ಕರ್ತವ್ಯದ ಸಮಯದಲ್ಲಿ ಮದ್ಯ ಪಾರ್ಟಿ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿದ್ದ 6 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಸೇರಿದಂತೆ ಒಟ್ಟು 9 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಮತ್ತು ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ.
ಅಮಾನತಾದ ಸಿಬ್ಬಂದಿ ಮತ್ತು ಅಧಿಕಾರಿಗಳು ಶುಕ್ರವಾರ ಸಂಜೆ ಕಚೇರಿ ವೇಳೆಯಲ್ಲೇ ಸಿದ್ದರಬೆಟ್ಟದ ತಪ್ಪಲಿನಲ್ಲಿ ಸಭೆ ಸೇರಿದ್ದರು. ಅಲ್ಲಿ ಅವರು ಮದ್ಯಪಾನ ಸೇವಿಸಿ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಅವರ ಪಾರ್ಟಿಯ ವೊಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭಾರೀ ವಿರೋಧವೂ ವ್ಯಕ್ತವಾಗಿತ್ತು.
ಈ ಬೆನ್ನಲ್ಲೇ, ಪಾರ್ಟಿಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ತಕ್ಷಣವೇ ಶೋ-ಕಾಸ್ ನೋಟಿಸ್ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತಾಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಬಳಿಕ, ಕ್ರಮ ಕೈಗೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಡಾ. ವಸಂತಿ ಅಮರ್ ಅವರು, 9 ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳು/ಸಿಬ್ಬಂದಿಗಳು;
- ಗಿರೀಶ್ – PDO, ಶಿವಗಂಗೆ ಗ್ರಾಮ ಪಂಚಾಯತ್
- ಹರೀಶ್ – PDO, ಅಗಳಕುಪ್ಪೆ ಗ್ರಾಮ ಪಂಚಾಯತ್
- ಪ್ರಶಾಂತ್ ಡಿ. – PDO, ಗೊಲ್ಲಹಳ್ಳಿ ಗ್ರಾಮ ಪಂಚಾಯತ್
- ಚಿರಂಜೀವಿ – PDO, ಮಣ್ಣೆ ಗ್ರಾಮ ಪಂಚಾಯತ್
- ರವಿಶಂಕರ್ – PDO, ಸೋಂಪುರ ಗ್ರಾಮ ಪಂಚಾಯತ್
- ದಿನೇಶ್ ಬಿ.ಎಂ. – PDO, ಬೆಟ್ಟಕೋಟೆ ಗ್ರಾಮ ಪಂಚಾಯತ್
- ಕೆಂಪರಂಗಯ್ಯ – ಗ್ರೇಡ್-1 ಕಾರ್ಯದರ್ಶಿ, ಅಗಳಕುಪ್ಪೆ ಗ್ರಾಮ ಪಂಚಾಯತ್
- ಗಂಗಾಧರ್ – ಗ್ರೇಡ್-2 ಕಾರ್ಯದರ್ಶಿ, ಬೂದಿಹಾಲ್ ಗ್ರಾಮ ಪಂಚಾಯತ್
- ಮಂಜುನಾಥ್ – ದ್ವಿತೀಯ ದರ್ಜೆ ಲೆಕ್ಕ ಸಹಾಯಕ, ಸೋಂಪುರ ಗ್ರಾಮ ಪಂಚಾಯತ್



