ಪಶ್ಚಿಮ ಏಷ್ಯಾ ಯುದ್ಧದ ಎಚ್ಚರಿಕೆ: ರಸಗೊಬ್ಬರ ವಲಯದ ಸುಧಾರಣೆ ಇಂದಿನ ಅಗತ್ಯ

Date:

- Advertisement -

“ಯಾವುದೇ ದೊಡ್ಡ ಬಿಕ್ಕಟ್ಟನ್ನು ಸುಮ್ಮನೆ ವ್ಯರ್ಥವಾಗಿ ಹೋಗುವುದಕ್ಕೆ ಬಿಡಬೇಡಿ” ಎಂಬ ಪ್ರಸಿದ್ಧ ಮಾತಿದೆ. 1991ರಲ್ಲಿ ಭಾರತಕ್ಕೆ ಪಾವತಿ ಸಮತೋಲನದ ಬಿಕ್ಕಟ್ಟು ಎದುರಾಗಿತ್ತು. ಅದು ದೇಶದಲ್ಲಿ ದೊಡ್ಡ ಆರ್ಥಿಕ ಸುಧಾರಣೆಗಳಿಗೆ ಕಾರಣವಾಯಿತು. ಇಂದು ಭಾರತದ ಬಳಿ 728 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ವಿದೇಶಿ ವಿನಿಮಯ ಮೀಸಲು ಇದೆ. ಇದರಿಂದ ನಮಗೆ ಬಾಹ್ಯ ಆಘಾತಗಳನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಆದರೆ, ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧವು ಭಾರತದ ಇಂಧನ ಮತ್ತು ರಸಗೊಬ್ಬರ ಪೂರೈಕೆಯಲ್ಲಿರುವ ನಮ್ಮ ನ್ಯೂನತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳಲು ರಸಗೊಬ್ಬರ ವಲಯದಲ್ಲಿ ತಕ್ಷಣದ ಸುಧಾರಣೆಗಳಾಗಬೇಕೆಂದು ಇದು ಎಚ್ಚರಿಸುತ್ತಿದೆ. ಅಂತಹ ಸುಧಾರಣೆ ಈಗ ಬೇಕಾಗಿದೆ. ದೇಶದ ಆಹಾರ ಭದ್ರತೆಗಾಗಿ ರಸಗೊಬ್ಬರ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಮತ್ತು ಸುಧಾರಣೆಗಳನ್ನು ತರುವುದು ಇಂದಿನ ತುರ್ತು ಅಗತ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...
ChatGPTImageApr15202604 21 54P

ಹೆಚ್ಚುತ್ತಿರುವ ಯುದ್ಧದ ಭೀತಿ ಇಂಧನ ಮತ್ತು ರಸಗೊಬ್ಬರ ಪೂರೈಕೆಯನ್ನು ತೀವವಾಗಿ ಅಸ್ತವ್ಯಸ್ತಗೊಳಿಸಿದೆ. ಮುಖ್ಯವಾಗಿ ‘ಹಾರ್ಮುಜ್‌ ಜಲಸಂಧಿ’ಯಂತಹ ಪ್ರಮುಖ ಸಮುದ್ರ ಮಾರ್ಗಗಳು ಇಂದು ಅಪಾಯದಲ್ಲಿವೆ. ವಿಶ್ವದ ಒಟ್ಟು ತೈಲ ಮತ್ತು ಅನಿಲ ವ್ಯಾಪಾರದ ಬಹುದೊಡ್ಡ ಪಾಲು ಈ ಮಾರ್ಗದ ಮೂಲಕವೇ ನಡೆಯುತ್ತಿರುವುದು. ಈ ಮಾರ್ಗಕ್ಕೆ ಯಾವುದೇ ರೀತಿಯಲ್ಲಿ ಅಡಚಣೆಯಾದರೂ ಅದರ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ತಕ್ಷಣವೇ ಆಗುತ್ತದೆ. ತೈಲ, ಅನಿಲ ಮತ್ತು ಯೂರಿಯಾ ರಸಗೊಬ್ಬರಗಳ ಬೆಲೆಯಲ್ಲಿ ಈಗಾಗಲೇ ತೀವ್ರ ಏರಿಕೆಯಾಗಿದೆ. ಕಚ್ಚಾ ತೈಲ ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ವಸ್ತು. ಅದು ತನ್ನ ಆಗತ್ಯದ ಶೇಕಡಾ 88ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತವು ಸುಮಾರು 137 ಬಿಲಿಯನ್ ಡಾಲ‌ರ್ ಕೊಟ್ಟು 2430 ಲಕ್ಷ ಟನ್ ತೈಲವನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಅರ್ಧದಷ್ಟು ಭಾಗ ಮಧ್ಯಪ್ರಾಚ್ಯ ದೇಶಗಳಿಂದ ಹಾರ್ಮುಜ್ ಜಲಸಂಧಿಯ ಮೂಲಕವೇ ಬಂದಿರುವುದು. ಫೆಬ್ರವರಿ ಕೊನೆಯಲ್ಲಿ ಒಂದು ಬ್ಯಾರೆಲ್ ತೈಲದ ಬೆಲೆ 66 ಡಾಲರ್ ಇತ್ತು. ಆದರೆ ಕೇವಲ ಎರಡು ವಾರಗಳಲ್ಲಿ ಅದು 120 ಡಾಲರ್‌ಗೆ ಏರಿತು. ಮಾರ್ಚ್ 13ರ ಹೊತ್ತಿಗೆ ಇದು 100 ಡಾಲರ್ ಆಸುಪಾಸಿನಲ್ಲಿತ್ತು.

ತೈಲ ಮಾತ್ರವಲ್ಲದೆ ಅಡುಗೆ ಅನಿಲದ (LPG) ಮೇಲೂ ಇದರ ಪ್ರಭಾವ ಆಗಿದೆ. ಭಾರತವು ತನ್ನ ಬಳಕೆಯ ಮೂರನೇ ಎರಡರಷ್ಟು ಅಡುಗೆ ಆನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಬಹುಪಾಲು ಇದೇ ಸಮುದ್ರ ಮಾರ್ಗದ ಮೂಲಕ ಬರುತ್ತದೆ. ಪೂರೈಕೆ ಕಡಿಮೆಯಾಗಿ ಆಮದು ವೆಚ್ಚ ಹೆಚ್ಚಾದ ಕಾರಣ, ದೇಶದಲ್ಲಿ ಪ್ರತಿ ಸಿಲಿಂಡರ್ ಬೆಲೆಯನ್ನು 60 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.

ಭಾರತದ ದ್ರವೀಕೃತ ನೈಸರ್ಗಿಕ ಅನಿಲದ (LNG) ಆಮದಿನ ಮೇಲೂ ಯುದ್ಧ ಪರಿಣಾಮ ಬೀರಿದೆ. 2024-25ರಲ್ಲಿ ಭಾರತವು ಸುಮಾರು 15 ಬಿಲಿಯನ್ ಡಾಲರ್ ಮೌಲ್ಯದ 27 ಮಿಲಿಯನ್ ಟನ್ ಅನಿಲವನ್ನು ಆಮದು ಮಾಡಿಕೊಂಡಿದೆ. ಇದು ನಮ್ಮ ಒಟ್ಟಾರೆ ಆಗತ್ಯದ ಅರ್ಧಭಾಗ. ಇದರಲ್ಲಿ ಅರ್ಧದಷ್ಟು ಭಾಗ ಕತಾರ್ ದೇಶದಿಂದ ಬರುತ್ತದೆ. ಯುದ್ಧದ ಕಾರಣದಿಂದ ಕೇವಲ ಎರಡು ವಾರಗಳಲ್ಲಿ ಆನಿಲದ ಬೆಲೆ ಒಂದು ಯೂನಿಟ್‌ಗೆ 10 ಡಾಲರ್ ಇದ್ದುದು 25 ಡಾಲರ್ ಆಗಿದೆ.

PTI03 31 2026 000227A 0 1775007944692 1775007966568

ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರವು ‘ಅಗತ್ಯ ವಸ್ತುಗಳ ಕಾಯ್ದೆ’ಯನ್ನು ಜಾರಿಗೆ ತಂದಿದೆ. ಈಗ ಮನೆಬಳಕೆಗೆ ಮತ್ತು ಸಾರಿಗೆಗೆ ಅನಿಲ ನೀಡಲು ಮೊದಲ ಆದ್ಯತೆ ನೀಡಲಾಗಿದೆ. ಇದರಿಂದ ರಸಗೊಬ್ಬರ ಕಾರ್ಖಾನೆಗಳಿಗೆ ಅಗತ್ಯವಿರುವ ಅನಿಲದಲ್ಲಿ ಕೇವಲ ಶೇ. 70ರಷ್ಟು ಮಾತ್ರ ಸಿಗುತ್ತಿದೆ. ಇದರಿಂದ ದೇಶದಲ್ಲಿನ ಯೂರಿಯಾ ಉತ್ಪಾದನೆಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಇದು ಗಂಭೀರವಾದ ವಿಷಯ. ಯಾಕೆಂದರೆ ಭಾರತದ ಆಹಾರ ಭದ್ರತೆಯು ರಸಗೊಬ್ಬರದ ಲಭ್ಯತೆಯ ಮೇಲೆ ನಿಂತಿದೆ. ಯೂರಿಯಾ ತಯಾರಿಕೆ ಅಂತರಾಷ್ಟ್ರೀಯ ಇಂಧನದ ಮಾರುಕಟ್ಟೆಯನ್ನು ಅವಲಂಬಿಸಿದೆ. ಭಾರತಕ್ಕೆ ಪ್ರತಿ ವರ್ಷ 40 ಮಿಲಿಯನ್ ಟನ್ ಯೂರಿಯಾ ಬೇಕು. ಆದರೆ ನಮ್ಮಲ್ಲಿ ಕೇವಲ 30 ಮಿಲಿಯನ್ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಹೀಗಾಗಿ ಉಳಿದದ್ದನ್ನು ನಾವು ಆಮದು ಮಾಡಿಕೊಳ್ಳಲೇಬೇಕು. ಮುಂದಿನ ವರ್ಷ ಯೂರಿಯಾ ಆಮದು 10 ಮಿಲಿಯನ್ ಟನ್ ದಾಟುವ ಸಾಧ್ಯತೆಯಿದೆ. ಇದು ಕಳೆದ ವರ್ಷಕ್ಕೆ (5.6 ಮಿಲಿಯನ್ ಟನ್) ಹೋಲಿಸಿದರೆ ಸುಮಾರು ಎರಡರಷ್ಟು ಹೆಚ್ಚು. ಆಮದು ಮಾಡಿಕೊಳ್ಳುವ ಯೂರಿಯಾದಲ್ಲಿ ಶೇ. 60ರಷ್ಟು ಭಾಗ ಪರ್ಷಿಯನ್ ಕೊಲ್ಲಿಯ ರಾಷ್ಟ್ರಗಳಿಂದ ಬರುತ್ತದೆ. ಯುದ್ಧದ ಉದ್ವಿಗ್ನತೆಯಿಂದ ಕೇವಲ 10 ದಿನಗಳಲ್ಲಿ ಯೂರಿಯಾ ಬೆಲೆ ಶೇ. 35ರಷ್ಟು ಹೆಚ್ಚಾಗಿದೆ. ಒಂದು ಟನ್ ಯೂರಿಯಾ ಬೆಲೆ 484 ಡಾಲರ್ ಇದ್ದುದು 652 ಡಾಲರ್ ಆಗಿದೆ.. ಅನಿಶ್ಚತತೆ ಮುಂದುವರಿದಿರುವುದರಿಂದ ಅದು ಇನ್ನೂ ಹೆಚ್ಚಾಗಬಹುದು.

ಯೂರಿಯಾ ತಯಾರಿಸಲು ನೈಸರ್ಗಿಕ ಅನಿಲ ಅತಿ ಮುಖ್ಯವಾದ ಕಚ್ಚಾವಸ್ತು. ನಾವು ನಮ್ಮ ಉತ್ಪಾದನೆಗೆ ಬಳಸುವ ಶೇ. 85ರಷ್ಟು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನೇರ ಯೂರಿಯಾ ಆಮದು ಮತ್ತು ಅನಿಲದ ಆಮದು ಎರಡನ್ನೂ ಲೆಕ್ಕ ಹಾಕಿದರೆ, ಯೂರಿಯಾ ವಿಷಯದಲ್ಲಿ ಭಾರತವು ಶೇ. 55ರಷ್ಟಕ್ಕೆ ವಿದೇಶವನ್ನು ಅವಲಂಬಿಸಿದೆ.

ಕೇವಲ ಯೂರಿಯಾ ಮಾತ್ರವಲ್ಲ, ಇತರ ರಸಗೊಬ್ಬರಗಳಿಗೂ ನಾವು ವಿದೇಶಗಳನ್ನೇ ನೆಚ್ಚಿಕೊಂಡಿದ್ದೇವೆ. ರಸಗೊಬ್ಬರ ತಯಾರಿಕೆಗೆ ಬೇಕಾದ ಶೇ. 80ರಷ್ಟು ಅಮೋನಿಯಾ ಮತ್ತು ಗಂಧಕ (Sulphur) ಪರ್ಷಿಯನ್ ಕೊಲ್ಲಿಯ ರಾಷ್ಟ್ರಗಳಿಂದಲೇ ಬರುತ್ತದೆ. ನಮ್ಮಲ್ಲಿ ಬಳಕೆಯಾಗುವ ಶೇ. 40ರಷ್ಟು ಡಿಎಪಿ (DAP) ಗೊಬ್ಬರ ಸೌದಿ ಅರೇಬಿಯಾದಿಂದ ಆಮದಾಗುತ್ತದೆ. ಇನ್ನು ಪೊಟ್ಯಾಶ್ ಗೊಬ್ಬರಕ್ಕಂತೂ (MOP) ನಾವು ಸಂಪೂರ್ಣವಾಗಿ ಆಮದನ್ನೇ ಅವಲಂಬಿಸಿದ್ದೇವೆ. ಹಾಗೆಯೇ ಫಾಸ್ಟೇಟಿಗೆ ಕಚ್ಚಾ ಪದಾರ್ಥಗಳಿಗೆ ಶೇಕಡ 90ರಿಂದ 95ರವರೆಗೆ ಆಮದನ್ನು ನೆಚ್ಚಿಕೊಂಡಿದ್ದೇವೆ.

ce5b34b0 b419 4ff4 8a23 bc8eff519945 1600x809
ಕೃಪೆ:eia

ಒಟ್ಟಾರೆಯಾಗಿ ನೋಡಿದರೆ, 2024-25ರಲ್ಲಿ ಭಾರತದ ರಸಗೊಬ್ಬರ ಅಗತ್ಯದ ಶೇ. 68 ರಿಂದ 70 ರಷ್ಟು ಭಾಗ ಜಾಗತಿಕ ಪೂರೈಕೆಯನ್ನು ನೆಚ್ಚಿಕೊಂಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯುದ್ಧಗಳು ಅಥವಾ ಬೆಲೆ ಏರಿಕೆಗಳು ನಮ್ಮ ದೇಶದ ಆಹಾರ ಭದ್ರತೆಗೆ ತೀವ್ರವಾಗಿ ಅಪಾಯವೊಡ್ಡಬಹುದು.

ಭಾರತ 2025-26ರಲ್ಲಿ ಮಧ್ಯಪ್ರಾಚ್ಯ ದೇಶಗಳಿಗೆ ಸುಮಾರು 11.8 ಬಿಲಿಯನ್ ಡಾಲ‌ರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಸಹ ಮಾಡುತ್ತಿದೆ. ಯುದ್ಧದ ಕಾರಣದಿಂದ ಈ ರಫಿಗೂ ಅಡೆತಡೆ ಉಂಟಾಗುತ್ತಿದೆ. ಆದರೆ ಎಲ್ಲಕ್ಕಿಂತ ದೊಡ್ಡ ಆತಂಕವೆಂದರೆ ತೈಲ, ಅನಿಲ ಮತ್ತು ರಸಗೊಬ್ಬರದ ಆಮದು ವೆಚ್ಚ. ಈಗಿನ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ, 2026-27ರ ವೇಳೆಗೆ ರಸಗೊಬ್ಬರ ಸಬ್ಸಿಡಿ ವೆಚ್ಚವು 2 ಲಕ್ಷ ಕೋಟಿ ರೂಪಾಯಿ ದಾಟಬಹುದು. ಇದು ಸರ್ಕಾರ ನಿಗದಿಪಡಿಸಿದ್ದ ಬಜೆಟ್‌ಗಿಂತ (1.7 ಲಕ್ಷ ಕೋಟಿ) ಬಹಳ ಹೆಚ್ಚಾಗಲಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ತಕ್ಷಣವೇ ಹಲವು ಸುಧಾರಣೆಗಳನ್ನು ಮಾಡಬೇಕಾಗಿದೆ. ಹೇಗೆ ಸುಧಾರಣೆಗಳನ್ನು ತರುವುದು?

ಮೊದಲನೆಯದಾಗಿ, ಭಾರತವು ಕೇವಲ ಕೊಲ್ಲಿ ರಾಷ್ಟ್ರಗಳ ಮೇಲೆ ಅವಲಂಬಿತವಾಗದೆ, ತನ್ನ ಆಮದು ಮೂಲಗಳನ್ನು ವೈವಿಧ್ಯಗೊಳಿಸಬೇಕು. ಇದರ ಜೊತೆಗೆ, ರಸಗೊಬ್ಬರಕ್ಕೆ ಬೇಕಾದ ಖನಿಜಗಳು ಮತ್ತು ಉತ್ಪಾದನಾ ಘಟಕಗಳ ಮೇಲೆ ವಿದೇಶಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು. ಹಾಗೆಯೇ, ದೇಶದ ಒಳಗೂ ರಸಗೊಬ್ಬರ ಸಂಪನ್ಮೂಲಗಳನ್ನು ಹುಡುಕುವ (Exploration) ಕೆಲಸವನ್ನು ತ್ವರಿತಗೊಳಿಸಬೇಕು.

808 440

ಸುಮಾರು 1 ಬಿಲಿಯನ್ ಡಾಲರ್ ಮೊತ್ತದ ಪ್ರತ್ಯೇಕ ‘ರಸಗೊಬ್ಬರ ಹೂಡಿಕೆ ನಿಧಿ’ಯನ್ನು ಸ್ಥಾಪಿಸುವುದರಿಂದ, ಭಾರತೀಯ ಕಂಪನಿಗಳು ಜಾಗತಿಕ ಗಣಿಗಾರಿಕೆ ಯೋಜನೆಗಳಲ್ಲಿ ಪಾಲುದಾರಿಕೆ (Equity stakes) ಪಡೆಯಲು ಸಾಧ್ಯವಾಗುತ್ತದೆ. ಇದು ಭಾರತವನ್ನು ಕೇವಲ ಅನಿವಾರ್ಯ ಆಮದು ಅವಲಂಬನೆಯಿಂದ ಮುಕ್ತಗೊಳಿಸಿ, ಹೂಡಿಕೆಯ ಆಧಾರದ ಮೇಲೆ ಪೂರೈಕೆಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವತ್ತ ಕೊಂಡೊಯ್ಯುತ್ತದೆ.

ಎರಡನೆಯದಾಗಿ, ನ್ಯಾನೋ ಯೂರಿಯಾ ಮತ್ತು ಸಾವಯವ ಗೊಬ್ಬರಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಹಾಗೆಯೇ, ನಮ್ಮಲ್ಲಿರುವ ಹಳೆಯ ರಸಗೊಬ್ಬರ ಕಾರ್ಖಾನೆಗಳ ದಕ್ಷತೆಯನ್ನು ಹೆಚ್ಚಿಸುವುದು ಅನಿವಾರ್ಯ. ರಸಗೊಬ್ಬರ ಭದ್ರತೆಯು ಕೇವಲ ಆರ್ಥಿಕತೆಯ ಪ್ರಶ್ನೆಯಲ್ಲ, ಇದು ದೇಶದ ಆಹಾರ ಭದ್ರತೆ ಮತ್ತು ರಾಷ್ಟ್ರೀಯ ಸುರಕ್ಷತೆಯ ಪ್ರಮುಖ ಭಾಗವಾಗಿದೆ.

ಸುಧಾರಣೆಗೆ ಬೇಕಾದ ಹೊಸ ಯೋಜನೆಗಳು

ಈ ಸಂಕಷ್ಟದಿಂದ ಪಾರಾಗಲು ಭಾರತವು ತಕ್ಷಣವೇ ಕೆಲವು ಸುಧಾರಣೆಗಳನ್ನು ಮಾಡಬೇಕಿದೆ:

ಕೇವಲ ಕೊಲ್ಲಿ ರಾಷ್ಟ್ರಗಳ ಮೇಲೆ ಅವಲಂಬಿತವಾಗದೆ ಬೇರೆ ದೇಶಗಳಿಂದಲೂ ಆಮದು ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಇದಕ್ಕೆ ಪೂರಕವಾಗಿ ವಿದೇಶಗಳಲ್ಲಿರುವ ರಸಗೊಬ್ಬರ ಗಣಿಗಳು ಮತ್ತು ಉತ್ಪಾದನಾ ಘಟಕಗಳಲ್ಲಿ ಭಾರತೀಯ ಕಂಪನಿಗಳು ಪಾಲುದಾರಿಕೆ ಪಡೆಯಬೇಕು.

ಯೂರಿಯಾ ಬೆಲೆ ಏರಿಕೆಯು ಸರ್ಕಾರದ ಸಬ್ಸಿಡಿ (ಸಹಾಯಧನ) ಹೊರೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 2024-25ರಲ್ಲಿ ಕೇಂದ್ರ ಸರ್ಕಾರವು ರಸಗೊಬ್ಬರ ಸಬ್ಸಿಡಿಗಾಗಿ ಒಟ್ಟು 1.64 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಇದರಲ್ಲಿ ಯೂರಿಯಾ ಒಂದಕ್ಕೇ ಸುಮಾರು 1.19 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಿದೆ. ನೈಸರ್ಗಿಕ ಅನಿಲದ ಬೆಲೆ ಪ್ರತಿ 10 ಡಾಲರ್ ಹೆಚ್ಚಾದಾಗ, ಯೂರಿಯಾ ತಯಾರಿಕಾ ವೆಚ್ಚ ಪ್ರತಿ ಟನ್‌ಗೆ 25 ಡಾಲರ್ ಹೆಚ್ಚಾಗುತ್ತದೆ.

ಈಗ ಸರ್ಕಾರದ ಮುಂದೆ ದೊಡ್ಡ ಸವಾಲಿದೆ. ಹೆಚ್ಚಾದ ವೆಚ್ಚವನ್ನು ಸರ್ಕಾರವೇ ಭರಿಸಿದರೆ ಸಬ್ಸಿಡಿ ಹಣ ಜಾಸ್ತಿಯಾಗುತ್ತದೆ. ಒಂದು ವೇಳೆ ರೈತರಿಗೆ ಬೆಲೆ ಏರಿಸಿದರೆ, ಅದು ಕೃಷಿ ಉತ್ಪಾದನೆ ಮತ್ತು ಆಹಾರ ಪದಾರ್ಥಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಎದುರಿಸಲು ಭಾರತವು ಎರಡು ಮುಖ್ಯ ದಾರಿಗಳನ್ನು ಅನುಸರಿಸಬೇಕಿದೆ. ಮೊದಲನೆಯದಾಗಿ, ಭಾರತವು ಕೇವಲ ಮಧ್ಯಪ್ರಾಚ್ಯ ದೇಶಗಳ ಮೇಲೆ ಅವಲಂಬಿತವಾಗಬಾರದು. ರಷ್ಯಾ, ಈಜಿಪ್ಟ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಂಡು ಆಮದನ್ನು ವೈವಿಧ್ಯಗೊಳಿಸಬೇಕು.

ಎರಡನೆಯದಾಗಿ, ರಸಗೊಬ್ಬರದ ಬೆಲೆ ನಿಗದಿ ಮತ್ತು ಸಬ್ಸಿಡಿ (ಸಹಾಯಧನ) ನೀಡುವ ಕ್ರಮದಲ್ಲಿ ಸುಧಾರಣೆಗಳು ಬಹಳ ಅಗತ್ಯವಾಗಿವೆ. ಇವು ಈಗಾಗಲೇ ಸಾಕಷ್ಟು ತಡವಾಗಿವೆ. ರಸಗೊಬ್ಬರದ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಬೇಕು. ಇದರ ಜೊತೆಗೆ ಬೆಲೆಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ಹಂತ ಹಂತವಾಗಿ ಸಡಿಲಗೊಳಿಸಬೇಕು. ಇದರಿಂದ ರೈತರು ಸಾರಜನಕ (N), ರಂಜಕ (P) ಮತ್ತು ಪೊಟ್ಯಾಶ್ (K) ಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಲು ಪ್ರೋತ್ಸಾಹ ಸಿಗುತ್ತದೆ. ಇದರಿಂದ ಸರ್ಕಾರದ ಹಣಕಾಸಿನ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಸಬ್ಸಿಡಿ ಹಣದ ಸೋರಿಕೆಯನ್ನು (Leakage) ತಡೆಯಲು ಇದು ಅನಿವಾರ್ಯ. ಪ್ರಸ್ತುತ ಸುಮಾರು ಶೇ. 20ರಷ್ಟು ಸಬ್ಸಿಡಿ ಹಣ ದುರ್ಬಳಕೆಯಾಗುತ್ತಿದೆ. ಇದು ಸಣ್ಣ ಮೊತ್ತವೇನಲ್ಲ. ಒಂದು ವೇಳೆ ಇಂತಹ ದೊಡ್ಡ ಬದಲಾವಣೆಗಳು ತಕ್ಷಣಕ್ಕೆ ಕಷ್ಟವೆನಿಸಿದರೆ, ಪರ್ಯಾಯ ದಾರಿಯನ್ನು ಯೋಚಿಸಬಹುದು. ರೈತರ ಜಮೀನಿನ ವಿಸ್ತೀರ್ಣ, ಅವರು ಬೆಳೆಯುವ ಬೆಳೆಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ಶಿಫಾರಸು ಮಾಡುವ ಗೊಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ರಸಗೊಬ್ಬರ ಮಾರಾಟದ ಮೇಲೆ ಮಿತಿ ಹೇರಬಹುದು.

ಸರ್ಕಾರವು ಈಗಾಗಲೇ ‘ಆಗಿಸ್ಟಾಕ್’ (AgriStack) ಎಂಬ ಡಿಜಿಟಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೂಲಕ ಅರ್ಹ ರೈತರಿಗೆ ಅಗತ್ಯವಿರುವಷ್ಟು ಮಾತ್ರ ರಸಗೊಬ್ಬರ ಸಿಗುವಂತೆ ಮಾಡುವುದು ಇಂದಿನ ದಿನಗಳಲ್ಲಿ ಸುಲಭ ಮತ್ತು ಸಾಧ್ಯವಿದೆ.

ಮೂರನೆಯದಾಗಿ, ಮೇಲೆ ಹೇಳಿದ ಯಾವುದೇ ಬದಲಾವಣೆಗಳು ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಯೂರಿಯಾವನ್ನು ‘ಪೋಷಕಾಂಶ ಆಧಾರಿತ ಸಬ್ಸಿಡಿ’ (NBS) ಚೌಕಟ್ಟಿನೊಳಗೆ ತರಬೇಕು. ಇದರಿಂದ ಯೂರಿಯಾ ಬೆಲೆಯನ್ನು ಇತರ ರಸಗೊಬ್ಬರಗಳ (ರಂಜಕ ಮತ್ತು ಪೊಟ್ಯಾಶ್) ಬೆಲೆಗೆ ಅನುಗುಣವಾಗಿ ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ಇದು ಭೂಮಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸಿಗುವಂತೆ ಉತ್ತೇಜಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ನೀತಿ ನಿರೂಪಕರು ಎರಡು ಪ್ರಮುಖ ಆಯಾಮಗಳಲ್ಲಿ ಕೆಲಸ ಮಾಡಬೇಕಿದೆ:

ಮೊದಲನೆಯದು: ರಸಗೊಬ್ಬರ ಮತ್ತು ಅದಕ್ಕೆ ಬೇಕಾದ ಕಚ್ಚಾ ವಸ್ತುಗಳ ಆಮದನ್ನು ಕೇವಲ ಗಲ್ಫ್ ರಾಷ್ಟ್ರಗಳಿಗೆ ಸೀಮಿತಗೊಳಿಸದೆ. ಬೇರೆ ದೇಶಗಳಿಗೂ ವಿಸ್ತರಿಸುವ ಮೂಲಕ ಪೂರೈಕೆಯನ್ನು ವೈವಿಧ್ಯಗೊಳಿಸುವುದು.

ಎರಡನೆಯದು: ರಸಗೊಬ್ಬರ ಕ್ಷೇತ್ರದಲ್ಲಿ ಆಳವಾದ ಸುಧಾರಣೆಗಳನ್ನು ತರುವುದು. ಅಂದರೆ ನೇರ ಸಬ್ಸಿಡಿ ವರ್ಗಾವಣೆ (DBT) ಮತ್ತು ಬೆಲೆಗಳ ಮೇಲಿನ ನಿಯಂತ್ರಣ ಸಡಿಲಗೊಳಿಸುವುದು, ಅಥವಾ ಮಾರಾಟದ ಮೇಲೆ ಮಿತಿ ಹೇರುವುದು. ಇಲ್ಲವೇ ಯೂರಿಯಾವನ್ನು NBS ಯೋಜನೆಗೆ ಸೇರಿಸುವುದು.

ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಈ ಬಿಕ್ಕಟ್ಟನ್ನು ರಸಗೊಬ್ಬರ ವಲಯದ ಸುಧಾರಣೆಗೆ ಒಂದು ಅವಕಾಶವನ್ನಾಗಿ ಬಳಸಿಕೊಂಡರೆ, ಅದು ದೇಶಕ್ಕೆ ದೀರ್ಘಕಾಲೀನ ಲಾಭ ತರಲಿದೆ. ಆದರೆ ಅವರು ಈ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆಯೇ?

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...