ಹೊಸ ಬಸ್‌ ಖರೀದಿ ಬದಲಾಗಿ ಹಳೆ ಬಸ್‌ ನವೀಕರಣಕ್ಕೆ ಮುಂದಾದ ಕೆಎಸ್‌ಆರ್‌ಟಿಸಿ

Date:

  • ಬಹುತೇಕ ಸ್ಕ್ರ್ಯಾಪ್ ಆಗಿರುವ ಬಸ್‌ನ ನವೀಕರಣಕ್ಕೆ ಸುಮಾರು ₹3 ಲಕ್ಷ ವೆಚ್ಚ
  • ನವೀಕರಣಕ್ಕಾಗಿ ಸುಮಾರು 1,000 ಬಸ್‌ಗಳನ್ನು ಗುರುತಿಸಿದ ನಿಗಮದ ಎಂಡಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರಾಜ್ಯಾದ್ಯಂತ ತನ್ನ ಎಲ್ಲ ವಿಭಾಗೀಯ ಡಿಪೋಗಳು ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳನ್ನು ನವೀಕರಿಸಲು ಪ್ರಾರಂಭಿಸಿದೆ.

- Advertisement -

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಗಮವು ಆರ್ಥಿಕ ಹೊಡೆತದಿಂದ ಕಂಗೆಟ್ಟಿತ್ತು. ಆರ್ಥಿಕವಾಗಿ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ, ಹೊಸ ಬಸ್‌ಗಳನ್ನು ಖರೀದಿ ಮಾಡುವ ಬದಲಾಗಿ ಹಳೆಯ ಬಸ್‌ಗಳನ್ನು ನವೀಕರಣ ಮಾಡಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮುಂದಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಹೊಸ ಬಸ್‌ಗಳನ್ನು ಖರೀದಿಸುವ ಬದಲು ಹಳೆಯ ಬಸ್‌ಗಳನ್ನು ನವೀಕರಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಹೊಸ ಬಸ್‌ಗೆ ಸುಮಾರು ₹40 ಲಕ್ಷ ವೆಚ್ಚವಾಗಲಿದ್ದು, ಬಹುತೇಕ ಸ್ಕ್ರ್ಯಾಪ್ ಆಗಿರುವ ಬಸ್‌ನ ನವೀಕರಣಕ್ಕೆ ಸುಮಾರು ₹3 ಲಕ್ಷ ವೆಚ್ಚವಾಗುತ್ತದೆ” ಎಂದು ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿದ್ದಾರೆ.

“ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಎಲ್ಲ ಸರ್ಕಾರಿ ವಾಹನಗಳು 15 ವರ್ಷಗಳವರೆಗೆ ಬಳಕೆಗೆ ಅನುಮತಿ ಇದೆ. ನವೀಕರಣಕ್ಕಾಗಿ ಆಯ್ಕೆ ಮಾಡಿದ ಬಸ್‌ಗಳು ಸುಮಾರು 11-12 ವರ್ಷಗಳಷ್ಟು ಹಳೆಯವು. ಆದರೆ, ಹೆಚ್ಚಿನ ಬಳಕೆಯಿಂದಾಗಿ ಸ್ಕ್ರ್ಯಾಪ್ ಆಗುವ ಅಂಚಿನಲ್ಲಿದ್ದವು. ಉಳಿದ 3-4 ವರ್ಷಗಳವರೆಗೆ ನಾವು ಆ ಬಸ್‌ಗಳನ್ನು ಬಳಸಲಿದ್ದೇವೆ. ಈ ಬಸ್‌ಗಳು ಸಂಪೂರ್ಣ ಗುಜರಿಗೆ ತಲುಪುವ ವೇಳೆ, ಇಂತಹ ಮತ್ತಷ್ಟು ಹೆಚ್ಚಿನ ಬಸ್‌ಗಳು ನವೀಕರಣಕ್ಕಾಗಿ ಸಿದ್ಧವಾಗಿರುತ್ತವೆ” ಎಂದು ಹೇಳಿದರು.

“ಕೆಎಸ್‌ಆರ್‌ಟಿಸಿ ಬಳಿ ಇರುವ 8,100 ಬಸ್‌ಗಳಲ್ಲಿ ಸುಮಾರು ಬಸ್‌ಗಳು ತಲಾ 10 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಕ್ರಮಿಸಿದ್ದು, ಓಡಾಟದ ಅಂತ್ಯವನ್ನು ಸಮೀಪಿಸುತ್ತಿವೆ. ನಿಗಮದ ಮುಖ್ಯಸ್ಥರು ನವೀಕರಣಕ್ಕಾಗಿ ಸುಮಾರು 1,000 ಬಸ್‌ಗಳನ್ನು ಗುರುತಿಸಿದ್ದಾರೆ. ಕಳೆದ ಜುಲೈ-ಆಗಸ್ಟ್‌ನಲ್ಲಿ ಕೆಲಸ ಪ್ರಾರಂಭಿಸಿದ ನಂತರ, ನಿಗಮದ 494 ಬಸ್‌ಗಳನ್ನು ಯಶಸ್ವಿಯಾಗಿ ನವೀಕರಿಸಿದೆ” ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮರಗಳ ಸುತ್ತ ಕಾಂಕ್ರಿಟೀಕರಣ ; ಹೆಚ್ಚಿನ ಅಪಘಾತಗಳಿಗೆ ಕಾರಣವಾಗಬಹುದು ಎಂದ ತಜ್ಞರು

“ನಾವು ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲ ಭಾಗಗಳನ್ನು ಹೊರತೆಗೆಯುತ್ತೇವೆ. ಬಸ್‌ನ ಎಲ್ಲ ಭಾಗಗಳನ್ನು ಬಿಚ್ಚಿ ಮತ್ತೆ ಜೋಡಿಸುತ್ತೇವೆ. ಪ್ಯಾನೆಲಿಂಗ್ ಕೆಲಸ ಮುಗಿದಿದೆ. ಬಸ್‌ನ ಹೊರಭಾಗಕ್ಕೆ ಹೊಸ ಲೋಹದ ಹಾಳೆಗಳನ್ನು ಬಳಸಲಾಗುತ್ತದೆ. ಕಿಟಕಿಗಳು ಮತ್ತು ವಿಂಡ್‌ಶೀಲ್ಡ್‌ಗಳ ಮೇಲಿನ ಗ್ಲಾಸ್‌ಗಳನ್ನು ಬದಲಾಯಿಸಲಾಗುತ್ತದೆ. ಸೀಟ್ ಕುಶನ್‌ಗಳು ಮತ್ತು ಡ್ರೆಸಿಂಗ್‌ಗಳನ್ನು ಹೊಸ ಕೋಟ್‌ನೊಂದಿಗೆ ಪುನಃ ಮಾಡಲಾಗುತ್ತದೆ. ಎಂಜಿನ್ ಹದಗೆಟ್ಟಿದ್ದರೆ ಅದನ್ನು ನವೀಕರಿಸುವ ಸಾಮಥ್ಯವನ್ನು ಎಂಜಿನಿಯರ್‌ಗಳು ಹೊಂದಿದ್ದಾರೆ”ಎಂದು ಕೆಎಸ್‌ಆರ್‌ಟಿಸಿಯ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದರು.

“ಸುಮಾರು 15 ಡಿಪೋಗಳು ಮತ್ತು ಎರಡು ಪ್ರಾದೇಶಿಕ ಕಾರ್ಯಾಗಾರಗಳು ಈ ಕೆಲಸದಲ್ಲಿ ತೊಡಗಿವೆ. ನವೀಕರಣ ಕಾರ್ಯಕ್ರಮವು ಪ್ರಾರಂಭವಾದಾಗಿನಿಂದ ಕಾರ್ಯಾಗಾರಗಳು ತಿಂಗಳಿಗೆ ಸುಮಾರು 50 ಬಸ್‌ಗಳನ್ನು ಸಾಮೂಹಿಕವಾಗಿ ನವೀಕರಣಗೊಳಿಸುತ್ತಿವೆ. 494 ಬಸ್‌ಗಳ ನವೀಕರಣ ಪೂರ್ಣಗೊಂಡಿದ್ದು, ಇನ್ನೂ 500 ಬಸ್‌ಗಳು ನವೀಕರಣಕ್ಕಾಗಿ ಸಾಲಿನಲ್ಲಿವೆ” ಎಂದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಡ್ರೋನ್ ಪ್ರತಾಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು:‌ ಹೈಕೋರ್ಟ್ ಹೇಳಿದ್ದೇನು?

ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...