ಬೀದರ್‌ | ಸೌಹಾರ್ದ–ಬಾಂಧವ್ಯಕ್ಕಾಗಿ ಬೀದರದಿಂದ ಬೆಂಗಳೂರಿಗೆ ಏಕಾಂಗಿ ಪಾದಯಾತ್ರೆ

Date:

ಕನ್ನಡ ನೆಲ, ಜಲ, ಸಂಸ್ಕೃತಿಯ ಸಂರಕ್ಷಣೆ, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಸೌಹಾರ್ದ, ಬಾಂಧವ್ಯ, ಭ್ರಾತೃತ್ವ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶದಿಂದ ಬೆಂಗಳೂರಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ರೂಪೇಶ್ ಪುತ್ತೂರು ಅವರು ಬೀದರ್‌ ಜಿಲ್ಲೆಯಿಂದ ಬೆಂಗಳೂರುವರೆಗೆ ಏಕಾಂಗಿಯಾಗಿ ಪಾದಯಾತ್ರೆ ಆರಂಭಿಸಿದ್ದಾರೆ.

- Advertisement -

ಬೀದರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಶುರು ಮಾಡಿದ್ದಾರೆ. ಕಾಲ್ನಡಿಗೆ ಯಾತ್ರೆಯು ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ತುಮಕೂರು ಮಾರ್ಗವಾಗಿ ಆಗಸ್ಟ್‌ 15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ತಲುಪುವ ಗುರಿ ಹೊಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ರೂಪೇಶ ಪುತ್ತೂರು ಅವರು ಮಾತನಾಡಿ, “ಕನ್ನಡ ನೆಲ, ಜಲ, ಸಂಸ್ಕೃತಿಯ ರಕ್ಷಣೆ, ಸಮಗ್ರ ಅಭಿವೃದ್ಧಿ ಹಾಗೂ ಸಮಾಜದಲ್ಲಿ ದ್ವೇಷ ಭಾವನೆಯನ್ನು ಅಳಿಸಿ ಪ್ರೀತಿ, ಬಾಂಧವ್ಯ, ಸೌಹಾರ್ದತೆ ನೆಲೆಸುವ ಮೂಲಕ ಸರ್ವಜನಾಂಗದ ಶಾಂತಿಯ ತೋಟ ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರು ಜೀವನ ನಡೆಸಬೇಕು ಎಂಬುದು ನನ್ನ ಸದಾಶಯ. ಜೊತೆಗೆ ಕನ್ನಡ ನೆಲದಲ್ಲಿ ಕನ್ನಡವೇ ಸಾರ್ವಭೌಮ ಆಗಬೇಕೆಂಬುವುದು ನನ್ನ ಮೌನ ಕಾಲ್ನಡಿಗೆಯ ಉದ್ದೇಶವಾಗಿದೆ” ಎಂದರು.

“ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ 24 ಗಂಟೆಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿರುವ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ನೈಜ ಇತಿಹಾಸದ ಅರಿವಿನ ಕೊರತೆಯಿಂದ ಸಮಾಜದಲ್ಲಿ ದ್ವೇಷ, ಅಸೂಯೆ ಮತ್ತು ಮೂಢನಂಬಿಕೆಗಳು ಬೆಳೆಯುತ್ತಿದ್ದು, ಅವುಗಳನ್ನು ತೊಡೆದುಹಾಕಲು ಜ್ಞಾನ ಹಾಗೂ ಸಂವಿಧಾನಿಕ ಮೌಲ್ಯಗಳ ಅರಿವು ಅಗತ್ಯವಾಗಿದೆ. ಅಧಿಕಾರಸ್ಥರು ತಮ್ಮ ಅಮೂಲ್ಯವಾದ ಸಮಯವನ್ನು ನಾಡಿಗೆ ಸರ್ವತೋಮುಖ ಅಭಿವೃದ್ಧಿಗಾಗಿ ವ್ಯಯಿಸಬೇಕು ಎಂಬುದು ನನ್ನ ಹಕ್ಕೊತ್ತೊಯವಾಗಿದ್ದು, ಈ ಬಗ್ಗೆ ಪಾದಯಾತ್ರೆಯ ಮುಕ್ತಾಯ ದಿನದಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು” ಎಂದರು.

ಬುದ್ಧ–ಬಸವ–ಅಂಬೇಡ್ಕರ್ ಯುವ ಸಂಘಟನೆ ಅಧ್ಯಕ್ಷ ಮಹೇಶ್ ಗೋರನಾಳಕರ್ ಮಾತನಾಡಿ, “ಬೆಂಗಳೂರರಿನ ಪ್ರೊ ರೂಪೇಶ್ ಪುತ್ತೂರು ಅವರು ಶರಣರ ಕಲ್ಯಾಣ ನೆಲವಾದ ಬೀದರ ಜಿಲ್ಲೆಯಿಂದ ಏಕಾಂಗಿಯಾಗಿ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಿರುವುದು ಐತಿಹಾಸಿಕ ಸಾಹಸವಾಗಿದೆ. ನಾಡು,ನುಡಿ,ಜಲ, ಭಾಷೆ ಸೇರಿದಂತೆ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸುವ ಅವರ ಉದ್ದೇಶಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ” ಎಂದರು.

ಪಾದಯಾತ್ರೆ ಸಾಗುವ ಮಾರ್ಗದಲ್ಲಿರುವ ಗ್ರಾಮಸ್ಥರು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ವಸತಿ, ಊಟೋಪಚಾರ ಸೇರಿದಂತೆ ಅಗತ್ಯ ಸಹಕಾರ ನೀಡಿ ಈ ಸಾಮಾಜಿಕ ಕ್ರಾಂತಿಯ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

WhatsApp Image 2026 07 12 at 9.44.29 AM
ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಸಮೀಪ ರೂಪೇಶ ಪುತ್ತೂರು ಅವರೊಂದಿಗೆ ಕಾಲ್ನಡಿಯಲ್ಲಿ ಜೊತೆಯಾದ ಸಂಜೀವಕುಮಾರ ಅತಿವಾಳೆ, ಜಗದೀಶ್ವರ ಬಿರಾದರ್

ಟೀಮ್ ಯುವಾ ಸಂಸ್ಥೆಯ ಸಂಯೋಜಕ ವಿನಯಕುಮಾರ ಮಾಳಗೆ ಮಾತನಾಡಿ, “ಸಮಾಜದಲ್ಲಿ ಸೌಹಾರ್ದ ಮತ್ತು ಬಾಂಧವ್ಯದ ಜಾಗೃತಿ ಅತ್ಯಂತ ಅಗತ್ಯವಾಗಿದ್ದು, ದ್ವೇಷ ಮತ್ತು ವಿಭಜನೆಯ ಮನೋಭಾವವನ್ನು ತೊಡೆದುಹಾಕಲು ಇಂತಹ ಜನಜಾಗೃತಿ ಪಾದಯಾತ್ರೆಗಳು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ತಮ್ಮ ವೃತ್ತಿ ಬದುಕು ತೊರೆದು ನಾಡಿನ ಸಾಮರಸ್ಯಕ್ಕಾಗಿ ಕಾಲ್ನಡಿಗೆ ಆರಂಭಿಸಿದ್ದು ಬದಲಾವಣೆ ಸಮಾಜ ಬಯಸುವ ಎಲ್ಲರೂ ಇದಕ್ಕೆ ಬೆಂಬಲಿಸಬೇಕು” ಎಂದು ನುಡಿದರು.

ಇದನ್ನೂ ಓದಿ : ಬೀದರ್‌ | ಅಲ್ಲಮನ ವಚನಗಳಲ್ಲಿ ಮಾನವೀಯತೆಯ ದಾರಿ : ಭಾರತಿ ವಸ್ತ್ರದ್

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣರಾವ ಭೋಸ್ಲೆ, ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದಿನೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ ಗಾದಗಿ, ಡಾ. ಬಿ.ಆರ್.ಅಂಬೇಡ್ಕರ್ ಯೂತ್ ಬ್ರಿಗೇಡ್ ಅಧ್ಯಕ್ಷ ಉದಯ ನಾಯಕ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ಸಾಮಾಜಿಕ ಚಿಂತಕ ಜಗದೀಶ್ವರ ಬಿರಾದರ, ಯುವ ಮುಖಂಡ ಶ್ರೀಧರ ಸೊಮನೋರ್, ಕಾರ್ಮಿಕ ಮುಖಂಡ ತುಕಾರಾಮ ನೆಳಗೆ, ಜಾನಪದ ಸಾಂಸ್ಕೃತಿಕ ತಂಡದ ನಾಯಕ ಅರ್ಜುನ ಕಾಂಚೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಪಾದಯಾತ್ರೆಗೆ ಶುಭಹಾರೈಸಿ ಬೀಳ್ಕೊಟ್ಟರು.

WhatsApp Image 2026 07 10 at 10.19.32 PM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ನನ್ನನ್ನು ಬಂಧಿಸಿರಲಿಲ್ಲ, ಕಿಡ್ನಾಪ್ ಮಾಡಲಾಗಿತ್ತು: ಧೃವ್ ರಾಠಿ ಆರೋಪ

ಸಿಜೆಪಿ ಪ್ರತಿಭಟನೆಗೂ ಮುನ್ನ ಶನಿವಾರ ಮುಂಜಾನೆ ಖ್ಯಾತ ಯೂಟ್ಯೂಬರ್‌ ಧೃವ್ ರಾಠಿ...

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿದೆ. ಹಿಂಗಾರು ಮಳೆಯೂ ಆರಂಭವಾಗುತ್ತಿದೆ. ಪರಿಣಾಮ, ಮುಂದಿನ 4...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19...