆ ಭಾರೀ ಸುಂಕ ವಿಧಿಸುತ್ತವೆ. ಅವುಗಳಿಗೆ ಪ್ರತಿಯಾಗಿ ನಾವು ಸುಂಕ ವಿಧಿಸುತ್ತೇವೆ. ನಮ್ಮ ಸುಂಕ ನೀತಿ ಬಹಳ ಸುಲಭ. ಅವರು ನಮಗೆ ಎಷ್ಟು ಸುಂಕ ವಿಧಿಸುತ್ತಾರೆಯೋ, ಅದದಲ್ಲಿ ಅರ್ಧದಷ್ಟು ಸುಂಕವನ್ನು ನಾವು ಅವರಿಗೆ ವಿಧಿಸುತ್ತೇವೆ” ಎಂದು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಪ್ರಧಾನಿ ಮೋದಿ ನಿವೃತ್ತರಾಗುತ್ತಾರೆಯೇ? RSS ಕೇಂದ್ರ ಕಚೇರಿ ಭೇಟಿಯ ಉದ್ದೇಶವೇನು?

“ಭಾರತವು ನಮಗೆ 52%ರಷ್ಟು ಸುಂಕ ವಿಧಿಸುತ್ತಿವೆ. ಆ ಸುಂಕಕ್ಕೆ ಪ್ರತಿಯಾಗಿ, ಭಾರತಕ್ಕೆ ಅಮೆರಿಕವು 26% ಸುಂಕ ವಿಧಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ. ಅವರು ಇತ್ತೀಚೆಗೆ ಅಮೆರಿಕಕ್ಕೆ ಬಂದಿದ್ದರು. ಅವರಿಗೆ, ‘ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ’ವೆಂದು ತಿಳಿಸಿದ್ದೇನೆ. ಭಾರತವು ನಮಗೆ 52% ಸುಂಕ ವಿಧಿಸುತ್ತದೆ. ಆದರೆ, ಅವರು ಈವರೆಗೆ ಅವರಿಗೆ ಯಾವುದೇ ಸುಂಕ ವಿಧಿಸಿಲ್ಲ ಎಂಬುದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು” ಎಂದಿದ್ದಾರೆ.

“ಭಾರತವು ಅಮೆರಿಕದ ವಾಹನಗಳ ಮೇಲೆ 70% ಸುಂಕ ವಿಧಿಸುತ್ತದೆ. ಥಾಯ್ಲೆಂಡ್ ಮತ್ತು ಕೆಲವು ದೇಶಗಳು 60% ಸುಂಕ ವಿಧಿಸುತ್ತವೆ. ವಿಯೇಟ್ನಾಂ 75% ಸುಂಕ ವಿಧಿಸುತ್ತದೆ. ಇತರ ಕೆಲವು ದೇಶಗಳು ಇನ್ನೂ ಅಧಿಕ ಸುಂಕ ವಿಧಿಸುತ್ತವೆ. ಆದರೆ, ಅಮೆರಿಕವು ಕೇವಲ 2.4% ಸುಂಕ ವಿಧಿಸುತ್ತದೆ. ಇನ್ನು ಮುಂದೆ ಅಮೆರಿಕವು ಅಧಿಕ ಸುಂಕ ವಿಧಿಸಲಿದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೇಶವ್ಯಾಪಿ ಪ್ರತಿಭಟನೆ; ಹೈದರಾಬಾದ್‌ನಲ್ಲಿ ‘ಸಿಜೆಪಿ’ ಮಹತ್ವದ ಸಭೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನದ ನಿರ್ಣಯ ಅಂಗೀಕಾರ; ಸದನದಲ್ಲಿ ಬಿಜೆಪಿ ಗದ್ದಲ

ಜಮ್ಮು-ಕಾಶ್ಮೀರಕ್ಕೆ ತುರ್ತಾಗಿ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು...

ಅಕ್ಟೋಬರ್ 8ರೊಳಗೆ ಪಶ್ಚಿಮ ಬಂಗಾಳ ಶಾಸಕರ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ, ರಿತಬ್ರತಾ...

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...