ಬೀದರ್‌ | ಅಲ್ಲಮನ ವಚನಗಳಲ್ಲಿ ಮಾನವೀಯತೆಯ ದಾರಿ : ಭಾರತಿ ವಸ್ತ್ರದ್

Date:

ಅಲ್ಲಮ ಪ್ರಭುದೇವರ ವಚನಗಳು ಮನುಷ್ಯನನ್ನು ಶೂನ್ಯದಿಂದ ಪರಿಪೂರ್ಣತೆಯೆಡೆಗೆ ಒಯ್ಯುತ್ತವೆ ಎಂದು ಸಾಹಿತಿ ಭಾರತಿ ವಸ್ತ್ರದ್ ಅಭಿಪ್ರಾಯಪಟ್ಟರು.

- Advertisement -

ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ವಚನಾಮೃತ ಕನ್ನಡ ಸಂಘದಿಂದ ನಡೆದ ಮಹಾನುಭಾವಿ ಅಲ್ಲಮ ಪ್ರಭುದೇವರು ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, “ಅಲ್ಲಮನ ವಚನಗಳಲ್ಲಿ ಮಾನವೀಯತೆಯ ದಾರಿ ಇದೆ. ನಾಳೆಯ ನೆಮ್ಮದಿಯ ಬದುಕಿಗಾಗಿ ಸಮಾಜಕ್ಕೆ ಅವರ ಚಿಂತನೆಗಳು ಜರೂರಿಯಾಗಿವೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಡಾ.ಗಂಗಾಂಬಿಕೆ ಅಕ್ಕ ಸಾನಿಧ್ಯ ವಹಿಸಿ ಮಾತನಾಡಿ, “ವ್ಯೋಮಕಾಯ ಅಲ್ಲಮ ಪ್ರಭುದೇವರ ವ್ಯಕ್ತಿತ್ವ ಯಾರಿಗೂ ನಿಲುಕದಂಥದ್ದು. ಆದರೆ, ಅಲ್ಲಮರು ಎಲ್ಲರಿಗೂ ಬೇಕು. ಅಲ್ಲಮರನ್ನು ಅರಿತು, ಅವರ ವಿಚಾರಗಳನ್ನು ಅರ್ಥೈಸಿಕೊಂಡರೆ ಜೀವನದ ದಾರಿ ಸರಳವಾಗಲಿದೆ” ಎಂದು ತಿಳಿಸಿದರು.

ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, “ವಚನಾಮೃತ ಕನ್ನಡ ಸಂಘದಿಂದ ಜಿಲ್ಲೆಯ ಮನೆ-ಮನೆಗೆ ವಚನ ಸಾಹಿತ್ಯದ ಕೃತಿಗಳನ್ನು ತಲುಪಿಸಲಾಗುವುದು. ಮನೆಗಳಲ್ಲಿ ಕಾರ್ಯಕ್ರಮ ಸಂಘಟಿಸಿ, ಶರಣರ ವಿಚಾರಗಳನ್ನು ಜನ ಮನಕ್ಕೆ ಮುಟ್ಟಿಸಲಾಗುವುದು. ಕನ್ನಡ ಭಾಷಾ ಅಭಿವೃದ್ಧಿಗಾಗಿ ಸಂಘದಿಂದ ಕಮ್ಮಟ ಏರ್ಪಡಿಸಲಾಗುವುದು. ಮಕ್ಕಳಿಗೆ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಹಂತದಲ್ಲಿ ವಚನ ಸಾಹಿತ್ಯ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.

ಮೂರು ಪ್ರತ್ಯೇಕ ವಿಚಾರ ಸಂಕಿರಣಗಳಲ್ಲಿ ಡಾ.ಶ್ರೀಶೈಲ ನಾಗರಾಳ ಕಲಬುರಗಿ, ಹೊಸಪೇಟೆಯ ಡಾ.ಮೃತ್ಯುಂಜಯ ರುಮಾಲೆ, ಡಾ.ಶಿವಲಿಂಗ ಹೇಡೆ, ಡಾ.ವಿಕ್ರಮ ವಿಸಾಜಿ, ಡಾ.ಕಾವ್ಯಶ್ರೀ ಮಹಾಗಾಂವಕರ್, ಬೆಳಗಾವಿಯ ಡಾ. ಡಿ.ಎಸ್.ಚೌಗುಲೆ, ಡಾ.ಜಗದೇವಿ ಮೈನಾಳೆ, ಭಗವಂತಪ್ಪ ಅಣ್ಣೆಪ್ಪನೋರ ಹಾಗೂ ರೇಣುಕಾ ಎನ್.ಬಿ.ಉಪನ್ಯಾಸ ನೀಡಿದರು. ಡಾ.ಭಾಗೀರಥಿ ಕೊಂಡಾ, ಡಾ.ವಿಜಯಶ್ರೀ ಬಶೆಟ್ಟಿ ಹಾಗೂ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ : ಬೀದರ್‌ | ಸೇವಾ ನಿರತ ಶಿಕ್ಷಕರ ಹಕ್ಕು ರಕ್ಷಣೆಗೆ ಆಗ್ರಹಿಸಿ ಸಂಸದ ಸಾಗರ ಖಂಡ್ರೆಗೆ ಮನವಿ

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ರಾಜಶೇಖರ ಮಂಗಲಗಿ, ಸಾಹಿತಿಗಳಾದ ಪುಣ್ಯವತಿ ವಿಸಾಜಿ, ಜಯದೇವಿ ಯದಲಾಪುರೆ, ಪಾರ್ವತಿ ಸೋನಾರೆ, ಡಾ. ದೇವಕಿ ನಾಗೂರೆ, ರೇಣುಕಾ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಶೋಕ ಬೂದಿಹಾಳ್, ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ. ಉಮಾಕಾಂತ ಮೀಸೆ ಇದ್ದರು. ಸಂತೋಷಕುಮಾರ ಮಂಗಳೂರೆ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿದೆ. ಹಿಂಗಾರು ಮಳೆಯೂ ಆರಂಭವಾಗುತ್ತಿದೆ. ಪರಿಣಾಮ, ಮುಂದಿನ 4...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ...