ಮುದ್ದಿಗಾಗಿ ಪುಂಗನೂರು ಹಸು ಸಾಕುತ್ತಿರುವ ಬೆಂಗಳೂರಿಗರು

Date:

ವಿಶ್ವದಲ್ಲೇ ಅತ್ಯಂತ ಚಿಕ್ಕ ಜಾನುವಾರು ತಳಿಗಳಲ್ಲಿ ಒಂದಾದ ಪುಂಗನೂರು ಹಸುಗಳನ್ನು ಹೈನುಗಾರಿಕೆಯ ಹೊರತಾಗಿಯೂ ಮುದ್ದಿಗಾಗಿ ಸಾಕುವ ಸಂಪ್ರದಾಯ ನಗರ ಜೀವನದಲ್ಲಿ ದಿನೇ ದಿನೆ ಹೆಚ್ಚುತ್ತಿದೆ.

- Advertisement -

ಇತ್ತೀಚೆಗೆ ಬೆಂಗಳೂರಿನಲ್ಲಿ ಉದ್ಯಮಿ ರಂಜಿತಾ ಅವರು ಪುಂಗನೂರು ಹಸುಗಳನ್ನು ಮನೆಯಲ್ಲಿ ಮುದ್ದಿಗಾಗಿ ಸಾಕಿ ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಅರುಣ್ ಕುಮಾರ್ ಎಂ ಅವರು ಹೆಬ್ಬಾಳದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಪುಂಗನೂರು ಹಸುಗಳನ್ನು ನಾಯಿ, ಬೆಕ್ಕುಗಳಂತೆ ಪ್ರೀತಿಗಾಗಿ ಸಾಕಿದ್ಕಿದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಒಂದೂವರೆ ವರ್ಷದ ಈ ಹಸುಗಳು ಮೊಣಕಾಲು ಎತ್ತರದಲ್ಲಿದ್ದು, ಇವುಗಳು ವಾಸಿಸಲು ಸುಸಜ್ಜಿತವಾದ ಕೋಣೆಯನ್ನು ನಿರ್ಮಿಸಿದ್ದಾರೆ. ಸ್ವಯಂ ಚಾಲಿತ ನೀರಿನ ಸಂಗ್ರಹ ತೊಟ್ಟಿ, ಫ್ಯಾನ್‌ ಮತ್ತು ಸೂಕ್ತ ವಿದ್ಯುತ್‌ ಬೆಳಕಿನ ವ್ಯವಸ್ಥೆ ಸಹ ಮಾಡಿದ್ದಾರೆ.

ಅರುಣ್ ಕುಮಾರ್ ಅವರು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದು, ಅವು ಮನೆಗೆ ಆರೋಗ್ಯ ಮತ್ತು ಸಮೃದ್ಧಿ ತರುತ್ತವೆ ಎನ್ನುವ ನಂಬಿಕೆಯಲ್ಲಿ ಪುಂಗನೂರು ಹಸುಗಳನ್ನುಸಾಕಿದ್ದಾರೆ. ಇದರಲ್ಲಿ ಒಂದು ಗಂಡು ಮತ್ತು ಹೆಣ್ಣು ಇದೆ. ಇವರ ಮನೆಯಲ್ಲಿ ಮುದ್ದು ನಾಯಿಗಳು ಸಹ ಇವೆ. ಅವರ ಮಕ್ಕಳು ಹಸುಗಳ ಜೊತೆ ಆಟವಾಡುವುದು ಕಂಡು ಹಸು ಸಾಕಿದ್ದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ. ಹುಲ್ಲು, ಪುಡಿಮಾಡಿದ ಜೋಳ ಹಾಗೂ ನೆಲಗಡಲೆ ಸಿಪ್ಪೆಗಳನ್ನು ಹಸುಗಳಿಗೆ ಆಹಾರವಾಗಿ ಕೊಡುತ್ತಿದ್ದಾರೆ.

ತೇಜಸ್ವಿ 3

ಗೌರಿ ಮತ್ತು ಶಂಕರ ಎಂದು ಹೆಸರಿಟ್ಟಿರುವ ಈ ಹಸುಗಳನ್ನು ಆಂಧ್ರಪ್ರದೇಶದದಿಂದ ಅರುಣ್‌ ಕುಮಾರ್‌ ಖರೀದಿಸಿ ತಂದಿದ್ದಾರೆ. ಬೆಂಗಳೂರಿನ ಅನಿರುದ್ಧ ರವೀಂದ್ರ, ತೇಜಸ್ವಿ ಸೂರ್ಯ ಅವರು ಪುಂಗನೂರು ಹಸುಗಳನ್ನು ಸ್ವಾಗತಿಸಿಕೊಂಡಿರುವ ವಿಡಿಯೋ ಜನಪ್ರಿಯತೆ ಗಳಿಸಿದ ನಂತರ ಬೆಂಗಳೂರಿನ ಹೆಚ್ಚಿನ ನಿವಾಸಿಗಳು ಪುಂಗನೂರು ಹಸು ಖರೀದಿಗೆ ಮುಂದೆ ಬರುತ್ತಿದ್ದಾರೆ.

ಗಿಡ್ಡ ತಳಿಯ ಹಸುಗಳನ್ನು ಮನೆಯಲ್ಲಿ, ಫ್ಲಾಟ್‌ಗಳಲ್ಲಿಯೂ ಸಾಕುವುದರಲ್ಲಿ ಯಾವುದೇ ಹಾನಿ ಇಲ್ಲ. ಗಾಳಿ, ಶುದ್ಧ ಕುಡಿಯುವ ನೀರು ಮತ್ತು ಆರೋಗ್ಯಕರ ವಾಸಸ್ಥಳದ ಪ್ರವೇಶ ಉತ್ತಮವಾಗಿರಬೇಕು. ನಾಯಿಗಳಂತೆ ಅವುಗಳಿಗೆ ತರಬೇತಿ ನೀಡಬಹುದು ಎನ್ನುತ್ತಾರೆ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ವಸಂತ್ ಶೆಟ್ಟಿ.

ರಂಜಿತಾ

“ಪುಂಗನೂರು ಹಸು ಭಾರತದ ಅಪರೂಪದ ಮತ್ತು ಪ್ರಾಚೀನ ತಳಿಯ ಹಸುವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಈ ಹಸುವಿನ ಮೂಲವಾಗಿದ್ದು, ಕೇವಲ ಇರಡುವರೆ ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಈ ಕುಬ್ಜ ಹಸುಗಳನ್ನು ಮನೆಯೊಳಗೂ ಸಾಕಬಹುದು. ಈ ಹಸುಗಳನ್ನು ಮನೆಯಲ್ಲಿ ಸಾಕೋದು ಹಾಗೂ ನಿರ್ವಹಣೆ ತುಂಬಾನೇ ಸುಲಭ” ಎಂದು ಪುಂಗನೂರು ಹಸು ಸಾಕಿದ ಉದ್ಯಮಿ ರಂಜಿತಾ ಹೇಳುವ ಮಾತಿದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿನಸಿ ಬೆಲೆ ಏರಿಕೆ ಬರೆ; ಗ್ರಾಮೀಣ ಕುಟುಂಬಗಳ ಬಜೆಟ್‌ಗೆ ಕತ್ತರಿ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲದ ಬೆಲೆ ಏರಿಕೆಯ...

KPSC ಅಕ್ರಮ | ಫೋನ್ ಟ್ಯಾಪಿಂಗ್ ಆರೋಪದ ನೆರಳು; ಹೈಕೋರ್ಟ್ ಎಸ್‌ಐಟಿ ತಂಡಕ್ಕೆ ಸುಪ್ರೀಂ ಬ್ರೇಕ್

ಕರ್ನಾಟಕ ಲೋಕಸೇವಾ ಆಯೋಗದ (KPSC) ಗಂಭೀರ ಅಕ್ರಮ ಮತ್ತು ಭ್ರಷ್ಟಾಚಾರ ಪ್ರಕರಣಗಳ...

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ವಿಡಿಯೋ: ಇಬ್ಬರು ಪೊಲೀಸ್ ವಶಕ್ಕೆ

ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಉದ್ದೇಶದಿಂದ...