ಮಗನಿಗೆ 15 ಲಕ್ಷ ರೂ. ವೇತನ ಪ್ಯಾಕೇಜ್‌ ಸಿಕ್ಕರೂ ಒಲ್ಲದ ತಂದೆ; ಪೋಸ್ಟ್‌ ವೈರಲ್

Date:

ಭಾರತದಲ್ಲಿ ಇಂದಿಗೂ ಉದ್ಯೋಗದ ಭದ್ರತೆ ಮತ್ತು ಪೋಷಕರ ಸಾಂಪ್ರದಾಯಿಕ ನಿರೀಕ್ಷೆಗಳ ನಡುವಿನ ಕಂದಕ ಹಾಗೆಯೇ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ವಾರ್ಷಿಕ ಬರೋಬ್ಬರಿ 15 ಲಕ್ಷ ರೂ. ವೇತನ ಪ್ಯಾಕೇಜ್‌ನ ಖಾಸಗಿ ಉದ್ಯೋಗ ಸಿಕ್ಕಿದ್ದರೂ, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಉದ್ಯೋಗವೇ ಮೇಲು ಎಂದಿದ್ದಾರೆ.

- Advertisement -

ಬೆಂಗಳೂರಿನ ಉದ್ಯಮಿ ಅಂಕಿತ್ ಕೇಡಿಯಾ ಅವರು ತಾವು ತಮ್ಮ ಸಂಬಂಧಿಯೊಬ್ಬರ ಮನೆಗೆ ಭೇಟಿ ನೀಡಿದ್ದ ಸಮಯದಲ್ಲಿನ ಸಂಗತಿಯನ್ನು ‘ಎಕ್ಸ್‌’ನಲ್ಲಿ  ಹಂಚಿಕೊಂಡಿದ್ದಾರೆ. “ಸಂಬಂಧಿಕರ ಮಗನಿಗೆ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ (MNC) ವಾರ್ಷಿಕ 15 ಲಕ್ಷ ರೂ. ವೇತನದ ಅತ್ಯುತ್ತಮ ಉದ್ಯೋಗ ಲಭಿಸಿತ್ತು. ಆದರೆ, ಇಡೀ ಮನೆಯಲ್ಲಿ ಸಂಭ್ರಮ ಆಚರಿಸುವ ಬದಲು ಒಂದು ರೀತಿಯ ನಿರಾಸೆಯ ವಾತಾವರಣ ಮನೆಮಾಡಿತ್ತು!” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

“ಮಗನಿಗೆ ಆರಂಭದಲ್ಲೇ ಇಷ್ಟು ದೊಡ್ಡ ಮೊತ್ತದ ಸಂಬಳ ಸಿಕ್ಕಿದ್ದರೂ, ಆತನ ತಂದೆ ಮಾತ್ರ ಮಗನನ್ನು ‘ಇವೆಲ್ಲವನ್ನೂ ಬಿಟ್ಟು ಸರ್ಕಾರಿ ನೌಕರಿಯ ಪರೀಕ್ಷೆಗಳಿಗೆ ಸಿದ್ಧತೆ ನಡೆಸು’ವಂತೆ ಒತ್ತಾಯಿಸುತ್ತಿದ್ದಾರೆ. ಅವರ ಪ್ರಕಾರ, ಸರ್ಕಾರಿ ಕೆಲಸ ಮಾತ್ರವೇ ನಿಜವಾದ ಕೆಲಸ, ಉಳಿದ ಖಾಸಗಿ ಕೆಲಸಗಳೆಲ್ಲ ಇವತ್ತಿದ್ದು ನಾಳೆ ಹೋಗುವ ಅಸ್ಥಿರ ವ್ಯವಸ್ಥೆ!” ಎಂದಿದ್ದಾರೆ.

“ಖಾಸಗಿ ಉದ್ಯೋಗದ ಅಭದ್ರೆಯ ಬಗ್ಗೆ ಮಾತನಾಡಿರುವ ತಂದೆ, ಜಾಗತಿಕ ಮಟ್ಟದ ಟೆಕ್ ದೈತ್ಯ ಕಂಪನಿಗಳಾದ ಅಡೋಬ್  ಮತ್ತು ಮೈಕ್ರೋಸಾಫ್ಟ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆದ ಲೇ-ಆಫ್ಸ್ (ಉದ್ಯೋಗ ಕಡಿತ) ವರದಿಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಖಾಸಗಿ ವಲಯದಲ್ಲಿ ಎಷ್ಟೇ ದೊಡ್ಡ ಸಂಬಳ ಸಿಕ್ಕಿದರೂ ಅಲ್ಲಿ ದೀರ್ಘಕಾಲದ ಭದ್ರತೆ ಇರುವುದಿಲ್ಲ, ಮ್ಯಾನೇಜ್ಮೆಂಟ್ ಯಾವಾಗ ಬೇಕಾದರೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು ಎಂಬ ಭಯ ಅವರದ್ದಾಗಿದೆ” ಎಂದು ಕೇಡಿಯಾ ವಿವರಿಸಿದ್ದಾರೆ.

ಅಂಕಿತ್ ಕೇಡಿಯಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಂದೆಯ ವಾದವನ್ನು ಸಮರ್ಥಿಸಿರುವ ನೆಟ್ಟಿಗರು, “ಖಾಸಗಿ ಕಂಪನಿಗಳಲ್ಲಿ ಕೆಲಸದ ಒತ್ತಡ ಮತ್ತು ಟಾರ್ಗೆಟ್ ಕಿರುಕುಳ ಅತಿಯಾಗಿರುತ್ತದೆ. ಮೈಕ್ರೋಸಾಫ್ಟ್‌ನಂತಹ ಕಂಪನಿಗಳಲ್ಲೇ ಕೆಲಸಕ್ಕೆ ಗ್ಯಾರಂಟಿ ಇಲ್ಲದಿರುವಾಗ ತಂದೆಯ ಭಯ ನ್ಯಾಯಸಮ್ಮತವಾಗಿದೆ. ಸರ್ಕಾರಿ ಕೆಲಸದಲ್ಲಿ ಸಿಗುವ ಸಾಮಾಜಿಕ ಗೌರವ ಮತ್ತು ನೆಮ್ಮದಿ ಖಾಸಗಿಯಲ್ಲಿ ಸಿಗುವುದಿಲ್ಲ” ಎಂದಿದ್ದಾರೆ.

ಇನ್ನು, ಕೆಲವು ಯುವ ನೆಟ್ಟಿಗರು ತಂದೆಯ ಹಳೆಯ ನಿಲುವನ್ನು ವಿರೋಧಿಸಿದ್ದಾರೆ. “ಆರಂಭಿಕ ಹಂತದಲ್ಲೇ 15 ಲಕ್ಷ ರೂ. ಪ್ಯಾಕೇಜ್ ಸಿಗುವುದು ಸಣ್ಣ ಮಾತಲ್ಲ. ಇಂದಿನ ಜಗತ್ತಿನಲ್ಲಿ ಖಾಸಗಿ ವಲಯವು ಕೌಶಲಕ್ಕೆ ಬೆಲೆ ನೀಡುತ್ತದೆ. ಕೌಶಲವಿದ್ದರೆ ಬೆಳವಣಿಗೆಗೆ ಮಿತಿಯೇ ಇರುವುದಿಲ್ಲ. ಪೋಷಕರು ಇನ್ನುಮುಂದಾದರೂ ಹಳೆಯ ಕಾಲದ ಯೋಚನೆಗಳಿಂದ ಹೊರಬರಬೇಕು” ಎಂದು ವಾದಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ಹೊಸನಗರ | ರೂ. 4 ಲಕ್ಷ ಮೌಲ್ಯದ ಸಾಗುವಾನಿ ನಾಟ ವಶ!

ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ...

ಜಾಮಿಯಾ ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ವಿವಿ ಆಡಳಿತ!

18 ದಿನಗಳ ಉಪವಾಸ ಸತ್ಯಾಗ್ರಹ ಮತ್ತು ಹೋರಾಟದ ನಂತರ, ಜಾಮಿಯಾ ಮಿಲ್ಲಿಯಾ...

ಯುಪಿ | ಬ್ರಿಜ್ ಭೂಷಣ್‌ಗೆ ಬಿಜೆಪಿ ಮತ್ತೆ ಮಣೆ; ಚುನಾವಣೆಗೆ ಮುನ್ನ ಟಾಪ್ ಟೀಮ್‌ನಲ್ಲಿ ಸ್ಥಾನ!

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ಕೆಲವೇ ತಿಂಗಳ...