‘ಹಾಫ್ ಹೆಲ್ಮೆಟ್’ ನಿಷೇಧ: ಇನ್ಮುಂದೆ ನಿಯಮ ಮೀರಿದರೆ ಭಾರೀ ದಂಡ; ಸಂಚಾರ ಪೊಲೀಸರ ಬಿಗಿ ಕ್ರಮ

Date:

ದ್ವಿಚಕ್ರ ವಾಹನ ಸವಾರರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಚಾರ ಪೊಲೀಸ್ ಇಲಾಖೆ, ಬೆಂಗಳೂರು ನಗರ ಸಂಚಾರ ಪೊಲೀಸರು (ಬಿಟಿಪಿ) ಹಾಫ್ ಹೆಲ್ಮೆಟ್ (ಅರ್ಧ ಹೆಲ್ಮೆಟ್) ಮತ್ತು ಬಿಎಸ್‍ಐ/ಐಎಸ್‌ಐ ಪ್ರಮಾಣೀಕರಣವಿಲ್ಲದ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದಾರೆ. ಈ ನಿಯಮವನ್ನು ಉಲ್ಲಂಘಿಸುವ ಸವಾರರ ವಿರುದ್ಧ ದಂಡ ವಿಧಿಸುವ ಪ್ರಕ್ರಿಯೆಯನ್ನು ಸಂಚಾರ ಪೊಲೀಸರು ಚುರುಕುಗೊಳಿಸಿದ್ದಾರೆ.

- Advertisement -

ಅಪಘಾತ ಸಂಭವಿಸಿದಾಗ ಹಾಫ್ ಹೆಲ್ಮೆಟ್‌ಗಳಿಂದಾಗಿ ಸವಾರರ ತಲೆ, ಗಲ್ಲ ಹಾಗೂ ಕತ್ತಿನ ಭಾಗಕ್ಕೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಅನೇಕ ಅಪಘಾತಗಳಲ್ಲಿ ಹಾಫ್ ಹೆಲ್ಮೆಟ್ ಧರಿಸಿದ್ದರೂ ಗಂಭೀರ ತಲೆ ಏಟು ಉಂಟಾಗಿ ಜೀವಹಾನಿ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಕ್ರೀಡೆ, ವ್ಯಾಪಾರ ಮತ್ತು ಮೌನ: ಲಿಯೋನೆಲ್ ಮೆಸ್ಸಿ ಎಂಬ...

2013ರ ಪ್ರವಾಸದ ವೇಳೆ ಅವರು ಇಸ್ರೇಲ್‌ನ ವೆಸ್ಟರ್ನ್ ವಾಲ್‌ನಲ್ಲಿ 'ಕಿಪ್ಪಾ' (ಯಹೂದಿಗಳ ಸಾಂಪ್ರದಾಯಿಕ ಟೋಪಿ) ಧರಿಸಿ ನಿಂತಿದ್ದ ಚಿತ್ರವು, ಅವರ ಇಸ್ರೇಲ್ ಪರ ಒಲವಿಗೆ ಅಳಿಸಲಾಗದ ಸಾಕ್ಷಿಯಾಗಿ ಉಳಿದುಕೊಂಡಿದೆ. ಶಾಂತಿ ಪ್ರವಾಸದ ಹೆಸರಿನಲ್ಲಿ...

ಆಪ್ಟೋಜೆನೆಟಿಕ್ಸ್ ಸಂಶೋಧನೆಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ: ನರಕೋಶಗಳಿಗೆ ಸಂಜೀವಿನಿಯಾಗಲಿರುವ...

ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಾರ್ಲ್ ಡಿಸೆರೋತ್, ಜರ್ಮನಿಯ ಬರ್ಲಿನ್ನಿನ ಹಮ್‌ಬೋಲ್ಟ್ ವಿಶ್ವವಿದ್ಯಾಲಯದ ಪೀಟರ್ ಹೆಗೆಮನ್ ಮತ್ತು ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಜಾರ್ಜ್ ನಾಗೆಲ್ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 5ರಂದು ಭಾರತೀಯ ಕಾಲಮಾನ...

ಇದನ್ನೂ ಓದಿ: ಬೆಳಗಾವಿ | ಕಾರಿಗೂ ಹೆಲ್ಮೆಟ್ ಕಡ್ಡಾಯವೇ? ಎ ಐ ಕ್ಯಾಮೆರಾ ಹೊಸ ನಿಯಮ

ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಭಾರತೀಯ ಮಾನಕ ಸಂಸ್ಥೆ (ಬಿಎಸ್‌ಐ/ಐಎಸ್‌ಐ) ಪ್ರಮಾಣೀಕೃತ ಫುಲ್-ಫೇಸ್ (Full-face) ಹೆಲ್ಮೆಟ್‌ಗಳನ್ನೇ ಧರಿಸಬೇಕು. ಬಿಎಸ್ಐ ಮುದ್ರೆ ಇಲ್ಲದ ಕ್ಯಾಪ್ ಹೆಲ್ಮೆಟ್ ಅಥವಾ ಹಾಫ್ ಹೆಲ್ಮೆಟ್‌ಗಳನ್ನು ಹೆಲ್ಮೆಟ್ ಎಂದು ಪರಿಗಣಿಸಲಾಗುವುದಿಲ್ಲ.

ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಹಾಫ್ ಹೆಲ್ಮೆಟ್ ಅಥವಾ ಕಳಪೆ ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು ನಿಯಮಬಾಹಿರ. ಪ್ರಥಮ ಬಾರಿಗೆ ನಿಯಮ ಉಲ್ಲಂಘಿಸಿದರೆ ₹500 ದಂಡ ವಿಧಿಸಲಾಗುತ್ತದೆ. ಮರುಕಳಿಸಿದರೆ ದಂಡದ ಜೊತೆಗೆ ಚಾಲನಾ ಪರವಾನಗಿಯನ್ನು (ಡಿಎಲ್‌) ಮೂರು ತಿಂಗಳ ಅವಧಿಗೆ ಅಮಾನತುಗೊಳಿಸುವ ನಿಬಂಧನೆಯಿದೆ.

ರಸ್ತೆ ಬದಿ ಹಾಗೂ ಅಂಗಡಿಗಳಲ್ಲಿ ಐಎಸ್‌ಐ ಮುದ್ರೆ ಇಲ್ಲದ, ಸುರಕ್ಷತಾ ಮಾನದಂಡಗಳಿಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುವ ಉದ್ದೇಶದಿಂದ ರಿಶೈನ್‌ ಆರ್ಗನೈಸೇಷನ್‌...

ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ‘ಜನತಾ ನ್ಯಾಯಾಲಯ’ – ಎಸ್‌ಐಆರ್ ಅನ್ಯಾಯಗಳ ವಿರುದ್ಧ ಪ್ರತಿಭಟನೆಯ ಕಹಳೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಕ್ರಮಗಳು, ಮುಖ್ಯ ಚುನಾವಣಾ...

ಬಸವಕಲ್ಯಾಣ | ಬೌದ್ಧ ವಿಹಾರ, ಅಂಬೇಡ್ಕರ್ ಭವನಕ್ಕೆ 25 ಎಕರೆ ಜಮೀನು ನೀಡಲು ಆಗ್ರಹ

ಬಸವಕಲ್ಯಾಣ ನಗರದಲ್ಲಿ ಬೌದ್ಧ ವಿಹಾರ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ...

ಶಿಕಾರಿಪುರ | ಬೀಗರೂಟ ಹಾಕಿದ್ರೆ 1 ಲಕ್ಷ, ಉಂಡ್ರೆ 50 ಸಾವಿರ ದಂಡ!

ಮದುವೆ ಅಂದರೆ ಕೇವಲ ಎರಡು ಮನಸುಗಳ ಮಿಲನ ಮಾತ್ರವಲ್ಲ, ಬಂಧು-ಬಳಗದ ಸಂಭ್ರಮ....