ಈ ದಿನ ಫ್ಲ್ಯಾಶ್‌‌‌

ಬೀದರ್‌ | ಗುಡುಗು ಸಹಿತ ಮಳೆ : ಸಿಡಿಲು ಬಡಿದು ಇಬ್ಬರು ಯುವಕರ ಸಾವು

ಬೀದರ್‌ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದ್ದು, ಜಮೀನಿಗೆ ತೆರಳಿದ ವೇಳೆ ಸಿಡಿಲು ಬಡಿದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಭಾಲ್ಕಿ ತಾಲುಕಿನ ನಾವದಗಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಭಾಲ್ಕಿ...

ಬೀದರ್‌ | ಎಸ್ಸೆಸ್ಸೆಲ್ಸಿ ಫಲಿತಾಂಶ : 625ಕ್ಕೆ 624 ಅಂಕ ಪಡೆದ ಆನಂದ ರಾಜ್ಯಕ್ಕೆ 2ನೇ ರ್‍ಯಾಂಕ್‌

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಏ.23ರಂದು ಪ್ರಕಟವಾಗಿದ್ದು, ಬೀದರ್‌ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿ ಆನಂದ...

ದಾವಣಗೆರೆ | ರಸ್ತೆ ಪಕ್ಕದ ಚರಂಡಿಗೆ ತಡೆಗೋಡೆ ನಿರ್ಮಿಸಲು ಜಯಕರ್ನಾಟಕ ಆಗ್ರಹ

ಹರಿಹರ ನಗರದ ವಾರ್ಡ್ ನಂ. 8, 9 ರ ಮದ್ಯದ ತೆಗ್ಗಿನಕೇರಿ-ದೊಡ್ಡಿಬೀದಿ ಮುಖ್ಯ ರಸ್ತೆಗೆ ಬರುವ ಚರಂಡಿ ಆಳವಿದ್ದು, ತಡೆಗೋಡೆ ಇಲ್ಲದೇ ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಅಪಘಾತಗಳಾಗಿ ಅನಾಹುತಗಳಾಗಿರುವ ಘಟನೆಗಳಾಗಿವೆ. ಆದ್ದರಿಂದ...

ಪಶ್ಚಿಮ ಬಂಗಾಳ | ಮೊದಲ ಹಂತದ ಮತದಾನದ ವೇಳೆಯೇ 10 ಗ್ಯಾರಂಟಿಗಳ ಘೋಷಿಸಿದ ಪಿಎಂ ಮೋದಿ!

ಪಶ್ಚಿಮ ಬಂಗಾಳದಲ್ಲಿಂದು ಮೊದಲ ಹಂತದ ಮತದಾನ ನಡೆದಿದೆ. ಈ ಮತದಾನ ನಡೆಯುತ್ತಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆಯ ಪ್ರಚಾರವನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗಾಗಿ ಹತ್ತು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇದು...

ತಮಿಳುನಾಡು | ದಲಿತ ವ್ಯಕ್ತಿಯ ಕೊಲೆಗೆ ಖಂಡನೆ; ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಹತ್ಯೆಯನ್ನು ಪ್ರತಿಭಟಿಸಿ ಸ್ಥಳೀಯ ಮತದಾರರು ಒಗ್ಗಟ್ಟಿನಿಂದ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದರಿಂದಾಗಿ ಈ ಬೂತ್‌ನಲ್ಲಿ ಶೂನ್ಯ ಮತದಾನವಾಗಿದೆ. ಗ್ರಾಮದಲ್ಲಿ ಸುಮಾರು 974 ಮತದಾರರು ವಾಸಿಸುತ್ತಿದ್ದಾರೆ. ಇತ್ತೀಚೆಗೆ ಈ...

ಕಬಡ್ಡಿ ಬೆಟ್ಟಿಂಗ್ ಆರೋಪ: ಪರಮೇಶ್ವರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ ಜತೆ ಗೃಹ ಸಚಿವ ಜಿ. ಪರಮೇಶ್ವರ್ ಬೆಟ್ಟಿಂಗ್ ಕಟ್ಟಿದ್ದ ಆರೋಪದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತುಮಕೂರು ನಗರದಲ್ಲಿ ಕಳೆದ...

ಶಿರಸಿ | 526 ಅಂಕ ಪಡೆದರೂ ಫೇಲ್: ಅಂಧ ವಿದ್ಯಾರ್ಥಿನಿಗೆ ಪರೀಕ್ಷಾ ಮಂಡಳಿಯ ಅನ್ಯಾಯ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಾಧಿಕಾರದ ನಿರ್ಲಕ್ಷ್ಯದ ಎಡವಟ್ಟಿನಿಂದಾಗಿ, ಅಂಧ ವಿದ್ಯಾರ್ಥಿನಿಯೊಬ್ಬಳು ಎಲ್ಲಾ ಪರೀಕ್ಷೆಗಳಿಗೆ ಹಾಜರಾಗಿದ್ದರೂ ಸಮಾಜ ವಿಜ್ಞಾನ ಪರೀಕ್ಷೆಗೆ ಗೈರುಹಾಜರಾಗಿದ್ದಾಳೆ ಎಂದು ನಮೂದಿಸಿ ಫೇಲ್ ಮಾಡಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ...

ತಮಿಳುನಾಡು ಚುನಾವಣೆ | ಭದ್ರತಾ ಕರ್ತವ್ಯದಲ್ಲಿದ್ದ ಪೇದೆಯೊಬ್ಬರಿಗೆ ಸ್ಕ್ರೂ ಡ್ರೈವರ್‌ನಿಂದ ಇರಿತ

ಮೈಲಾಡುತುರೈ ಜಿಲ್ಲೆಯ ಪೂಂಪುಹಾರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಚುನಾವಣಾ ಭದ್ರತಾ ಕರ್ತವ್ಯದಲ್ಲಿದ್ದ ಪೇದೆಯೊಬ್ಬರಿಗೆ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಸ್ಕ್ರೂ ಡ್ರೈವರ್‌ ನಿಂದ ಇರಿದ ಘಟನೆ ನಡೆದಿದೆ. ಆರೋಪಿಯನ್ನು ಕಟ್ಟುಚೇರಿಯ ನಿವೃತ್ತ ಸೇನಾ ಸಿಬ್ಬಂದಿ ಪ್ರಭಾಕರನ್...

ಒಳಮೀಸಲಾತಿ ಅನ್ವಯಿಸದೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಒತ್ತಾಯ; ರಾಜ್ಯಪಾಲರಿಗೆ ಪತ್ರ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಅನ್ವಯಿಸದೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಹಾಗೂ ಒಳ ಮೀಸಲಾತಿ ಜಾರಿಗೊಳಿಸಲು ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ಯುವ ಸಮೂಹ ರಾಜ್ಯಪಾಲರನ್ನು ಒತ್ತಾಯಿಸಿದೆ.  ಈ ಸಂಬಂಧ ಸಂಘದ...

ವಿದ್ಯಾರ್ಥಿ ನಾಯಕರನ್ನು ಬಂಧಿಸಿ ಚಿತ್ರಹಿಂಸೆ: ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಕಳೆದ ತಿಂಗಳು ಪೊಲೀಸರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸುವುದಾಗಿ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ಪೊಲೀಸರಿಗೆ...

ಜ್ಞಾನೇಶ್ ಕುಮಾರ್ ಗೆ ಪದ್ಮಭೂಷಣ ನೀಡಿ ಪುರಸ್ಕರಿಸಲೇಬೇಕೆಂದು ಹೇಳಿ ಛೇಡಿಸಿದ ಸಿಬಲ್‌

"ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಮತ ಹಕ್ಕು ನಿರಾಕರಣೆಯ ಪ್ರಯೋಗ ನಡೆಸುತ್ತಿದೆ, ಅಂದಮೇಲೆ ಚುನಾವಣೆಯ ಅಗತ್ಯವಾದರೂ ಏನಿದೆ?"  ಎಂದು ಚುನಾವಣಾ ಆಯೋಗದ ಮೇಲೆ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ತೀಕ್ಷ್ಣ ವಾಗ್ದಾಳಿ...

ಕೊಪ್ಪಳ | ಮೊಬೈಲ್ ಬಿಟ್ಟು ಹೋರಾಟಕ್ಕಿಳಿಯಿರಿ: ಯುವಜನತೆಗೆ ಕುಂವೀ ಕರೆ

ಬಲ್ಡೋಟ ಕಂಪನಿ ವಿರುದ್ಧ ಕೊಪ್ಪಳದಲ್ಲಿ ರೈತರು ನಡೆಸುತ್ತಿರುವ ನಿರ್ದಿಷ್ಟಾವಧಿ ಧರಣಿ 175 ದಿನ ಪೂರೈಸಿದ್ದು, ಹೋರಾಟಕ್ಕೆ ಹಿರಿಯ ಸಾಹಿತಿ, ಕವಿ ಕುಂ. ವೀರಭದ್ರಪ್ಪ ಹಾಗೂ ಆಳಂದ ವಿರಕ್ತ ಮಠದ ಕೋರಣೇಶ್ವರ ಸ್ವಾಮೀಜಿ ಬೆಂಬಲ...

ಈ ಹೊತ್ತಿನ ಪ್ರಮುಖ ಸುದ್ದಿ