ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಲೇ ಇದ್ದ ರೂಪಾಯಿ ಮೌಲ್ಯ, ಇದೀಗ ಚೇತರಿಕೆ ಕಂಡಿದೆ, ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 84 ಪೈಸೆಯಷ್ಟು ಏರಿಕೆಯಾಗಿದೆ. ಪ್ರಸ್ತುತ, ಡಾಲರ್ ಎದುರು ರೂಪಾಯಿ ಮೌಲ್ಯವು 94.94 ರೂ.ಗೆ ತಲುಪಿಸಿದೆ.
ಜಾಗತಿಕ ಮಾರುಕಟ್ಟೆಯ ಏರಿಳಿತ ಮತ್ತು ಅಮೆರಿಕ-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಇದೀಗ, ‘ಇರಾನ್ ಜೊತೆ ಒಪ್ಪಂದ ಪೂರ್ಣಗೊಳ್ಳಲಿದೆ’ ಎಂದು ಟ್ರಂಪ್ ಸೂಚಿಸಿರುವ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತಗ್ಗಿವೆ. ಈ ಬೆಳವಣಿಗೆ ರೂಪಾಯಿ ಮೌಲ್ಯ ಚೇತರಿಕೆಗೆ ಕಾರಣವಾಗಿದೆ.
ಜೊತೆಗೆ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಭೆಯ (MPC) ಪ್ರಕಟಣೆಗಳು ಮಾರುಕಟ್ಟೆಯ ಚಿತ್ರಣವನ್ನು ಬದಲಿಸಿವೆ ಎಂದು ಹೇಳಲಾಗುತ್ತಿದೆ. ಅನಿವಾಸಿ ಭಾರತೀಯರು (NRI) ಭಾರತದಲ್ಲಿ ಇಡುವ ‘ವಿದೇಶಿ ಕರೆನ್ಸಿ ಅನಿವಾಸಿ ಬ್ಯಾಂಕ್’ (FCNR-B) ಠೇವಣಿಗಳ ಮೇಲಿನ ಸಂಪೂರ್ಣ ವಿದೇಶಿ ವಿನಿಮಯ ರಿಸ್ಕ್ (Hedging Cost) ಅನ್ನು ತಾನೇ ಭರಿಸುವುದಾಗಿ ಆರ್‌ಬಿಐ ಘೋಷಿಸಿದೆ. ಇದರಿಂದಾಗಿ ಬ್ಯಾಂಕುಗಳು ಎನ್‌ಆರ್‌ಐಗಳಿಗೆ ಹೆಚ್ಚಿನ ಬಡ್ಡಿದರ ನೀಡಲು ಸಾಧ್ಯವಾಗಲಿದ್ದು, ವಿದೇಶಿ ಹೂಡಿಕೆ ಭಾರತಕ್ಕೆ ಹರಿದುಬರಲಿದೆ ಎಂದು ಹೇಳಲಾಗಿದೆ.
ಈ ಲೇಖನ ಓದಿದ್ದೀರಾ?: ಬಿಡಿಎ- ಬೆಂಗಳೂರಿನ ಗಣಿ; ಅಧಿಕಾರ ರಾಜಕಾರಣದ ಕಾಮಧೇನು!
ಮೇ ತಿಂಗಳ ಅಂತ್ಯದಲ್ಲಿ ಸಾರ್ವಕಾಲಿಕ ಕುಸಿತ ಕಂಡು ರೂಪಾಯಿ ಮೌಲ್ಯ 96.96 ರೂ. ತಲುಪಿತ್ತು. ಇದೀಗ, ಚೇತರಿಕೆಯ ಹಾದಿಯಲ್ಲಿದೆ.




