ಯುಪಿಐ ಮೇಲೆ ಮೋದಿ ಶುಲ್ಕ: ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ!

Date:

ಡಿಜಿಟಲ್ ಭಾರತದ ಬೆನ್ನೆಲುಬಾಗಿ ಬೆಳೆದು ನಿಂತಿರುವುದು ಯುಪಿಐ. ಈ ಪಾವತಿ ವ್ಯವಸ್ಥೆಯು ಉಚಿತವಾಗಿ ಲಭ್ಯವಿರುವುದೇ ಅದರ ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣ. ಆದರೆ ಅದರ ಮೇಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಂಗಣ್ಣು ಬಿದ್ದಿದೆ. ಯುಪಿಐ ವಹಿವಾಟುಗಳ ಮೇಲೆ ವಿಧಿಸಲಾಗುವ ವಿವಿಧ ಶುಲ್ಕಗಳು ಮತ್ತು ಅದರ ಪರೋಕ್ಷ ಶುಲ್ಕಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ಖಚಿತ. ಈ ಬಗ್ಗೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

- Advertisement -

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೆ ತಂದಿರುವ ನಿಯಮಗಳ ಪ್ರಕಾರ, ಸಾಮಾನ್ಯ ಯುಪಿಐ (ಬ್ಯಾಂಕ್‌ನಿಂದ ಬ್ಯಾಂಕ್‌ಗೆ ನೇರ ವರ್ಗಾವಣೆ) ಪಾವತಿಗಳು ಉಚಿತವಾಗಿಯೇ ಇವೆ. ಆದರೆ, ‘ಪ್ರೀಪೇಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್’ (PPI – ವಾಲೆಟ್‌ಗಳು, ಗಿಫ್ಟ್ ಕಾರ್ಡ್‌ಗಳು) ಮೂಲಕ ವರ್ತಕರಿಗೆ ಮಾಡುವ ರೂ. 2,000 ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳ ಮೇಲೆ ಶೇ. 1.1ರವರೆಗೆ ಇಂಟರ್‌ಚೇಂಜ್ ಶುಲ್ಕ (MDR) ವಿಧಿಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಇದನ್ನೂ ಓದಿ: 2,000 ರೂ.ಗೆ ಮೇಲ್ಪಟ್ಟ ಯುಪಿಐ ವಹಿವಾಟು ಮೇಲೆ ಜಿಎಸ್‌ಟಿ? ಕೇಂದ್ರ ಸರ್ಕಾರ ಸ್ಪಷ್ಟನೆ

ವ್ಯಾಪಾರಿಗಳ ಆತಂಕವೇನು?

ದೇಶದಲ್ಲಿ ಪ್ರತಿ ತಿಂಗಳು 13 ಶತಕೋಟಿಗೂ (1,300 ಕೋಟಿ) ಹೆಚ್ಚು ಯುಪಿಐ ವಹಿವಾಟುಗಳು ನಡೆಯುತ್ತಿದ್ದು, ಇದರ ಒಟ್ಟು ಮೌಲ್ಯ ಸುಮಾರು 20 ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತದೆ. ಇಷ್ಟೊಂದು ಬೃಹತ್ ಪ್ರಮಾಣದ ಪಾವತಿ ವ್ಯವಸ್ಥೆಯನ್ನು ಉಚಿತವಾಗಿ ನಡೆಸುವುದು ಬ್ಯಾಂಕ್‌ಗಳು ಮತ್ತು ಪಾವತಿ ಆಪ್‌ಗಳಿಗೆ (Google Pay, PhonePe, Paytm) ಆರ್ಥಿಕವಾಗಿ ಹೊರೆಯಾಗುತ್ತಿದೆ ಎಂಬುದು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನ ಅಭಿಪ್ರಾಯ. ಆದರೆ, ಈ ವೆಚ್ಚವನ್ನು ಭರಿಸಲು ಶುಲ್ಕ ವಿಧಿಸಿದರೆ, ಅದರ ಅಂತಿಮ ಬಿಸಿ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಮೇಲೆಯೇ ತಟ್ಟುತ್ತದೆ ಎಂಬುದು ಆರ್ಥಿಕ ತಜ್ಞರ ಎಚ್ಚರಿಕೆ.

ಯುಪಿಐ ಬಳಸುವ ಜನರ ಮೇಲೆ ಮೋದಿ ಶುಲ್ಕ!

ವರ್ತಕರಿಗೆ ವಿಧಿಸಲಾಗುವ ಯಾವುದೇ ಬ್ಯಾಂಕಿಂಗ್ ಅಥವಾ ಡಿಜಿಟಲ್ ಶುಲ್ಕವನ್ನು ಅವರು ತಮ್ಮ ಲಾಭದ ಪ್ರಮಾಣದಿಂದ ಭರಿಸುವುದು ಅಪರೂಪ. ವ್ಯಾಪಾರದ ಸಾಂಪ್ರದಾಯಿಕ ನಿಯಮದಂತೆ ವರ್ತಕರು ತಮಗೆ ಬೀಳುವ ಈ ಹೆಚ್ಚುವರಿ ವೆಚ್ಚವನ್ನು ಸರಕು ಅಥವಾ ಸೇವೆಗಳ ಅಂತಿಮ ಬೆಲೆಯಲ್ಲೇ ಸೇರಿಸಿ ಮಾರಾಟ ಮಾಡುತ್ತಾರೆ. ಇದರಿಂದಾಗಿ ಅನೇಕ ಸಣ್ಣ ಮತ್ತು ಮಧ್ಯಮ ವರ್ತಕರು ಯುಪಿಐ ಪಾವತಿ ಸ್ವೀಕರಿಸಲು ಕನಿಷ್ಠ ಮೊತ್ತದ ಷರತ್ತು ವಿಧಿಸುವುದು ಅಥವಾ ಪೋಸ್ (POS) ಯಂತ್ರಗಳಂತೆ ಯುಪಿಐಗೂ ಹೆಚ್ಚುವರಿ ಶೇ. 1-2 ರಷ್ಟು ಶುಲ್ಕ ನೀಡುವಂತೆ ಗ್ರಾಹಕರನ್ನು ಕೇಳುವುದು ಕಂಡುಬರುತ್ತಿದೆ. ಅಂತಿಮವಾಗಿ ಇವರು ಯುಪಿಐ ನಿರಾಕರಿಸಿ, ಮತ್ತೆ ‘ನಗದು’ (Cash) ಪಾವತಿಗೆ ಒತ್ತಾಯಿಸುತ್ತಾರೆ ಅಥವಾ ಗ್ರಾಹಕರಿಂದಲೇ ಆ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತಾರೆ.

ಆರ್‌ಬಿಐ ತನ್ನ Discussion Paper on Charges in Payment Systems ನ ವರದಿಯಲ್ಲಿ ಉಲ್ಲೇಖಿಸಿರುವಂತೆ, ಯುಪಿಐ ವ್ಯವಸ್ಥೆಯನ್ನು ಸುಸ್ಥಿರವಾಗಿಡಲು ಹಣಕಾಸಿನ ಅಗತ್ಯವಿದೆ. ಗೂಗಲ್ ಪೇ, ಫೋನ್ ಪೇ ನಂತಹ ಆಪ್‌ಗಳು ಮತ್ತು ಬ್ಯಾಂಕ್‌ಗಳು ಮೂಲಸೌಕರ್ಯಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತವೆ.

ಸರ್ಕಾರವು ನೀಡುವ ಸಹಾಯಧನ (Subsidy) ಸಂಪೂರ್ಣವಾಗಿ ನಿಂತು, ಪಾವತಿ ಕಂಪನಿಗಳು ಗ್ರಾಹಕರಿಂದ ‘ಫ್ಲಾಟ್ ಪ್ಲಾಟ್‌ಫಾರ್ಮ್ ಶುಲ್ಕ’ (Platform Fee – ಉದಾಹರಣೆಗೆ ಪ್ರತಿ ವಹಿವಾಟಿಗೆ 1 ರಿಂದ 2 ರೂ.) ಅಥವಾ ಬ್ಯಾಂಕ್‌ಗಳು ‘ಮಾಸಿಕ ನಿರ್ವಹಣಾ ಶುಲ್ಕ’ ವಸೂಲಿ ಮಾಡಲು ಶುರು ಮಾಡಿದರೆ, ಅದು ಬಡ ಮತ್ತು ಮಧ್ಯಮ ವರ್ಗದ ಮಾಸಿಕ ಬಜೆಟ್‌ಗೆ ಹೆಚ್ಚುವರಿ ಹೊರೆಯಾಗುತ್ತದೆ.

ಆರಂಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಪಾವತಿ ಆಪ್‌ಗಳು ನೀಡುತ್ತಿದ್ದ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್‌ಗಳು ಈಗಾಗಲೇ ಕಡಿಮೆಯಾಗಿವೆ. ಈಗ ಉಚಿತ ವಹಿವಾಟೂ ನಿಂತರೆ, ಸಾಲ ಅಥವಾ ಕ್ರೆಡಿಟ್ ಸೌಲಭ್ಯಗಳಿಲ್ಲದೆ ಸಂಪೂರ್ಣವಾಗಿ ಡಿಜಿಟಲ್ ಡೆಬಿಟ್ ಪಾವತಿಯನ್ನೇ ನೆಚ್ಚಿಕೊಂಡಿರುವ ಸಾಮಾನ್ಯ ವರ್ಗಕ್ಕೆ ಡಿಜಿಟಲ್ ಪಾವತಿ ವ್ಯವಸ್ಥೆ ದುಬಾರಿಯಾಗಿ ಪರಿಣಮಿಸುವುದು ಖಚಿತ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ: ತಿಲಕ, ಆಧಾರ್ ಕಾರ್ಡ್ ಹಾಗೂ ಕುಟುಂಬ ಸಮೇತ ಆಗಮನ ಕಡ್ಡಾಯ!

ಮುಂಬೈನ ಬೋರಿವಲಿಯಲ್ಲಿ ಆಯೋಜಿಸಲಾಗುತ್ತಿರುವ ಮುಂಬರುವ ನವರಾತ್ರಿ ಗರ್ಬಾ ಮತ್ತು ದಾಂಡಿಯಾ ಉತ್ಸವದಲ್ಲಿ...

ಯುಪಿ ಚುನಾವಣೆ | ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಮತಗಳನ್ನು 27,000 ಕಡಿತಗೊಳಿಸುತ್ತೇವೆ: ಅಖಿಲೇಶ್ ಪ್ರತಿಜ್ಞೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ....

ಅಮೃತಸರದಲ್ಲಿ ಕಳೆದುಹೋಗಿ ಗಯಾದಲ್ಲಿ ಪತ್ತೆ; ಎಐ ತಂತ್ರಜ್ಞಾನದ ನೆರವಿನಿಂದ ಕುಟುಂಬವನ್ನು ಸೇರಿದ ವ್ಯಕ್ತಿ

ಪಂಜಾಬ್‌ನಿಂದ ದಾರಿ ತಪ್ಪಿ 1,200 ಕಿಲೋಮೀಟರ್‌ಗೂ ಹೆಚ್ಚು ದೂರದ ಬಿಹಾರ ತಲುಪಿದ್ದ...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...