ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 2026ನೇ ಸಾಲಿನ 1,500 ಪ್ರೊಬೇಷನರಿ ಆಫೀಸರ್(PO) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
•ಹುದ್ದೆಯ ಹೆಸರು: Probationary Officer (PO)
•ಒಟ್ಟು ಹುದ್ದೆಗಳು: 1500
•ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
•ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ(Any Degree) ಪಡೆದಿರಬೇಕು. ವಿವಿಧ ವಿಭಾಗಗಳ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಕೆ ದಿನಾಂಕ:
•ಅರ್ಜಿ ಪ್ರಾರಂಭ ದಿನಾಂಕ: 18 ಜೂನ್ 2026
•ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಜುಲೈ 2026
ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ:
ಎಸ್‌ಬಿಐ ಪಿಒ ನೇಮಕಾತಿಯು ಮೂರು ಹಂತಗಳಲ್ಲಿ ನಡೆಯಲಿದೆ.
•ಹಂತ-1: ಪ್ರಾಥಮಿಕ ಪರೀಕ್ಷೆ (Preliminary Examination), ಪ್ರಾಥಮಿಕ ಆನ್‌ಲೈನ್ ಪರೀಕ್ಷೆಯು ಆಗಸ್ಟ್ 2026ರಲ್ಲಿ ನಡೆಯಲಿದೆ.
•ಹಂತ-2: ಮುಖ್ಯ ಪರೀಕ್ಷೆ (Main Examination), ಸೆಪ್ಟೆಂಬರ್ 2026ರಲ್ಲಿ ಮುಖ್ಯ ಪರೀಕ್ಷೆಯು ನಡೆಯಲಿದೆ.
•ಹಂತ-3: ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶನ,
ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅಕ್ಟೋಬರ್/ನವೆಂಬರ್ 2026ರಲ್ಲಿ ಸೈಕೋಮೆಟ್ರಿಕ್ ಟೆಸ್ಟ್, ಗುಂಪು ವ್ಯಾಯಾಮ ಹಾಗೂ ಸಂದರ್ಶನ ನಡೆಯಲಿದೆ.
ಎಸ್‌ಬಿಐ ಪಿಒ ಹುದ್ದೆಯ ವಿಶೇಷತೆಗಳು:
ಎಸ್‌ಬಿಐ ಪಿಒ ಹುದ್ದೆಯು ಉತ್ತಮ ವೇತನ, ಭತ್ಯೆಗಳು, ವೃತ್ತಿ ಬೆಳವಣಿಗೆ ಅವಕಾಶಗಳು ಹಾಗೂ ನಾಯಕತ್ವದ ಜವಾಬ್ದಾರಿಗಳನ್ನು ಒದಗಿಸುತ್ತದೆ. ಜತೆಗೆ ದೇಶದ ಅತಿದೊಡ್ಡ ಬ್ಯಾಂಕಿಂಗ್ ಜಾಲತಾಣದಲ್ಲಿ ಕಾರ್ಯನಿರ್ವಹಿಸುವ ಅವಕಾಶವೂ ದೊರೆಯುತ್ತದೆ.
ಇದನ್ನೂ ಓದಿದ್ದೀರಾ? ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮೂಲಸೌಕರ್ಯ ಕೊರತೆ: ಯುವ ಶಕ್ತಿಗೆ ಬಿಹಾರ ಸರ್ಕಾರದ ಅನ್ಯಾಯ…
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್ ಆದ https://onlinesbi.sbi.bank.in/ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ, ವಯೋಮಿತಿ, ಮೀಸಲಾತಿ ಹಾಗೂ ಇತರ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.




