ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ದಿಗ್ವಿಜಯ; ನೆಲಕಚ್ಚಿದ ಬಿಜೆಪಿ

Date:

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ 136+2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಉಡುಪಿ ಜಿಲ್ಲೆಯಯೊಂದನ್ನು ಹೊರತು ಪಡಿಸಿ, ಉಳಿದೆಲ್ಲ ಭಾಗಗಳಲ್ಲಿಯೂ ತನ್ನ ಸ್ಥಾನಗಳನ್ನು ಹೆಚ್ಚಿಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದ 41 ಕ್ಷೇತ್ರಗಳಲ್ಲಿ 26 ಕ್ಷೇತ್ರಗಳನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಆ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ – ಏಳು ಜಿಲ್ಲೆಗಳಲ್ಲಿಯೂ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ. ಕಳೆದ ಚುನಾವಣೆಗೆ (2018) ಹೋಲಿಸಿದರೆ, 8 ಹೆಚ್ಚುವರಿ ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಅಂತೆಯೇ, ಬಿಜೆಪಿ ಆ ಭಾಗದಲ್ಲಿಯೂ ಹೀನಾಯ ಸೋಲುಕಂಡಿದೆ. 2018ರ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ 19, ಕಾಂಗ್ರೆಸ್18 ಹಾಗೂ ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಈ ಬಾರಿ, ಬಿಜೆಪಿ ಕೇವಲ 10 ಕ್ಷೇತ್ರಗಳನ್ನಷ್ಟೇ ಉಳಿಸಿಕೊಂಡಿದೆ. ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿದೆ. ಜೆಡಿಎಸ್‌ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜನಾರ್ಧನ ರೆಡ್ಡಿ ಅವರ ಕೆಆರ್‌ಪಿಪಿ 1 ಮತ್ತು ಸ್ವತಂತ್ರರು 1 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಿಜೆಪಿಗೆ ಒಂದೂ ಸ್ಥಾನವೂ ದೊರೆತಿಲ್ಲ. ಇನ್ನು ಕಲಬುರಗಿ, ರಾಯಚೂರಿನಲ್ಲಿ ತಲಾ 2, ಕೊಪ್ಪಳ, ವಿಜಯನಗರದಲ್ಲಿ ತಲಾ ಒಂದು ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಬೀದರ್‌ ಜಿಲ್ಲೆಯಲ್ಲಿ ಮಾತ್ರ 4 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.

ಕಾಂಗ್ರೆಸ್‌ ಆ ಭಾಗದ ಎಲ್ಲ ಜಿಲ್ಲೆಗಳಲ್ಲಿಯೂ ವಿಜಯ ಪತಾಕೆ ಹಾರಿಸಿದೆ. ಬಳ್ಳಾರಿ ಜಿಲ್ಲೆಯ 5ಕ್ಕೆ ಐದೂ ಕ್ಷೇತ್ರಗಳಲ್ಲಿ ಗೆದ್ದು, ಜಿಲ್ಲೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಲಬುರಗಿಯಲ್ಲಿ 7, ರಾಯಚೂರಿನಲ್ಲಿ 4, ಕೊಪ್ಪಳ, ಯಾದಗಿರಿಯಲ್ಲಿ ತಲಾ 3, ಬೀದರ್, ವಿಜಯನಗರದಲ್ಲಿ ತಲಾ 2 ಕ್ಷೇತ್ರಗಳಲ್ಲಿ ಕೈ ಪಡೆ ಗೆಲುವು ಸಾಧಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ಭಾಗದ ಕಲಬುರಗಿ ಜಿಲ್ಲೆಯವರು. ಅವರು ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಮೇಲೆ ಇದೇ ಮೊದಲ ಚುನಾವಣೆಯನ್ನು ಕಾಂಗ್ರೆಸ್‌ ಎದುರಿಸಿತ್ತು. ಹೀಗಾಗಿ, ಖರ್ಗೆ ಅವರ ತವರು ನೆಲೆಯಾದ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕೈ ಪಡೆಗೆ ಪ್ರತಿಷ್ಠೆಯ ವಿಷಯವಾಗಿತ್ತು.

ಈ ಭಾಗದ ಒಬ್ಬ ಪ್ರಭಾವಿ ನಾಯಕ ಎಐಸಿಸಿ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ನ ಪ್ರಭಾವವನ್ನು ಮತ್ತಷ್ಟು ಹೆಚ್ಚಸಿತ್ತು. ಖರ್ಗೆ ಅವರ ವರ್ಚಸ್ಸು ಮತ್ತು ಪ್ರಭಾವ ಈ ಪ್ರದೇಶದ ಮೇಲೆ ನಿರಂತರವಾಗಿವುದು ಕಾಂಗ್ರೆಸ್‌ನ ಮತ ಬ್ಯಾಂಕ್‌ಅನ್ನು ಗಟ್ಟಿಗೊಳಿಸಲು ನೆರವಾಯಿತು ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ನರೇಂದ್ರ ಮೋದಿ ಪ್ರಚಾರ | ಕಮಾಲ್ ಮಾಡದ ರೋಡ್ ಶೋ

ಜೊತೆಗೆ, ಬಿಜೆಪಿ ಈ ಭಾಗಕ್ಕೆ ನೀಡಿದ್ದ ಹಲವಾರು ಭರವಸೆಗಳನ್ನು ಪೂರೈಸುವಲ್ಲಿಯೂ ವಿಫಲವಾಗಿತ್ತು. ಅವುಗಳಲ್ಲಿ ಮುಖ್ಯವಾಘಿ, ರಾಯಚೂರಿಗೆ ಏಮ್ಸ್‌ ಮಂಜೂರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚು ಹಣ ನೀಡಿರಲಿಲ್ಲ. ಅಲ್ಲದೆ, ರಾಯಚೂರು ನಗರ ಸಭೆಯನ್ನು ಮಹಾನಗರ ಪಾಲಿಕೆಯಾಗಿ ಘೋಷಿಸಿದರೂ, ಅದಕ್ಕಾಗಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿರಲಿಲ್ಲ. ಇದೆಲ್ಲವೂ ಜನರನ್ನು ಅಸಮಾಧಾನಕ್ಕೆ ದೂಡಿತ್ತು.

ಜೊತೆಗೆ, 40% ಕಮಿಷನ್, ಪಿಎಸ್‌ಐ ಹಗರಣ, ಮೊಟ್ಟೆ ಹಗರಣ, ಕೊರೊನಾ ಕಿಟ್ ಹಗರಣ, ಬಿಟ್ ಕಾಯಿನ್ ಹಗರಣ, ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಅಕ್ರಮ ಮಾರಾಟ, ಶಿಕ್ಷಕರ ನೇಮಕಾತಿ ಹಗರಣ, ತುಂಗಭದ್ರ ಮೇಲ್ದಂಡೆ ಯೋಜನೆ ನೀರಾವರಿಗೆ ಅನುಮೋದಿಸದೇ ಅಧಿಕ ವೆಚ್ಚ ಸೇರಿದಂತೆ ಅಸಮರ್ಥ ಆಡಳಿತದಿಂದ ಜನರು ಬೇಸತ್ತಿದ್ದರು. ಇದೆಲ್ಲವೂ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಯಿತು ಎಂಬುದು ಕಂಡುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಗ್ರಾಮ ವಾಸ್ತವ್ಯ

ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್‌ ಗ್ರಾಮ ವಾಸ್ತವ್ಯ...

ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು...

ಮದ್ಯದಂಗಡಿ ಬೇಡ – ನೀರು, ಆರೋಗ್ಯ, ಆಹಾರ ಕೊಡಿ; ಸ್ಲಂ ಜನಾಂದೋಲನ ಒತ್ತಾಯ

ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು,...

ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ...