ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ, ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ: ಎಸ್.ಡಿ.ಪಿ.ಐ ಕಿಡಿ

Date:

ಇಂದು ನಾವು ದೇಶ ಮತ್ತು ರಾಜ್ಯದಲ್ಲಿ ಆಳುತ್ತಿರುವ ಸರ್ಕಾರಗಳ ಜನವಿರೋಧಿ ಮತ್ತು ಆರ್ಥಿಕವಾಗಿ ಜನರನ್ನು ಶೋಷಿಸುತ್ತಿರುವ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಸ್.ಡಿ.ಪಿ.ಐ ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಅವರು ಇಂದು ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ “ಒಂದು ಕಡೆ ಉಚಿತ ಮತ್ತು ಗ್ಯಾರಂಟಿಗಳೆಂಬ ಆಕರ್ಷಕ ಭ್ರಮೆಗಳನ್ನು ಸೃಷ್ಟಿಸಿ, ಮತ್ತೊಂದು ಕಡೆ ದಿನಬಳಕೆ ವಸ್ತುಗಳು ಹಾಗೂ ಅಗತ್ಯ ಸರ್ಕಾರಿ ಸೇವೆಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಇಡೀ ಸಮಾಜವನ್ನು ಕತ್ತಲಿಗೆ ತಳ್ಳಲಾಗುತ್ತಿದೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ; ಇದು ವ್ಯವಸ್ಥಿತವಾಗಿ ಜನರನ್ನು ಮಂಗ ಮಾಡುವ ಮತ್ತು ಬಡವರ ಜೇಬಿಗೆ ಕರಾರುವಾಕ್ಕಾಗಿ ಕತ್ತರಿ ಹಾಕುವ ದಗಾಬಾಜಿ ರಾಜಕಾರಣವಾಗಿದೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಕೆವಿಎನ್ ಅವರು ಮಂಡಿಸುತ್ತಿರುವ ಮಾರುಕಟ್ಟೆ ಶಕ್ತಿಗಳ ಭಾಷೆಯೊಂದಿಗಿನ ಅನುಕೂಲಸಿಂಧು ಚಲನಶೀಲ ಸಂಬಂಧಗಳ ಕುರಿತ ಗ್ರಹಿಕೆಗಳು, 'ಸಾಮ್ರಾಜ್ಯಶಾಹಿಗಳು ಮತ್ತು ದೇಶೀಯ ಆಳುವ ವರ್ಗಗಳು ಭಾಷೆಯನ್ನು ರಾಜಕಾರಣದ ಅಸ್ತ್ರವನ್ನಾಗಿ ಬಳಸುತ್ತಿವೆ' ಎನ್ನುವ ಕನ್ನಡ ವಿಚಾರ ಸಾಹಿತ್ಯದಲ್ಲಿನ...

ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್...

ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಭತ್ತದ ಉತ್ಪಾದನೆ ಕುಸಿತದ ಪರಿಣಾಮ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ ಅಕ್ಕಿ ಬಹುತೇಕ ಹಿಂದಿನ ಬೆಳೆ ವರ್ಷಗಳಲ್ಲಿ ಉತ್ಪಾದನೆಯಾಗಿ ಸಂಗ್ರಹಿಸಲ್ಪಟ್ಟಿರುವ ಅಕ್ಕಿ. ಪ್ರಸಕ್ತ...

ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು...

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ ಸಮುದ್ರ ತೀರ ಇತ್ತೀಚಿನ ದಿನಗಳಲ್ಲಿ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವಿಭಿನ್ನ ಶೈಲಿಯ ಮನರಂಜನೆಗೆ ಹೆಸರುವಾಸಿಯಾಗಿರುವ ತಣ್ಣೀರುಬಾವಿ ಬೀಚ್...

ಬಸ್‌ ದರ ಏರಿಕೆಯ ವಿರುದ್ದ ಪ್ರಸ್ತಾಪಿಸುತ್ತ “ಮಹಿಳೆಯರಿಗೆ ಉಚಿತ ಪ್ರಯಾಣದ ಹೆಸರಿನಲ್ಲಿ ಸಾರಿಗೆ ಸಂಸ್ಥೆಗಳನ್ನು ನಷ್ಟದ ಸುಳಿಗೆ ತಳ್ಳಿ, ಈಗ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರಗಳನ್ನು ಇಪ್ಪತ್ತುಮೂರು ರಿಂದ ಮೂವತ್ತೈದು ಪ್ರತಿಶತ ಹೆಚ್ಚಿಸಲಾಗಿದೆ. 2025 ಜನವರಿಯಲ್ಲಿ ಹದಿನೈದು ಪ್ರತಿಶತ ಏರಿಕೆಯಾಗಿತ್ತು. ಈಗ 2026 ನವೆಂಬರ್‌ನಲ್ಲಿ ಮತ್ತೊಮ್ಮೆ ಭಾರೀ ಹೆಚ್ಚಳ. ಸಾಮಾನ್ಯ ವೇಗದೂತ ಬಸ್‌ಗಳಲ್ಲಿ ಹಂತಗಳ ಆಧಾರದ ಮೇಲೆ ಒಂಬತ್ತು ರಿಂದ ಹದಿನೆಂಟು ರೂಪಾಯಿ ಹೆಚ್ಚಳವಾಗಿದೆ. ದುಡಿಯುವ ವರ್ಗದ ದೈನಂದಿನ ಪ್ರಯಾಣ ವೆಚ್ಚವೇ ದುಪ್ಪಟ್ಟಾಗಿದೆ.” ಎಂದು ಆರೋಪಿಸಿದ್ದಾರೆ.

ಕೆಂದ್ರ ಸರಕಾರದ ವಿರುದ್ದ ಹರಿಹಾಯ್ದಿರುವ ಅವರು “ಕೇಂದ್ರ ಸರ್ಕಾರದ ನೀತಿಗಳೂ ಜನಸಾಮಾನ್ಯರ ಬೆನ್ನುಲುಬನ್ನು ಮುರಿಯುತ್ತಿವೆ. ಚಿಲ್ಲರೆ ಹಣದುಬ್ಬರ ಶೇಕಡಾ ಐದು ಐವತ್ತುನಾಲ್ಕು ಇದ್ದರೆ, ಆಹಾರ ಪದಾರ್ಥಗಳ ಹಣದುಬ್ಬರವೇ ಶೇಕಡಾ ಏಳು ಎಪ್ಪತ್ತುನಾಲ್ಕು ತಲುಪಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ 2023ರಲ್ಲಿ ಸಾವಿರಕ್ಕೂ ಹೆಚ್ಚಿತ್ತು. ಈಗ ಅದು ಒಂಬತ್ತುನೂರ ನಲವತ್ತೆರಡು ರೂಪಾಯಿ ಮಟ್ಟದಲ್ಲಿದೆ. ಕಮರ್ಷಿಯಲ್ ಸಿಲಿಂಡರ್ ಎರಡು ಸಾವಿರ ಎಂಟುನೂರ ಇಪ್ಪತ್ತು ರೂಪಾಯಿ ತಲುಪಿದೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗುತ್ತಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನೂರು ರೂಪಾಯಿಗಿಂತ ಕಡಿಮೆ ಮಾಡದೆ ಇಂಧನ ದರೋಡೆ ಮುಂದುವರಿದಿದೆ” ಎಂದಿದ್ದಾರೆ.

ಬೆಂಗಳೂರಿನಲ್ಲಿ ಪೆಟ್ರೋಲ್ ನೂರ ಹತ್ತು ರೂಪಾಯಿ ಮೀರಿದೆ. ಇದು ಸಾರಿಗೆ ವೆಚ್ಚವನ್ನು ಹೆಚ್ಚಿಸಿ, ಪ್ರತಿಯೊಂದು ದಿನಸಿ ವಸ್ತುವಿನ ಬೆಲೆಯನ್ನು ದುಪ್ಪಟ್ಟು ಮಾಡುತ್ತಿದೆ. ಅಡುಗೆ ಎಣ್ಣೆಯ ಕಥೆಯೂ ಭಿನ್ನವಲ್ಲ. 2020-21ರಲ್ಲಿ ತೀವ್ರ ಏರಿಕೆಯಾಗಿ 2022ರಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಎಣ್ಣೆ ಬೆಲೆಗಳು, 2023-24ರಲ್ಲಿ ಸ್ವಲ್ಪ ಕಡಿಮೆಯಾಗಿ, 2025-26ರಲ್ಲಿ ಮತ್ತೆ ಏರಿಕೆಯಾಗಿವೆ. ಸನ್‌ಫ್ಲವರ್ ಎಣ್ಣೆ ಕಳೆದ ಒಂದು ವರ್ಷದಲ್ಲೇ ಹದಿನಾರು ಪ್ರತಿಶತಕ್ಕೂ ಹೆಚ್ಚು ಜಿಗಿದಿದೆ. ಒಟ್ಟಾರೆ ದಿನಬಳಕೆಯ ತರಕಾರಿ, ಅಡುಗೆ ಎಣ್ಣೆ ಮತ್ತು ಆಹಾರ ಧಾನ್ಯಗಳ ಬೆಲೆ ಮೂರು ವರ್ಷಗಳಲ್ಲಿ ಮೂವತ್ತು ಪ್ರತಿಶತಕ್ಕೂ ಹೆಚ್ಚು ದುಬಾರಿಯಾಗಿದೆ. ಹಿಂದೆ ಎರಡು ಸಾವಿರ ರೂಪಾಯಿಗೆ ಬರುತ್ತಿದ್ದ ಒಂದು ತಿಂಗಳ ದಿನಸಿ ಸಾಮಗ್ರಿಗಳಿಗೆ ಇಂದು ಮೂವತ್ತೈದು ನೂರು ರೂಪಾಯಿ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದ್ದಾರೆ.

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಈ ಆರ್ಥಿಕ ಶೋಷಣೆಯನ್ನು ಹೋಲಿಸಿ ನೋಡಿದರೆ, ಜನಸಾಮಾನ್ಯ ಎರಡು ಕಡೆಯಿಂದಲೂ ಕತ್ತರಿ ಸಿಕ್ಕಿದಂತಾಗಿದ್ದಾನೆ. ಬೆಲೆ ಏರಿಕೆಯ ರೂಪದಲ್ಲಿ ಸರ್ಕಾರಗಳಿಗೆ ಮತ್ತು ಮಾರುಕಟ್ಟೆಗೆ ಒಪ್ಪಿಸಬೇಕಾಗಿ ಬಂದಿದೆ. ಇದು ಕಲ್ಯಾಣ ರಾಜ್ಯದ ಲಕ್ಷಣವಲ್ಲ. ಬದಲಿಗೆ ಬಡವರನ್ನು ಮತ್ತು ಮಧ್ಯಮ ವರ್ಗವನ್ನು ಆರ್ಥಿಕವಾಗಿ ದಿವಾಳಿ ಮಾಡುವ ನೀತಿಯಾಗಿದೆ. ಸರ್ಕಾರಗಳು ತಕ್ಷಣವೇ ಈ ಅವೈಜ್ಞಾನಿಕ ಬೆಲೆ ಏರಿಕೆಗಳನ್ನು ವಾಪಸ್ ಪಡೆಯದಿದ್ದರೆ, ಸಾರ್ವಜನಿಕ ವಲಯದಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ” ಎಂದು ಎಸ್.ಡಿ.ಪಿ.ಐ ಎಚ್ಚರಿಸಿದೆ.

ಪತ್ರಿಕಾಗೋಷ್ಟಿಯಲ್ಲಿ SDPI ಮಂಗಳೂರು ನಗರ ಜಿಲ್ಲಾದ್ಯಕ್ಷ ಮಹಮ್ಮದ್ ಅಶ್ರಫ್ ಅಡ್ಡೂರು, SDPI ಮಂಗಳೂರು ನಗರ ಜಿಲ್ಲಾ ಉಪಾದ್ಯಕ್ಷ ಅಝೀಝ್ ಸುರತ್ಕಲ್ ಹಾಗೂ ಇತರರು ಉಪಸ್ಥಿತರಿದ್ದರು.  

eedina 6
ಈದಿನ NRI ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಯುವಕರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತುಕೊಳ್ಳಬೇಕು: ಶಾಸಕ ಎಸ್.ವಿ. ಸಂಕನೂರ

"ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದ್ದು, ಯುವಕರೇ ದೇಶದ ನಿಜವಾದ ಸಂಪತ್ತು ಹಾಗೂ...

ಹಾವೇರಿಯಲ್ಲಿ ನವೆಂಬರ್ 7ರಂದು ಪ್ರಜಾಸೇವೆ ಆಂದೋಲನ

ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ...

ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಉದ್ಘಾಟನೆ: ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್

ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ...