ಈ ದಿನ ಫ್ಲ್ಯಾಶ್‌‌‌

ಇಂದು ಒಳಮೀಸಲಾತಿ ಭವಿಷ್ಯ; ಮೂರು ದಶಕಗಳ ‘ಒಳ’ ಬೇಗುದಿಗೆ ಇಂದು ಮುಕ್ತಿ?

ಕರ್ನಾಟಕದಲ್ಲಿ ದಶಕಗಳಿಂದ ʼಕಾಯುʼತ್ತಿರುವ 'ಪರಿಶಿಷ್ಟ ಜಾತಿ ಒಳಮೀಸಲಾತಿ' ಕುರಿತ ಐತಿಹಾಸಿಕ ನಿರ್ಧಾರಕ್ಕೆ ಸಿದ್ದರಾಮಯ್ಯ ಸರ್ಕಾರ ಇಂದು (ಏಪ್ರಿಲ್ 24) ಸಮಯ ನಿಗದಿ ಮಾಡಿದೆ. ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ವಿಶೇಷ ಸಚಿವ ಸಂಪುಟ...

ಸಚಿವ ಡಿ. ಸುಧಾಕರ್‌ ಶ್ವಾಸಕೋಶದ ಸೋಂಕು: ಕಿಮ್ಸ್‌ನಲ್ಲಿ ಚಿಕಿತ್ಸೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಶ್ವಾಸಕೋಶದ ಸೋಂಕಿನಿಂದಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ...

ದೇವೇಗೌಡರ ರಾಜ್ಯಸಭಾ ಮರು ನಾಮನಿರ್ದೇಶನಕ್ಕೆ ವಿರೋಧವಿಲ್ಲ : ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಸ್ಪಷ್ಟನೆ

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಜೂನ್‌ನಲ್ಲಿ ಮುಗಿಯಲಿದ್ದು, ದೇವೇಗೌಡ ಮತ್ತೊಂದು ಅವಧಿಗೆ ರಾಜ್ಯ ಸಭೆಗೆ ಪ್ರವೇಶ ಪಡೆಯುವರೇ, ಬಿಜೆಪಿ ಇದಕ್ಕೆ ಅವಕಾಶ ಮಾಡಿಕೊಡಲಿದೆಯೇ ಎಂಬ ಚರ್ಚೆ ರಾಜಕೀಯ...

ಯೋಗಿ ನಾಯಕತ್ವದಲ್ಲೇ 2027ರ ಯುಪಿ ಚುನಾವಣೆ: ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್

2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಪಕ್ಷದ ಮುಖವಾಗಿರಲಿದ್ದಾರೆ ಎಂದು ಬಿಜೆಪಿ ನಾಯಕ ನಿತಿನ್ ನಬಿನ್ ತಿಳಿಸಿದ್ದಾರೆ. ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಮತದಾನದ...

ಬೇಸಿಗೆ | ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು 18,262 ವಿಶೇಷ ರೈಲುಗಳು ಆರಂಭ: ಭಾರತೀಯ ರೈಲ್ವೆ

ಈ ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಬೇಸಿಗೆಯ ಗರಿಷ್ಠ ಪ್ರಯಾಣದ ಅವಧಿಯಲ್ಲಿ 18,262 ವಿಶೇಷ ರೈಲು ಪ್ರಯಾಣಿಸಲಿದೆ ಎಂದು ರೈಲ್ವೆ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಕೇಂದ್ರ ರೈಲ್ವೆ ಸಚಿವ...

ಸೇನಾ ಮುಖ್ಯಸ್ಥನನ್ನು ಮನೆಗೆ ಕಳಿಸಿದ ಬೆನ್ನಲ್ಲೇ ಅಮೆರಿಕದ ನೌಕಾದಳ ಕಾರ್ಯದರ್ಶಿ ರಾಜೀನಾಮೆ

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಬಿಕ್ಕಟ್ಟಿನ ಮಧ್ಯೆಯೇ ಟ್ರಂಪ್ ಆಡಳಿತದಲ್ಲಿ ಉನ್ನತ ಸೇನಾಧಿಕಾರಿಗಳ ವಜಾ ಮತ್ತು ರಾಜೀನಾಮೆ ಪರ್ವ ಮುಂದುವರಿದಿದೆ. ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರನ್ನು ವಜಾಗೊಳಿಸಿದ...

ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಮತ್ತೆ ಸಂಕಷ್ಟ; ಜಾಮೀನು ತಿರಸ್ಕರಿಸಿದ ಗುವಾಹಟಿ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಮತ್ತೆ ದೊಡ್ಡ ಹಿನ್ನಡೆಯಾಗಿದೆ. ಖೇರಾ...

ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ

ವಿದ್ಯಾರ್ಥಿ ಚುನಾವಣೆಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಬದಲು, ಅವುಗಳಿಗಂಟಿದ್ದ ಜಾತಿ, ಹಣ ಮತ್ತು ತೋಳ್ಬಲದ ಪಿಡುಗುಗಳನ್ನು ನಿವಾರಿಸಲು ಲಿಂಗ್ಡೋ ಸಮಿತಿ ವರದಿಯು ಸ್ಪಷ್ಟ ಮಾರ್ಗಸೂಚಿಯನ್ನು ನೀಡಿದೆ. ನಾಯಕತ್ವದ ತರಬೇತಿ ಮತ್ತು ಶೈಕ್ಷಣಿಕ ಶಿಸ್ತು- ಇವೆರಡರ...

ನೀವು ಮೀನು ತಿನ್ನಲು ಬಯಸಿದರೆ, ನಾನೇ ಅಡುಗೆ ಮಾಡುವೆ: ಝಲ್ಮುರಿ ಸವಿದ ಮೋದಿಗೆ ದೀದಿ ಟಾಂಗ್!‌

ಬಂಗಾಳದ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾದ ಮೀನು ಮತ್ತು ಝಲ್ಮುರಿ (ಮಂಡಕ್ಕಿ ಖಾದ್ಯ) ಈಗ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವಿನ ರಾಜಕೀಯ ಯುದ್ಧಕ್ಕೆ ಅಸ್ತ್ರಗಳಾದಂತೆ ಕಾಣುತ್ತಿವೆ. ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ...

ಬೀದರ್‌ | ಬಗದಲ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ 100 ಫಲಿತಾಂಶ

ಬೀದರ್‌ ತಾಲೂಕಿನ ಬಗದಲ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ. ಶಾಲೆ ಒಟ್ಟಾರೆ ಫಲಿತಾಂಶ ಶೇ 100ರಷ್ಟು ಲಭಿಸಿದ್ದು,...

ಗಂಭೀರವಾಗಿ ಗಾಯಗೊಂಡರೂ ಛಲ ಬಿಡದ ಇರಾನ್ ನಾಯಕ: ಮೊಜ್ತಬಾ ಮಾನಸಿಕವಾಗಿ ಅತ್ಯಂತ ದೃಢ

ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಇತ್ತೀಚಿನ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ, ಅವರು ಮಾನಸಿಕವಾಗಿ ಅತ್ಯಂತ ಚುರುಕಾಗಿದ್ದಾರೆ ಮತ್ತು ದೇಶದ ಆಡಳಿತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು 'ಡೆಕ್ಕನ್...

ತಮಿಳುನಾಡು ಶೇ 84.69, ಪಶ್ಚಿಮ ಬಂಗಾಳ ಶೇ 92.03: ಎರಡೂ ರಾಜ್ಯಗಳ ಚುನಾವಣೆಯಲ್ಲಿ ಹೊಸ ಮೈಲಿಗಲ್ಲು

ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಗುರುವಾರ(ಏ.23) ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಅತ್ಯುತ್ಸಾಹದಿಂದ ಹಕ್ಕು ಚಲಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅಲ್ಲಲ್ಲಿ ನಡೆದ ಹಿಂಸಾಚಾರದ ನಡುವೆಯೂ ಶೇ 92.03ರಷ್ಟು...

ಈ ಹೊತ್ತಿನ ಪ್ರಮುಖ ಸುದ್ದಿ