ನಾನು ಎಷ್ಟೇ ಮೂರ್ಖತನದ ಮಾತು ಆಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ: ಟ್ರಂಪ್

Date:

“ನಾನು ಎಷ್ಟೇ ಮೂರ್ಖತನದ ಮಾತುಗಳನ್ನು ಆಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದ್ದಾರೆ. ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟ್ರೋಲ್‌ಗೆ ಗುರಿಯಾಗಿದೆ.

- Advertisement -

ಅಮೆರಿಕದ ಟೆನ್ನೆಸ್ಸಿಯ ಕ್ಲಾರ್ಕ್ಸ್‌ವಿಲ್‌ನಲ್ಲಿರುವ ‘ಎಫ್‌&ಎಮ್ ಬ್ಯಾಂಕ್ ಅರೆನಾ’ದಲ್ಲಿ ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಆಯೋಜಿಸಿದ್ದ ಬೃಹತ್ ಸಭೆಯನ್ನು ಉದ್ದೇಶಿಸಿ ಟ್ರಂಪ್ ಮಾತನಾಡಿದ್ದಾರೆ. “ಈ ರಾಜ್ಯದಲ್ಲಿ ನಾವು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ಖಚಿತ. ಆದರೂ ನಮ್ಮ ಬೆಂಬಲಿಗರಿಗೆ ಧನ್ಯವಾದ ಸಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಇದೇ ವೇಳೆ, ತಮ್ಮ ಸಭೆಗಳಿಗೆ ಸೇರುವ ಜನಸ್ತೋಮ ಮತ್ತು ಅವರ ಪ್ರೀತಿಯ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, “ಸಭೆಯಲ್ಲಿ ಸೇರಿರುವ ಜನರಲ್ಲಿ ಅಪಾರ ಪ್ರೀತಿ ಇದೆ. ಹಾಗಾಗಿ ನಾನು ಎಷ್ಟೇ ಮೂರ್ಖತನದ ಮಾತುಗಳನ್ನಾಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ” ಎಂದು ತಮಾಷೆ ಮಾಡಿದ್ದಾರೆ.

“ದೇಶದ ಗಡಿ ಭದ್ರತೆ, ತೆರಿಗೆ ಇಳಿಕೆ ಹಾಗೂ ಬಲವಾದ ಸೇನೆಯನ್ನು ಹೊಂದುವುದು ಸಾಮಾನ್ಯ ಜ್ಞಾನದ ವಿಷಯಗಳಾಗಿವೆ. ಇಂತಹ ನಿಲುವುಗಳಿಗೇ ಜನರು ಬೆಂಬಲ ನೀಡುತ್ತಾರೆ” ಎಂದಿದ್ದಾರೆ.

ಬೆಂಬಲಿಗರ ಚಪ್ಪಾಳೆ ಕುರಿತು ಟ್ರಂಪ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ತೀವ್ರ ವಿಮರ್ಶೆ ಮತ್ತು ಟ್ರೋಲ್ ಮಾಡುತ್ತಿದ್ದಾರೆ. ಅಂಧಾಭಿಮಾನದ ಬೆಂಬಲಿಗರ ಬಗ್ಗೆ ಟ್ರಂಪ್ ಅವರೇ ಮುಕ್ತವಾಗಿ ಮಾತನಾಡಿದ್ದಾರೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

ಈ ವಿಡಿಯೋ ಭಾರತದಲ್ಲಿಯೂ ವೈರಲ್ ಆಗುತ್ತಿದ್ದು, ಹಲವರು ಮೋದಿ ಮತ್ತು ಮೋದಿ ಅವರ ಅಂಧಭಕ್ತರನ್ನು ಈ ಸನ್ನಿವೇಶಕ್ಕೆ ಹೋಲಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮುದಾಯ ಶೌಚಾಲಯ | ಕೋಟಿ ಹಣ ಖರ್ಚಾದರೂ ಮುಗಿಯದ ಕಾಮಗಾರಿ, ತೆರೆಯದ ಬಾಗಿಲು!

ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ನೈರ್ಮಲ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ...

ಬಸ್‌ಗಳನ್ನೇ ಜೈಲುಗಳನ್ನಾಗಿ ಪರಿವರ್ತಿಸಲಾಗುತ್ತಿದೆಯೇ? – ಕಸ್ಟಡಿ ವಾಹನದ ಪರಿಸ್ಥಿತಿ ಬಿಚ್ಚಿಟ್ಟ ನೇಹಾ ಬೋರಾ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ...

ಪ್ರತಿಭಟನೆ ನಡೆಸುವುದಿಲ್ಲವೆಂದು ಯಾವುದೇ ಬಾಂಡ್‌ಗೆ ಸಹಿ ಹಾಕಿಲ್ಲ: ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಸ್ಪಷ್ಟನೆ

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಸಿಪಿಜೆ ಆಯೋಜಿಸಿದ್ದ ಪ್ರತಿಭಟನೆಯ ವೇಳೆ...