ಮೈಲಾಡುತುರೈ ಜಿಲ್ಲೆಯ ಪೂಂಪುಹಾರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಚುನಾವಣಾ ಭದ್ರತಾ ಕರ್ತವ್ಯದಲ್ಲಿದ್ದ ಪೇದೆಯೊಬ್ಬರಿಗೆ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಸ್ಕ್ರೂ ಡ್ರೈವರ್ ನಿಂದ ಇರಿದ ಘಟನೆ ನಡೆದಿದೆ.
ಆರೋಪಿಯನ್ನು ಕಟ್ಟುಚೇರಿಯ ನಿವೃತ್ತ ಸೇನಾ ಸಿಬ್ಬಂದಿ ಪ್ರಭಾಕರನ್ ಎಂದು ಗುರುತಿಸಲಾಗಿದೆ. ಕುತಾಲಂ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದ ವಿಘ್ನೇಶ್ ಮೇಲೆ ಈತ ಇರಿದಿದ್ದಾನೆ.
ವಿಘ್ನೇಶ್ ಮತಗಟ್ಟೆಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದಾಗ, ಒಬ್ಬ ವ್ಯಕ್ತಿ ತನ್ನೊಂದಿಗೆ ತಂದಿದ್ದ ಸ್ಕ್ರೂ ಡ್ರೈವರ್ ನಿಂದ ಅವರ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ವಿಘ್ನೇಶ್ ಅವರ ಕುತ್ತಿಗೆ ಮತ್ತು ಎರಡೂ ಕೈಗಳಿಗೆ ಗಾಯಗಳಾಗಿವೆ.
ಅವರಿಗೆ ಪೊರಾಯರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಪೊರಾಯರ್ ಪೊಲೀಸರು ಪ್ರಭಾಕರನ್ ಅವರನ್ನು ಬಂಧಿಸಿ ಘಟನೆಯ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಪೊಲೀಸ್ ಸಿಬ್ಬಂದಿಯ ವಿರುದ್ಧ ದ್ವೇಷ ಸಾಧಿಸುತ್ತಿದ್ದರು ಮತ್ತು ಅವರು ಈ ಹಿಂದೆಯೂ ಇದೇ ರೀತಿಯ ಘಟನೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಪೊರಾಯರ್‌ನ ಜಮಾಲಿಯಾ ಅನುದಾನಿತ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 324 ರಲ್ಲಿ ಈ ಘಟನೆ ನಡೆದಿದೆ.





