ಜಾಗತಿಕವಾಗಿ ಫಲವತ್ತತೆಯೇಕೆ ಕ್ಷೀಣಿಸುತ್ತಿದೆ?

Date:

ಅಮೆರಿಕ, ಹಲವು ಯುರೋಪ್ ದೇಶಗಳು ಮತ್ತೆ ಏಷ್ಯಾದ ಫಲವತ್ತತೆ (ಮಕ್ಕಳ ಜನನ ಪ್ರಮಾಣ) ಕಡಿಮೆಯಾಗುತ್ತಿದೆ ಅಂತ ತುಂಬಾ ಚರ್ಚೆಯಾಗುತ್ತಿದೆ. ಆದರೆ ವಾಸ್ತವವೆಂದರೆ ಕಳೆದ 50 ವರ್ಷಗಳಿಂದ ಈ ಬದಲಾವಣೆ ಎಲ್ಲಾ ಕಡೆಯೂ ಆಗುತ್ತಿದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಈಗ ಜನನ ದರ ಗಣನೀಯವಾಗಿ ಕಡಿಮೆಯಾಗುತ್ತಿದೆ.

- Advertisement -

ಸಂಯುಕ್ತ ಸಂಸ್ಥಾನದಲ್ಲಿ 193 ದೇಶಗಳಿವೆ. ಈ ಗುಂಪಿನಲ್ಲಿನ ಅರ್ಧದಷ್ಟು ದೇಶಗಳಲ್ಲಿ ಒಟ್ಟಾರೆಯಾಗಿ ವಿಶ್ವದ ಎರಡನೇ ಮೂರರಷ್ಟು ಜನಸಂಖ್ಯೆಯಿದೆ. 2022ರ ಹೊತ್ತಿಗೆ ಈ ದೇಶಗಳಲ್ಲಿ ಪ್ರತಿ ಮಹಿಳೆಗೆ ಸರಾಸರಿ 2.1ಕ್ಕಿಂತ ಕಡಿಮೆ ಮಕ್ಕಳಾಗುತ್ತಿದ್ದವು. ಅಂದರೆ ಜನಸಂಖ್ಯೆ ಈಗಿರುವಷ್ಟೇ ಪ್ರಮಾಣದಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ (ಕನಿಷ್ಠ ಈಗಿರುವಷ್ಟೇ ಪ್ರಮಾಣದ ಜನಸಂಖ್ಯೆಯನ್ನು ಕಾಪಾಡಿಕೊಳ್ಳಬೇಕಾದರೆ ಪ್ರತಿ ಕುಟುಂಬದಲ್ಲಿ 2.1ಕ್ಕಿಂತ ಹೆಚ್ಚು ಅಂದರೆ ಕನಿಷ್ಠ ಇಬ್ಬರು ಮಕ್ಕಳು ಇರಬೇಕು). ಅಮೇರಿಕೆಯಲ್ಲಿ ಫಲವತ್ತತೆ ಕುಸಿಯುವ ಪ್ರಕ್ರಿಯೆ ಹಲವು ದಶಕಗಳ ಹಿಂದೆಯೇ ಪ್ರಾರಂಭವಾಯಿತು. ಇತ್ತೀಚೆಗೆ ಪ್ರಪಂಚದ ಉಳಿದ ಹಲವು ದೇಶಗಳೂ ಈ ಗುಂಪಿಗೆ ಸೇರಿವೆ. ಈ ಫಲವತ್ತತೆ ಕುಸಿತ ಆಧುನಿಕ ಯುಗದ ಜನಸಂಖ್ಯಾಶಾಸ್ತ್ರದ ಅತಿ ದೊಡ್ಡ ಅಚ್ಚರಿಗಳಲ್ಲಿ ಒಂದು. ಏಕೆಂದರೆ ಈಗ ಫಲವತ್ತತೆ ಮತ್ತು ತಲಾ ಆದಾಯದ ಮಟ್ಟಗಳ ನಡುವೆ ನೇತ್ಯಾತ್ಮಕ ಸಂಬಂಧವನ್ನು ನೋಡುತ್ತಿದ್ದೇವೆ (ತಲಾ ಆದಾಯ ಹೆಚ್ಚಾದಂತೆಲ್ಲ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...
Claudia Goldin winner 2023 Nobel Prize Economics

ಈ ಸಂಬಂಧವನ್ನು 1960ರಿಂದಲೇ ಆರ್ಥಶಾಸ್ತ್ರಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಬಗೆಬಗೆಯ ವಿವರಣೆಗಳನ್ನು ನೀಡಿದ್ದಾರೆ. ಕಡಿಮೆ ಅದಾಯ ಹೊಂದಿರುವ ಕುಟುಂಬಗಳಿಗೆ ಹಾಗೂ ದೇಶಗಳಿಗೆ ಗರ್ಭನಿರೋಧಕಗಳ ತಿಳುವಳಿಕೆ ಇರಲಿಲ್ಲ ಮತ್ತು ತಂತ್ರಜ್ಞಾನದ ಕೊರತೆಯಿತ್ತು ಅನ್ನುವ ವಾದ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಅತ್ಯುತ್ತಮ ಆರೋಗ್ಯ, ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ಬಯಸುತ್ತಾರೆ. ಹಾಗಾಗಿ ಆದಾಯ ಹೆಚ್ಚಾದಂತೆ ಮಕ್ಕಳನ್ನು ಬೆಳೆಸುವ ವೆಚ್ಚವೂ ಹೆಚ್ಚಾಗುತ್ತದೆ ಎನ್ನುವ ವಿವರಣೆ ನೀಡಲಾಗಿದೆ. ಆದರೆ ಇವುಗಳಲ್ಲಿ ಹೆಚ್ಚಿನ ವಿವರಣೆಗಳು ತಪ್ಪು ಅಥವಾ ಅಪೂರ್ಣ ಅನ್ನುವುದು ಸಾಬೀತಾಗಿದೆ. .

ಉದಾಹರಣೆಗೆ, ಆಧುನಿಕ ಕುಟುಂಬಯೋಜನೆಯ ವಿಧಾನಗಳು ವ್ಯಾಪಕವಾಗಿ ಬಳಕೆಯಾಗಲು ಪ್ರಾರಂಭವಾದ ನಂತರವೂ ಜನನ ದರದಲ್ಲಿ ಕುಸಿತದ ಪ್ರವೃತ್ತಿ ಮುಂದುವರಿಯಿತು. ಹಾಗಾಗಿ ಹೆಚ್ಚಿನ ಆದಾಯದ ಕುಟುಂಬಗಳಲ್ಲಿ ಕಡಿಮೆ ಆದಾಯದ ಕುಟುಂಬಗಳಿಗಿಂತ ಕಡಿಮೆ ಮಕ್ಕಳಿರುವುದಕ್ಕೆ ಬೇರೇನೋ ಕಾರಣವಿರಬೇಕು ಎನ್ನುವುದನ್ನು ಇದು ಸೂಚಿಸುತ್ತಿತ್ತು. ಕೇವಲ ಪರಿಣಾಮಕಾರಿಯಾದ ಗರ್ಭನಿರೋಧಕಗಳನ್ನು ಒದಗಿಸಿದರೆ ಅಥವಾ ಕಾನೂನುಬದ್ಧ ಗರ್ಭಪಾತ ಸೌಲಭ್ಯ ಒದಗಿಸಿದರೆ ಸಾಲುವುದಿಲ್ಲ. ಅದು ಯಾವಾಗಲೂ ಅವಶ್ಯಕ ಅಂತಲೂ ಅಲ್ಲ. 19ನೇ ಶತಮಾನದಲ್ಲಿ ಅಮೇರಿಕೆಯಲ್ಲಿ ಈ ಸೌಲಭ್ಯಗಳು ಇರಲಿಲ್ಲ. ಆಗ ಜನನ ದರ ಗಣನೀಯವಾಗಿ ಕಮ್ಮಿಯಾಗಿದ್ದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಜನನ ದರದಲ್ಲಿ ನಿರಂತರವಾಗಿ, ಗಣನೀಯ ಪ್ರಮಾಣದಲ್ಲಿ ಇಳಿಯಬೇಕಾದರೆ, ಸಂತಾನೋತ್ಪತ್ತಿಯ ವಯೋಮಾನದ ವ್ಯಕ್ತಿಗಳು ಕಡಿಮೆ ಮಕ್ಕಳನ್ನು ಹೊಂದಲು ನಿರ್ಧರಿಸಬೇಕು. ಅದು ಮುಖ್ಯ. ಹಾಗೆಯೇ ಜನನ ದರದಲ್ಲಿ ಏರಿಕೆಯಾಗಬೇಕಾದರೆ ದಂಪತಿಗಳಿಗೆ ಹೆಚ್ಚು ಮಕ್ಕಳನ್ನು ಹೊಂದುವ ಇಚ್ಛೆ ಇರಬೇಕು. ಹಾಗೆಯೇ ಮಹಿಳೆಯರಿಗೆ ತಮ್ಮ ಮಕ್ಕಳಿಗೆ ಸರಿಯಾದ ಪೋಷಣೆ ದೊರೆಯುತ್ತದೆ ಎಂಬ ಭರವಸೆ ಇರಬೇಕು.

ಸ್ವತಃ ನನ್ನ ಸಂಶೋಧನೆಯ ಪ್ರಕಾರ ಫಲವತ್ತತೆ ಕುಸಿತಕ್ಕೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಕರ್ತೃತ್ವಶಕ್ತಿಯೇ [agency] ಕಾರಣ. ತಾವು ಪಡೆದ ಶಿಕ್ಷಣದಿಂದ ಸಿಗಬೇಕಾದ ಆರ್ಥಿಕ ಮತ್ತು ವೈಯಕ್ತಿಕ ಲಾಭಗಳು ತಮಗೆ ದೊರಕುತ್ತವೆಯೋ ಇಲ್ಲವೋ ಎನ್ನುವ ಅನಿಶ್ಚಿತತೆ ಅವರನ್ನು ಕಾಡುತ್ತಿದೆ. ಹಾಗೆಯೇ ತಮ್ಮ ಮಕ್ಕಳಿಗೆ ಅವಶ್ಯಕವಾಗಿರುವಷ್ಟು ಸಂಪನ್ಮೂಲಗಳು ದೊರಕುತ್ತವೆಯೋ ಇಲ್ಲವೋ ಎಂಬ ಆತಂಕವೂ ಅವರನ್ನು ಕಾಡುತ್ತಿರುತ್ತದೆ. ಮಹಿಳೆಯರು ತಮ್ಮ ಸ್ವಾತಂತ್ರ್ಯದ ಫಲವನ್ನು ಅನುಭವಿಸಿ, ಆನಂದಿಸಲು ಬೆಂಬಲವನ್ನು ಬಯಸುತ್ತಾರೆ. ಆದರೆ ಪುರುಷರಿಗೆ (ಮತ್ತು ಸರ್ಕಾರಗಳಿಗೆ) ಅದಕ್ಕೆ ವಿಶ್ವಾಸಾರ್ಹವಾದ ಭರವಸೆಗಳನ್ನು ಕೊಡಲಾಗುತ್ತಿಲ್ಲ. ಇವರಿಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ಇದು ಫಲವತ್ತತೆಯ ಸಮಸ್ಯೆಯ” ನಿಜವಾದ ಕಾರವಿರಬಹುದು.

ಹೆಚ್ಚಿನ ಶಿಕ್ಷಣವನ್ನು ಪಡೆದು, ಒಂದು ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಿರುವ ಮಹಿಳೆ ತಾಯಿಯಾಗುವ ಮೊದಲು ಮಗುವಿನ ತಂದೆ ಕುಟುಂಬದೊಳಗಿನ ಹೊಣೆಗಾರಿಕೆಯನ್ನು ಹಂಚಿಕೊಳ್ಳುತ್ತಾನೆಯೇ, ಇಲ್ಲವೋ ಎನ್ನುವುದನ್ನು ಮುಖ್ಯವಾಗಿ ಪರಿಗಣಿಸುತ್ತಾಳೆ. ಸಂಭಾವ್ಯ ತಂದೆಯಿಂದ (ಅಥವಾ ಸರ್ಕಾರಗಳಿಂದ ಶಿಶುಪಾಲನಾ ಸೌಲಭ್ಯಗಳ) ಸೂಕ್ತ ಭರವಸೆಗಳು ದೊರಕದಿದ್ದಲ್ಲಿ ಅವಳು ತಾಯಾಗುವುದನ್ನು ಮುಂದೂಡಬಹುದು. ಅಥವಾ ತನ್ನ ವೃತ್ತಿಯಲ್ಲಿ ಹೆಚ್ಚಿನ ಅವಕಾಶ ಪಡೆಯುವುದಕ್ಕಾಗಿ ತಾಯಿ ಆಗುವುದೇ ಬೇಡವೆಂದು ನಿರ್ಧರಿಸಬಹುದು. ಪುರುಷರು ತಾವು ನಿಷ್ಠಯೋಜಕರಲ್ಲ. ಒಳ್ಳೆಯ ತಂದೆ ಆಗಬಲ್ಲವರು ಎನ್ನುವ ವಿಶ್ವಾಸ ಮತ್ತು ಭರವಸೆಯನ್ನು ಮೂಡಿಸಬೇಕು. ಆಗಷ್ಟೇ ಮಹಿಳಾ ಕರ್ತೃತ್ವ ಶಕ್ತಿಯಲ್ಲಿ ಹೆಚ್ಚಳವಿದ್ದಾಗ್ಯೂ ಜನನ ದರದಲ್ಲಿ ಏರಿಕೆಯಾಗುತ್ತದೆ. ಮಹಿಳೆಯರ ಈ ಆದ್ಯತೆಗಳು ಪುರುಷರ ಆದ್ಯತೆಗಳೂ ಆಗದೇ ಹೋದಲ್ಲಿ, ಈ ಅಸಾಮರಸ್ಯದಿಂದ ಫಲವತ್ತತೆಯಲ್ಲಿ ಇನ್ನೂ ದೊಡ್ಡ ಮಟ್ಟದ ಇಳಿಕೆಯಾಗಬಹುದು.

ಅಮೇರಿಕಾ ಅಥವಾ ಎರಡನೆಯ ಮಹಾಯುದ್ಧದ ನಂತರ ಒಂದು ಹಂತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಿದ ಬೇರೆ ದೇಶಗಳಲ್ಲಿ, ಫಲವತ್ತತೆ ಇಳಿಕೆಗೆ ಹೆಂಗಸರ ಕರ್ತೃತ್ವಶಕ್ತಿಯಲ್ಲಿ ಆಗಿರುವ ಹೆಚ್ಚಳವೇ ಪ್ರಮುಖ ಕಾರಣ. ಜೊತೆಗೆ ಪುರುಷರು ಬದಲಾಗದೇ ಇರುವುದು ಈ ಪ್ರವೃತ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹಾಗೆಂದ ಮಾತ್ರಕ್ಕೆ ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಇದೇ ರೀತಿಯ ಬೆಳವಣಿಗೆಯಾಗಿದೆ ಎಂದರ್ಥವಲ್ಲ, ಅಮೇರಿಕೆಯಲ್ಲಿ ಜನನ ದರ ಕೆಲವು ಸಮಯದ ಹಿಂದೆ ಏಕಾಏಕಿ ಕುಸಿಯಿತು. ಅಲ್ಲಿ ಮಹಿಳೆಯರಿಗೆ ತಡವಾಗಿ ಮದುವೆಯಲು, ಹೆಚ್ಚಿನ ಶಿಕ್ಷಣ ಪಡೆಯಲು ಮತ್ತು ವಿವಾಹಕ್ಕೆ ಮೊದಲೇ ವೃತ್ತಿಯಲ್ಲಿ ಹೆಚ್ಚಿನ ಅನುಭವ ಪಡೆಯಲು ಹೆಂಗಸರಿಗೆ ಸಾಮರ್ಥ್ಯವಿತ್ತು. ಹಾಗಾಗಿ ಅವರಿಗೆ ಹೆಚ್ಚಿನ ಸ್ವಾಯತ್ತತೆ ಇತ್ತು. ಮತ್ತು ಹೆಚ್ಚಿನ ಆಯ್ಕೆಗಳಿಗೆ ಅವಕಾಶವಿತ್ತು.

ಜೊತೆಗೆ ಕಾಲೇಜು ಶಿಕ್ಷಣ ಪಡೆದ ಕಾರ್ಮಿಕರ ಆದಾಯದಲ್ಲೂ ಗಣನೀಯವಾಗಿ ಹೆಚ್ಚಳವಾಯಿತು. ಅದರಿಂದ ಮಹಿಳೆಯರ ಆಯ್ಕೆಗಳು ಹೆಚ್ಚು ಬೆಲೆಯಳ್ಳದ್ದಾದವು. ಈ ನಡುವೆ ನಂಬಿ, ಆತುಕೊಳ್ಳಬಲ್ಲ ಪುರುಷರ (ತಂದೆಯರ ಸಂಖ್ಯೆ, ನಿಷ್ಟ್ರಯೋಜಕ ಅಪ್ಪಂದಿರದ್ದಲ್ಲ) ಸಂಖ್ಯೆ ಪ್ರಾಯಶಃ ಹೆಚ್ಚಾಗಲಿಲ್ಲ. ಇದರಿಂದ ಹೆಚ್ಚು ಹೆಚ್ಚು ಶಿಕ್ಷಣ ಪಡೆದ ಹೆಂಗಸರಿಗೆ ಮಕ್ಕಳನ್ನು ಸಾಕುವುದರಿಂದ ಹೆಚ್ಚಿನ ಇತರ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ [the opportunity cost].

ಇನ್ನುಳಿದ ಪ್ರಕರಣಗಳಲ್ಲಿ, ಆರ್ಥಿಕ ಪ್ರಗತಿಯ ವೇಗ ಹಾಗೂ ಅದರ ಪರಿಣಾಮವಾಗಿ ವಿಭಿನ್ನ ತಲೆಮಾರುಗಳು ಮತ್ತು ಸ್ತ್ರೀ-ಪುರುಷರ ನಡುವೆ ತಲೆದೋರಿದ ಸಂಘರ್ಷಗಳಿಂದಾಗಿ ಜನನ ದರ ಕುಸಿಯುತ್ತಿದೆ ಎನ್ನಲಾಗಿದೆ. ಸ್ವತಃ ನಾನೇ ಅಭಿವೃದ್ಧಿ ಪಡಿಸಿರುವ ಮಾದರಿಯ ಪ್ರಕಾರ ತಲಾ ಆರ್ಥಿಕ ಪ್ರಗತಿಯ ವೇಗ ಹೆಚ್ಚಿದಷ್ಟೂ ಮಕ್ಕಳು ಬೇಕು ಅನ್ನೋ ವಿಷಯದಲ್ಲಿ ಗಂಡಸರ ಮತ್ತು ಹೆಣ್ಣುಮಕ್ಕಳ ಆಸೆಗಳು ಬೇರೆ ಬೇರೆ ಆಗುತ್ತಾ ಹೋಗುತ್ತವೆ. ಹೆಂಗಸರಿಗೆ ಹೋಲಿಸಿದರೆ ಪುರುಷರು ಹೆಚ್ಚಾಗಿ ಮಕ್ಕಳನ್ನು ಬಯಸುತ್ತಾರೆ. ಯುದ್ಧದ ನಂತರ ಆರ್ಥಿಕ ಸ್ಥಗಿತತೆ ಅನುಭವಿಸುತ್ತಿದ್ದ ದೇಶಗಳು 1950, 1960 ಮತ್ತು 1970ರಲ್ಲಿ ದಿಢೀರ್ ಆರ್ಥಿಕ ಪ್ರಗತಿಯನ್ನು ಸಾಧಿಸಿದವು. ಆ ಎಲ್ಲಾ ದೇಶಗಳಲ್ಲಿ ಫಲವತ್ತತೆಯು ದೊಡ್ಡ ಪ್ರಮಾಣದಲ್ಲಿ ಕುಸಿಯಿತು. ಯುದ್ಧದ ನಂತರ ಸ್ಥಿರವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಿದ ದೇಶಗಳಿಗೆ ಹೋಲಿಸಿದರೆ, ದಿಢೀರ್ ಆರ್ಥಿಕ ಪ್ರಗತಿ ಸಾಧಿಸಿದ ದೇಶಗಳಲ್ಲಿ ಫಲವತ್ತತೆ ಕುಸಿತದ ಪ್ರಮಾಣ ಹೆಚ್ಚಾಗಿತ್ತು.

ಇದಕ್ಕೆ ಕಾರಣವೇನೆಂದರೆ, ಆರ್ಥಿಕ ವಾಸ್ತವತೆಗಳ ಸಮಕ್ಕೆ ಹೆಜ್ಜೆ ಹಾಕಲು ಸಂಪ್ರದಾಯಗಳಲ್ಲಿ ಒಂದಿಷ್ಟು ಬದಲಾವಣೆ ಆಗಬೇಕು. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕು. ಆದರೆ ಅಭಿವೃದ್ಧಿ ತ್ವರಿತವಾಗಿ ಆದಾಗ ಇದಕ್ಕೆ ಸಮಯಾವಕಾಶವೇ ಇರುವುದಿಲ್ಲ. ಸಾಮಾನ್ಯವಾಗಿ ಪುರುಷರು ತಮ್ಮ ತಂದೆ ಮತ್ತು ತಾತಂದಿರ ಸಂಪ್ರದಾಯಗಳಿಗೆ ತುಂಬಾ ಅಂಟಿಕೊಂಡಿರುತ್ತಾರೆ. ಆದರೆ ಹೆಂಗಸರಿಗೆ ಅವುಗಳಿಂದ ಕಳಚಿಕೊಳ್ಳುವುದು ಹೆಚ್ಚು ಲಾಭದಾಯಕ. ಇದರರ್ಥ ಪುರುಷರು ಸ್ವಭಾವತಃ ಹೆಂಗಸರಿಗಿಂತ ಹೆಚ್ಚು ಸಂಪ್ರದಾಯಸ್ಥರು ಅಂತಲ್ಲ. ಬದಲಾಗಿ ಪುರುಷಪ್ರಧಾನ ಸಂಪ್ರದಾಯಗಳು ಗಂಡಸರಿಗೆ ಹೆಚ್ಚು ಲಾಭದಾಯಕವಾಗಿರುತ್ತವೆ. ಆದರೆ ಹೆಂಗಸರಿಗೆ ಲಿಂಗ ಸಮಾನತೆ ಹೆಚ್ಚು ಲಾಭದಾಯಕ, ಪ್ರಗತಿ ವೇಗವಾಗಿ ಆಗುತ್ತಿದ್ದಾಗ ಜನ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ವಲಸೆ ಬರುತ್ತಾರೆ. ಅಂತಹ ಸಂದರ್ಭಗಳಲ್ಲಿ ಹಳೆಯ ಸಂಪ್ರದಾಯಗಳಿಗೆ ಅಂಟಿಕೊಳ್ಳುವುದು ಗಂಡುಮಕ್ಕಳಿಗೆ ಹೆಚ್ಚು ಲಾಭದಾಯಕ. ಆದರೆ ಹೆಣ್ಣು ಮಕ್ಕಳಿಗೆ ಬದಲಾಗುತ್ತಿರುವ ಈಗಿನ ಕಾಲಕ್ಕೆ ತಕ್ಕ ಹಾಗೆ ಹೆಚ್ಚಿನ ಶಿಕ್ಷಣ ಪಡೆಯುವುದು ಮತ್ತು ಉದ್ಯೋಗ ಪಡೆದುಕೊಳ್ಳುವುದು ಹೆಚ್ಚು ಲಾಭದಾಯಕ.

ವಾಸ್ತವವಾಗಿ ಮನೆಯೊಳಗಿನ ಶ್ರಮವಿಭಜನೆ ಗಂಡುಮಕ್ಕಳಿಗೆ ಲಾಭದಾಯಕ ಎನ್ನುವುದು ತುಂಬಾ ಸ್ಪಷ್ಟ. ಈಗಿನ ಅಭಿವೃದ್ಧಿ ಹೊಂದಿರುವ ಮತ್ತು ತ್ವರಿತವಾಗಿ ಆಧುನೀಕರಣಗೊಂಡಿರುವ ದೇಶಗಳಲ್ಲಿ ಕುಟುಂಬದೊಳಗೆ ಹೆಂಗಸರಿಗೆ ಹೋಲಿಸಿದರೆ ಗಂಡಸರು ತುಂಬಾ ಕಡಿಮೆ ಮನೆಗೆಲಸ ಮಾಡುತ್ತಾರೆ ಮತ್ತು ಮಕ್ಕಳ ಲಾಲನೆಯಲ್ಲಿಯೂ ಅವರ ಪಾತ್ರ ತುಂಬಾ ಕಡಿಮೆ. ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಪುರುಷರು ಮನೆಗೆಲಸ ಮತ್ತು ಮಕ್ಕಳ ಪಾಲನೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಾರೆ.

ತೀರಾ ವಿಭಿನ್ನವಾಗಿರುವ ದೇಶಗಳಲ್ಲಿ ಮತ್ತು ಸಮಾಜಗಳಲ್ಲಿ ಫಲವತ್ತತೆ ಕ್ಷೀಣಿಸುತ್ತಿರುವುದರ ಹಿಂದೆ ಒಂದು ಸಮಾನ ಅಂಶ ಕೆಲಸ ಮಾಡುತ್ತಿದೆ ಎನ್ನುವುದನ್ನು ಇವೆಲ್ಲವೂ ಸೂಚಿಸುತ್ತಿವೆ. ಫಲವತ್ತತೆಯ ಕ್ಷೀಣಿಸುವಿಕೆ ಕೆಳಕಂಡ ಕೆಲವು ಅಂಶಗಳ ಜೊತೆ ನಿಕಟ ಸಂಬಂಧ ಹೊಂದಿದೆ. ಹೆಂಗಸರು ತಮ್ಮ ಇಷ್ಟದ ಹುಡುಗನನ್ನು, ತಮಗಿಷ್ಟ ಬಂದಾಗ ಮದುವೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವುದು. ಅವರಿಗೆ ತಮ್ಮ ಶಿಕ್ಷಣ ಮತ್ತು ಭವಿಷ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ತೊಡಗಿಸಿಕೊಳ್ಳಲು ಆಗಿರುವುದು. ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂತಾನೋತ್ಪತ್ತಿಯ ಸ್ವಾತಂತ್ರ್ಯ ಹೊಂದಿರುವುದು. ಹಾಗೆಯೇ ಸಮಾಜದಲ್ಲಿ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಉಂಟಾಗಿರುವ ಹೊಂದಾಣಿಕೆಯ ಕೊರತೆ. ಪರಸ್ಪರರಲ್ಲಿ ಭರವಸೆ ಹುಟ್ಟಿಸುವ ಬದ್ಧತೆ ಇಲ್ಲದಿರುವ ಸಮಸ್ಯೆ. ಹಾಗೂ ದೀರ್ಘಕಾಲ ಉಳಿಯುವಂತಹ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗದಿರುವುದು ಜನನ ದರಗಳು ಒಂದು ಸೂಕ್ತ ಮಟ್ಟಕ್ಕಿಂತ ಕಡಿಮೆ ಆಗಿರುವುದಕ್ಕೆ ಕೊಡುಗೆ ನೀಡಿವೆ.

ಒಟ್ಟಾರೆಯಾಗಿ ನೋಡಿದರೆ, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಮತ್ತು ಸಮಾಜಗಳಲ್ಲಿ ಈ ಜನನ ಪ್ರಮಾಣ ಕಡಿಮೆಯಾಗಿರುವುದಕ್ಕೆ ಒಂದು ಸಾಮಾನ್ಯ ಕಾರಣ ಇರುವಂತೆ ತೋರುತ್ತದೆ. ಈ ಬದಲಾವಣೆ ಪ್ರಾರಂಭವಾಗಿದ್ದು ಮಹಿಳೆಯರಿಗೆ ತಮಗೆ ಇಷ್ಟ ಬಂದವರನ್ನು ಮತ್ತು ಇಷ್ಟ ಬಂದಾಗ ಮದುವೆಯಾಗುವುದಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಮತ್ತು ಮಹಿಳೆಯರಿಗೆ ತಮ್ಮ ಶಿಕ್ಷಣ ಮತ್ತು ಭವಿಷ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ಕೊಡುವುದಕ್ಕೆ ಸಾಧ್ಯವಾದಾಗ ಮತ್ತು ತಮಗೆ ಯಾವಾಗ ಮಗು ಬೇಕು ಅನ್ನುವುದನ್ನು ನಿರ್ಧರಿಸುವ ಅಧಿಕಾರ ಅವರಿಗೆ ಸಿಕ್ಕಾಗ.

ಆದರೆ ಅದೇ ಸಮಯದಲ್ಲಿ, ಸಮಾಜದಲ್ಲಿ ಮತ್ತೆ ವೈಯಕ್ತಿಕ ಸಂಬಂಧಗಳಲ್ಲಿ ಸರಿಯಾದ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಒಬ್ಬರಿಗೊಬ್ಬರು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತಾರೆ ಅನ್ನುವ ವಿಶ್ವಾಸ ಕಡಿಮೆಯಾಗುತ್ತಿದೆ. ಮತ್ತೆ ಜವಾಬ್ದಾರಿಯನ್ನು ಪರಸ್ಪರ ಸಮಾನವಾಗಿ ಹಂಚಿಕೊಳ್ಳುವುದಕ್ಕೆ ಯಾವುದೇ ಗಟ್ಟಿಯಾದ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವುದು. ಇವೆಲ್ಲಾ ಸೇರಿಕೊಂಡು ಜನನ ದರ ಇರಬೇಕಾದ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

ಹಾಗಾದರೆ ಈಗೇನು ಮಾಡಬೇಕು? ಅಮೇರಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವಲಯದ ಮುಖ್ಯಸ್ಥರು ನೀಡಿರುವ ಹೇಳಿಕೆಗಳು, ಮತ್ತು ಇತ್ತೀಚಿನ ಸಮೀಕ್ಷೆಗಳು ಸೂಚಿಸುವ ಪ್ರಕಾರ ಈಗಿನ ಸಾಮಾಜಿಕ ನೀತಿ ನಿಯಮಗಳು ಲಿಂಗಸಮಾನತೆ ನೆಲೆಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡಿವೆ. ಈಗ ಅದನ್ನು ಹಿಮ್ಮೊಗವಾಗಿ ಬದಲಿಸಲು ಪ್ರಯತ್ನಿಸಿದರೆ ಈಗಾಗಲೆ ಸಮಾಜದಲ್ಲಿರುವ ಹೊಂದಾಣಿಕೆಯ ಸಮಸ್ಯೆಯನ್ನು ಇದು ಮತ್ತಷ್ಟು ತೀವ್ರಗೊಳಿಸಬಹುದು. ಜನನ ದರಗಳು ಮತ್ತಷ್ಟು ಕುಸಿಯುವಂತೆ ಆಗಬಹುದು.

ಸಂಭಾವ್ಯ ತಾಯಿಯರಲ್ಲಿ ಬೆಂಬಲದ ಭರವಸೆಯನ್ನು ಮೂಡಿಸುವುದಕ್ಕೆ ಬೇಕಾದ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳದೇ ಹೋದಲ್ಲಿ, ಹೆಚ್ಚಿನ ಮಹಿಳಾ ಸ್ವಾಯತ್ತತೆಯಿಂದ ಜನನ ದರಗಳು ಮತ್ತಷ್ಟು ಕುಸಿಯುತ್ತವೆ. ಸುದೈವವಶಾತ್, ಇದರರ್ಥ ಮಹಿಳೆಯರಿಗೆ ಬೇಕಾದ ಬೆಂಬಲ ಸಿಗುತ್ತದೆ ಎನ್ನುವ ಭರವಸೆ ಸಿಕ್ಕರೆ, ಮಹಿಳೆಯರಿಗೆ ಸ್ವಾಯತ್ತತೆ ಹೆಚ್ಚುವುದರಿಂದ ಜನನ ದರದಲ್ಲಿ ಏರಿಕೆಯೂ ಆಗುತ್ತದೆ. ಅಷ್ಟೇ ಅಲ್ಲ, ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳಾ ಉತ್ಪಾದಕತೆಯೂ ಹೆಚ್ಚಾಗುತ್ತದೆ ಮತ್ತು ಕುಟುಂಬಗಳಲ್ಲಿ ಹೆಚ್ಚಿನ ಸಮಾನತೆಯು ಸಾಧ್ಯವಾಗುತ್ತದೆ. ಸಂಸಾರಗಳು ಹೆಚ್ಚು ಸಂತೋಷದಿಂದ ಇರುತ್ತವೆ.

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

Copyright: Project Syndicate, 2026. www.project-syndicate.org

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...

16ನೇ ಹಣಕಾಸು ಆಯೋಗ -ನ್ಯೂನತೆಗಳು ಮತ್ತು ಆತಂಕಗಳು

ಹಿಂದಿನ ಆಯೋಗಗಳಿಗೆ ಹೋಲಿಸಿದರೆ 16ನೇ ಹಣಕಾಸು ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರವಿತ್ತು. ಅದಕ್ಕೆ...