ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಒಡಲು
ಒಡಲೊಳಗಿದ್ದು
ಒಡಲಿಂಗಾಧಾರವಾಗಿ
ಒಡಲ ಸೋಂಕದೆ ಒಡಲ
ಬೆಳಗುವ ಪರಿಯ ನೋಡಾ!
ಬೆಳಗಿಂಗೆ ಬೆಳಗಾಗಿ
ಬೆಳಗುವ ಪರಿಯ ನೋಡಾ!
ಪರಮಚೈತನ್ಯ ನಿರಾಳ
ಗುಹೇಶ್ವರಲಿಂಗವ ನೋಡಾ.

- Advertisement -

ವಚನಾರ್ಥ:
ಒಡಲು ಎಂಬ ಪದಕ್ಕೆ ಹೊಟ್ಟೆ ಎಂಬ ಅರ್ಥವಿದೆ. ಈ ವಚನ ಸಂದರ್ಭದಲ್ಲಿ ಒಡಲು ಅಂದರೆ ದೇಹ. ತಾನು ಸೃಷ್ಟಿಸಿದ ಪ್ರತೀ ದೇಹ ಜೀವ ಜಂತು ಪ್ರಾಣಿ ಪಕ್ಷಿಗಳಲ್ಲಿ ದೈವವು ಸ್ವಯಂ ನೆಲೆಸಿರುತ್ತಾನೆ ಎಂದು ಐತರೀಯೋಪನಿಷತ್ ಹೇಳುತ್ತದೆ. ಎಲ್ಲಿಯವರೆಗೆ ದೇಹ ಭಾಗದಲ್ಲಿ ದೇವಪ್ರಭೆ ಇರುವುದೋ ಅಲ್ಲಿಯವರೆಗೆ ಆ ದೇಹ ಜೀವಂತವಾಗಿರುತ್ತದೆ. ಆ ದೇವಪ್ರಭೆ ಕ್ಷೀಣಿಸಿದಾಗ ಜೀವದ ಅಂತ್ಯವಾಗುತ್ತದೆ. ಅಂತಹ ದೇವಪ್ರಭೆಯನ್ನೇ ಅಲ್ಲಮ ಒಡಲಿಗೆ ಆಧಾರವಾದದ್ದು ಅಂದಿರುವುದು. ಅದು ಒಡಲ ಒಳಗಿದೆ. ಒಡಲಿಗೆ ಆಧಾರವಾಗಿದೆ. ಆದರೆ ಒಡಲನ್ನು ಮುಟ್ಟದಂತಿದೆ. ಒಡಲಿಗೆ ಚೈತನ್ಯದ ಸೆಲೆಯಾಗಿದ್ದುಕೊಂಡು ಒಡಲನ್ನು ಬೆಳಗುತ್ತಿದೆ. ಹಾಗೆ ಬೆಳಗುವ ಬೆಳಕಿನ ಪ್ರಖರತೆ ಎಷ್ಟಿದೆ ಎಂದರೆ ಅದು ಬೆಳಕಿಗೇ ಬೆಳಕಾಗಿ ಒಡಲಾಳದಲ್ಲಿ ಬೆಳಗುತ್ತದೆ. ಆ ಬೆಳಗು ಬೇರಾವುದೂ ಅಲ್ಲ, ಪರಮ ಚೈತನ್ಯವಾದ ನಿರ್ಮಲವಾದ ನಿರಾಳವಾದ ಜ್ಯೋತಿರ್ಲಿಂಗ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಪದ ಪ್ರಯೋಗಾರ್ಥ:
ಒಡಲು ಮತ್ತು ಬೆಳಗು ಈ ವಚನದಲ್ಲಿ ಪ್ರಮುಖವಾಗಿ ಪ್ರಯೋಗವಾಗಿರುವ ಪದಗಳು. ಎಂಟು ಸಾಲಿನ ವಚನದಲ್ಲಿ ಒಡಲು ಮತ್ತು ಬೆಳಗು ತಲಾ ನಾಲ್ಕು ಬಾರಿ ಬಳಕೆಯಾಗಿವೆ. ಒಂದೇ ಪದವನ್ನು ವಿವಿಧ ಅರ್ಥಗಳಲ್ಲಿ ಪ್ರಯೋಗಿಸಿ ವಿಷಯ ನಿರೂಪಣೆ ಮಾಡಿರುವುದು ಅಲ್ಲಮನ ಅನನ್ಯತೆ. ಒಡಲು ಎಂಬ ಪದಕ್ಕೆ ವಿಶೇಷ ಪದಶಕ್ತಿಯಿದೆ. ಇಂತಹ ಶಕ್ತಿಶಾಲಿ ಪದವನ್ನು ಆದ್ಯ ವಚನಕಾರ ದೇವರ ದಾಸಿಮಯ್ಯ ಬಳಸಿರುವ ಪರಿ ಇಲ್ಲಿ ಉಲ್ಲೇಖನೀಯವಾಗುತ್ತದೆ. “ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ; ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ! ರಾಮನಾಥ” ಇಲ್ಲೂ ಕೂಡ ವಚನದಲ್ಲಿ ಒಡಲು ನಾಲ್ಕು ಬಾರಿ ಪ್ರಯೋಗವಾಗಿದ್ದು ಇಡೀ ವಚನದ ಆಶಯವನ್ನು ಗಟ್ಟಿಗೊಳಿಸುತ್ತದೆ. ಅಲ್ಲಮ ದಾಸಿಮಯ್ಯನವರಂತೆ ಇತರೆ ಎಲ್ಲಾ ವಚನಕಾರರು ವಚನ ಸಾಹಿತ್ಯವನ್ನು ಕನ್ನಡ ಪದಸಂಪತ್ತಿನಿಂದ ಶ್ರೀಮಂತಗೊಳಿಸಿದ್ದಾರೆ. ಆ ಅಭಿಮಾನ ನಮ್ಮ ಒಡಲ ಮತ್ತು ಮಡಿಲ ತುಂಬಬೇಕು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...