ನೆಹರೂ ದಾಖಲೆ ಮುರಿದ ಮೋದಿ; ಅರ್ಧ ಸತ್ಯ ಹೇಳುವ ಬಿಜೆಪಿ: ಬಿಕೆ ಹರಿಪ್ರಸಾದ್

Date:

ಅಧಿಕಾರಾವಧಿ ವಿಷಯದಲ್ಲಿ ಜವಹರಲಾಲ್ ನೆಹರೂ ಅವರ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುರಿದಿದ್ದಾರೆ ಎಂದು ಬಿಜೆಪಿ ಅರ್ಧ ಸತ್ಯ ಹೇಳುತ್ತಿದೆ. ಈ ಮೂಲಕ ಬಿಜೆಪಿ ಇತಿಹಾಸವನ್ನೇ ತಿರುಚಲು ಹತಾಶೆಯ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ದೇಶದ ಪ್ರಥಮ ಪ್ರಧಾನಿ ನೆಹರೂ ಏರಿದ ಸ್ಥಾನವನ್ನು ಏರಲು ಸಾಧ್ಯವೂ ಇಲ್ಲ, ನೆಹರೂ ಅವರು ಇಳಿದ ಜ್ಞಾನದ ಆಳಕ್ಕೆ ಇಳಿಯಲೂ ಸಾಧ್ಯವಿಲ್ಲ. ಬಿಜೆಪಿ ಅವರು ಇತಿಹಾಸವನ್ನು ತಿರುಚಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಇದನ್ನು ಓದಿದ್ದೀರಾ? ನೆಹರೂ ದಾಖಲೆ ಮುರಿದ ಮೋದಿ: ದೇಶ ಮುನ್ನಡೆಯಿತೋ, ಹಿಂದಕ್ಕೆ ಹೋಯಿತೋ?

“ಪಂಡಿತ್ ನೆಹರೂ ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ ಎಂದು ಅರ್ಧ ಸತ್ಯವನ್ನು ಹೇಳುವ ಮೂಲಕ ಇತಿಹಾಸವನ್ನೇ ತಿರುಚಲು ಬಿಜೆಪಿ ಹತಾಶೆ ಪ್ರಯತ್ನ ನಡೆಸಿದೆ. ನೆಹರೂ ಅವರು ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಕಾಲಾವಧಿ 16 ವರ್ಷ, 286 ದಿನಗಳು, ಈಗಿನ ಪ್ರಧಾನಿಗಳ ಆಡಳಿತಾವಧಿ ಕೇವಲ 12 ವರ್ಷ ಮಾತ್ರ…! ಬಿಜೆಪಿ ಯಾವ ದಾಖಲೆಯ ಬಗ್ಗೆ ಮಾತಾಡುತ್ತಿದೆ” ಎಂದು ಪ್ರಶ್ನಿಸಿದ್ದಾರೆ.

“ನೆಹರೂ ಅವರು 1952ರ ಚುನಾವಣೆಯ ನಂತರವೇ ಪ್ರಧಾನಮಂತ್ರಿಯಾದರು ಎಂದು ಬಿಜೆಪಿ ಹೊಸ ಇತಿಹಾಸವನ್ನು ಬರೆಯಲು ಹೊರಟಿದೆ. ಹಾಗಿದ್ದರೆ 1947ರಿಂದ 1950ರವರೆಗೆ ಸರ್ಧಾರ್ ಪಟೇಲ್ ಅವರು ಉಪಪ್ರಧಾನಿ ಮತ್ತು ಗೃಹಮಂತ್ರಿಯಾಗಿದ್ದನ್ನೂ ಬಿಜೆಪಿ ಪಕ್ಷ ನಿರಾಕರಿಸುತ್ತಿದೆಯೇ? ಅಥವಾ ನೆಹರೂ ಅವರಂತೆ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸಿದ ಪಟೇಲ್ ಅವರನ್ನೂ ಅವಮಾನಿಸುತ್ತಿದೆಯೇ” ಎಂದು ಕೇಳಿದ್ದಾರೆ.

“ಸ್ವಾತಂತ್ರ್ಯ ಬಂದ ದಿನದಿಂದಲೇ ದೇಶಕ್ಕೆ ಸರ್ಕಾರವಿತ್ತು, ಸಚಿವ ಸಂಪುಟವಿತ್ತು, ಪ್ರಧಾನಮಂತ್ರಿಯೂ ಇದ್ದರೂ ಎಂಬುದು ಶಾಲಾ ಮಕ್ಕಳಿಗೂ ಗೊತ್ತಿರುವ ಇತಿಹಾಸ. ಆದರೆ ದೇಶದ ದುರಂತವೇನೆಂದರೆ, ಇತಿಹಾಸವನ್ನು ಅಧ್ಯಯನ ಮಾಡದವರು, ಇತಿಹಾಸವನ್ನು ಅಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ಹಾಸ್ಯಾಸ್ಪದ” ಎಂದು ಟೀಕಿಸಿದ್ದಾರೆ.

“ನೆಹರೂ ಅವರ ಆಡಾಳಿತಾವಧಿ ದಿನಗಳನ್ನು ನರೇಂದ್ರ ಮೋದಿಯ ಜೊತೆಗೆ ತಾಳೆ ಮಾಡುತ್ತಿರುವ ಬಿಜೆಪಿ ಪಕ್ಷ, ನೆಹರೂ ಅವರು ಜೈಲಲ್ಲಿ ಕಳೆದ ಬರೋಬ್ಬರಿ 9 ವರ್ಷಗಳು, ಅಂದರೆ ಸುಮಾರು 3,259 ದಿನಗಳನ್ನು ಯಾರೊಂದಿಗೆ ಹೋಲಿಕೆ ಮಾಡುತ್ತೀರಿ? ನರೇಂದ್ರ ಮೋದಿ ಬಿಟ್ಟು ಬಿಡಿ ಇಡೀ ಸಂಘಪರಿವಾರದಲ್ಲೇ ನೆಹರೂ ಅವರಂತೆ ಜೈಲುವಾಸ ಅನುಭವಿಸಿದ ಒಬ್ಬ ವ್ಯಕ್ತಿಯನ್ನು ತೋರಿಸಲು ಸಾಧ್ಯವೇ” ಎಂದು ಪ್ರಶ್ನಿಸಿದ್ದಾರೆ.

“ದೇಶ ವಿಭಜನೆಯಿಂದ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ, ಕೈಗಾರಿಕೆಗಳ ಕೊರತೆ ಹಾಗೂ ದುರ್ಬಲ ಆರ್ಥಿಕ ವ್ಯವಸ್ಥೆ ಭಾರತವನ್ನು ವೈಜ್ಞಾನಿಕ ತಳಹದಿಯ ಮೇಲೆ ಸಂವಿಧಾನ ಪ್ರಜಾಪ್ರಭುತ್ವ, ಸಮಾಜವಾದದ ಅಡಿಪಾಯಗಳೊಂದಿಗೆ ನವ ಭಾರತ ನಿರ್ಮಾಣ ಮಾಡಿದ ನೆಹರೂ ಅವರಿಗೆ ಸರಿಸಾಟಿಯಾಗಲು ಸಾಧ್ಯವೇ? ದೇಶ ಕಟ್ಟಿದವರಿಗೂ, ದೇಶ ಮಾರುತ್ತಿರುವವರಿಗೂ ಎತ್ತಿಂದೆತ್ತಣ ಸಂಬಂಧ. ಇತಿಹಾಸವನ್ನು ಕೊಲ್ಲುವವರು ಭವಿಷ್ಯವನ್ನು ಕಟ್ಟಲಾರರು. ಸುಳ್ಳಿನ ವಿಜಯೋತ್ಸವಗಳು ಕ್ಷಣಿಕವಾಗಿರಬಹುದು; ಆದರೆ ಸತ್ಯದ ಮುಂದೆ ಅವುಗಳ ಆಯುಷ್ಯ ಅತ್ಯಂತ ಕಡಿಮೆ” ಎಂದು ಹರಿಪ್ರಸಾದ್ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದ ರಾಜಕೀಯ ಇತಿಹಾಸದಲ್ಲಿ ಸುದೀರ್ಘಾವಧಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿದೆ. ಅಂದರೆ ಒಟ್ಟು 6,130 ದಿನಗಳು. ಆದರೆ ಚುನಾಯಿತ ಸಂಸತ್ತಿನ ಅಡಿಯಲ್ಲಿ ನಿರಂತರವಾಗಿ ಆಡಳಿತ ನಡೆಸಿದ ದಿನಗಳ ಆಧಾರದಲ್ಲಿ ನೆಹರೂ ಅಧಿಕಾರಾವಧಿ ಸುಮಾರು 4,398 ದಿನಗಳು. ಈ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುರಿದಿದ್ದಾರೆ. ಪ್ರಧಾನಿ ಮೋದಿ ಜೂನ್ 10ರ ವೇಳೆಗೆ 4,399 ದಿನಗಳ ಅಧಿಕಾರಾವಧಿ ಪೂರೈಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಏಷ್ಯಾ ಸಂಘರ್ಷ: 14 ನಾವಿಕರು ಸೇರಿ 22 ಭಾರತೀಯರ ಸಾವು: ಕೇಂದ್ರ ಮಾಹಿತಿ

​ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 14 ನಾವಿಕರು ಸೇರಿದಂತೆ 22 ಜನ...

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...