ರಾಜಭವನದಲ್ಲಿ ಕೇಂದ್ರದ ಕೀಲುಗೊಂಬೆಯಾಟ: ಮಹಾರಾಷ್ಟ್ರದ ‘ಮಧ್ಯರಾತ್ರಿ’ಯಿಂದ ತಮಿಳುನಾಡಿನ ‘ಷರತ್ತು’ಗಳವರೆಗೆ

Date:

ಅಸ್ಥಿರ ಸರ್ಕಾರವನ್ನು ತಡೆಯುವ ನೆಪದಲ್ಲಿ ತಮಿಳುನಾಡು ರಾಜ್ಯಪಾಲರು ಹಾಕಿರುವ ಷರತ್ತು ಸಂಪೂರ್ಣ ತಾರತಮ್ಯದಿಂದ ಕೂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತೋರಿದ ಔದಾರ್ಯ ತಮಿಳುನಾಡಿನಲ್ಲಿ ಮಾಯವಾಗಿರುವುದು ರಾಜಭವನಗಳು ಕೇಂದ್ರದ ‘ಕೈಗೊಂಬೆ’ಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಸಾಬೀತುಪಡಿಸಿದೆ

- Advertisement -

ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ‘ತ್ರಿಶಂಕು ವಿಧಾನಸಭೆ’ (Hung Assembly) ನಿರ್ಮಾಣವಾದಾಗ ರಾಜ್ಯಪಾಲರ ಪಾತ್ರ ಅತ್ಯಂತ ನಿರ್ಣಾಯಕ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹುದ್ದೆ ಸಾಂವಿಧಾನಿಕ ಘನತೆಗಿಂತ ಹೆಚ್ಚಾಗಿ ರಾಜಕೀಯ ಚದುರಂಗದಾಟದ ದಾಳವಾಗಿ ಬಳಕೆಯಾಗುತ್ತಿರುವುದು ವಿಪರ್ಯಾಸ. ಪ್ರಸ್ತುತ ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ನಾಯಕ ವಿಜಯ್‌ ಅವರಿಗೆ ಸರ್ಕಾರ ರಚೆನೆಗೂ ಮುನ್ನವೇ ಮಹುಮತದ ಸಂಖ್ಯೆ ‘118’ ಶಾಸಕರ ಬೆಂಬಲವನ್ನು ಖಚಿತವಾಗಿ ಸಾಬೀತುಪಡಿಸುವಂತೆ ರಾಜ್ಯಪಾಲ ರಾಜೇಂದ್ರ ಅರಳೇಕರ್ ಅವರು ವಿಧಿಸಿರುವ ಕಠಿಣ ಷರತ್ತು ಈ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸಂವಿಧಾನದ 164ನೇ ವಿಧಿಯಡಿ ಮುಖ್ಯಮಂತ್ರಿಯನ್ನು ನೇಮಿಸುವ ವಿವೇಚನಾಧಿಕಾರ ರಾಜ್ಯಪಾಲರಿಗಿದೆ. ತ್ರಿಶಂಕು ಸ್ಥಿತಿಯಲ್ಲಿ ಅತಿ ದೊಡ್ಡ  ಪಕ್ಷ ಅಥವಾ ಮೈತ್ರಿಕೂಟವನ್ನು ಸರ್ಕಾರ ರಚಿಸಲು ಆಹ್ವಾನಿಸುವುದು ಸಾಂವಿಧಾನಿಕ ಸಂಪ್ರದಾಯ. ಆದರೆ, ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ರಾಜ್ಯಪಾಲರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ ಬದಲು, ಕೇಂದ್ರ ಸರ್ಕಾರದ ಸ್ಪಷ್ಟ  ನಿರ್ದೇಶನದಂತೆ ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ನೈಜ ಚಿತ್ರಣ ಗೋಚರಿಸುತ್ತಿದೆ.

ಈ ತಾರತಮ್ಯವನ್ನು ಅರ್ಥಮಾಡಿಕೊಳ್ಳಲು 2019ರ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಹೈಡ್ರಾಮಾವನ್ನು ಸ್ಮರಿಸಲೇಬೇಕು. ಅಂದು ರಾಜ್ಯಪಾಲರಾಗಿದ್ದ ಭಗತ್ ಸಿಂಗ್ ಕೋಶಿಯಾರಿ ಅವರು, ಬೆಳಗಿನ ಜಾವವೇ ದಿಢೀರನೆ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು, ಬಿಜೆಪಿಯ ದೇವೇಂದ್ರ ಫಡನವೀಸ್ ಮತ್ತು ಅವಿಭಜಿತ ಎನ್‌ಸಿಪಿಯ ಎನ್‌ಸಿಪಿಯ ಅಜಿತ್‌ ಪವಾರ್‌ ಅವರಿಗೆ ಮುಂಜಾನೆಯೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದ್ದರು. ಶಾಸಕರು ನಿಜಕ್ಕೂ ಜೊತೆಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳದೆ ಇಲ್ಲದೆ ಕೇವಲ ಬೆಂಬಲ ಪತ್ರಗಳ ಆಧಾರದ ಮೇಲೆ ಸರ್ಕಾರ ರಚನೆಗೆ ಮುಕ್ತ ಅವಕಾಶ ನೀಡಲಾಗಿತ್ತು.

ಈ ಇಬ್ಬಗೆಯ ಹಾಗೂ ತಾರತಮ್ಯ ನೀತಿಗೆ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ನಂತರದ ವಿದ್ಯಮಾನಗಳು ಮತ್ತೊಂದು ಸ್ಪಷ್ಟ ನಿದರ್ಶನ. ಅಂದು ಅತಂತ್ರ ಫಲಿತಾಂಶ ಬಂದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವು ಸರ್ಕಾರ ರಚನೆಗೆ ಅಗತ್ಯವಿದ್ದ 112ಕ್ಕೂ ಹೆಚ್ಚು ಶಾಸಕರ ಸ್ಪಷ್ಟ ಬೆಂಬಲ ಪತ್ರ ನೀಡಿದ್ದರೂ, ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಅದನ್ನು ಬದಿಗೊತ್ತಿದ್ದರು. ಬದಲಿಗೆ, ಬಹುಮತದ ಕೊರತೆಯಿದ್ದರೂ ಕೇವಲ ‘ಅತಿ ದೊಡ್ಡ ಪಕ್ಷ’ ಎಂಬ ಕಾರಣಕ್ಕೆ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಿ, ಬಹುಮತ ಸಾಬೀತುಪಡಿಸಲು ಬರೋಬ್ಬರಿ 15 ದಿನಗಳ ಕಾಲಾವಕಾಶ ನೀಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಕೇವಲ 24 ಗಂಟೆಗಳಲ್ಲಿ ವಿಶ್ವಾಸಮತ ಯಾಚಿಸುವಂತೆ ಆದೇಶಿಸಿದಾಗ ಸರ್ಕಾರ ಪತನಗೊಂಡಿತು. ಅಂದು ವಾಸ್ತವಿಕ ಬಹುಮತವಿದ್ದವರನ್ನು ಕಡೆಗಣಿಸಿದ್ದ ರಾಜಭವನ, ಇಂದು ಭಿನ್ನ ನಿಲುವು ತಳೆಯುತ್ತಿರುವುದು ಅದರ ದ್ವಂದ್ವ ನೀತಿಗೆ ಕನ್ನಡಿಯಾಗಿದೆ.

ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಷ್ಟು ಧಾರಾಳತನ ತೋರಿದ್ದ ರಾಜ್ಯಪಾಲರ ನಡೆಯೇ ಬೇರೆ, ಇದೀಗ ತಮಿಳುನಾಡಿನ ನಡೆಯೇ ಬೇರೆ. ತಮಿಳುನಾಡಿನ ಒಟ್ಟು 234 ಸ್ಥಾನಗಳ ಪೈಕಿ ಸರಳ ಬಹುಮತಕ್ಕೆ ಬೇಕಿರುವ ನಿಖರ 118 ಶಾಸಕರ ಬೆಂಬಲವನ್ನು ಪ್ರಮಾಣವಚನಕ್ಕೂ ಮುನ್ನವೇ ತೋರಿಸಬೇಕು ಎಂದು ಟಿವಿಕೆ ಪಕ್ಷದ ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಷರತ್ತು ವಿಧಿಸಲಾಗಿದೆ. ವಿಜಯ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದಾಗಲು ಇದೇ ಷರತ್ತನ್ನು ವಿಧಿಸಲಾಗಿದೆ. ಒಂದೇ ಸಂವಿಧಾನ, ಆದರೆ ರಾಜ್ಯ ಮತ್ತು ಪಕ್ಷಗಳಿಗೆ ಅನುಗುಣವಾಗಿ ರಾಜ್ಯಪಾಲರ ನಿಯಮಗಳು ಮಾತ್ರ ಭಿನ್ನವಾಗಿರುವುದು ಈ ದ್ವಂದ್ವ ನೀತಿಗೆ ಮತ್ತು ಪಕ್ಷಪಾತಕ್ಕೆ ನೇರ ಸಾಕ್ಷಿಯಾಗಿದೆ.

ರಾಜ್ಯಪಾಲರ ಈ ನಡೆ ಮೇಲ್ನೋಟಕ್ಕೆ ಸ್ಥಿರ ಸರ್ಕಾರದ ಪರವಾಗಿರುವಂತೆ ಕಂಡರೂ, ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ, ಪ್ರಬಲವಾಗಿ ಹೊರಹೊಮ್ಮುತ್ತಿರುವ ಪ್ರಾದೇಶಿಕ ನಾಯಕರು ಸುಲಭವಾಗಿ ಅಧಿಕಾರ ಹಿಡಿಯದಂತೆ ತಡೆಯುವ ತಂತ್ರವಾಗಿ ಈ ಷರತ್ತುಗಳನ್ನು ರಾಜಭವನದ ಮೂಲಕ ಬಳಸಲಾಗುತ್ತಿದೆ ಎಂಬ ಟೀಕೆಗಳಲ್ಲಿ ಹುರುಳಿದೆ.

ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ‘ಎಸ್.ಆರ್. ಬೊಮ್ಮಾಯಿ’ ಪ್ರಕರಣ ಸೇರಿದಂತೆ ಹಲವು ತೀರ್ಪುಗಳಲ್ಲಿ ಬಹುಮತ ಸಾಬೀತುಪಡಿಸುವ ನೈಜ ವೇದಿಕೆ ‘ವಿಧಾನಸಭೆಯ ಕಲಾಪ’ (Floor of the House) ಎಂದು ಸ್ಪಷ್ಟವಾಗಿ ಹೇಳಿದೆ. ರಾಜಭವನದ ಕೊಠಡಿಗಳಲ್ಲಿ ಬಹುಮತದ ತೀರ್ಮಾನವಾಗಬಾರದು. ಹೀಗಿದ್ದರೂ, ತಮಿಳುನಾಡು ರಾಜ್ಯಪಾಲರು ಮೊದಲೇ 118ರ ಲೆಕ್ಕ ಕೇಳುತ್ತಿರುವುದು ಸುಪ್ರೀಂ ಕೋರ್ಟ್ ಆದೇಶಗಳ ಆಶಯಕ್ಕೂ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಿಗೂ ವಿರುದ್ಧವಾಗಿದೆ.

ಈ ಷರತ್ತಿನ ಹಿಂದಿರುವ ಮತ್ತೊಂದು ಅಪಾಯಕಾರಿ ರಾಜಕೀಯ ಲೆಕ್ಕಾಚಾರವೆಂದರೆ ಪರೋಕ್ಷವಾಗಿ ಸಮಯಾವಕಾಶ ಒದಗಿಸುವುದು. ಟಿ.ವಿ.ಕೆ ಸರ್ಕಾರ ರಚನೆಯನ್ನು ವಿಳಂಬ ಮಾಡುವುದರಿಂದ, ಪ್ರತಿಸ್ಪರ್ಧಿ ಬಣಗಳಿಗೆ ಅಥವಾ ಕೇಂದ್ರದ ಬೆಂಬಲಿತ ಪಕ್ಷಗಳಿಗೆ ‘ಕುದುರೆ ವ್ಯಾಪಾರ’ (Horse-trading) ನಡೆಸಲು ಅನ್ಯಾಯದ ಕಾಲಾವಕಾಶ ಮಾಡಿಕೊಟ್ಟಂತಾಗುತ್ತದೆ. ಇದು ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುವ ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ.

ಅಸ್ಥಿರ ಸರ್ಕಾರವನ್ನು ತಡೆಯುವ ನೆಪದಲ್ಲಿ ತಮಿಳುನಾಡು ರಾಜ್ಯಪಾಲರು ಹಾಕಿರುವ ಷರತ್ತು ಸಂಪೂರ್ಣ ತಾರತಮ್ಯದಿಂದ ಕೂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತೋರಿದ ಔದಾರ್ಯ ತಮಿಳುನಾಡಿನಲ್ಲಿ ಮಾಯವಾಗಿರುವುದು ರಾಜಭವನಗಳು ಕೇಂದ್ರದ ‘ಕೈಗೊಂಬೆ’ಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಸಾಬೀತುಪಡಿಸಿದೆ. ಸಂವಿಧಾನದ ರಕ್ಷಕರಾಗಬೇಕಿದ್ದ ರಾಜ್ಯಪಾಲರು ರಾಜಕೀಯ ಪಕ್ಷಪಾತದ ದಾಳಗಳಾಗುತ್ತಿರುವುದು ಭವಿಷ್ಯದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ ಬೆಳವಣಿಗೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...