ಬಂಗಾಳದ ಮತುವಾಗಳು ಯಾರು?ಎಸ್‌ಐಆರ್‌ಗೆ ಇವರೇಕೆ ಬಲಿಪಶುಗಳು!

Date:

ಪಶ್ಚಿಮ ಬಂಗಾಳದ ಅತಿದೊಡ್ಡ ಎಸ್‌ಸಿ ಸಮುದಾಯವಾದ ಮತುವಾಗಳ ಮತದಾನದ ಹಕ್ಕನ್ನು ಚುನಾವಣಾ ಆಯೋಗ ಕಸಿಯುತ್ತಿದೆ. ದತ್ತಾಂಶಗಳ ಪ್ರಕಾರ ಸುಮಾರು 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ಹೊರಹಾಕುವ ಮೂಲಕ ಕೇಂದ್ರ ಬಿಜೆಪಿ ಮತ್ತು ಚುನಾವಣಾ ಆಯೋಗ ದೇಶದ ಪ್ರಜೆಗಳ ಚುನಾಯಿಸುವ ಹಕ್ಕನ್ನು ಕಿತ್ತುಕೊಂಡಿದೆ. ಮತುವಾ ಅಥವಾ ನಾಮಶೂದ್ರ ಹೆಸರಿನಿಂದ ಕರೆಯಲ್ಪಡುವ ಈ ಸಮುದಾಯವು ಪಶ್ಚಿಮ ಬಂಗಾಳದಲ್ಲಿ ಸುಮಾರು 17% ಇದ್ದು ಪಶ್ಚಿಮ ಬಂಗಾಳದ ಎರಡನೇ ಅತಿದೊಡ್ಡ ಪರಿಶಿಷ್ಟ ಜಾತಿಯ ಸಮುದಾಯ ಮತುವಾ ಎಂದು ಗುರುತಿಸಿಕೊಂಡಿದೆ. SIR ಎಂಬ ಪೆಡಂಭೂತ ಈ ಸಮುದಾಯದವರ ಮತದಾನದ ಹಕ್ಕನ್ನು ಗಾಳಿಗೆ ತೂರಿದೆ. 

- Advertisement -

ನುಸುಳುಕೋರರಿಗೆ ದೇಶದ ಪೌರತ್ವ ಕೊಡಲಾಗದು ಎಂದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಕೇಂದ್ರ ಸರ್ಕಾರ, ಮತುವಾ ಸಮುದಾಯದವರನ್ನು ಅತ್ತ ನುಸುಳುಕೋರರು ಎಂದು ಪರಿಗಣಿಸಲಾಗದ ಇತ್ತ ಭಾರತೀಯ ಪೌರರು ಎಂದು ಕರೆಯದೆ ತನ್ನ ಮತ ರಾಜಕೀಯದ ಲಾಭಕ್ಕೆ ಹಿಂದೂ ನಿರಾಶ್ರಿತರು ಎಂಬ ಹಣೆಪಟ್ಟಿ ಅಂಟಿಸಿ ಒಂದು ಸಮುದಾಯದ ಅಸ್ಮಿತೆಯ ಜೊತೆಗೆ ಚೆಲ್ಲಾಟವಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬಂಗಾಳದ ಮತುವಾರು ಯಾರು?

ಮತುವಾ ಸಮುದಾಯವನ್ನು ಒಗ್ಗೂಡಿಸಿದವರು ಹರಿಶ್ಚಂದ್ರ ಠಾಕೂರ್‌, ಮೂಲತಃ ನಾಮಶೂದ್ರ ತಳಸಮುದಾಯದ ರೈತ ಹರಿಶ್ಚಂದ್ರ ಠಾಕೂರ್‌, ನಾಮಶೂದ್ರ ಸಮುದಾಯದ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ, ಜಾತಿ ಆಧಾರಿತ ತಾರತಮ್ಯದ ವಿರುದ್ದ ಆಂದೋಲನ ಕೈಗೊಂಡರು. 1860ರಲ್ಲಿ ಮತುವಾ ಎಂಬ ಪ್ರತ್ಯೇಕ ಪಂಥವನ್ನು ಹುಟ್ಟು ಹಾಕಿದರು. ಮತುವಾ ಮಹಾಸಂಘ ಸ್ಥಾಪನೆ ಮಾಡಿದರು.

ಇವರನ್ನು ಮತುವಾ, ನಾಮಶೂದ್ರ, ಚಂಡಾಳ ಎಂಬ ಹೆಸರುಗಳಿಂದ ಕರೆಯುತ್ತಾರೆ. ಶತಮಾನಗಳಿಂದಲೂ ಅಸ್ಪೃಶ್ಯತೆಯ ಕಹಿ ಉಂಡವರು ಈ ಮತುವಾರು, ಪುರೋಹಿತಶಾಹಿ ಸಾಮಾಜಿಕ ವ್ಯವಸ್ಥೆಯಲ್ಲಿ ನಿರಂತರ ಶೋಷಣೆಗೆ ಒಳಗಾದ ಸಮುದಾಯ. ಚಂಡಾಲರೆಂದು ವರ್ಣ ವ್ಯವಸ್ಥೆ ಇವರನ್ನು ಶವ ಸುಡುವ ಕೆಲಸಕ್ಕೆ ಇನ್ನಿತರೆ ಘನತೆಯಿರದ ಕೆಲಸಗಳಿಗೆ ಬಳಸಿಕೊಂಡಿದೆ. ಮನುವಾದಿ ಪರಂಪರೆಯಿಂದ ನಿತ್ಯ ಘಾಸಿಗೊಂಡ ಇವರು ಆಧುನಿಕ ಯುಗದಲ್ಲೂ ತಮ್ಮ ಗುರುತಿಗಾಗಿ, ಅಸ್ತಿತ್ವಕ್ಕಾಗಿ ಪರದಾಡುವಂತಾಗಿದೆ.

TH13 Shiv SahayGN4FJ6KU9.4.jpg

1971ರ ಬಾಂಗ್ಲಾ ವಿಮೋಚನ ಚಳವಳಿಯ ಸಂದರ್ಭದಲ್ಲಿ ಮತುವಾರು ರಕ್ಷಣೆಗಾಗಿ ಭಾರತ ಸೇರಿದರು. ಈ ಹಿಂದಿನ ಪೌರತ್ವ ಕಾಯ್ದೆಯು ಮತುವಾರನ್ನು ನಿರಾಶ್ರಿತರೆಂದು ಪರಿಗಣಿಸಿ ಪೌರತ್ವ ನೀಡಲು ನಿರಾಕರಿಸಿತು. ತೃಣಮೂಲ ಕಾಂಗ್ರೆಸ್‌ 2003ರಲ್ಲಿ ಕೇಂದ್ರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ತರುವಾಯ ಈ ಸಮುದಾಯದವರು ದೇಶದ ಪೌರರಾಗಲು ಬೇಕಿದ್ದ ದಾಖಲೆಗಳನ್ನು ಪಡೆಯಲು ಮುಂದಾದರು. ನಾಗರಿಕ ನೋಂದಣಿ ಮಾಡಿಕೊಳ್ಳಲು ಇವರಿಗೆ ಅಡ್ಡಿಯಾದದ್ದು ಬಾಂಗ್ಲಾದೇಶಿ ನುಸುಳುಕೋರರು, ಅಕ್ರಮ ವಲಸಿಗರು ಎಂಬ ಟ್ಯಾಗ್‌ಲೈನ್‌.

ಮತುವಾರಿಗೆ SIR ತಂದ ಕುತ್ತುಗಳೇನು?

ಮತುವಾ ಸಮುದಾಯಕ್ಕೆ ಕೇಂದ್ರ ಹಾಗೂ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣ ಪ್ರಕ್ರಿಯೆಯು ಲಕ್ಷಾಂತರ ಧಮನಿತರ ಚುನಾಯಿಸುವ ಹಕ್ಕನ್ನು ಕಿತ್ತುಕೊಂಡಿರುವುದು ಪರಿಚಿತ ಸತ್ಯ. ಸುಮಾರು 47% ಮತುವಾ ಸಮುದಾಯದ ಮತದಾರರ ಹೆಸರುಗಳನ್ನು SIR ಅಳಿಸಿಹಾಕಿದೆ, ಈ ಸಂಖ್ಯೆ ನಾದಿಯಾ ಮತ್ತು 24 ಉತ್ತರ ಪರಗಣ ಜಿಲ್ಲೆಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ.

ಇದನ್ನೂ ಓದಿ>ಬಂಗಾಳ SIR ಪ್ರಕ್ರಿಯೆಗೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಆದೇಶ

ಕೇಂದ್ರ ಬಿಜೆಪಿ ಈ ಸಮುದಾಯವನ್ನು ನಂಬಿಸಿ ಕತ್ತು ಕೊಯ್ದಿದೆ, ಮತುವಾ ಸಮುದಾಯದವರಿಗೆ ಭಾರತದ ನಾಗರಿಕತೆ ಕೊಡಲಾಗುವುದು ಎಂದು 2019ರ ಪೌರತ್ವ ಕಾಯ್ದೆ ಜಾರಿಗೊಳಿಸುವ ಸಂದರ್ಭದಲ್ಲಿ ಕೇಂದ್ರ ಆಶ್ವಾಸನೆ ನೀಡಿತ್ತು. 2024ರಲ್ಲಿ ಭರವಸೆ ಸುಳ್ಳುಗೊಳಿಸಿದ ಕೇಂದ್ರ ತನ್ನ ಮತರಾಜಕೀಯದ ದಾಳಗಳನ್ನಾಗಿ ಇವರನ್ನು ಬಳಸಿಕೊಂಡಿದೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌, ಬಿಜೆಪಿ ಮತುವಾ ಜನರಿಂದ ಹಣ ಪಡೆದು ಪೌರತ್ವ ನೀಡುವುದಾಗಿ ವಂಚಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ. ಈ ನಡುವೆ 50 ರಿಂದ 100 ರೂ.ಗಳ ಚೀಟಿಯನ್ನು ಮತುವಾ ಜನರಿಗೆ ಮಾರಿ, ಇದು ನಿಮ್ಮ ಪೌರತ್ವದ ಗುರುತು, ಹಿಂದುತ್ವ ಸ್ವೀಕರಿಸಿದ್ದಕ್ಕೆ ದಾಖಲೆ, ಈ ದಾಖಲೆ ಪಡೆದವರಿಗೆ ಮತದಾನದ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಂಚಿಸಿ ತನ್ನ ಹಿಂದುತ್ವದ ಅಜೆಂಡ ಬೇರೂರಿಸುವ ಕೆಲಸದಲ್ಲಿ ತೊಡಗಿದೆ. ಸ್ವಾರಸ್ಯವೆಂದರೆ ಮತದಾರರ ಪಟ್ಟಿಯಿಂದ 90 ಲಕ್ಷಕ್ಕೂ ಹೆಚ್ಚು ಮತುವಾ ಮತದಾರರ ಹೆಸರು ಅಳಿಸಿರುವ ಭಾರತೀಯ ಜನತಾ ಪಾರ್ಟಿ 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತನ್ನ ಅರ್ಧ ಗೆಲುವನ್ನು ನಿರಾಶ್ರಿತ ಸಮುದಾಯಗಳ ಜನಸಂಖ್ಯಾ ಪ್ರಾಬಲ್ಯವಿರುವ ಕ್ಷೇತ್ರಗಳಿಂದ ಪಡೆದಿತ್ತು.

ಒಂದೇ ಕಟುಂಬದ ಕೆಲ ಸದಸ್ಯರ ಹೆಸರು ಮತಪಟ್ಟಿಯಲ್ಲಿದ್ದರೆ ಕೆಲವು ಹೆಸರುಗಳು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಇವರೆಲ್ಲರೂ ಒದಗಿಸಿದ ದಾಖಲೆಗಳಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ ಜೊತೆಗೆ ಸಮಾನ ವಲಸೆಯ ಹಿನ್ನಲೆಯನ್ನು ಒಳಗೊಂಡವರು ಅದಾಗಿಯೂ, ಈ ವ್ಯತ್ಯಯಗಳಿಗೆ ಕಾರಣವೇನು ಎಂಬುದು ಸಮುದಾಯದ ಮುಖಂಡರು ಸರ್ಕಾರದ ಮುಂದಿಟ್ಟ ಪ್ರಶ್ನೆ.

ಮತುವಾ ಸಮುದಾಯದೊಳಗೆ ಹಿಂದುತ್ವದ ಸಿಂಧೂ ಅಂಗೀಕರಿಸುವ ಹಾಗೂ ಸಾಮಾಜಿಕ ಸುಧಾರಣೆ ಆರಿಸಿಕೊಳ್ಳುವ ಕುರಿತು ಭಿನ್ನಾಭಿಪ್ರಾಯಗಳಿದೆ. 19ನೇ ಶತಮಾನದಲ್ಲಿ ಹರಿಶ್ಚಂದ್ರ ಠಾಕೂರ್‌ ಮತುವಾ ಪಂಥವನ್ನು ಸಂಘಟಿಸುವಾಗ ಅವರ ಧೋರಣೆ ಹಿಂದೂ ಮನುವಾದ ಶೂದ್ರ ಸಮುದಾಯದವರ ಮೇಲೆ ನಡೆಸುವ ಶೋಷಣೆ, ಅನುಸರಿಸುತ್ತಿರುವ ತಾರತಮ್ಯದ ವಿರುದ್ಧ ನಿಂತು ಮತುವಾ ಸಮುದಾಯಕ್ಕೆ ಘನತೆಯನ್ನು ಕಟ್ಟಿಕೊಡುವುದಾಗಿತ್ತು. ಇಂದು ಠಾಕೂರ್‌ ಕುಟುಂಬದಲ್ಲೆ ಭಿನ್ನ ನೆಲೆಗಳು ತಲೆಯೆತ್ತಿವೆ. ಹರಿಶ್ಚಂದ್ರ ಠಾಕೂರ್‌ ಮತ್ತು ಮಗ ಗುರುಚಂದ್ರ ಠಾಕೂರ್‌ರ ಜಾತ್ಯತೀತ ನಿಲುವುಗಳು ಹಿಂದುತ್ವದ ಪಾಶಕ್ಕೆ ಸಿಲುಕಿಸಿ ಸಮುದಾಯದ ಹಿತಾಸಕ್ತಿಯನ್ನು ನೆಲಸಮ ಮಾಡಿದೆ.

ಬಿಜೆಪಿ ಹಿಂದೂ ನಿರಾಶ್ರಿತರು ಎಂದು ಪರಿಗಣಿಸಿ 2019ರ ಪೌರತ್ವ ಕಾಯ್ದೆಯ ಅಡಿಯಲ್ಲಿ ಮತುವಾರನ್ನು ಭಾರತದ ನಾಗರಿಕರೆಂದು ಪರಿಗಣಿಸಲಾಗುವುದು ಎಂಬ ಆಶ್ವಾಸನೆಯನ್ನು 2021ರ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿತು. ತೃಣಮೂಲ ಕಾಂಗ್ರೆಸ್‌ ಮತುವಾರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿದ ಮೂಲಕ ಅವರನ್ನು ಸದೃಢ ಸಮುದಾಯವಾಗಿ ಪರಿವರ್ತಿಸುವ, ಆಡಳಿತದಲ್ಲಿ ಅವಕಾಶ ಕಲ್ಪಿಸಿ ಕೊಡುವ ಭರವಸೆ ನೀಡಿತ್ತು. ದೌರ್ಭಾಗ್ಯವೆಂದರೆ ಯಾವ ಪಕ್ಷವೂ ಇವರನ್ನು ಭಾರತದ ನಿವಾಸಿಗಳಾಗಿ ಪರಿಗಣಿಸಲು ಅಗತ್ಯವಿದ್ದ ದಾಖಲಾತಿ ಒದಗಿಸುವ ಕುರಿತು ಭರವಸೆ ನೀಡಲಿಲ್ಲ. ಹರಿಜನರೆಂದು ಕರೆದು ದೇವರ ಮಕ್ಕಳ ಬಿರುದು ಕೊಟ್ಟ ದೇಶ, ದೇಶದ ಮಕ್ಕಳ ಹಕ್ಕನ್ನು ಕಸಿದಿರುವುದು ಪ್ರಜಾಪ್ರಭುತ್ವದ ಸೋಲು.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಣ್ಣಗಾಗುವ ಮುನ್ನವೇ,...

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...

ಎಐ ದುರ್ಬಳಕೆ; ಅಶ್ಲೀಲ ವಿಡಿಯೋ, ಫೋಟೋ ವೈರಲ್: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಎಐ ತಂತ್ರಜ್ಞಾನ ಬಳಸಿ ರಚಿಸಲಾದ ಅಶ್ಲೀಲ ಮತ್ತು ನಕಲಿ...