ಗುರುಮಿಠಕಲ್ | ಆಸ್ಪತ್ರೆಯಿಂದಲೇ ಮತಯಾಚಿಸಿದ ಬಾಬುರಾವ್ ಚಿಂಚನಸೂರ್

Date:

  • ಚಿಂಚನಸೂರ್ ಪರವಾಗಿ ಸ್ಥಳೀಯ ಮುಖಂಡರ ಭರ್ಜರಿ ಪ್ರಚಾರ
  • ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಖರ್ಗೆಯನ್ನು ಹೊಗಳಿದ ಬಾಬುರಾವ್

ಅಪಘಾತದಿಂದಾಗಿ ಆಸ್ಪತ್ರೆ ಪಾಲಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಆಸ್ಪತ್ರೆಯಿಂದಲೇ ಕ್ಷೇತ್ರದ ಜನರಿಗೆ ಮತಯಾಚನೆ ಮಾಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ನಾನಾ ರಾಜಕೀಯ ವಿದ್ಯಮಾನಗಳಿಗೆ ನಾಡು ಸಾಕ್ಷಿಯಾಗುತ್ತಿದೆ. ಇದೀಗ ಗುರುಮಿಠಕಲ್ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಆಸ್ಪತ್ರೆಯಿಂದ ಮತ ಕೇಳಿದ್ದಾರೆ.

ಯಾದಗಿರಿಯಿಂದ ಕಲಬುರಗಿ ತೆರಳುತ್ತಿದ್ದ ವೇಳೆ, ಬಾಬುರಾವ್ ಚಿಂಚನಸೂರ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಬಾಬುರಾವ್ ಚಿಂಚನಸೂರ್ ಅವರ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ಈಗ ಅವರು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅವರ ಪರವಾಗಿ ಅವರ ಪತ್ನಿ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಚಿಂಚನಸೂರ್‌ ಪರವಾಗಿ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಈ ನಡುವೆ ಆಸ್ಪತ್ರೆಯ ಹಾಸಿಗೆಯಿಂದಲೇ ಬಾಬುರಾವ್ ಚಿಂಚನಸೂರ್ ಮತಯಾಚನೆ ಮಾಡಿರುವ ವಿಡಿಯೋ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಈ ಸುದ್ದಿ ಓದಿದ್ದೀರಾ? ನನಗೆ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ : ಜಗದೀಶ್ ಶೆಟ್ಟರ್

ವಿಡಿಯೋದಲ್ಲಿ, “ಮಲ್ಲಿಕಾರ್ಜುನ ಖರ್ಗೆ ಅವರು ಆಶೀರ್ವಾದ ಮಾಡಿ ನನ್ನನ್ನು ಗುರುಮಿಠಕಲ್ ಮತಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಮತಕ್ಷೇತ್ರದ ಜನರಿಗೆ ನಾನು ವಿನಂತಿ, ನಾನು ಇಂದಲ್ಲ ನಾಳೆ ಸಾಯುವ ಶರೀರ ಹೀಗೆ ಸಾಯುವುದಕ್ಕೆ ಜನರ ಸೇವೆ ಮಾಡಿ ಸಾಯುತ್ತೇನೆ” ಎಂದು ಬಾಬುರಾವ್ ಚಿಂಚನಸೂರ್ ಮತಯಾಚಿಸಿದ್ದಾರೆ.

“ನನ್ನ ಆರೋಗ್ಯ ಸರಿಯಾಗಿದೆ. ಮತದಾರರ ದೇವರುಗಳು ನನಗೆ ಆಶೀರ್ವಾದ ಮಾಡಬೇಕಾಗಿದೆ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಅಪಘಾತವಾಗಿ ಹಾಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಬಾಬುರಾವ್ ಚಿಂಚನಸೂರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಗಳುವುದು ಬಿಟ್ಟಿಲ್ಲ. “ಮಲ್ಲಿಕಾರ್ಜುನ ಖರ್ಗೆ ಅವರು ಹಳ್ಳಿಯಿಂದ ದಿಲ್ಲಿವರೆಗೆ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಆಶೀರ್ವಾದ ಮಾಡಿ ನನಗೆ ಟಿಕೆಟ್ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಬಾಬುರಾವ್ ಚಿಂಚನಸೂರ್ ಅವರ ಪರವಾಗಿ ಅಭಿಯಾನ ಶುರುವಾಗಿವೆ. ‘ಅಭ್ಯರ್ಥಿ ಪ್ರಚಾರಕ್ಕೆ ಇಲ್ಲದೆಯೇ ಪಕ್ಷದ ಚಿಹ್ನೆಯ ಮೂಲಕ ಗೆಲ್ಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸುತ್ತೇವೆ’ ಎಂದು ಕಾರ್ಯಕರ್ತರು ಪೋಸ್ಟ್‌ ಮಾಡುತ್ತಿದ್ದಾರೆ.

ಬಾಬುರಾವ್ ಚಿಂಚನಸೂರ್ ಅವರಿಗೆ ಎದುರಾಳಿಯಾಗಿ, ಜೆಡಿಎಸ್‌ನಿಂದ ಶರಣಗೌಡ ಕಂದಕೂರ್, ಬಿಜೆಪಿಯಿಂದ ಲಲಿತಾ ಅನಪುರ್‌ ಸ್ಪರ್ಧಿಸಿದ್ದಾರೆ.

ಬಾಬುರಾವ್ ಚಿಂಚನಸೂರ್ ಆಸ್ಪತ್ರೆಯಿಂದ ಮತಯಾಚಿಸಿರುವುದು…

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೀದರ್‌ | ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ಯಾರೆಂದು ಕೇಳಿದರೆ ಹೇಳುವುದಿಲ್ಲ : ಬಿ.ಎಸ್.ಯಡಿಯೂರಪ್ಪ

ರಾಜ್ಯದ ಉದ್ದಗಲಕ್ಕೂ ಸುತ್ತಿ ಬಂದಿದ್ದೇನೆ. ಭವಿಷ್ಯ ಹೇಳುತ್ತಿಲ್ಲ. ವಾಸ್ತವ ಹೇಳುತ್ತಿದ್ದೇನೆ. ಜೆಡಿಎಸ್‌-ಬಿಜೆಪಿ...

2025ರ ವೇಳೆಗೆ ಬಿಜೆಪಿ ಮೀಸಲಾತಿ ರದ್ದುಪಡಿಸಲಿದೆ: ತೆಲಂಗಾಣ ಸಿಎಂ ಆರೋಪ

ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ...

ಈ ದಿನ ವಿಶೇಷ | ಬಿಜೆಪಿ ಬೆಳೆಸಿದ ಯಡಿಯೂರಪ್ಪ ಬಿಜೆಪಿಗೇ ಬೇಡವಾದರೆ?

ಯಡಿಯೂರಪ್ಪನವರು ಸ್ವಂತ ಶಕ್ತಿಯಿಂದ ಪಕ್ಷ ಕಟ್ಟಿದವರು, ಬೆಳೆದವರು. ಅವರು ಮೋದಿಗಿಂತ ಹಿರಿಯರು,...