‘ಟ್ವಿಟರ್‌ ಬ್ಲೂಟಿಕ್‌’ಗೆ ಬೈ ಹೇಳಿದ ಪ್ರಕಾಶ್‌ ರಾಜ್‌

Date:

ಸಿನಿಮಾ ತಾರೆಯರು, ಪ್ರಭಾವಿ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾ ಪಟುಗಳು ಸೇರಿದಂತೆ ಜಗತ್ತಿನಾದ್ಯಂತ ಟ್ವಿಟರ್‌ ಬಳಸುತ್ತಿದ್ದ ಗಣ್ಯರ ಅಧಿಕೃತ ಖಾತೆಗಳಿಗೆ ಸಾಂಕೇತಿಕವಾಗಿ ನೀಡಲಾಗಿದ್ದ ಬ್ಲೂಟಿಕ್‌ ಚಿಹ್ನೆಯನ್ನು ಟ್ವಿಟರ್‌ ಸಂಸ್ಥೆ ಏಕಾಏಕಿಯಾಗಿ ಹಿಂಪಡೆದುಕೊಂಡಿದೆ. ಈ ಬಗ್ಗೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯಿಸಿದ್ದಾರೆ.

- Advertisement -

ತಮ್ಮ ಅಧಿಕೃತ ಖಾತೆಯಿಂದ ಬ್ಲೂಟಿಕ್‌ ಮಾಯವಾದ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಪ್ರಕಾಶ್‌ ರಾಜ್‌, “ಇಷ್ಟು ದಿನಗಳ ಕಾಲ ಬ್ಲೂಟಿಕ್‌ ಹೊಂದಿದ್ದು ಬಹಳ ಖುಷಿ ನೀಡಿತ್ತು. ಬ್ಲೂಟಿಕ್‌ ಹೊರತಾಗಿಯೂ ಇನ್ನು ಮುಂದೆ ನನ್ನ ಜನರ ಜೊತೆಗಿನ ಚರ್ಚೆ ನಿರಂತರವಾಗಿ ಸಾಗಲಿದೆ. ಬೈ.. ಬೈ.. ಬ್ಲೂಟಿಕ್‌” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್‌, ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಚಿರಂಜೀವಿ, ಶಿವರಾಜ್‌ ಕುಮಾರ್‌, ಯಶ್‌, ದಳಪತಿ ವಿಜಯ್‌ ಸೇರಿದಂತೆ ಬಹುತೇಕ ನಟ, ನಟಿಯರ ಟ್ವಿಟರ್‌ ಖಾತೆಯಿಂದ ಬ್ಲೂಟಿಕ್‌ ಮಾಯವಾಗಿದೆ.

ಇತ್ತೀಚೆಗೆ ಟ್ವಟಿರ್‌ ಸಂಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌, ʼಟ್ವಿಟರ್‌ ಬ್ಲೂʼ ಎಂಬ ಹೊಸ ಹೊಸ ʼಫೀಚರ್‌ʼ ಅನ್ನು ಪರಿಚಯಿಸಿದ್ದರು. ಇಷ್ಟು ದಿನಗಳ ಕಾಲ ಟ್ವಿಟರ್‌ನಲ್ಲಿ ಗಣ್ಯರು, ಸೆಲೆಬ್ರಿಟಿಗಳಿಗೆ ಮಾತ್ರ ಸಿಮಿತವಾಗಿದ್ದ ಬ್ಲೂಟಿಕ್‌ ಚಿಹ್ನೆಯನ್ನು ಜನ ಸಾಮಾನ್ಯರು ಕೂಡ ಹೊಂದಬಹುದು ಎಂದು ಟ್ವಿಟರ್‌ ಸಂಸ್ಥೆ ಘೋಷಿಸಿತ್ತು. ಬ್ಲೂಟಿಕ್‌ ಹೊಂದಲು ತಿಂಗಳಿಗೆ 900 ಮತ್ತು ವರ್ಷಕ್ಕೆ 9,400 ಚಂದಾ ನಿಗದಿ ಮಾಡಲಾಗಿತ್ತು. ಈ ಫೀಚರ್‌ಗೆ ನೆಟ್ಟಿಗರಿಂದ ಉತ್ತಮ ಸ್ಪಂದನೆ ಕೂಡ ದೊರಕಿತ್ತು. ಇದಾದ ಬೆನ್ನಲ್ಲೇ ಜಗತ್ತಿನಾದ್ಯಂತ ಗಣ್ಯರಿಗೆ ಉಚಿತವಾಗಿ ನೀಡಲಾಗಿದ್ದ ಬ್ಲೂಟಿಕ್‌ ಸೇವೆಯನ್ನು ಹಿಂಪಡೆದುಕೊಂಡಿರುವ ಟ್ವಿಟರ್‌ ಸಂಸ್ಥೆ, ಚಂದಾದಾರಿಕೆ ಹೊಂದುವಂತೆ ಸೂಚಿಸಿದೆ.

kamal hassan suriya

ಕಮಲ್‌ ಹಾಸನ್‌ ಮತ್ತು ಸೂರ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ಅಧಿಕೃತ ಖಾತೆಗಳಿಂದ ಬ್ಲೂಟಿಕ್‌ ಕಾಣೆಯಾಗುತ್ತಲೇ, ʼಟ್ವಿಟರ್‌ ಬ್ಲೂʼ ಫೀಚರ್‌ ಬಳಸಿ, ಹಣ ಪಾವತಿಸಿ ಹೊಸದಾಗಿ ಬ್ಲೂಟಿಕ್‌ ಚಂದಾದಾರಿಕೆಯನ್ನು ಪಡೆದುಕೊಂಡಿದ್ದಾರೆ. ಟ್ವಿಟರ್‌ ಮಾದರಿಯಲ್ಲೇ ʼಫೇಸ್‌ಬುಕ್‌ʼ ಮತ್ತು ʼಇನ್‌ಸ್ಟಾಗ್ರಾಂʼ ಮಾಲೀಕತ್ವ ಹೊಂದಿರುವ ʼಮೆಟಾʼ ಸಂಸ್ಥೆ ಕೂಡ ಈ ಹಿಂದೆ ಚಂದಾದಾರಿಕೆಯ ಆಧಾರದ ಮೇಲೆ ʼಬ್ಲೂಟಿಕ್‌ʼ ನೀಡುವ ʼಫೀಚರ್‌ʼ ಪರಿಚಯಿಸಿತ್ತು. ಇದೀಗ ʼಫೇಸ್‌ಬುಕ್‌ʼ ಮತ್ತು ʼಇನ್‌ಸ್ಟಾಗ್ರಾಂʼನಲ್ಲೂ ಸೆಲೆಬ್ರಿಟಿಗಳ ಖಾತೆಯಿಂದ ಬ್ಲೂಟಿಕ್‌ ಮಾಯವಾಗಲಿದೆಯೇ ಎಂಬ ಚರ್ಚೆ ಜೋರಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲಯಾಳಂ ‘ಅಮ್ಮ’ ಸಂಘಟನೆಯಲ್ಲಿ ಬದಲಾವಣೆ ಗಾಳಿ: ಉಪಾಧ್ಯಕ್ಷರಾಗಿ ನಟ ಸಿಜೋಯ್ ವರ್ಗೀಸ್, ನಟಿ ಆಶಾ ಅರವಿಂದ್ ನೇಮಕ

ಸಾಲು ಸಾಲು ವಿವಾದಗಳು ಮತ್ತು ರಾಜೀನಾಮೆಗಳಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಮಲಯಾಳಂ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...