ನಾನು ‘ಕರ್ನಾಟಕ’; ಮತ ಹಾಕುವ ಮುನ್ನ ನನ್ನ ಮಾತನ್ನೊಮ್ಮೆ ಕೇಳಿ…!

Date:

ನಮಸ್ಕಾರ ಸ್ನೇಹಿತರೇ, ನಾನು ‘ಕರ್ನಾಟಕ’ ಮಾತನಾಡುತ್ತಿದ್ದೇನೆ. ಕರು ಮತ್ತು ನಾಡು ಎಂಬ ಶಬ್ದಗಳ ಸಂಯೋಗದಿಂದ ಹುಟ್ಟಿದ್ದು ಕರ್ನಾಟಕ. ಕರ್ನಾಟಕ ಎಂದರೆ ಕಪ್ಪು ಮತ್ತು ಎತ್ತರದ ಭೂಪ್ರದೇಶ. ಯುಗಗಳಿಂದ ನನ್ನ ಗುರುತು ಪ್ರಕೃತಿಯ ಪವಾಡ ಎಂದು ಇದ್ದಿದ್ದು, ಈಗ ಈ ಪ್ರಸ್ತುತ ಸರ್ಕಾರದಲ್ಲಿ ನನ್ನ ಗುರುತು 40% ಕಮಿಷನ್ ಹೊಂದಿರುವ ರಾಜ್ಯವಾಗಿ ಉಳಿದುಹೋಗಿದೆ. ದೇಶದ, ಪ್ರಪಂಚದ ಯಾವುದೇ ಮೂಲೆಯಲ್ಲಿ ಯಾರಾದರೂ 40% ಎಂದ ತಕ್ಷಣ, ಎದುರಿರುವವರು ಏನನ್ನೂ ಯೋಚಿಸದೆ ಕರ್ನಾಟಕ ಎನ್ನುತ್ತಾರೆ! ಬಿಜೆಪಿ ಸರ್ಕಾರದಲ್ಲಿ ಇದೇ ನನ್ನ ಗುರುತು.

ಎಲ್ಲೆಡೆ 40% ಕಮಿಷನ್ನ ಕೊಳಕು ಆಟ. ರಸ್ತೆಗಳು, ಶಾಲೆಗಳು, ಸರ್ಕಾರಿ ಗುತ್ತಿಗೆಗಳು, ಸರ್ಕಾರಿ ಉದ್ಯೋಗಗಳು, ಆಸ್ಪತ್ರೆಗಳು, ಸೇತುವೆಗಳು, ಸ್ಮಶಾನ ಮತ್ತು ಕಬರಸ್ತಾನ ಎಲ್ಲೆಡೆ ಸರ್ಕಾರಕ್ಕೆ 40% ದೇಣಿಗೆ ನೀಡಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ. ಈಗಿನ ಬೊಮ್ಮಾಯಿ ಸರ್ಕಾರ ಶೇ.40% ಕಮಿಷನ್ ತೆಗೆದುಕೊಂಡ ನಂತರವೇ ಗುತ್ತಿಗೆ ಕಾಮಗಾರಿ ಮಂಜೂರು ಮಾಡುತ್ತದೆ ಎಂದು ಗುತ್ತಿಗೆದಾರರ ಸಂಘ ಸಾರ್ವಜನಿಕವಾಗಿ ಹೇಳಿಕೆ ನೀಡಿತ್ತು. ಖಾಸಗಿ ಶಾಲೆಗಳ ಸಂಘಟನೆಯಂತೂ 40% ಕಮಿಷನ್ ಬಗ್ಗೆ ನೇರವಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿತು. ಆದರೆ, ಪರಿಣಾಮ ಮತ್ರ ಅರಣ್ಯರೋದನವಾಯಿತು.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಈಶ್ವರಪ್ಪ ಪ್ರಕರಣವಂತೂ ಅತ್ಯಂತ ನಾಚಿಕೆಗೇಡಿನ ಸಂಗತಿ. ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಕೆ.ಎಸ್ ಈಶ್ವರಪ್ಪ ಕಾರಣ ಎಂದು ಸ್ಪಷ್ಟವಾಗಿ ಆರೋಪಿಸಿದ್ದರು. ಪ್ರಕರಣವು ಅದೇ 40% ಕಮಿಷನ್ಕಥೆಯೇ ಆಗಿತ್ತು. ಅವರ ಈ ಕರಾಳ ಕೃತ್ಯ ಸ್ವತಃ ಬಿಜೆಪಿಗೂ ಗೊತ್ತಿತ್ತು. ಡ್ಯಾಮೇಜ್ ಕಂಟ್ರೋಲ್ನಲ್ಲಿ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೂಡ ನೀಡಲಿಲ್ಲ. ಆದರೆ, ಅವರ ಬಂಡಾಯದಿಂದ ವೋಟ್ ಹಾಳಾಗುವ ಭೀತಿ ನೋಡಿ! ಸ್ವತಃ ಪ್ರಧಾನಿ ಮೋದಿಯೇ ಫೋನ್ಮಾಡಿ ಬೆಣ್ಣೆ ಹಚ್ಚಿ, ‘ನೀವು ಬಿಜೆಪಿಯನ್ನು ಗೆಲ್ಲಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಿ, ನಾನು ಕರ್ನಾಟಕಕ್ಕೆ ಬರುತ್ತಲೇ ನಿಮ್ಮ ದರ್ಶನ ಮಾಡುತ್ತೇನೆ’ ಎಂದರು. ಭೇಟಿಯ ನಂತರ ಲಾಭದಾಯಕ ಹುದ್ದೆ ನೀಡುವುದು ಹೇಗಿದ್ದರೂ ಬಿಜೆಪಿಯ ರಕ್ತದಲ್ಲಿಯೇ ಇದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗಿನ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಸ್ಥಿತಿ ಹೇಗಿದೆ ಅಂದರೆ, ಸರ್ಕಾರದ ಸಚಿವರುಗಳು ಸತ್ತವರ ಜೊತೆ ಒಪ್ಪಂದ ಮಾಡಿಕೊಂಡು ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದರು. ಹೌದು ನೀವು ಸರಿಯಾಗಿ ಕೇಳಿದಿರಿ! ಸತ್ತವರ ಜೊತೆ ಒಪ್ಪಂದ! ಅರಣ್ಯ ಮಂತ್ರಿ ಸಿ.ಪಿ ಯೋಗೀಶ್ವರ್ ಈ ಕರಾಮತ್ತು ಮಾಡಿದ ವ್ಯಕ್ತಿ. ಸತ್ತವರ ಜೊತೆ ಒಪ್ಪಂದ ಮಾಡಿಕೊಂಡು ಅರಣ್ಯ ಇಲಾಖೆಯಲ್ಲಿ ದೊಡ್ಡ ಹಗರಣ ನಡೆಸಿದ್ದಾನೆ. ಬಿಜೆಪಿ ಶಾಸಕ ಬಸವರಾಜ ದುರ್ಗಪ್ಪನವರ ಕುಕೃತ್ಯಗಳಿಗೆ ಅವರ ಆಡಿಯೋ ಕ್ಲಿಪ್ ಜೀವಂತ ಸಾಕ್ಷಿ. ವೈರಲ್ ಆದ ಆಡಿಯೋ ಕ್ಲಿಪ್ನಲ್ಲಿ ಬಸವರಾಜ್ ಯಾವುದೇ ಮುಜುಗರ ಇಲ್ಲದೆ 15 ಲಕ್ಷಕ್ಕೆ ಬದಲಿಯಾಗಿ ಪೊಲೀಸ್ಇಲಾಖೆಯಲ್ಲಿ ಕೆಲಸ ಕೊಡುವ ಬಗ್ಗೆ ಮಾತಾಡುತ್ತಿದ್ದಾರೆ.

ಬದುಕಿರುವವರ ಮಾತನ್ನು ಬಿಡಿ, ಈ ಬಿಜೆಪಿಯವರು ಸತ್ತವರ ಮತ್ತು ಸಾವಿನ ಅಂಚಿನಲ್ಲಿರುವವರಿಂದಲೂ ಹಣ ವಸೂಲಿ ಮಾಡುವುದನ್ನು ಬಿಟ್ಟಿಲ್ಲ. ಕೊರೊನಾ ಕಾಲದಲ್ಲಿ ಇವರು ರೋಗಿಗಳಿಂದ ಮಾಡಿದ ಲೂಟಿಯ ಕಥೆಯನ್ನು ಯಾವುದಾದರೂ ಕೊರೊನಾ ಸಂತ್ರಸ್ತರಿಂದಲೇ ಕೇಳಿ. ಆಸ್ಪತ್ರೆಯಲ್ಲಿ ಒಂದು ಬೆಡ್, ಒಂದು ಆಕ್ಸಿಜನ್ ಸಿಲಿಂಡರ್ಗಾಗಿ ಬಿಜೆಪಿಯವರು ರೋಗಿಗಳ ಮತ್ತು ಅವರ ಕುಟುಂಬದವರ ಮೈಮೇಲಿನ ಬಟ್ಟೆಯನ್ನೇ ಕಳಚಲು ಮುಂದಾಗಿದ್ದರು.
ಹಣ, ಹಣ ಮತ್ತು ಹಣ! ಇದೇ ಬಿಜೆಪಿಯ ನೀತಿ ಮತ್ತು ಉದ್ದೇಶ. ಸಾರ್ವಜನಿಕರಿಂದ ಹಣ ಲೂಟಿ ಮಾಡಿ, ಚುನಾವಣೆಯನ್ನು ಗಾಳಿಗೆ ತೂರಿ, ಯಾವುದೇ ವಿಧಾನದಿಂದ ಅಧಿಕಾರಗಳಿಸಿ, ಪ್ರಾರಂಬದಿಂದಲೂ ಇದೇ ಬಿಜೆಪಿಯ ಚುನಾವಣಾ ರಾಜಕೀಯವಾಗಿದೆ. ಈ ಚುನಾವಣೆಯಲ್ಲಿಯೂ ಇದೇ ಅವರ ನಿತಿಯಾಗಿದೆ. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ ಚುನಾವಣಾ ಸಭೆಯಲ್ಲಿ ಹೇಳಿದ್ದೇನು ಗೊತ್ತಾ? ‘ನಿಮ್ಮ ಮತಕ್ಕೆ 6 ಸಾವಿರ ಕೊಡದಿದ್ದರೆ ನಮ್ಮ ಅಭ್ಯರ್ಥಿಗೆ ಮ ಹಾಕಬೇಡಿ!’ ಒಂದು ಮತದ ಬೆಲೆ 6 ಸಾವಿರ! ಸಾರ್ವಜನಿಕ ವೇದಿಕೆಯಿಂದ ಘೋಷಣೆ! ಯಾವುದೇ ಮುಚ್ಚುಮರೆಯೂ ಇಲ್ಲ! ನಾಚಿಕೆ, ಮಾನ ಮರ್ಯಾದೆ, ನೀತಿ ನಿಯಮ ಎನ್ನುವ ಮಾತೇ ನಿಷ್ಪ್ರಯೋಜಕ ಈ ಬೊಮ್ಮಾಯಿ ಸರ್ಕಾರದಲ್ಲಿ.

ಈ ಬಿಜೆಪಿ ಸರ್ಕಾರ ನನ್ನ ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸೌಹಾರ್ದತೆಗೆ ಹೆಚ್ಚಿನ ಹಾನಿಯನ್ನು ಮಾಡಿದೆ. ಈ ಸರ್ಕಾರ ನನ್ನವರನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸಲು ಏನನ್ನು ಮಾಡಿಲ್ಲ ಅಂತೀರಿ! ಧರ್ಮದ ಹೆಸರಲ್ಲಿ ಕೊಲೆಗಳೂ ನಡೆದಿವೆ ನನ್ನ ನೆಲದಲ್ಲಿ. ಏಕೆ? ಏಕೆಂದರೆ, ಜನಸಾಮಾನ್ಯರು ತಮ್ಮ ದಿನನಿತ್ಯದ ಅಗತ್ಯಗಳ ಬಗ್ಗೆ ಮಾತಾಡಬಾರದಲ್ಲ ಅದಕ್ಕೆ! ಅಭಿವೃದ್ಧಿಯನ್ನು ಮರೆತು ಬಿಡಬೇಕು, ಮುಂಬರುವ ಜನಾಂಗ ಮತ್ತು ಬೆಳೆಗಳ ಬಗ್ಗೆ ಮರೆತು, ಜಾತಿ ಮತ್ತು ಧರ್ಮದ ನಿಷ್ಪ್ರಯೋಜಕ ಮಾತುಗಳಲ್ಲಿ ಸಿಲುಕಿಕೊಂಡು ಇರಬೇಕು.

ನಿಮಗೆ ನೆನಪಿದೆಯಾ, ಈ ಬಿಜೆಪಿಯ ಉನ್ನತ ನಾಯಕರು ಅಭಿವೃದ್ಧಿಯ ಬಗ್ಗೆ ಹೇಳಿದ್ದು! ಡಬ್ಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿಯ ವಾಹನ ನಾಗಾಲೋಟದಿಂದ ಓಡುತ್ತದೆ. ವಾಸ್ತವದಲ್ಲಿ ಏನಾಯಿತು? ದೇಶದ ಐ.ಟಿ ರಾಜಧಾನಿ ಬೆಂಗಳೂರಿನ ಎಲ್ಲ ಐ.ಟಿ ಕಂಪನಿಗಳು, ‘ಡಬ್ಬಲ್ ಇಂಜಿನ್ ಸರ್ಕಾರದ ಇದೇ ನೀತಿ ಮುಂದೆವರಿದರೆ ಬ್ಯಾಗ್ ಪ್ಯಾಕ್ಮಾಡಿ ಬೇರೆ ರಾಜ್ಯಕ್ಕೆ ಹೋಗುತ್ತೇವೆ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಯಿತು. ಉಳಿದ ಇಂಡಸ್ಟ್ರಿಗಳಲ್ಲೂ ಇದೇ ಪರಿಸ್ಥಿತಿ. ರೈತರು ಹಸಿವಿನಿಂದ ಸಾಯುತ್ತಿದ್ದಾರೆ. ವ್ಯಾಪಾರಿಗಳು ಮತ್ತು ಕೂಲಿಕಾರ್ಮಿಕರು ತಮ್ಮ ಸಂಕಷ್ಟದ ಬಗ್ಗೆ ಅಳಲು ತೋಡಿಕೊಂಡಾಗಲೂ ಬೊಮ್ಮಾಯಿ ಸರ್ಕಾರದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಬಿಜೆಪಿ ಸರ್ಕಾರದ ಭಯ, ಹಸಿವು ಮತ್ತು ಭ್ರಷ್ಟಾಚಾರದ ಕತೆಯನ್ನು ಇಲ್ಲಿಗೆ ಮುಗಿಸುತ್ತೇನೆ. ವಾಸ್ತವವಾಗಿ ನಾನು ಅವರ ಕರಾಳ ಕಾರ್ಯಗಳನ್ನು ವ್ಯವಸ್ಥಿತವಾಗಿ ಚರ್ಚಿಸಲು ಪ್ರಾರಂಭಿಸಿದರೆ ಸಮಯವೂ ಸಹಕರಿಸುವುದಿಲ್ಲ. ಇಂದಿನ ಸಮಯದ ಅಗತ್ಯವೆಂದರೆ ಸರ್ಕಾರವನ್ನು ಬದಲಿಸುವುದು. ಚುನಾವಣೆ ಹತ್ತಿರದಲ್ಲಿದೆ, ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನಿಮಗೆ ಅವಕಾಶವಿದೆ. ಬಿಜೆಪಿ ಸರ್ಕಾರದ ಕರಾಳ ಕೃತ್ಯಗಳಿಗೆ ಶಿಕ್ಷೆಯಾಗಲಿ. ಮೇ 10ರಂದು ಮನೆಯಿಂದ ಹೊರಬನ್ನಿ, ನಿಮ್ಮ ಕಷ್ಟಗಳಿಗೆ ಕಿವಿಯಾಗುವವರನ್ನು ಆಯ್ಕೆ ಮಾಡಿಕೊಳ್ಳಿ, ನೀವೂ ಉಳಿಯಿರಿ, ನನ್ನನ್ನೂ ಉಳಿಸಿರಿ

ನಮಸ್ಕಾರ

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ ಒತ್ತಡದಿಂದ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ತಿರಸ್ಕಾರ; ಹೈಕೋರ್ಟ್‌ಗೆ ಹೋಗುತ್ತೇವೆಂದ ಕಾಂಗ್ರೆಸ್‌

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರವನ್ನು...

‘ನಾವು ಮತ ಹಾಕುತ್ತೇವೆ, ಆದರೆ ಬಿಜೆಪಿಗಲ್ಲ’; 1,200 ಕುಟುಂಬಗಳು ಹೀಗೆ ಹೇಳಿದ್ದೇಕೆ?

ನಾವು ಒಡೆದ ಮನೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಮನೆಗಳನ್ನು ಒಡೆದುರುಳಿಸಿದೆ....

‘ಇಂಡಿಯಾ’ ಒಕ್ಕೂಟ ತೊರೆಯಲು ನಿರಾಕರಿಸಿದ್ದಕ್ಕೆ ಮಾಜಿ ಸಿಎಂ ಹೇಮಂತ್ ಸೊರೆನ್‌ಗೆ ಜೈಲು’

'ಇಂಡಿಯಾ' ಮೈತ್ರಿಕೂಟವನ್ನು ತೊರೆಯಲು ನಿರಾಕರಿಸಿದ್ದಕ್ಕೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಜೆಎಂಎಂ ನಾಯಕ...