ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾತೆಂಬುದು ಜ್ಯೋತಿರ್ಲಿಂಗ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಇದು ಈ ಸರಣಿಯ 101ನೇ ಅಂತಿಮ ವಚನ. ಇದರೊಂದಿಗೆ ಈ ಸರಣಿ ಮುಕ್ತಾಯಗೊಳ್ಳಲಿದೆ...

ಮಾತೆಂಬುದು ಜ್ಯೋತಿರ್ಲಿಂಗ
ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ತ್ವ
ತಾಳೋಷ್ಠ ಸಂಪುಟವೆಂಬುದು ನಾದಬಿಂದುಕಳಾತೀತ.
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ
ಕೇಳಾ ಮರುಳೆ

- Advertisement -

ವಚನಾರ್ಥ:
ಮಾತೆಂಬುದು ಜ್ಯೋತಿರ್ಲಿಂಗ. ಶರಣರ ಮಾತು ಶಿವನ ಜ್ಯೋತಿರ್ಲಿಂಗದಂತೆ ಪ್ರಕಾಶಮಾನ, ಪವಿತ್ರ ಮತ್ತು ಶಕ್ತಿಶಾಲಿ. ಜ್ಯೋತಿರ್ಲಿಂಗವು ಶಿವನ ಸಾಕಾರ ರೂಪವಾದರೆ, ಶರಣನ ಮಾತು ದೈವ ಶಕ್ತಿಯ ಪ್ರತೀಕ. ಧ್ವನಿ, ಶಬ್ದ ಮತ್ತು ಸ್ವರಗಳು ಸೇರಿ ಹೊಮ್ಮುವ ಮಾತು ಪರಬ್ರಹ್ಮನ ಪ್ರತಿದ್ವನಿ. ತುಟಿಗಳ ಕಂಪನ ಸಂಚಲನದಿಂದ ಉಂಟಾಗುವ ನಾದ ನಾದ-ಬಿಂದು-ಕಲೆಗಳಿಗೆ ಅತೀತವಾದದ್ದು, ಅಂದರೆ ಇವೆಲ್ಲವನ್ನೂ ಮೀರಿರುವ ಪರಮಾತ್ಮನ ಸ್ವರೂಪದ್ದು. ಹಾಗಾಗಿ ಶರಣರು ಆಡುವ ಮಾತುಗಳಿಗೆ ನುಡಿ ಸೂತಕವಿಲ್ಲ. ಅವರು ನುಡಿದದ್ದು ಮುತ್ತಿನಹಾರ. ಮಾಣಿಕ್ಯದ ದೀಪ್ತಿ. ಸ್ಪಟಿಕದ ಸಲಾಕೆ. ಅದು ಶಿವನು ಮೆಚ್ಚಿ ಅಹುದು ಅಹುದು ಎನ್ನುವ ಜ್ಯೋತಿರ್ಲಿಂಗ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಪದಪ್ರಯೋಗಾರ್ಥ:
ಮಾತೆಂಬುದು ಜ್ಯೋತಿರ್ಲಿಂಗ. ಅಲ್ಲಮ ಮತ್ತು ಮುಕ್ತಾಯಕ್ಕನವರ ನಡುವೆ ನಡೆದ ಸಂವಾದದಲ್ಲಿ ಮೂಡಿ ಬಂದ ಅದ್ಭುತವಾದ ವಚನ ಪದವಿದು. ಕನ್ನಡ ವಚನ ಸಾಹಿತ್ಯ ಮಾತ್ರವಲ್ಲದೆ ಇಡೀ ವಿಶ್ವದ ಆಧ್ಯಾತ್ಮಿಕ ಮತ್ತು ಅನುಭಾವ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಎರಡು ಸಂವಾದಗಳಿವೆ. ಅಲ್ಲಮ-ಮುಕ್ತಾಯಕ್ಕ ಮತ್ತು ಅಲ್ಲಮ-ಮಹಾದೇವಿಯಕ್ಕ ಇವರ ನಡುವೆ ನಡೆದ ಸಂವಾದಗಳು. ಈ ಎರಡೂ ಸಂವಾದಗಳಲ್ಲಿ ಮೂಡಿ ಬಂದಿರುವ ಸಂಭಾಷಣೆ ಸ್ವರೂಪದ ವಚನಗಳಲ್ಲಿರುವ ಪ್ರತಿಯೊಂದು ಮಾತೂ ಒಂದೊಂದು ಜ್ಯೋತಿರ್ಲಿಂಗವೇ ಎನ್ನುವಷ್ಟು ಶಕ್ತಿಶಾಲಿಯಾಗಿವೆ. ಮುಕ್ತಾಯಕ್ಕನು ಮಾತಿನ ಭರದಲ್ಲಿ ಅಲ್ಲಮನನ್ನು ಉದ್ದೇಶಿಸಿ ‘ನುಡಿಯ ಹಂಗು ನಿಮಗಿನ್ನೂ ಹಿಂಗಿಲ್ಲ’ ಎಂದು ಛೇಡಿಸಿದಾಗ ಆಕೆಯನ್ನು ಸಂತೈಸಲು ಅಲ್ಲಮಪ್ರಭು ಆಡಿದ ಮಾತೇ ‘ಮಾತೆಂಬುದು ಜ್ಯೋತಿರ್ಲಿಂಗ’. ಅಲ್ಲಮನ ಪ್ರಕಾರ ಶರಣನ ಮಾತುಗಳು ಅವನವಲ್ಲ. ಆ ಮಾತುಗಳು ಲಿಂಗದಿಂದ ಹೊರಬಂದಂತಹವು. ಆ ಮಾತುಗಳಿಗೆ ನುಡಿ ಸೂತಕವಿಲ್ಲ. ಅವು ಜ್ಯೋತಿರ್ಲಿಂಗಗಳು. “ಅಲ್ಲಮಪ್ರಭುರಾಯ ಆಕಾಶ, ಪ್ರಕಾಶ ಶರೀರಧಾರಿ. ಅವನ ಮಾತು ಜ್ಯೋತಿರ್ಲಿಂಗ. ಅವನು ನಡೆದಾಡಿದರೆ ಹೆಜ್ಜೆ ಮೂಡದ ದಾರಿ. ಅವನು ಭೂಲೋಕಕ್ಕೆ ಅವತರಿಸಿದ ಗುರು ಎಂಬ ಮಾತು ಸತ್ಯ” ಎಂದು ಜ್ಯೋತಿರ್ಲಿಂಗದಂತಹ ಮಾತುಗಳನ್ನು ಬೇಂದ್ರೆ ಬರೆದಿದ್ದಾರೆ. ಮಾತೆಂಬುದು ಜ್ಯೋತಿರ್ಲಿಂಗ ಅಲ್ಲಮನ ಎಲ್ಲಾ ಅನನ್ಯ ಪದಪ್ರಯೋಗಗಳಲ್ಲಿ ಕಿರೀಟಪ್ರಾಯವಾದುದು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕಂಗಳ ಕರುಳ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...