ಗಾಯದ ಮೇಲೆ ಬರೆ: ಇಂಧನ ಲೀಟರ್‌ಗೆ 5 ರೂ., ಸಿಲಿಂಡರ್‌ಗೆ 50ರೂ. ಏರಿಕೆ ಸಾಧ್ಯತೆ!

Date:

ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದ್ದು, ಪೆಟ್ರೋಲ್, ಡೀಸೆಲ್ ಸೇರಿದಂತೆ ಇಂಧನ ದರಗಳು ಹಾಗೂ ಗೃಹಬಳಕೆಯ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

- Advertisement -

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಇಂಧನ ದರವು ಪ್ರತಿ ಲೀಟರ್‌ಗೆ 4 ರಿಂದ 5 ರೂಪಾಯಿಗಳಷ್ಟು ದುಬಾರಿಯಾಗುವ ಲಕ್ಷಣಗಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ಹಾಗೂ ಸಾಗಾಣಿಕಾ ವೆಚ್ಚದ ಪರಿಷ್ಕರಣೆಗಳು ಈ ದರ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಬೆಲೆ ಏರಿಕೆಯು ಅಧಿಕೃತವಾಗಿ ಜಾರಿಗೆ ಬಂದರೆ, ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ನಿಶ್ಚಿತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

ಇದನ್ನು ಓದಿದ್ದೀರಾ? IPL | ದಿಗ್ಗಜರ ದಾಖಲೆ ಧೂಳೀಪಟ ಮಾಡಿದ 15ರ ಪೋರ ವೈಭವ್ ಸೂರ್ಯವಂಶಿ

ಇಂಧನ ದರದ ಜೊತೆಗೆ, ಅಡುಗೆ ಮನೆಯ ಬಜೆಟ್‌ಗೂ ಪೆಟ್ಟು ಬೀಳುವ ಮುನ್ಸೂಚನೆ ಸಿಕ್ಕಿದೆ. ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 40 ರಿಂದ 50 ರೂಪಾಯಿಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಏರಿಕೆಯು ನೇರವಾಗಿ ಮಧ್ಯಮ ವರ್ಗದ ಹಾಗೂ ಸಾಮಾನ್ಯ ಜನರ ದೈನಂದಿನ ಆರ್ಥಿಕ ಲೆಕ್ಕಾಚಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಒಂದು ವೇಳೆ ಇಂಧನ ದರದಲ್ಲಿ 4-5 ರೂಪಾಯಿಗಳಷ್ಟು ಏರಿಕೆಯಾದಲ್ಲಿ, ಸಾರಿಗೆ ವೆಚ್ಚವೂ ದುಬಾರಿಯಾಗಲಿದ್ದು, ಇದು ಪರೋಕ್ಷವಾಗಿ ದಿನಬಳಕೆಯ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ದಾರಿಮಾಡಿಕೊಡಲಿದೆ. ತೈಲ ಮಾರುಕಟ್ಟೆ ಕಂಪನಿಗಳು (OMCs) ಈ ದರ ಪರಿಷ್ಕರಣೆಯ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದ ಮೂಲಕ ಆಕ್ರೋಶ ಹೊರಹಾಕಿ: ಕಾಂಗ್ರೆಸ್ ಕರೆ

ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ, ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಸಾಮಾನ್ಯ...

ಮೋದಿ ಸರ್ಕಾರದಿಂದ ‘ಮತ ಕಳ್ಳತನ’ದ ನಂತರ ‘ಹಕ್ಕುಗಳ ಕಳ್ಳತನ’ ಶುರು: ರಾಹುಲ್ ಗಾಂಧಿ ಆಕ್ರೋಶ

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು; ರೂ.264.61 ಲಕ್ಷ ಪರಿಹಾರ ಬಾಕಿ!

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ...