ಸಲ್ಮಾನ್‌ ಖಾನ್‌ ಜೀವ ಬೆದರಿಕೆ ಪ್ರಕರಣಕ್ಕೆ ಲಂಡನ್‌ ನಂಟು

Date:

  • ಜೀವ ಬೆದರಿಕೆ ಸಂದೇಶದ ಬೆನ್ನಲ್ಲೇ ಸಲ್ಮಾನ್‌ ಭದ್ರತೆ ಹೆಚ್ಚಳ
  • ಲಂಡನ್‌ ಮೂಲದ ವ್ಯಕ್ತಿಯ ಇ-ಮೇಲ್‌ ಬಳಸಿ ಬೆದರಿಕೆ

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರಿಗೆ ಇತ್ತೀಚೆಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಹಾಕಲಾಗಿತ್ತು. ಈ ಬೆದರಿಕೆ ಸಂದೇಶಕ್ಕೆ ಲಂಡನ್‌ ಮೂಲದ ವ್ಯಕ್ತಿಯ ನಂಟಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಸಲ್ಮಾನ್‌ ಖಾನ್‌ ಅವರ ಆಪ್ತ ಸಹಾಯಕರಿಗೆ ಇ-ಮೇಲ್‌ ಮೂಲಕ ಸಂದೇಶ ರವಾನಿಸಿದ್ದ ಅಪರಿಚಿತರು, ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ಸಂದೇಶದಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಹೆಸರು ಕೂಡ ಉಲ್ಲೇಖವಾಗಿತ್ತು.

“ಗೋಲ್ಡಿ ಬ್ರಾರ್‌ ನಿಮ್ಮ ಮಾಲೀಕನ (ಸಲ್ಮಾನ್‌ ಖಾನ್‌) ಜೊತೆಗೆ ಮಾತನಾಡಲು ಇಚ್ಛಿಸಿದ್ದಾನೆ. ನಿಮ್ಮ ಮಾಲೀಕ ಇನ್ನೂ ಲಾರೇನ್ಸ್‌ ಬಿಷ್ಣೋಯಿಯ ಸಂದರ್ಶನದ ವಿಡಿಯೋ ನೋಡಿಲ್ಲವಾದರೆ, ಮೊದಲು ಆ ವಿಡಿಯೋವನ್ನು ನೋಡಲು ಹೇಳಿ. ಆತ ಈ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸಲು ಇಚ್ಛಿಸಿದ್ದರೆ ಗೋಲ್ಡಿ ಬ್ರಾರ್‌ ಜೊತೆಗೆ ನೇರಾನೇರ ಮಾತುಕತೆಗೆ ಬರುತ್ತಾನೆಯೇ ಕೇಳಿ. ಈ ಬಾರಿ ಸುಮ್ಮನೆ ಸಂದೇಶ ತಲುಪಿಸುತ್ತಿದ್ದೇವೆ. ಮುಂದಿನ ಬಾರಿ ಹೀಗಾಗುವುದಿಲ್ಲ, ನಮ್ಮ ನಡೆಯನ್ನು ಕಂಡು ನೀವೇ ಆಘಾತಕ್ಕೊಳಗಾಗುತ್ತೀರಿ” ಎಂದು ಬೆದರಿಸಿದ್ದರು.

ಇದಾದ ಬೆನ್ನಲ್ಲೇ ಸಲ್ಮಾನ್‌ ಖಾನ್‌ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಈ ಹಿಂದೆ ಸಲ್ಮಾನ್‌ ಖಾನ್‌ ಅವರ ಹತ್ಯೆಗೆ ಯತ್ನಿಸಿದ್ದ, ಅನ್ಯ ಪ್ರಕರಣದಲ್ಲಿ ಈಗಾಗಲೇ ಸೆರೆವಾರ ಅನುಭವಿಸುತ್ತಿರುವ ಲಾರೇನ್ಸ್‌ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಮತ್ತು ರೋಹಿತ್‌ ಗರ್ಗಿ ಅವರ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ತನಿಖೆಯ ವೇಳೆ ಸಲ್ಮಾನ್‌ ಖಾನ್‌ ಆಪ್ತ ಸಹಾಯಕರಿಗೆ ಬಂದಿರುವ ಇ-ಮೇಲ್‌ ವಿಳಾಸದ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಇ-ಮೇಲ್‌ ಖಾತೆಗೆ ಬಳಸಲಾಗಿರುವ ಮೊಬೈಲ್‌ ಸಂಖ್ಯೆ ಲಭ್ಯವಾಗಿದ್ದು, ಆ ಮೊಬೈಲ್‌ ನಂಬರ್‌ ಬಳಸುತ್ತಿರುವ ವ್ಯಕ್ತಿ ಲಂಡನ್‌ ಮೂಲದವನು. ಆತನನ್ನು ಸಂಪರ್ಕಿಸುವ ಪ್ರಯತ್ನಗಳು ಕೂಡ ನಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್‌ ಖಾನ್‌ ನಿವಾಸದ ಬಳಿ ನಟನ ತಂದೆ ಸಲೀಂ ಖಾನ್‌ ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರ ಕೈಗೆ ಅನಾಮದೇಯ ಜೀವ ಬೆದರಿಕೆಯ ಪತ್ರ ಸಿಕ್ಕಿತ್ತು. ಸಲೀಂ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಇಬ್ಬರನ್ನು ಹತ್ಯೆ ಮಾಡುವುದಾಗಿ ಪತ್ರದಲ್ಲಿ ಬರೆಯಲಾಗಿತ್ತು. ಘಟನೆಯ ಬೆನ್ನಲ್ಲೇ ಮುಂಬೈ ಪೊಲೀಸರು ಸಲ್ಮಾನ್‌ ಖಾನ್‌ ಅವರಿಗೆ ʼವೈ+ʼ ಶ್ರೇಣಿಯ ಬಿಗಿ ಭದ್ರತೆ ಒದಗಿಸಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲುಗಿನ ಹಿರಿಯ ನಿರ್ದೇಶಕ ಕೆ. ವಾಸು ಇನ್ನಿಲ್ಲ

ಮೆಗಾಸ್ಟಾರ್‌ ಚಿರಂಜೀವಿ ಚೊಚ್ಚಲ ಚಿತ್ರ ನಿರ್ದೇಶಿಸಿದ್ದ ವಾಸು ಜಗ್ಗೇಶ್‌ ನಟನೆಯ ʼಸರ್ವರ್‌ ಸೋಮಣ್ಣʼ...

ಮಂತ್ರಿಯಾದ ಮಧು ಬಂಗಾರಪ್ಪ : ಶ್ರಮದ ಪ್ರತಿಫಲ ಎಂದ ಶಿವಣ್ಣ

ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಧು ಬಂಗಾರಪ್ಪ ಚುನಾವಣೆಯಲ್ಲಿ ಕಾಂಗ್ರೆಸ್‌...

ಯಶ್‌ ಜೊತೆಗೆ ನರ್ತನ್‌ ಸಿನಿಮಾ ಸದ್ಯಕ್ಕಿಲ್ಲ

ಶಿವರಾಜ್‌ ಕುಮಾರ್‌ ನಟನೆಯ ʼಭೈರತಿ ರಣಗಲ್‌ʼ ಸಿನಿಮಾದಲ್ಲಿ ನರ್ತನ್‌ ಬ್ಯುಸಿ ಕೆಜಿಎಫ್‌-2 ಬಿಡುಗಡೆಯಾಗಿ...

ʼದಿ ಡೈರಿ ಆಫ್‌ ವೆಸ್ಟ್‌ ಬೆಂಗಾಲ್‌ʼ ಚಿತ್ರದ ನಿರ್ದೇಶಕನಿಗೆ ಕೋಲ್ಕತ್ತಾ ಪೊಲೀಸರಿಂದ ನೋಟಿಸ್‌

ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರಿಯಾಗಿಸಿ ಸಿನಿಮಾ ಮಾಡಿದ ಸನೋಜ್‌ ಟ್ರೈಲರ್‌ ಬಿಡುಗಡೆಯಾದ...