ದೇಶ

ಮಧ್ಯಾಹ್ನ 1 ಗಂಟೆವರೆಗೆ ಬಂಗಾಳದಲ್ಲಿ ಶೇ. 62.18, ತಮಿಳುನಾಡಿನಲ್ಲಿ ಶೇ. 56.81 ಮತದಾನ

ಭಾರಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಇಂದು (ಏಪ್ರಿಲ್ 23) ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗಿನಿಂದಲೇ ಮತಗಟ್ಟೆಗಳಲ್ಲಿ ಸರದಿಯ ಸಾಲುಗಳು ಕಂಡುಬಂದಿದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ...

ಪಶ್ಚಿಮ ಬಂಗಾಳ | 2021ರಲ್ಲಿ 14 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ʼನೋಟಾʼಗೆ ಚಲಾವಣೆಯಾದ ಮತಗಳೇ ಹೆಚ್ಚು

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದಲ್ಲಿ ಮತದಾನ ಆರಂಭವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಅದರ ಪ್ರಬಲ ಪ್ರತಿಸ್ಪರ್ಧಿ ಭಾರತೀಯ...

ಕೇಜ್ರಿವಾಲ್ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ

ದೆಹಲಿ ಹೈಕೋರ್ಟ್ ಕಲಾಪದ ವಿಡಿಯೋಗಳನ್ನು ಅಕ್ರಮವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ...

ಪಶ್ಚಿಮ ಬಂಗಾಳ | ‘ಬಿಜೆಪಿ ಏಜೆಂಟ್’, ‘ಗೋ ಬ್ಯಾಕ್’ – ಹುಮಾಯೂನ್ ಕಬೀರ್ ವಿರುದ್ಧ ಆಕ್ರೋಶ

ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲನೆಯ ಹಂತದ ಮತದಾನ ನಡೆಯುತ್ತಿದ್ದು, ಮತ ಚಲಾಯಿಸಲು ಬಂದ ಆಮ್ ಜನತಾ ಉನ್ನಯನ್ ಪಕ್ಷದ ಮುಖ್ಯಸ್ಥ ಹುಮಾಯೂನ್ ಕಬೀರ್ ವಿರುದ್ಧ ಟಿಎಂಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುರ್ಷಿದಾಬಾದ್‌ನ ನೌಡಾ ವಿಧಾನಸಭಾ...

ವಿಧಾನಸಭೆ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ, ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ

ಹಲವು ವಾರಗಳ ಬಿರುಸಿನ ಪ್ರಚಾರದ ನಂತರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇಂದು (ಏಪ್ರಿಲ್ 23) ವಿಧಾನಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಪಶ್ಚಿಮ...

ಜೆಡಿಯು ಹೊಸ ರಾಷ್ಟ್ರೀಯ ನಾಯಕರ ಪಟ್ಟಿಯಲ್ಲಿಲ್ಲ ನಿತೀಶ್ ಕುಮಾರ್ ಪುತ್ರ ನಿಶಾಂತ್ ಹೆಸರು

ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯುನೈಟೆಡ್) -ಜೆಡಿಯು ಬುಧವಾರ ತನ್ನ ಹೊಸ ರಾಷ್ಟ್ರೀಯ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ನಿತೀಶ್ ಪುತ್ರ ನಿಶಾಂತ್ ಕುಮಾರ್...

SIR; ಮತದಾನದ ಹಕ್ಕು ಕಳೆದುಕೊಂಡವರ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಕೋಲ್ಕತ್ತಾ ಹೈಕೋರ್ಟ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ವಿಚಾರಣೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ನಿರಾಕರಿಸಿದ್ದು, ಈ ಅರ್ಜಿಯನ್ನು...

ದೇಶದ ತಾಪಮಾನವು ಸಹಜ ಸ್ಥಿತಿಗಿಂತ ಅತಿಹೆಚ್ಚು ದಾಖಲಾಗುತ್ತಿದೆ: ಹವಾಮಾನ ಇಲಾಖೆ

ಭಾರತವು ಪ್ರತಿವರ್ಷ ಬೇಸಿಗೆಯ ತೀವ್ರತೆ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತೀಯ ಹವಾಮಾನಇಲಾಖೆಯ ಎಚ್ಚರಿಕೆಗಳು ಕೇವಲ ಮುನ್ಸೂಚನೆಗಳಾಗಿ ಉಳಿಯದೆ, ಗಂಭೀರ ಆರೋಗ್ಯ ಮತ್ತು ಪರಿಸರಸಂಕಷ್ಟದ ಸಂಕೇತಗಳಾಗಿ ಬದಲಾಗುತ್ತಿವೆ. ಉತ್ತರ ಭಾರತದ ರಾಜ್ಯಗಳಿಂದ ಹಿಡಿದು ದಕ್ಷಿಣದವರೆಗೆ ಬಿಸಿಗಾಳಿಯ...

ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವಕ್ಕೆ ಸಂಚಕಾರ: ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್‌ ಗಂಭೀರ ಆಕ್ಷೇಪ

ಚುನಾವಣಾ ಕಣ ಕಾವೇರಿರುವ ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸುತ್ತಿದ್ದ ದಾಳಿಯ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಸ್ತಕ್ಷೇಪ ಮಾಡಿರುವುದನ್ನು ಸುಪ್ರೀಂ ಕೋರ್ಟ್‌ ತೀವ್ರವಾಗಿ ಖಂಡಿಸಿದೆ. ರಾಜ್ಯದ ಇಂದಿನ ಸಾಮಾಜಿಕ-ರಾಜಕೀಯ ಪರಿಸ್ಥಿತಿಯನ್ನು...

ದೆಹಲಿ | IRS ಅಧಿಕಾರಿ ಮಗಳ ಮೇಲೆ ಅತ್ಯಾಚಾರ; ಚಾರ್ಜರ್ ಕೇಬಲ್‌ನಿಂದ ಕತ್ತು ಹಿಸುಕಿ ಹತ್ಯೆ

ದೆಹಲಿಯ ಅತ್ಯಂತ ಸುರಕ್ಷಿತ ಮತ್ತು ಐಷಾರಾಮಿ ಪ್ರದೇಶವೆಂದೇ ಕರೆಸಿಕೊಳ್ಳುವ ದಕ್ಷಿಣ ದೆಹಲಿಯ ಅಮರ್ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ಘೋರ ದುರಂತವೊಂದು ಸಂಭವಿಸಿದೆ. ಹಿರಿಯ ಆದಾಯ ತೆರಿಗೆ (IRS) ಅಧಿಕಾರಿಯೊಬ್ಬರ 23 ವರ್ಷದ ಪುತ್ರಿಯನ್ನು...

ತ್ರಿಶೂರ್‌ ಪಟಾಕಿ ಅವಘಡ: ಮೃತರ ಕುಟುಂಬಗಳಿಗೆ 14 ಲಕ್ಷ ಪರಿಹಾರ

ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್‌ನಲ್ಲಿ‌ ನಿನ್ನೆ ಸಂಭವಿಸಿದ ಭೀಕರ ಪಟಾಕಿ ಸ್ಫೋಟದ ತನಿಖೆಗೆ ಕೇರಳ ಸರ್ಕಾರ ಇಂದು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ...

ನಕಲಿ ಬಾಬಾ ಧೀರೇಂದ್ರ ಶಾಸ್ತ್ರಿಯಿಂದ ಸನ್ಮಾನಿಸಿಕೊಂಡ ನಿವೃತ್ತ ಸಿಜೆಐ ಗವಾಯಿ ಕುಟುಂಬದ ಫೋಟೋ ವೈರಲ್‌; ʼಅಶ್ಲೀಲ ಚಿತ್ರʼ ಎಂದ ಜನ

ಭಾರತದ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಕುಟುಂಬ ಸಮೇತರಾಗಿ ನಕಲಿ ಬಾಬಾ, ವಂಚಕ ಕಾವೀಧಾರಿ ಧೀರೇಂದ್ರ ಶಾಸ್ತ್ರಿಯನ್ನು ಭೇಟಿ ಮಾಡಿ ಆತನಿಂದ ಶಾಲು ಹಾಕಿಸಿಕೊಂಡು ಸನ್ಮಾನ...

ಈ ಹೊತ್ತಿನ ಪ್ರಮುಖ ಸುದ್ದಿ