ಮದ್ದೂರು ನಗರಸಭೆಗೆ ನಾಲ್ಕು ಗ್ರಾ.ಪಂ.ಗಳ ಸೇರ್ಪಡೆ ಬೇಡ: ಅನಿರ್ದಿಷ್ಟಾವಧಿ ಧರಣಿನಿರತ ಗ್ರಾಮಸ್ಥರು

Date:

  • ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಯಿಂದ ಕೈಬಿಡಲು ಆಗ್ರಹ
  • ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಚಿವ ಚಲುವರಾಯಸ್ವಾಮಿ ಆಶ್ವಾಸನೆ

ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯರು ಮದ್ದೂರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ, ತಾಲೂಕು ಪಂಚಾಯ್ತಿ ಇ.ಒ ರಾಮಲಿಂಗಯ್ಯ ಹಾಗೂ ಗ್ರೇಡ್-2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

- Advertisement -

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಆಗಮಿಸಿದ ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಉಳಿವು ಹೋರಾಟ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪೇಟೆ ಬೀದಿ ಮೂಲಕ ಮೆರವಣಿಗೆಯಲ್ಲಿ ತೆರಳಿ, ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಿ, ಬಳಿಕ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ನಾಲ್ಕು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಸ್ಥಳೀಯರ ಅಭಿಪ್ರಾಯವನ್ನು ಆಲಿಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದೂ ಅಲ್ಲದೆ, ಅಧಿಸೂಚನೆ ಹೊರಡಿಸಿರುವುದನ್ನು ಒಕ್ಕೊರಲಿನಿಂದ ವಿರೋಧಿಸಲಾಯಿತು. ಈ ನಾಲ್ಕು ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು ಹಾಗೂ ದಿನಗೂಲಿ ನೌಕರರೇ ಹೆಚ್ಚಾಗಿ ವಾಸಿಸುತ್ತಿದ್ದು ನಗರಸಭೆಯಾಗಿ ಪರಿವರ್ತನೆಯಾದರೆ ಇವರ ಬದುಕು ದುಸ್ತರವಾಗುತ್ತದೆ. ನಗರ ವ್ಯಾಪ್ತಿಗೊಳಪಡುತ್ತಿದ್ದಂತೆ ಅತಿಹೆಚ್ಚು ತೆರಿಗೆ ಕಟ್ಟಬೇಕಾಗಿ ಬರುತ್ತದೆ. ಇದು ಸಾಧ್ಯವಾಗದೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಈ ಎಲ್ಲ ಕಾರಣಗಳಿಂದ ಕೂಡಲೇ ಇದನ್ನು ನಗರಸಭೆಯಿಂದ ಕೈಬಿಡಬೇಕೆಂದು ಒತ್ತಾಯಿಸಲಾಯಿತು.

ಮದ್ದೂರು ನಗರಸಭೆಗೆ ಈ ಮೊದಲು ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸಿಕೊಳ್ಳಬೇಕೆಂಬ ಯಾವ ಒತ್ತಡವೂ ಇರಲಿಲ್ಲ. ನಗರಸಭೆಯ ಸದಸ್ಯರು ಯಾರೂ, ಈ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೂ, ಶಾಸಕ ಉದಯ್ ಗೌಡರ ಮನಸ್ಸಂತೋಷಪಡಿಸಲು, ಶಾಸಕರ ಪರವಿರುವ ನಗರಸಭೆಯ ಸದಸ್ಯರೊಬ್ಬರು ಸಭೆಯ ನಡಾವಳಿಗಳನ್ನು ತಿದ್ದಿ, ಏಕಪಕ್ಷೀಯವಾಗಿ ಅನುಮೋದಿಸಿದ್ದರು. ಈ ಕಿಡಿಗೇಡಿ ಕೃತ್ಯವನ್ನು ಖಂಡಿಸಿದ ಸದಸ್ಯರು, ಒಮ್ಮತದಿಂದ ವಿರೋಧಿಸಿದ್ದರು. ಅದನ್ನು ಶಾಸಕರ ಗಮನಕ್ಕೂ ತಂದಿದ್ದರು. ಆದರೆ ಶಾಸಕರು, ಆಶ್ವಾಸನೆ ನೀಡಿದರೇ ಹೊರತು, ಖಡಾಖಂಡಿತ ನಿರ್ಧಾರ ಪ್ರಕಟಿಸಲಿಲ್ಲ.

WhatsApp Image 2026 01 01 at 15.14.45

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ನಾಯಕಿ ಸುನಂದಾ ಜಯರಾo ಮಾತನಾಡಿ, ‘ಹಲವು ತಿಂಗಳ ಹಿಂದೆಯೇ, ಮದ್ದೂರು ನಗರಸಭೆಯಾಗುವುದಕ್ಕೂ ಮೊದಲೇ ನಮ್ಮ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸದಂತೆ ಆಗ್ರಹಿಸಿ ಹಲವಾರು ಬಾರಿ ಗ್ರಾಮ ಪಂಚಾಯ್ತಿ ಕಚೇರಿ, ತಾಲ್ಲೂಕು ಕಚೇರಿ ಹಾಗೂ ನಗರಸಭಾ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ಗ್ರಾಮಸ್ಥರು ಹಾಗೂ ಮುಖಂಡರ ಜೊತೆ ಸಭೆ ಕರೆದು ಮಾತನಾಡುವುದಾಗಿ ಶಾಸಕರಾದ ಕೆ.ಎಂ. ಉದಯ್ ಹೇಳಿದ್ದರು. ಆದರೆ ಸಭೆ ಮಾಡದೇ ಏಕಪಕ್ಷೀಯ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಇದು ಖಂಡನೀಯ. ಜನವಿರೋಧಿ ನಿಲುವು’ ಎಂದರು.

ಅಷ್ಟೇ ಅಲ್ಲ, ‘ರಾಜ್ಯಪಾಲರ ಆದೇಶವೇ ರದ್ದುಗೊಂಡಿರುವ ನಿದರ್ಶನಗಳು ಬೇಕಾದಷ್ಟಿವೆ. ಸದಸ್ಯರ ಒಮ್ಮತವಿಲ್ಲದೆ ನಡೆದ ತರಾತುರಿಗೆ ಕಾರಣರಾಗಿರುವ ಶಾಸಕರೇ ಇದನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯು ತೀವ್ರ ಸ್ವರೂಪ ಪಡೆಯಲಿದೆ. ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯೊಂದರಿಂದಲೇ ವರ್ಷಕ್ಕೆ ಸುಮಾರು 2 ಕೋಟಿ ಆದಾಯವಿದೆ. ಆ ಹಣದ ಮೇಲೆ ಅಧಿಕಾರಸ್ಥರ ಕಣ್ಣಿದೆ’ ಎಂದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ನಾಗರಿಕರು ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡಿದ್ದು, ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  

ನಗರಸಭೆಯಾಗಿ ಪರಿವರ್ತನೆಯಾದರೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೃಪಾಂಕ ರದ್ದಾಗಲಿದೆ. ಕುಡಿಯುವ ನೀರಿನ ತಿಂಗಳ ತೆರಿಗೆ ರೂ. 300 ಆಗಲಿದೆ. ಮನೆ ಕಂದಾಯ ಶೇ. 15ರಷ್ಟು ಹೆಚ್ಚಾಗಲಿದೆ. ಇಷ್ಟೇ ಅಲ್ಲದೆ, ಹತ್ತು ಹಲವು ಸಮಸ್ಯೆಗಳು ಎದುರಾಗಲಿವೆ ಎಂದ ಸ್ಥಳೀಯರು, ಸರಕಾರ ಕೂಡಲೇ ನಗರಸಭೆಗೆ ಸೇರ್ಪಡೆಗೊಳಿಸದಂತೆ ಒತ್ತಾಯಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಸರಕಾರಕ್ಕೆ ಮನವಿ ಸಲ್ಲಿಸುವಂತೆ, ರಾಜ್ಯಪತ್ರದಿಂದ ಕೈಬಿಡುವಂತೆ ವಿನಂತಿಸಿಕೊಂಡರು. ಅಕಸ್ಮಾತ್ ಸ್ಥಳೀಯರ ವಿರೋಧದ ನಡುವೆಯೂ ಅಧಿಕಾರಿಗಳು ನಗರಸಭೆಯನ್ನಾಗಿಸಲು ಮುಂದಾದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

WhatsApp Image 2026 01 01 at 15.14.46

ಈ ಬಗ್ಗೆ ಮಾತನಾಡಿದ ರೈತ ನಾಯಕ ಬೋರಯ್ಯನವರು, ‘ಈಗಾಗಲೇ ಶಾಸಕರಿಗೆ ವಸ್ತುಸ್ಥಿತಿಯನ್ನು ತಿಳಿಸಿದ್ದೇವೆ. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರ ಗಮನಕ್ಕೂ ತಂದಿದ್ದೇವೆ. ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರಿಗೂ ತಿಳಿಸಿದ್ದೇವೆ. ಅವರು ಸರ್ಕಾರದ ಮಟ್ಟದಲ್ಲಿ ಇದನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದಿಷ್ಟೇ ಸಾಲದು ಎಂದು ನಾವು ಹೈಕೋರ್ಟಿಗೆ ಮಧ್ಯಂತರ ತಡೆಯಾಜ್ಞೆಗೂ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಭೂಮಿ ನಮ್ಮ ಹಕ್ಕು. ಇದನ್ನು ರಿಯಲ್ ಎಸ್ಟೇಟ್ ದಂಧೆ ಮಾಡಲು, ಕೈಗಾರಿಕಾ ಪ್ರದೇಶ ಮಾಡಲು, ನಮ್ಮ ಗ್ರಾಮಗಳ ಜನರನ್ನು ಗುಲಾಮರನ್ನಾಗಿ ಮಾಡಲು ನಾವು ಸಿದ್ಧರಿಲ್ಲ’ ಎಂದು ಹೇಳಿದರು.

ಇದನ್ನು ಓದಿದ್ದೀರಾ?: ಜೈಲಿಗೆ ಹೋಗಿ ಬಂದವರಿಗೆ ಸಂಭ್ರಮದ ಸ್ವಾಗತ; ಕರ್ನಾಟಕ ಹೀಗೇಕಾಯಿತು?

ಪ್ರತಿಭಟನೆ ವೇಳೆ ವಿವಿಧ ಗ್ರಾಮಗಳ ಮುಖಂಡರು ನೇತೃತ್ವ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ರಾಧಾ, ಸದಸ್ಯರಾದ ದೀಪಕ್, ರೈತ ಸಂಘದ ಮುಖಂಡರಾದ ಸಿದ್ದೇಗೌಡ, ಅಂದಾನಿ ಸೋಮನಹಳ್ಳಿ, ಲಿಂಗಪ್ಪಾಜಿ, ಶಂಕರ್, ಪ್ರಸನ್ನ, ಕೃಷ್ಣಪ್ಪ, ಪುರುಷೋತ್ತಮ, ಬೋರಪ್ಪ, ರಾಮಲಿಂಗಯ್ಯ, ಮೋಹನ್, ಸ್ವಾಮಿಗೌಡ, ಸಂತೋಷ್, ಜಿ.ಸಿ.ಮಹೇಂದ್ರ, ಪುಟ್ಟಸ್ವಾಮಿ, ವೀರಪ್ಪ, ರಾಮಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಯೋಗೇಶ್, ಗ್ರಾ.ಪಂ. ಸದಸ್ಯರುಗಳ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಸತ್ಯ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘ – ಜೆಡಿಎಸ್‌ ನಡುವೆ ಗಲಾಟೆ

ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರವು ಹೈವೋಲ್ಟೇಜ್‌ ಕ್ಷೇತ್ರವಾಗಿ ಹೊಮ್ಮಿದೆ....

ಪ್ರಚಾರಕ್ಕಾಗಿ ದಲಿತ ವ್ಯಕ್ತಿಯ ಮಾತು ತಿರುಚಿದ ಪಕ್ಷೇತರ ಅಭ್ಯರ್ಥಿ?; ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ

ದಲಿತರನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಕೇಳಿದ್ದ ವ್ಯಕ್ತಿಯೂ ದಲಿತರೇ ಆಗಿದ್ದಾರೆ. ದಲಿತರು...

ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಮಾತಾಡಿ: ಮೋದಿಗೆ ರಾಹುಲ್-ಪ್ರಿಯಾಂಕಾ ಸವಾಲು

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ವರಿಷ್ಠ ನಾಯಕರು ನಿಮ್ಮ ಬಗ್ಗೆ...

ದಲಿತರನ್ನು ಬೇರೆಡೆ ಕಳಿಸಿ ಎಂದ ಗ್ರಾಮಸ್ಥ; ಕೇಸ್‌ ಬೀಳ್ತವೆ ಹುಷಾರ್ ಎಂದ ಪಕ್ಷೇತರ ಅಭ್ಯರ್ಥಿ

ಚುನಾವಣಾ ಪ್ರಚಾರದ ಮೇಳೆ ಗ್ರಾಮಸ್ಥರೊಬ್ಬರು ದಲಿತರನ್ನು ಗ್ರಾಮದಿಂದ ಬೇರೆಡೆ ಕಳಿಸಿ ಎಂದು...