ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

Date:

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ.

ಬುಧವಾರ (ಸೆ.30), ದೆಹಲಿಯಲ್ಲಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಮಹತ್ವದ ಸಭೆ ನಡೆಸಿದೆ. ಸಭೆಯಲ್ಲಿ ಭಾಗಿಯಾಗಿದ್ದ ವಿಪಕ್ಷಗಳ ಧುರೀಣರು ‘ಮುಂದಿನ ಎಲ್ಲ ಚುನಾವಣೆಗಳಲ್ಲೂ ‘ವಿದ್ಯುನ್ಮಾನ ಮತ ಯಂತ್ರ’ (ಇವಿಎಂ) ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಹಳೆಯ ‘ಕಾಗದದ ಮತಪತ್ರ’ (ಬ್ಯಾಲೆಟ್‌ ಪೇಪರ್) ವ್ಯವಸ್ಥೆಗೆ ಮರಳಬೇಕು’ ಎಂದು ನಿರ್ಣಾಯಕ ಬೇಡಿಕೆಯನ್ನು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಮತಪಟ್ಟಿ ಮೇಲಿನ ಎಸ್‌ಐಆರ್‌ ಪಾದರ್ಶಕತೆ ಮತ್ತು ಸಾಂವಿಧಾನಿಕತೆ, ಚುನಾವಣಾ ಆಯೋಗದ ಸ್ವಾಯತತ್ತೆಗಳ ಕುರಿತಾದ ಚರ್ಚೆ ನಡುವೆ, ‘ಇವಿಯಂ ಹಠಾವೋ – ಬ್ಯಾಲೆಟ್ ಪೇಪರ್ ಲಾವೋ’ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

- Advertisement -

ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ದೇಶದಲ್ಲಿ ಇವಿಎಂ ಮೇಲಿನ ವಿಶ್ವಾಸ ದಿನೇದಿನೆ ಕುಸಿಯುತ್ತಿದೆ. ಕಳೆದ 10 ವರ್ಷಗಳಲ್ಲಿ ನಡೆದಿರುವ ಚುನಾವಣಾ ಪ್ರಕ್ರಿಯೆ ಮತ್ತು ಫಲಿತಾಂಶಗಳು ಇವಿಎಂ ಮೇಲಿನ ಅನುಮಾನಗಳನ್ನು ಹೆಚ್ಚಿಸಿವೆ. ಆದ್ದರಿಂದಲೇ, ವಿಪಕ್ಷಗಳ ಆಗ್ಗಾಗ್ಗೆ, ಇವಿಎಂ ಬದಲಿಗೆ, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕು ಎಂದು ಆಗ್ರಹಿಸುತ್ತಲೇ ಬಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ಮೊದಲಿಗೆ ಇವಿಎಂ ಎಂದರೇನು? ಅದಕ್ಕೇಕೆ ವಿರೋಧ? ಎಂಬುದನ್ನು ಅರ್ಥ ಮಾಡಿಕೊಳ್ಳೋಣ

ಇವಿಎಂ ಎಂದರೆ, ವಿದ್ಯುನ್ಮಾನ ಮತ ಯಂತ್ರ. ಅಂದರೆ, ಇದು ವಿದ್ಯುತ್‌/ಬ್ಯಾಟರಿ ಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಕಾರ್ಯಾಚರಣೆಯಲ್ಲಿ ಮೂರು ಘಟಕಗಳಿರುತ್ತವೆ. ಅವು ಒಂದಕ್ಕೊಂದು ಪರಸ್ಪರ ಸಂಪರ್ಕ ಹೊಂದಿರುತ್ತವೆ. ಮತದಾರ ಬಟನ್ ಒತ್ತುವ ಭಾಗವನ್ನು ‘ವಿದ್ಯುನ್ಮಾನ ಬ್ಯಾಲೆಟ್ ಯುನಿಟ್’ ಮತ್ತು ಮತಗಟ್ಟೆ ಅಧಿಕಾರಿಯ ನಿಯಂತ್ರಣದಲ್ಲಿರುವ ಭಾಗವನ್ನು ‘ಕಂಟ್ರೋಲ್ ಯುನಿಟ್’ ಎನ್ನುತ್ತಾರೆ. ‘ಬ್ಯಾಲೆಟ್‌ ಯುನಿಟ್‌’ನ ಮೇಲೆ ದೇಶದ ಪ್ರಮುಖ ಪಕ್ಷಗಳ ಚಿಹ್ನೆಗಳು ಮತ್ತು ಅಭ್ಯರ್ಥಿಗಳ ಹೆಸರುಗಳು ಇರುತ್ತವೆ. ನೀವು ನಿಮಗಿಷ್ಟವಾದ ಅಭ್ಯರ್ಥಿಯ ಹೆಸರಿನ ಪಕ್ಕದಲ್ಲಿರುವ ನೀಲಿ ಬಟನ್ ಒತ್ತಬೇಕು. ತಕ್ಷಣವೇ ಒಂದು ಸಣ್ಣ ‘ಬೀಪ್’ ಶಬ್ದ ಕೇಳಿಸುತ್ತದೆ. ಆದರೆ, ಅಧಿಕಾರಿಯು ಕಂಟ್ರೋಲ್ ಯುನಿಟ್ ಮೂಲಕ ಮತದಾನಕ್ಕೆ ಅನುಮತಿ ನೀಡಿದಾಗ ಮಾತ್ರ ನೀವು ಬಟನ್ ಒತ್ತಲು ಸಾಧ್ಯ.

ಈ ಬ್ಯಾಲೆಟ್‌ ಯುನಿಟ್‌’ಗೆ ಸಂಪರ್ಕಹೊಂದಿರುವಂಥೆ ‘ವಿವಿಪ್ಯಾಟ್’ (Voter Verifiable Paper Audit Trail) ಯಂತ್ರವೂ ಇರುತ್ತದೆ. ನೀವು ಬ್ಯಾಲೆಟ್‌ ಯುನಿಟ್‌ನಲ್ಲಿ ಮತ ಚಲಾಯಿಸಿ ಬಟನ್ ಒತ್ತಿದ ತಕ್ಷಣ, ನೀವು ಯಾರಿಗೆ ಮತ ಹಾಕಿದ್ದೀರೊ ಅವರ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು ಹಾಗೂ ಅವರ ಚುನಾವಣಾ ಚಿಹ್ನೆ ಮುದ್ರಿತವಾಗಿರುವ ಕಾಗದದ ಚೀಟಿ VVPAT ಯಂತ್ರದ ಗಾಜಿನ ಕಿಟಕಿಯಲ್ಲಿ ಏಳು ಸೆಕೆಂಡುಗಳ ಕಾಲ ಕಾಣಿಸುತ್ತದೆ. ನಂತರ, ಅದರ ಕೆಳಗಿರುವ ಸೀಲ್ ಮಾಡಿದ ಪೆಟ್ಟಿಗೆಯೊಳಗೆ ಬೀಳುತ್ತದೆ. ಇದು ಇವಿಎಂ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ.

ಆದರೆ, ಇದರ ಸುತ್ತ ಭಾರೀ ವಿವಾದಗಳೂ ಇವೆ. ಇವಿಎಂಗಳ ಕಾರ್ಯಾಚರಣೆ, ಅವುಗಳನ್ನು ತಿರುಚುವ ಸಾಧ್ಯತೆ/ಅವಕಾಶಗಳ ಬಗ್ಗೆ ಅನುಮಾನುಗಳು ಮುಂದುವರೆದಿವೆ. ಪರಿಣಾಮ, ಇವಿಎಂ ತಂತ್ರಜ್ಞಾನದ ಮೇಲಿನ ಅವಿಶ್ವಾಸ ಹೆಚ್ಚುತ್ತಿದೆ. ವಿರೋಧ ಪಕ್ಷಗಳು ಮತ್ತು ತಾಂತ್ರಿಕ ವಿಶ್ಲೇಷಕರು ‘ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಬಿಜೆಪಿ ಪರವಾಗಿ ಫಲಿತಾಂಶ ಬರುವಂತೆ ಇವಿಎಂಗಳನ್ನು ಸಿದ್ದಪಡಿಸಲಾಗುತ್ತಿದೆ. ಮತದಾನ ಮುಗಿದ ನಂತರವೂ ಇವಿಎಂಗಳ ಮೂಲಕ ಮತಗಳನ್ನು ತಿರುಚಲಾಗುತ್ತಿದೆ. ಆದ್ದರಿಂದಲೇ, ಆಯೋಗವು ಮತದಾನ ಮುಗಿದು ದಿನಗಳೇ ಕಳೆದರೂ, ಮತದಾನ ಅಂತಿಮ ಮಾಹಿತಿ ನೀಡಲು ಆಯೋಗ ವಿಳಂಬ ಮಾಡುತ್ತಿರುವುದೇ ಈ ತಿರುಚುವಿಕೆಗೆ ಸಾಕ್ಷಿಯೂ ಆಗಿದೆ’ ಎಂದು ಗಂಭೀರ ಅರೋಪಗಳನ್ನೂ ಎತ್ತಿದ್ದಾರೆ. ಈ ಆರೋಪ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಪ್ರಜಾಸತ್ತಾತ್ಮಕ ಪಾರದರ್ಶಕತೆಯ ವಿಷಯವೂ ಆಗಿದೆ.

ಗಮನಾರ್ಹವಾಗಿ, ಕಳೆದ 10 ವರ್ಷಗಳಲ್ಲಿ ನಡೆದಿರುವ ಬಹುಪಾಲು ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತಲೇ ಬಂದಿದೆ. ಆಗೊಂದು-ಈಗೊಂದು ಚುನಾವಣೆಗಳಲ್ಲಿ ಕಾಂಗ್ರೆಸ್, ಎಎಪಿ ಅಥವಾ ವಿಪಕ್ಷಗಳು ಗೆಲುವು ಸಾಧಿಸಿವೆ. ಆದರೆ, ಆ ಕಾರಣಕ್ಕಾಗಿ, ಇವಿಎಂ ಮೇಲಿನ ಅನುಮಾನಗಳನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ. ಯಾಕೆಂದರೆ, ಕ್ರಿಕೆಟ್‌ನಲ್ಲಿ ಎಲ್ಲ ಪಂದ್ಯಗಳನ್ನೂ ಅಥವಾ ಎಲ್ಲ ಬಾಲ್‌ಗಳನ್ನೂ ‘ಮ್ಯಾಚ್‌ ಫಿಕ್ಸಿಂಗ್‌’ ಮಾಡಿಕೊಂಡಿರುವುದಿಲ್ಲ. ಕೆಲವನ್ನು ಸಾಮಾನ್ಯ ಎಂಬಂತೆಯೇ ನಡೆಸಲಾಗುತ್ತದೆ. ಅಂತೆಯೇ, ಚುನಾವಣೆಯಲ್ಲೂ ಕೆಲವು ರಾಜ್ಯಗಳ ಚುನಾವಣೆಗಳನ್ನು ಸಾಮಾನ್ಯವಾಗಿ ನಡೆಸಿ, ನೈಜ ಫಲಿತಾಂಶಕ್ಕೆ ಬಿಟ್ಟಿರಲಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು.

“ಚುನಾವಣೆ ಎಂದರೆ ಕೇವಲ ಸರಿಯಾದ ಫಲಿತಾಂಶ ಬರುವುದು ಮಾತ್ರವಲ್ಲ; ಬಂದಿರುವ ಫಲಿತಾಂಶವು ಅತ್ಯಂತ ಪಾರದರ್ಶಕವಾಗಿದೆ ಎಂದು ಸಾಮಾನ್ಯ ಮತದಾರನೂ ನಂಬುವಂತಿರಬೇಕು. ಆದ್ದರಿಂದ, ಈಗ ನಡೆಯುತ್ತಿರುವಂತೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 5 ರ್ಯಾಂಡಮ್ ಇವಿಎಂಗಳ VVPAT ಕಾಗದದ ಚೀಟಿಗಳನ್ನು ಮಾತ್ರ ಕೈಯಿಂದ ಎಣಿಸಿ ಇವಿಎಂ ಮತಗಳ ಲೆಕ್ಕಕ್ಕೆ ತಾಳೆಹಾಕಿ ನೋಡಲಾಗುತ್ತಿದೆ. ಇಷ್ಟು ಸಾಕಾಗುವುದಿಲ್ಲ. ಪ್ರತಿಯೊಂದು ಮತಕ್ಕೂ ಕಾಗದದ ದಾಖಲೆ ಸೃಷ್ಟಿಯಾಗುತ್ತಿರುವಾಗ, 100% ಅಂದರೆ, ಎಲ್ಲ ವಿವಿಪ್ಯಾಟ್‌ ಚೀಟಿಗಳನ್ನೂ ಎಣಿಕೆ ಮಾಡಲೇಬೇಕು” ಎಂದು ವಿಪಕ್ಷಗಳು ಒತ್ತಾಯಿಸುತ್ತಲೇ ಬಂದಿವೆ. ಇದು, ವಾಸ್ತವವೂ-ಅಗತ್ಯವೂ ಆಗಿದೆ.

ಇವಿಎಂ ಕುರಿತು ಚುನಾವಣಾ ಆಯೋಗದ ಸಮರ್ಥನೆ

ಚುನಾವಣಾ ಆಯೋಗವು ಇವಿಎಂ ಭದ್ರವಾಗಿದೆ. ಅದನ್ನು ಯಾರೂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಇವಿಎಂಗಳಿಗೂ ಲ್ಯಾಪ್‌ಟಾಪ್, ಮೊಬೈಲ್ ಅಥವಾ ಇಂಟರ್ನೆಟ್ ಸಾಧನಗಳಿಗೂ ಯಾವುದೇ ಹೋಲಿಕೆಯಿಲ್ಲ ಎಂದು ಪ್ರತಿಪಾದಿಸುತ್ತಿದೆ.

“ಇವಿಎಂಗಳಿಗೆ ಇಂಟರ್ನೆಟ್, ಬ್ಲೂಟೂತ್, ವೈ-ಫೈ ಅಥವಾ ಯಾವುದೇ ನೆಟ್‌ವರ್ಕ್ ಸಂಪರ್ಕ ಇರುವುದಿಲ್ಲ. ಹಾಗಾಗಿ ಹೊರಗಿನಿಂದ ಯಾರಾದರೂ ಹ್ಯಾಕ್ ಮಾಡುತ್ತಾರೆ ಎನ್ನಲಾಗದು. ಜೊತೆಗೆ, ಇವಿಎಂಗಳ ಒಳಗಿರುವ ಮೈಕ್ರೋಕಂಟ್ರೋಲರ್ ಚಿಪ್‌ಗಳನ್ನು ಒಮ್ಮೆ ಮಾತ್ರ ಪ್ರೋಗ್ರಾಮ್ ಮಾಡಲಾಗಿರುತ್ತದೆ. ಮತದಾನ ನಡೆಯುವಾಗ ಅಥವಾ ನಂತರ ರಿಮೋಟ್ ಆಗಿ ಸಾಫ್ಟ್‌ವೇರ್ ಬದಲಾಯಿಸಲು ಸಾಧ್ಯವಿಲ್ಲ. ಯಂತ್ರಗಳನ್ನು ಲಭ್ಯಗೊಳಿಸುವ ಮುನ್ನ ಪ್ರತಿಯೊಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ (ಪರೀಕ್ಷಾರ್ಥ ಮತದಾನ) ನಡೆಸಲಾಗುತ್ತದೆ” ಎಂದು ಆಯೋಗ ಹೇಳಿಕೊಂಡಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಇವಿಎಂಗಳು ಬಿಜೆಪಿ ನಾಯಕರ ಮನೆಗಳಲ್ಲಿ ಪತ್ತೆಯಾಗಿದ್ದ ಹಲವು ನಿದರ್ಶನಗಳಿವೆ. ಮಾತ್ರವಲ್ಲದೆ, ಇವಿಎಂನಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತಚಲಾಯಿಸಿದರೂ, ಅದು ಬಿಜೆಪಿ ಅಭ್ಯರ್ಥಿಗೆ ಚಲಾವಣೆಯಾಗಿದ್ದೂ ಇದೆ. ಅಂತಹ ಸಂದರ್ಭದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ.

ಆದ್ದರಿಂದಲೇ, ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ, 2024ರ ಏಪ್ರಿಲ್ 26ರಂದು ವಿಚಾರಣೆ ನಡೆಸಿದ ಕೋರ್ಟ್‌, “100%ರಷ್ಟು VVPAT ಮತಗಳ ಪರಿಶೀಲನೆ ನಡೆಸಬೇಕು ಅಥವಾ ಸಂಪೂರ್ಣವಾಗಿ ಹಳೆಯ ‘ಬ್ಯಾಲೆಟ್‌ ಪೇಪರ್’ ವ್ಯವಸ್ಥೆಗೆ ಮರಳಬೇಕು” ಎಂಬ ಕೋರಿಕೆಯ ಅರ್ಜಿಯನ್ನು ತಿರಸ್ಕರಿಸಿತು. ಕೇವಲ ಊಹಾಪೋಹ ಅಥವಾ ಆಧಾರರಹಿತ ಅನುಮಾನಗಳ ಆಧಾರದ ಮೇಲೆ ಚಾಲ್ತಿಯಲ್ಲಿರುವ ತಾಂತ್ರಿಕ ವ್ಯವಸ್ಥೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಹೇಳಿತು.

ಬ್ಯಾಲೆಟ್‌ ಪೇಪರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಒಂದು ವೇಳೆ, ಚುನಾವಣೆಗಳಲ್ಲಿ ಹಳೆಯ ‘ಕಾಗದದ ಮತಪತ್ರ’ ವ್ಯವಸ್ಥೆಯನ್ನೇ ಬಳಸಿದರೆ, ಪ್ರಕ್ರಿಯೆ ಕೊಂಚ ಭಿನ್ನವಾಗಿರುತ್ತದೆ: ನೀವು ಮತಗಟ್ಟೆಗೆ ಹೋಗಿ ನಿಮ್ಮ ಮತದಾರ ಗುರುತಿನ ಚೀಟಿ ತೋರಿಸಿದಾಗ ಅಧಿಕಾರಿಗಳು ನಿಮಗೆ ಮುದ್ರಿತ ಕಾಗದದ ಮತಪತ್ರವನ್ನು ನೀಡುತ್ತಾರೆ. ಆ ಮತಪತ್ರದಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ ಹಾಗೂ ಅವರ ಪಕ್ಷದ ಚಿಹ್ನೆಗಳು ಮುದ್ರಿತವಾಗಿರುತ್ತವೆ. ನಿಗದಿ ಪಡಿಸಲಾದ ಗೌಪ್ಯ ಸ್ಥಳಕ್ಕೆ ನೀವು ತೆರಳಿ, ನೀವಿಚ್ಚಿಸುವ ಅಭ್ಯರ್ಥಿಯ ಹೆಸರಿನ ಮುಂಭಾಗದಲ್ಲಿ ‘ಶಾಹಿಯುಳ್ಳ ರಬ್ಬರ್ ಸ್ಟ್ಯಾಂಪ್’ ಒತ್ತಬೇಕು.  ಬಳಿಕ, ಆ ಬ್ಯಾಲೆಟ್‌ ಪೇಪರ್‌ಅನ್ನು ನಿರ್ದಿಷ್ಟ ರೀತಿಯಲ್ಲಿ ಮಡಚಿ, ಸಾರ್ವಜನಿಕವಾಗಿ ಇಡಲಾಗಿರುವ ಸೀಲ್ ಮಾಡಿದ ಮತಪೆಟ್ಟಿಗೆಯೊಳಗೆ ಹಾಕಬೇಕು. ಇದು ಮತದಾನಕ್ಕೆ ಇವಿಎಂಗಿಂತ ಸರಳ ಪ್ರಕ್ರಿಯೆ.

ಮತದಾನ ಮುಗಿದ ನಂತರ ಆ ಮತಪೆಟ್ಟಿಗೆಗಳನ್ನು ಅತ್ಯಂತ ಭದ್ರತೆಯುಳ್ಳ ಕೊಠಡಿಗಳಿಗೆ (Strong Rooms) ಒಯ್ಯಲಾಗುತ್ತದೆ. ಎಣಿಕೆಯ ದಿನದಂದು ಪ್ರತಿಯೊಂದು ಪೆಟ್ಟಿಗೆಯನ್ನು ತೆರೆದು, ಕಾಗದಗಳನ್ನು ಹರಡಿ, ಪ್ರತಿಯೊಂದು ಮತವನ್ನೂ ಚುನಾವಣಾ ಸಿಬ್ಬಂದಿಗಳು ಕೈಯಿಂದ ಎಣಿಸುತ್ತಾರೆ.

ಹೀಗೆ ಮಾಡುವುದರಿಂದ, ತಂತ್ರಜ್ಞಾನದ ಅರಿವಿಲ್ಲದ ಕಟ್ಟಕಡೆಯ ನಾಗರಿಕರ ಮತಗಳು ಮತಪೆಟ್ಟಿಗೆಗೆ ಬಿದ್ದಿದೆ ಮತ್ತು ಅದನ್ನು ಕೈಯಿಂದ ಎಣಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಮತವೇ ಒಂದು ಪ್ರತ್ಯಕ್ಷ ವಸ್ತುವಾಗಿರುತ್ತದೆ ಆದ್ದರಿಂದ, ಅನುಮಾನ ಬಂದಲ್ಲಿ ಸಂಪೂರ್ಣ ಎಣಿಕೆಯನ್ನು ಮತ್ತೆ ನಡೆಸಬಹುದು.

ಬ್ಯಾಲೆಟ್‌ ಪೇಪರ್‌ನ ಉಪಯುಕ್ತತೆ

ಜಗತ್ತಿನ ಮುಂದುವರೆದ ರಾಷ್ಟ್ರಗಳು ಎನ್ನಿಸಿಕೊಂಡಿರುವ ಜರ್ಮಿನಿ, ಫ್ರಾನ್ಸ್, ಅಮೆರಿಕ ಹಾಗೂ ಮತ್ತೊಂದು ಪ್ರಜಾಪ್ರಭುತ್ವ ರಾಷ್ಟ್ರ ನೆದರ್‌ಲ್ಯಾಂಡ್‌ಗಳಲ್ಲಿ ಇಂದಿಗೂ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ಗಳನ್ನೇ ಬಳಸಲಾಗುತ್ತಿದೆ. ಯಾಕೆಂದರೆ, ಬ್ಯಾಲೆಟ್‌ ಪೇಪರ್‌ಗಳ ಬಳಕೆಯು ಸಾರ್ವಜನಿಕ ಪಾರದರ್ಶಕತೆ ಮತ್ತು ಸರಳತೆಗೆ ಉತ್ತಮವೆಂದು ಆ ರಾಷ್ಟ್ರಗಳು ಭಾವಿಸಿವೆ.

ಈ ಲೇಖನ ಓದಿದ್ದೀರಾ?: ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಮತದಾರು ಖುದ್ದು ಕಾಗದದ ಮೇಲೆ ಮುದ್ರೆ (ಸ್ಟ್ಯಾಂಪ್) ಒತ್ತಿ, ಅದನ್ನು ಮಡಚಿ ಮತಪೆಟ್ಟಿಗೆಗೆ ಹಾಕುತ್ತಾರೆ. ತಾನು ಚಲಾಯಿಸಿದ ಮತ ಸರಿಯಾದ ಜಾಗಕ್ಕೆ ಬಿತ್ತು ಎಂಬ ಸಂಪೂರ್ಣ ತೃಪ್ತಿ ಮತ್ತು ಖಾತರಿ ಅವರಿಗೆ ತಕ್ಷಣವೇ ಸಿಗುತ್ತದೆ. ತಂತ್ರಜ್ಞಾನದ ಜ್ಞಾನವಿಲ್ಲದ, ಅಕ್ಷರಸ್ಥರಲ್ಲದ ಅಥವಾ ಹಳ್ಳಿಗಾಡಿನ ಕಡೇ ನಾಗರಿಕನಿಗೂ ತಮ್ಮ ಮತ ತಮ್ಮ ಆಯ್ಕೆಯ ಅಭ್ಯರ್ಥಿಗೇ ಚಲಾವಣೆಯಾಗಿದೆ ಎಂಬ ಖಾತ್ರಿ ಪಡೆದುಕೊಳ್ಳುತ್ತಾರೆ.

ಮಾತ್ರವಲ್ಲ, ವಿದ್ಯುನ್ಮಾನ ಯಂತ್ರಗಳಲ್ಲಿ ಮೈಕ್ರೋಚಿಪ್, ಪ್ರೋಗ್ರಾಮಿಂಗ್ ಹಾಗೂ ಸಾಫ್ಟ್‌ವೇರ್ ಸಂಕೀರ್ಣತೆಗಳಿರುತ್ತವೆ. ಇವುಗಳನ್ನು ತಿರುಚುವ ಆತಂಕವಿದ್ದೇ ಇರುತ್ತದೆ. ಆದರೆ, ಕಾಗದದ ಮತಪತ್ರದಲ್ಲಿ ಇಂತಹ ಯಾವುದೇ ಸಾಫ್ಟ್‌ವೇರ್ ಲೋಪಗಳಿಗೆ ಜಾಗವಿರುವುದಿಲ್ಲ. ಮುಖ್ಯವಾಗಿ, ಯಾವುದೇ ಸೈಬರ್ ದಾಳಿ, ವೈರಸ್ ಅಥವಾ ತಾಂತ್ರಿಕ ಅಡಚಣೆಗಳಿಂದ ಮತದಾನ ಪ್ರಕ್ರಿಯೆ ಸ್ಥಗಿತಗೊಳ್ಳುವ ಅಪಾಯವೂ ಇರುವುದಿಲ್ಲ.

ಎಣಿಕೆಯ ದಿನದಂದು ಪ್ರತಿಯೊಂದು ಮತಪತ್ರವನ್ನು ಎಣಿಕೆ ಸಿಬ್ಬಂದಿ ಪಕ್ಷಗಳ ಪ್ರತಿನಿಧಿಗಳ ಎದುರೇ ತೆರೆದು ತೋರಿಸುವುರಿಂದ, ಎಣಿಕೆಯಲ್ಲಿಯೂ ಅಕ್ರಮ ಅಥವಾ ತಿರುಚುವಿಕೆ ನಡೆಯುವ ಆತಂಕಕ್ಕೂ ಅವಕಾಶ ಇರುವುದಿಲ್ಲ. ಇದೆಲ್ಲವೂ ಪಾರದರ್ಶಕ ಪ್ರಕ್ರಿಯೆಗೆ ಅತೀ ಮುಖ್ಯವಾಗುತ್ತವೆ.

ಅಂದಹಾಗೆ, ಚುನಾವಣಾ ವ್ಯವಸ್ಥೆಯಲ್ಲಿ ಒಂದು ಸಣ್ಣ ತಾಂತ್ರಿಕ ಲೋಪವು, ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳುವ ಸರ್ಕಾರವನ್ನೇ ಬದಲಾಯಿಸಿಬಿಡುತ್ತದೆ. ಆದ್ದರಿಂದಲೇ, ಇವಿಎಂ ಮತ್ತು ಬ್ಯಾಲೆಟ್‌ ಪೇಪರ್‌ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಬ್ಯಾಲೆಟ್‌ ಪೇಪರ್‌ಗಳನ್ನು ಬಳಸುವಂತೆ ಭಾರತದ ಹಲವಾರು ಪಕ್ಷಗಳು ಒತ್ತಾಯಿಸುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಕಾರ ಆರೋಪ; ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ

ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ 20 ವರ್ಷದ ಬುಡಕಟ್ಟು (ದಲಿತ) ಮಹಿಳೆಯೊಬ್ಬರು...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್ ಭಾಷಣದ ಹಿಂದಿದೆ ಮೋದಿ ಸರ್ಕಾರದ ವೈಫಲ್ಯದ ಮುಖವಾಡ

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು...

ಮಲಯಾಳಂ ‘ಅಮ್ಮ’ ಸಂಘಟನೆಯಲ್ಲಿ ಬದಲಾವಣೆ ಗಾಳಿ: ಉಪಾಧ್ಯಕ್ಷರಾಗಿ ನಟ ಸಿಜೋಯ್ ವರ್ಗೀಸ್, ನಟಿ ಆಶಾ ಅರವಿಂದ್ ನೇಮಕ

ಸಾಲು ಸಾಲು ವಿವಾದಗಳು ಮತ್ತು ರಾಜೀನಾಮೆಗಳಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಮಲಯಾಳಂ...

ಬೆಂಗಳೂರು ವಾಹನ ಸವಾರರ ಗಮನಕ್ಕೆ: ನಿಯಮ ಪಾಲಿಸದಿದ್ದರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು!

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್...