ಈ ದಿನ ಫ್ಲ್ಯಾಶ್‌‌‌

ನೆಹರೂ ದಾಖಲೆ ಮುರಿದ ಮೋದಿ; ಅರ್ಧ ಸತ್ಯ ಹೇಳುವ ಬಿಜೆಪಿ: ಬಿಕೆ ಹರಿಪ್ರಸಾದ್

ಅಧಿಕಾರಾವಧಿ ವಿಷಯದಲ್ಲಿ ಜವಹರಲಾಲ್ ನೆಹರೂ ಅವರ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುರಿದಿದ್ದಾರೆ ಎಂದು ಬಿಜೆಪಿ ಅರ್ಧ ಸತ್ಯ ಹೇಳುತ್ತಿದೆ. ಈ ಮೂಲಕ ಬಿಜೆಪಿ ಇತಿಹಾಸವನ್ನೇ ತಿರುಚಲು ಹತಾಶೆಯ ಪ್ರಯತ್ನ ಮಾಡುತ್ತಿದೆ...

ಪದೇ ಪದೇ ಮಾನಸಿಕ ತಪಾಸಣೆ ನಡೆಸಿ ಮಕ್ಕಳಿಗೆ ಮತ್ತಷ್ಟು ಹಿಂಸೆ ನೀಡಬೇಡಿ: ಸುಪ್ರೀಂ

ಪೋಷಕರ ನಡುವಿನ ವಿಚ್ಛೇದನ, ಮಗುವಿನ ಪಾಲನೆ (Custody) ಮತ್ತು ಸಂದರ್ಶನ ಹಕ್ಕುಗಳ ವಿವಾದಗಳಲ್ಲಿ ಸಿಲುಕುವ ಮಕ್ಕಳಿಗೆ ಪದೇ ಪದೇ ಮಾನಸಿಕ ತಪಾಸಣೆ (Psychological Assessment) ನಡೆಸುವ ಅಗತ್ಯವಿಲ್ಲ. ಮಗುವಿನ ಜೀವನದಲ್ಲಿ "ಕನಿಷ್ಠ ಹಸ್ತಕ್ಷೇಪ"...

ಜೂನ್‌ 13ರಿಂದ SIR ವಿರೋಧಿ ಜನಜಾಗೃತಿ ಜಾಥಾ; 20ರಂದು ಪ್ರತಿರೋಧ ಸಮಾವೇಶ

ರಾಜ್ಯ ಚುನಾವಣಾ ಆಯೋಗ ಎಸ್‌ಐಆರ್‌ಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಎಸ್‌ಐಆರ್ ವಿರೋಧಿ ಒಕ್ಕೂಟ ಹಾಗೂ ಎದ್ದೇಳು ಕರ್ನಾಟಕದ ವತಿಯಿಂದ ಜೂ.13ರಿಂದ ಜೂ.18ರವರೆಗೆ ರಾಜ್ಯದಾದ್ಯಂತ ಜನಜಾಗೃತಿ ಜಾಥಾ...

ನ್ಯಾಯಾಂಗ – ಕಾರ್ಯಾಂಗದ ‘ಲಂಡನ್ ಮೈತ್ರಿ’: ನ್ಯಾಯಾಧೀಶರ ನೀತಿಸಂಹಿತೆ ಗಾಳಿಗೆ ತೂರಲಾಯಿತೇ?

ಖಾಸಗಿ ನೆಲೆಯಲ್ಲಿ ಸಚಿವರು ಹಾಗೂ ನ್ಯಾಯಮೂರ್ತಿಗಳು ಪರಸ್ಪರ ಒಳ್ಳೆಯ ಸ್ನೇಹಿತರಾಗಿರಬಹುದು. ಆದರೆ ಸಾರ್ವಜನಿಕವಾಗಿ ಅವರು ವಹಿಸುವ ಸಾಂವಿಧಾನಿಕ ಹುದ್ದೆಗಳು ಅಂತಹ ಆಪ್ತತೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕುತ್ತವೆ. ಸರ್ಕಾರದ ನೇರ ಪ್ರಾಯೋಜಕತ್ವದಲ್ಲಿ ನಡೆಯುವ ಯಾವುದೇ...

‘ಅಭಿಷೇಕ್ ಅಥವಾ ನಾನು, ಇಬ್ಬರಲ್ಲಿ ಒಬ್ಬರನ್ನು ಆರಿಸಿ’: ಮಮತಾಗೆ ಕಲ್ಯಾಣ್ ಸಂದೇಶ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಎದುರಾದ ಚುನಾವಣಾ ಹಿನ್ನಡೆಯ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗ ಹಾಗೂ ಹಿರಿಯ ಸಂಸದ...

ಸರ್ಕಾರಗಳ ದಿವ್ಯ ನಿರ್ಲಕ್ಷ್ಯ: ಪಾಳುಬಿದ್ದ ಐತಿಹಾಸಿಕ ʼಮುದಗಲ್ ಕೋಟೆʼ!

ಭವ್ಯವಾದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಅಚ್ಚಳಿಯದ ಕುರುಹಾಗಿ ಇಂದಿಗೂ ನಿಂತಿದೆ ಈ ಮುದಗಲ್‌ ಕೋಟೆ. ಈ ವೈಭವೋಪೇತ ಇತಿಹಾಸವನ್ನು ಹೊಂದಿರುವ, ಹಿಂದೂ-ಮುಸ್ಲಿಮರ ಭಾವನಾತ್ಮಕ ಸಂಬಂಧದ ಬೆಸುಗೆಯಾಗಿರುವ ಮುದಗಲ್ ಕೋಟೆ ಇಂದು ಪುರಸಭೆಯ...

ಕೊಪ್ಪಳ: ಕಳೆದ 3 ತಿಂಗಳಿನಿಂದ ಕುಡಿವ ನೀರಿಗಾಗಿ ಹಾಹಾಕಾರ

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ನಿಟ್ಟಾಲಿ ಗ್ರಾಮದ ಕಾಲೋನಿಯಲ್ಲಿ ಕಳೆದ ಎರಡು-ಮೂರು ತಿಂಗಳುಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಡೀ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ, ಆದರೆ ಗ್ರಾಮದ ಡಾ....

ಕಾಡುಕೂಸುಗಳ ಅಸ್ಮಿತೆಯ ಸಂಕೇತ ‘ಧರ್ತಿ ಆಬಾ’ ಬಿರ್ಸಾ ಮುಂಡಾ…

ಇಪ್ಪತ್ತೈದರ ಹರೆಯದಲ್ಲೇ ಇಡೀ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನ ನಡುಗಿಸಿದ ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ಬಲಿದಾನ ವ್ಯರ್ಥವಾಗಲಿಲ್ಲ. ಅವರ ತೀವ್ರ ಪ್ರತಿರೋಧಕ್ಕೆ ಹೆದರಿದ ಬ್ರಿಟಿಷ್ ಸರ್ಕಾರ, ಆದಿವಾಸಿಗಳ ಆಕ್ರೋಶ ತಣಿಸಲು 1908ರಲ್ಲಿ 'ಛೋಟಾನಾಗ್‌ಪುರ...

ಗೃಹಿಣಿಯರಿನ್ನು ‘ರಾಷ್ಟ್ರ ನಿರ್ಮಾಪಕರು’ – ಪರಿಹಾರ ಹಕ್ಕು ವಿಸ್ತರಿಸಿದ ಸುಪ್ರೀಂ ಕೋರ್ಟ್

ಗೃಹಿಣಿಯರ (Homemakers) ನಿರಂತರ ಮತ್ತು ಅಮೂಲ್ಯವಾದ ಶ್ರಮವನ್ನು ಗೌರವಿಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಮನೆಯನ್ನು ಮುನ್ನಡೆಸುವ ಮಹಿಳೆಯರನ್ನು ಕೇವಲ 'ಗೃಹಿಣಿ' ಎನ್ನುವ ಬದಲು 'ರಾಷ್ಟ್ರ ನಿರ್ಮಾಪಕರು' ಎಂದು ಕರೆಯುವುದು ಸೂಕ್ತ...

ಬೆಳಗಾವಿ | ರೈತನ ಮೇಲೆ ಕರಡಿ ದಾಳಿ : ಗಂಭೀರ ಗಾಯ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಸಮೀಪದ ಹುಳಂದ ಗ್ರಾಮದಲ್ಲಿ ಕರಡಿ ದಾಳಿಗೆ ಯುವ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಹುಳಂದ ಗ್ರಾಮದ ನಿವಾಸಿ ಮಹೇಶ್ ಗಾವಡೆ (25) ಗಾಯಗೊಂಡ ರೈತ. ಅವರು...

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ ಮೂವರು, ಬಿಜೆಪಿ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆ

ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಪವನ್ ಖೇರಾ, ಮನ್ಸೂರ್ ಅಲಿ...

ಬಸವನ ಬಾಗೇವಾಡಿ | ಟಕ್ಕಳಿಕಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅರ್ಜಿ ದಿನಾಂಕ ವಿಸ್ತರಣೆ

ಬಸವನ ಬಾಗೇವಾಡಿ ತಾಲ್ಲೂಕಿನ ಟಕ್ಕಳಿಕಿ ಸರ್ಕಾರಿ ಪಾಲಿಟೆಕ್ಟಿಕ್ ಸಂಸ್ಥೆಯ 2026- 2027 ನೇ ಸಾಲಿನ ಡಿಪ್ಲೋಮಾ ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ನಟರಾಜ್ ಕುಂಟೋಜಿ ಪ್ರಕಟಣೆಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ