ಉಭಯ ಸದನಗಳಲ್ಲಿ ಗದ್ದಲ; ಮಧ್ಯಾಹ್ನದವರೆಗೆ ಅಧಿವೇಶನ ಮುಂದೂಡಿಕೆ

Date:

  • ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿರುವ ಸೂರತ್‌ ನ್ಯಾಯಾಲಯ
  • ಶಿಕ್ಷೆಗೆ ಗುರಿಯಾಗಿರುವ ರಾಹುಲ್‌ ಅವರ ಸಂಸದ ಸ್ಥಾನ ಅನರ್ಹ ವಿಚಾರ

ಎರಡನೇ ಅವಧಿಯ ಸಂಸತ್ತು ಕಲಾಪವು ಈವರೆಗೆ ಅದಾನಿ ಹಗರಣ, ಜೆಪಿಸಿ ತನಿಖೆ, ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಕ್ಷಮೆ ವಿಚಾರದಲ್ಲಿ ಹೊಯ್ದಾಡುತ್ತಿತ್ತು. ಈಗ ಆಡಳಿತ ಪಕ್ಷಕ್ಕೆ ಹೊಸ ಅಸ್ತ್ರ ದೊರೆತಿದ್ದು, ರಾಹುಲ್ ಅನರ್ಹತೆ ವಿಚಾರವಾಗಿ ಗದ್ದಲದ ನಡುವೆ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪಗಳನ್ನು ಮುಂದೂಡಲಾಗಿದೆ.

ಸದನದಲ್ಲಿ ರಾಹುಲ್ ಶಿಕ್ಷೆ ಚರ್ಚೆ

ಸೂರತ್‌ ನ್ಯಾಯಾಲಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ವಿಧಿಸಿರುವ ಎರಡು ವರ್ಷಗಳ ಶಿಕ್ಷೆ ವಿಚಾರ ಸಂಸತ್ತಿನಲ್ಲಿ ಶುಕ್ರವಾರ (ಮಾರ್ಚ್‌ 24) ಸದ್ದು ಮಾಡಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಗ್ವಾದಗಳಿಗೆ ಸಾಕ್ಷಿಯಾದವು.

ಸೂರತ್‌ ನ್ಯಾಯಾಲಯದ ಶಿಕ್ಷೆ ಪ್ರಕಟವಾದ ಒಂದು ದಿನದ ನಂತರ ರಾಹುಲ್‌ ಗಾಂಧಿ ಅವರು ಲೋಕಸಭೆ ಕಲಾಪಕ್ಕೆ ಬೆಳಿಗ್ಗೆ ಹಾಜರಾದರು. ರಾಹುಲ್‌ ಅವರು ಭಾರತದ ಬಗ್ಗೆ ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಲು ಪ್ರತಿಪಕ್ಷಗಳು ಪಟ್ಟು ಹಿಡಿದವು. ಇದರಿಂದ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ಉಂಟಾಯಿತು. ಪ್ರತಿಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಲಾಪವನ್ನು ಮಧ್ಯಾಹ್ನ 12 ಗಂಟೆವರೆಗೂ ಮುಂದೂಡಲಾಯಿತು.

ಹಣಕಾಸು ಮಸೂದೆ ಮಂಡನೆ

ಮಧ್ಯಾಹ್ನ ಲೋಕಸಭೆ ಸೇರುತ್ತಿದ್ದಂತೆ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಘೋಷಣೆ ಕೂಗಿದವು. ಇದರ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಮಸೂದೆ 2023 ಅನ್ನು ಮಂಡಿಸಿದರು.

ರಾಜ್ಯಸಭೆ ಕಲಾಪವೂ ಮುಂದೂಡಿಕೆ

ಬೆಳಿಗ್ಗೆ 11 ಗಂಟೆಗೆ ರಾಜ್ಯಸಭೆ ಆರಂಭವಾದ ನಂತರವೂ ವಿಪಕ್ಷಗಳು ಅದಾನಿ ವಿಚಾರ ಎತ್ತಿದರೆ, ಆಡಳಿತ ಪಕ್ಷ ರಾಹುಲ್‌ ವಿಚಾರ ತೆಗೆದು ಗದ್ದಲ ಎಬ್ಬಿಸಿದೆ. ಇದರಿಂದ ಬಿಜೆಪಿ ಹಾಗೂ ವಿಪಕ್ಷಗಳ ನಾಯಕರ ನಡುವೆ ತಿಕ್ಕಾಟ ಆರಂಭವಾಯಿತು.

ಈ ಹಿನ್ನೆಲೆಯಲ್ಲಿ ಸಭಾಪತಿ ಜಗದೀಪ್‌ ಧನಕರ್‌ ಅವರು ಕಲಾಪವನ್ನು ಮಧ್ಯಾಹ್ನ 2.30ರವರೆಗೂ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.

ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ತಮ್ಮ ಬೇಡಿಕೆಗಳ ಕುರಿತು ಚರ್ಚೆಗೆ ಒತ್ತಾಯಿಸಿ ನಿಯಮ 267ರ ಅಡಿ ನೀಡಿದ 14 ನೋಟಿಸ್‌ಗಳನ್ನು ಧನಕರ್‌ ಅವರು ತಿರಸ್ಕರಿಸಿದರು.

ಮೋದಿ ಉಪನಾಮದ ಬಗ್ಗೆ ಟೀಕೆಗೆ ಸಂಬಂಧಿಸಿ ಗುರುವಾರ (ಮಾರ್ಚ್ 23) ಸೂರತ್‌ ನ್ಯಾಯಾಲಯ ರಾಹುಲ್‌ ಗಾಂಧಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಆದೇಶ ಪ್ರಶ್ನಿಸಲು 30 ದಿನಗಳ ಜಾಮೀನು ಮಂಜೂರು ಮಾಡಿತ್ತು.

ಸಂಸತ್‌ ಸದಸ್ಯರೊಬ್ಬರು ಯಾವುದೇ ಅಪರಾಧದಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದರೆ ಜನಪ್ರತಿನಿಧಿ ಕಾಯಿದೆ, 1951ರ ಸೆಕ್ಷನ್ 8 (3) ರ ಪ್ರಕಾರ ಅವರು ಸಂಸತ್ತಿನಿಂದ ಅನರ್ಹತೆ ಎದುರಿಸಬಹುದು ಎನ್ನಲಾಗಿದೆ. ಉಭಯ ಸದನಗಳಲ್ಲಿ ಈ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ: ಡಿ ಕೆ ಶಿವಕುಮಾರ್

ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ ಚುನಾವಣಾ...

ನಿಗಮ ಮಂಡಳಿ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನೂ ಪಡೆದಿಲ್ಲ: ಸಿದ್ದರಾಮಯ್ಯ

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಕಾನೂನುಬಾಹಿರ ನ್ಯಾಯಾಲಯದ ಮೊರೆ...

‘ಮಹಾಧರಣಿ’ಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ: ಡಿ.19ರಂದು ಮಹತ್ವದ ಸಭೆ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ಮೂರು ದಿನಗಳಿಂದ ಸಂಯುಕ್ತ ಹೋರಾಟ ಸಮಿತಿಯ...

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...