ಬೀದರ್‌ | ಕಲ್ಯಾಣ ಕರ್ನಾಟಕದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅಗತ್ಯ : ಮೀನಾಕ್ಷಿ ಬಿರಾದರ್

Date:

ಕಲ್ಯಾಣ ಕರ್ನಾಟಕ ಭಾಗ ಆರ್ಥಿಕ , ಔದ್ಯೋಗಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮುಂದುವರಿಕೆಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಬೇಕು ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಬಿರಾದಾರ ಹೇಳಿದರು.

- Advertisement -

ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಗುರು ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವು ಪ್ರಾದೇಶಿಕ ಅಸಮಾನತೆ ನೀಗಿಸುವ ಮಾಧ್ಯಮವಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

“ಶಿಕ್ಷಣದ ಮೂಲ ಉದ್ದೇಶವೇ ಎಲ್ಲ ಬಗೆಯಲ್ಲೂ ಸಮಾನತೆ ತರುವುದಾಗಿದೆ. ಪದವಿಗಳು ಕೇವಲ ಸರ್ಟಿಫಿಕೇಟ್ ಆಗಿರದೆ, ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಆಧಾರವಾಗಬೇಕು. ವ್ಯಕ್ತಿಯ ಸಂವರ್ಧನೆಗಾಗಿ ಗಂಭೀರವಾದ ಓದು ಅಧ್ಯಯನ ನಡೆಯಲಿ. ಬಸವಾದಿ ಶರಣರು ಅನುಭವ ಮಂಟಪದಲ್ಲಿ ಸೇರಿದ್ದು ಅವರೆಲ್ಲಿ ಇರುವ ಬೌದ್ಧಿಕ ಮತ್ತು ವೈಚಾರಿಕ ಚಿಂತನೆಗಳ ಉತ್ಕೃಷ್ಟತೆಯಿಂದ. ಇಡೀ ಸಮುದಾಯವನ್ನು ಅರಿವಿನ ಮಂಟಪವಾಗಿ ರೂಪಿಸಿದ್ದರು” ಎಂದರು.

ರಂಗಕರ್ಮಿ ಉಮೇಶ ಪಾಟೀಲ ಮಾತನಾಡಿ, “ಸಮಕಾಲೀನ ಬಿಕ್ಕಟ್ಟು ಮತ್ತು ಸಂದಿಗ್ಧತೆಗಳಿಗೆ ರಂಗಭೂಮಿ ಮತ್ತು ನಾಟಕಗಳು ಕನ್ನಡಿಯಾಗಿವೆ. ಸಮಾಜದ ಎಚ್ಚರಕ್ಕಾಗಿ ನಾಟಕಗಳು ಬೇಕು. ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ವಿಮರ್ಶಿಸುವ ಗುಣ ಕಲೆಗಳಿಗಿದೆ” ಎಂದರು.

“ಕನ್ನಡದಲ್ಲಿ ಹಲವು ನಾಟಕಗಳು ಬಂದಿವೆ. ಸಂಕ್ರಾಂತಿ, ತಲೆದಂಡ, ಮಹಾಚೈತ್ರ, ಕೆಟ್ಟಿತ್ತು ಕಲ್ಯಾಣ, ಮುಂದಣ ಕಥನ, ಕಲ್ಯಾಣಪುರ ಈ ಎಲ್ಲ ರಂಗ ಪಠ್ಯಗಳ ಕೇಂದ್ರ ಕಲ್ಯಾಣ ಕ್ರಾಂತಿ ಮತ್ತು ಬಸವಣ್ಣ. ಕೆವೈಎನ್ ಮತ್ತು ಸಿ. ಬಸವಲಿಂಗಯ್ಯ ಅವರ ವಚನ ಕಲ್ಯಾಣ ದೊಡ್ಡ ರಂಗರೂಪ ಹೊತ್ತು ಬರುತ್ತಿದೆ” ಎಂದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಸಮಾರಂಭ ಉದ್ಘಾಟಿಸಿ ಮಾತನಾಡಿ, “ಕಲೆ,ಮಾನವಿಕಗಳ ಮತ್ತು ಕೌಶಲ್ಯ ಆಧಾರಿತ ಶಿಕ್ಷಣ ಈ ಕಾಲದಲ್ಲಿ ಅಗತ್ಯವಾಗಿದೆ. ಸರ್ವೊತೋಮುಖ ಬೆಳವಣಿಗೆಗೆ ಅಂತರ್ಶಿಸ್ತೀಯ ಜ್ಞಾನ ಮುಖ್ಯ. ವಿದ್ಯಾರ್ಥಿಗಳು ಈ ಯುಗದ ಭವಿಷ್ಯ ಭದ್ರವಾಗುತ್ತದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ನಿರ್ದೇಶಕ ಬಸವರಾಜ ತೊಂಡಾರೆ ಮಾತನಾಡಿ, “ಗುಣಮಟ್ಟದ ಶಿಕ್ಷಣ ಮತ್ತು ಸೃಜನಾತ್ಮಕ ಕೆಲಸಗಳು ಶಿಕ್ಷಣ ಸಂಸ್ಥೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೊಸ ಅಸ್ತಿತ್ವ ಒದಗಿಸುತ್ತವೆ. ಶಿಕ್ಷಣವು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ಮಾಧ್ಯಮಗಳಾಗಿವೆ. ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲಿ” ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, “ಸಾಮಾಜಿಕ ಪ್ರಜ್ಞೆ ಮೂಡಿಸುವ, ಸಾಂಸ್ಕೃತಿಕ ಯಜಮಾನಿಕೆಯನ್ನು ಪ್ರತಿರೋಧಿಸುವ, ಸೂಕ್ಷ್ಮತೆ ಬೆಳೆಸುವ, ಲೋಕವನ್ನು ಅರಿಯುವ ದಾರಿಯಾಗಿ ಶಿಕ್ಷಣ ಮತ್ತು ರಂಗಭೂಮಿ ಇವೆ. ಸಮಾಜ, ರಾಜಕಾರಣ, ಮತ್ತು ವ್ಯವಸ್ಥೆಗಳನ್ನು ಮರುವ್ಯಾಖ್ಯಾನಿಸುವ, ವಿಮರ್ಶೆ ಮಾಡುವ ಕೆಲಸ ಕಲೆಗಳಿಂದ ಸಾಧ್ಯ. ಎಲ್ಲ ಜೀವಿಗಳ ಜೀವನ ವಿಧಾನ ಅರಿಯುವ, ಸಮಾಜ, ಜನ ಸಮುದಾಯದ ಕುರಿತ ಕಾಳಜಿ, ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ” ಎಂದರು.

ರಂಗಕರ್ಮಿ ಉಮೇಶ ಪಾಟೀಲ ಅವರ ಬರೆದು ನಿರ್ದೇಶಿಸಿರುವ ‘ಟ್ಯಾಬ್ಲೆಟ್’ ನಾಟಕ ಮತ್ತು ವೈಶಾಲಿ ಅಭಿನಯದ ‘ಚಂದ್ರಮತಿಯ ಪ್ರಲಾಪ’ ನಾಟಕಗಳ ಏಕಪಾತ್ರಾಭಿನಯ ಗಮನ ಸೆಳೆದವು.

ಇದನ್ನೂ ಓದಿ : ಬೀದರ್‌ | ಹಾಲಿಗಿಂತ ನೀರು ದುಬಾರಿಯಾಗುವ ಕಾಲ ದೂರವಿಲ್ಲ: ಮಾರುತಿ ಬೌದ್ಧೆ

ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ, ಸುನಿಲ ರಾಯವಾಡೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಭದ್ರಿನಾಥ ಪಾಟೀಲ, ಮಲ್ಲಿಕಾರ್ಜುನ ಚಿರಡೆ, ಪುಷ್ಪಾ ಮಾಮಾ, ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ಸೋಮಶೇಖರಯ್ಯ ವಸ್ತ್ರದ, ಮಾಯಾ ಮುರಾಳೆ, ರುದ್ರಮಣಿ ಮಠಪತಿ, ಶಾಂತಲಾ ಪಾಟೀಲ ಇದ್ದರು. ಬಸವರಾಜ ಖಂಡಾಳೆ ನಿರೂಪಿಸಿದರು. ಸಂಗೀತಾ ಮಹಾಗಾವೆ ಸ್ವಾಗತಿಸಿದರು. ಜಗದೇವಿ ಜವಳಗೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಈಜಲು ತೆರಳಿದ ಯುವಕರು ನೀರುಪಾಲು; ಬೈಂದೂರಿನಲ್ಲಿ ಕೊಲೆ ಯತ್ನ ಆರೋಪಿಗಳ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ಸ್ನೇಹಿತರೊಂದಿಗೆ ಈಜಲು...

ಬೀದರ್‌ | ಹಾಲಿಗಿಂತ ನೀರು ದುಬಾರಿಯಾಗುವ ಕಾಲ ದೂರವಿಲ್ಲ: ಮಾರುತಿ ಬೌದ್ಧೆ

ನಿಸರ್ಗದತ್ತವಾಗಿ ಉಚಿತವಾಗಿ ದೊರೆಯಬೇಕಾದ ನೀರು ಮುಂದೊಂದು ದಿನ ಹಾಲಿನ ದರಕ್ಕಿಂತಲೂ ದುಬಾರಿಯಾಗಿ...

ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಕೃತ್ಯ: ಬೈಕ್ ತಡೆದು ಅಪ್ರಾಪ್ತರ ಮೇಲೆ ಗೂಂಡಾಗಿರಿ

ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದ ಆ ಮಧ್ಯಾಹ್ನ, ವಾತಾವರಣದಲ್ಲಿ ವಿಚಿತ್ರವಾದ ಮೌನ...

ನಿಯಮಗಿರಿ ಗಣಿಗಾರಿಕೆ ಪುನರಾರಂಭದ ಕುಮ್ಮಕ್ಕು: ಜಲಮೂಲ, ಅಸ್ತಿತ್ವ ರಕ್ಷಣೆಗೆ ಸಿಡಿದೆದ್ದ ಪರಿಸರ ಪ್ರೇಮಿಗಳು!

ಒಡಿಶಾದ ರಾಯಗಡ ಮತ್ತು ಕಾಲಾಹಾಂಡಿ ಜಿಲ್ಲೆಗಳ ಗಡಿಭಾಗದಲ್ಲಿರುವ ಪ್ರಸಿದ್ಧ ನಿಯಮಗಿರಿ ಬೆಟ್ಟ...